ಚೀಟಿ ಕಟ್ಟಿ ಮೋಸ ಹೋದ್ರಾ ಬಾಲನಟಿ ಮಹಿತಾ ತಾಯಿ? 'ನಾ ನಿನ್ನ ಬಿಡಲಾರೆ' ಬಾಲನಟಿ ಟ್ರೆಂಡಿಂಗ್
ಬಾಲನಟಿ ಮಹಿತಾ ಬಗ್ಗೆ ಹೊಸದಾಗಿ ಏನೂ ಹೇಳಬೇಕಾಗಿಲ್ಲ. ಈಗಾಗಲೇ ಶಾರ್ಟ್ ಟೈಮ್‌ನಲ್ಲೇ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳ ಮೂಲಕ ಮಹಿತಾ ಹಿಟ್ ಆಗಿದ್ದಾರೆ.
ಹಾಗೆ ನೋಡಿದರೆ ಬಣ್ಣದ ಲೋಕಕ್ಕೆ ಬರುವ ಮುನ್ನವೇ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಾಡು, ಹರಟೆ, ಕಾಮಿಡಿ, ಡ್ಯಾನ್ಸ್ ಸೇರಿದಂತೆ ಹಲವು ರೀತಿಯಲ್ಲಿ ತಮ್ಮ ಟ್ಯಾಲೆಂಟ್ ಅನ್ನು ಹೊರ ಹಾಕಿದ್ದಾರೆ.

ಬಾಲನಟಿ ಮಹಿತಾ ಅವರಿಗೆ ಅವರ ತಾಯಿಯ ಸಪೋರ್ಟ್ ಕೂಡ ಇದ್ದು, ಮಗಳನ್ನು ಸಕಲಕಲಾವಲ್ಲಭೇಯಾಗುವಂತೆ ಮಾಡಿದ್ದಾರೆ. ಚಿಕ್ಕವಯಸ್ಸಿಗೆ ಮಹಿತಾ ಗೆಲುವಿನ ಹಾದಿಯಲ್ಲಿದ್ದಾರೆ.
ಅಮ್ಮ-ಮಗಳ ಹೊಸ ಹಾಡು ಹಿಟ್
ಬಾಲನಟಿ ಮಹಿತಾ ಮತ್ತು ಅವರ ತಾಯಿ ತನುಜಾ ಅವರು ಈಗಾಗಲೇ ಹತ್ತಾರು ಹಾಡುಗಳ ಟ್ಯೂನ್‌ಗೆ ಹೊಸ ಲಿರಿಕ್ಸ್ ಬರೆದು ಹಾಡಿದ್ದಾರೆ. ಎಲ್ಲವೂ ಕೂಡ ಹಿಟ್ ಆಗಿದ್ದು, ಇತ್ತೀಚೆಗೆ ಚೀಟಿ ಕಟ್ಟುವ ಬಗ್ಗೆ ಲಿರಿಕ್ಸ್ ಬರೆದು ಅಮ್ಮ-ಮಗಳು ಹಾಡಿದ್ದಾರೆ. ಅದೂ ಕೂಡ ಹಿಟ್ ಆಗಿದೆ. ಒಂದೇ ದಿನಕ್ಕೆ ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು, ಹಾಡು ಸೂಪರ್ ಆಗಿದೆ. ಪ್ರೀತಿ ಮಾಡೋದ್ ತಪ್ಪೇನಿಲ್ಲ ಎಂಬ ಹಾಡಿನ ಮ್ಯೂಸಿಕ್‌ಗೆ ಚೀಟಿ ಹಾಕೋದ್ ತಪ್ಪೇನಿಲ್ಲ. ಚೀಟಿ ಹಾಕಿ ಮೋಸ ಹೋದೆನಲ್ಲ ಎಂದು ಹಾಡು ಬರೆದಿದ್ದಾರೆ. ಒಂದೇ ದಿನದಲ್ಲಿ ಮತ್ತೆ ಈ ಹಾಡು ಹಿಟ್ ಆಗಿದೆ.
ಏಳರ ಪೋರಿಯ ಸಾಹಸಗಳು
ಇನ್ನು ಬಾಲನಟಿ ಮಹಿತಾ ಈಗಾಗಲೇ ಎರಡು ರಿಯಾಲಿಟಿ ಶೋಗಳಲ್ಲಿ ಮತ್ತು ಎರಡು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. 'ನಮ್ಮಮ್ಮ ಸೂಪರ್ ಸ್ಟಾರ್' ಮತ್ತು 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋನಲ್ಲಿ ಎಲ್ಲರ ಮನ ಗೆದ್ದ ಮಹಿತಾ ಬಳಿಕ 'ಚುಕ್ಕಿತಾರೆ' ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ, ಭೈರತಿ ರಣಗಲ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಜೊತೆಗೂ ಮಹಿತಾ ಮತ್ತು ಅವರ ತಾಯಿ ಇಬ್ಬರೂ ನಟಿಸಿದ್ದಾರೆ. ಏಳು ವರ್ಷದ ಈ ಪುಟಾಣಿ ಮಹಿತಾ ಟ್ಯಾಲೆಂಟ್ ಬಾಕ್ಸ್ ಆಗಿದ್ದಾಳೆ ಎಂದರೆ ತಪ್ಪಾಗುವುದಿಲ್ಲ.. ಹಾಡುವುದು, ಡ್ಯಾನ್ಸ್, ನಟನೆ ಎಲ್ಲವುದರಲ್ಲೂ ಮುಂದೆ ಇದ್ದಾಳೆ.
ಟ್ರೆಂಡ್ ಹಾಡುಗಳಿಗೆ ಹೊಸ ಲಿರಿಕ್ಸ್
ಬಹಳ ಟ್ರೆಂಡ್‌ನಲ್ಲಿರುವ ಹಾಡುಗಳ ಮ್ಯೂಸಿಕ್‌ಗೆ ತಕ್ಕಂತೆ ಬೇರೆ ಲಿರಿಕ್ಸ್ ಬರೆದು ಮಹಿತಾ ಮತ್ತು ಅವರ ತಾಯಿ ಸಾಮಾಜಿಕ ವಿಚಾರಕ್ಕೆ ಹಾಡುತ್ತಿರುತ್ತಾರೆ. ಅಮ್ಮ ನಾನ್ ಓದಲ್ಲ ಎಂಬ ರೀಲ್ಸ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದಕ್ಕೆ ಸರಿಸುಮಾರು ಮೂರೂವರೆ ಸಾವಿರ ಕಮೆಂಟ್‌ಗಳು ಬಂದಿದ್ವು. ಇನ್ನು "ರಾವುಲ್ಲಾ ರಾವುಲ್ಲಾ", "ಕರಿಮಣಿ ಮಾಲೀಕ ನೀನಲ್ಲ", "ನಾನು ನಂದಿನಿ", "ಬುರುಡೆ ಬುರುಡೆ", "ಡೋಂಟ್ ವರಿ ಬೇಬಿ ಚಿನ್ನಮ್ಮ" ಸೇರಿದಂತೆ ಹಲವು ಟ್ರೆಂಡಿಂಗ್ ಹಾಡುಗಳಿಗೆ ಬೇರೆ ಲಿರಿಕ್ಸ್ ಬರೆದು ಹಾಡಿ ಫೇಮಸ್ ಆಗಿದ್ದಾರೆ. ಮಹಿತಾಳಲ್ಲಿ ಯಾವ ಟ್ಯಾಲೆಂಟ್‌ಗೂ ಕಡಿಮೆ ಇಲ್ಲ. ಮಹಿತಾ ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು. ಇದಕ್ಕೆಲ್ಲಾ ಅವರ ತಾಯಿ ತನುಜಾ ಅವರ ಎಫರ್ಟ್ಸ್ ಕೂಡ ಅಷ್ಟೇ ಇದೆ.
ಮಹಿತಾಳ ಟ್ಯಾಲೆಂಟ್‌ಗೆ ಇಲ್ಲ ಕೊನೆ
ಸದ್ಯ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಹಿತ ಪಾತ್ರ ಮಾಡುತ್ತಿರುವ ಬಾಲನಟಿ ಮಹಿತಾ, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಮಹಿತಾ ಹೊಂದಿದ್ದಾಳೆ. ಇದುವರೆಗೂ ಬರೋಬ್ಬರಿ 852 ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. ಇನ್ನು ಮಹಿತಾ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.


Click it and Unblock the Notifications











