For Quick Alerts
  ALLOW NOTIFICATIONS  
  For Daily Alerts

  ನಟಿ ಚಂದನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಕಿರುತೆರೆ ನಟ ದೀಪಕ್

  |

  ಕನ್ನಡ ಕಿರುತೆರೆಯ ಖ್ಯಾತ ನಟ ದೀಪಕ್ ಮಹದೇವ್ ಮತ್ತು ನಟಿ ಚಂದನಾ ಹೊಸ ಬಾಳಿನ ಹೊಸಿಲಲಿ ನಿಂತಿದ್ದಾರೆ. ಇತ್ತೀಚಿಗೆ ಚಂದನಾ ಮತ್ತು ದೀಪಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.

  ನಟ ದೀಪಕ್ ಮಹಾದೇವ್ 'ನಾ ನಿನ್ನ ಬಿಡಲಾರೆ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದಿದ್ದರು. ಇನ್ನು ನಟಿ ಚಂದನಾ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ಅಂಕಿತಾ ಪಾತ್ರದಲ್ಲಿ ಮಿಂಚಿದ್ರು. ವಿಲನ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಂಕಿತಾ ಕನ್ನಡ ಪ್ರೇಕ್ಷಕರ ಮನೆಮಾತಾಗಿದ್ದರು. ಈ ಧಾರಾವಾಹಿ ಬಳಿಕ ಚಂದನಾ ಕನ್ನಡದ ಕಿರುತೆರೆಯಿಂದ ಮಾಯವಾಗಿದ್ದರು.

  ಇದೀಗ ದೀಪಕ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸರಳ ನಿಶ್ಚಿತಾರ್ಥ ಸಮಾರಂಭದಲ್ಲಿ ದೀಪಕ್ ಮತ್ತು ಚಂದನಾ ಉಂಗುರ ಬದಲಾಯಿಸಿಕೊಂಡರು. ಕೊರೊನಾ ಕಾರಣದಿಂದ ಹೆಚ್ಚು ಜನರಿಗೆ ಆಹ್ವಾನ ನೀಡದೆ, ಕೇವಲ ಕುಟುಂಬದ ಕೆಲವು ಸದಸ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

  ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ದೀಪಕ್ ಮತ್ತು ಚಂದನಾ ಈಗ ಪತಿ-ಪತ್ನಿಯರಾಗುತ್ತಿದ್ದಾರೆ. ನಿಶ್ಚಿತಾರ್ಥದಲ್ಲಿ ಚಂದನಾ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ರೆ, ದೀಪಕ್ ಗೋಲ್ಡ್ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ರು. ಇಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  ಚಂದನಾ ಜೊತೆ ಎಂಗೇಜ್ ಆಗಿರುವ ಸಂತಸದಸ ಸುದ್ದಿಯನ್ನು ದೀಪಕ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. "1/07/2021 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಸದ್ಯದಲ್ಲೇ ಮದುವೆ" ಎಂದು ಹೇಳಿದ್ದರು. ಕೊರೊನಾ ಕಾರಣದಿಂದ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಎಂದಿದ್ದರು. ಜೊತೆಗೆ ಚಂದನಾ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದರು.

  Naa Ninna Bidalaare fame Actor Deepak Mahadev gets engaged with Chanadana Mahalingaiah

  ದೀಪಕ್ ಮತ್ತು ಚಂದನಾ ಜೋಡಿಗೆ ಅಭಿಮಾನಿಗಳು, ಕಿರುತೆರೆ ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಂದಹಾಗೆ ದೀಪಕ್ 'ನಾ ನಿನ್ನ ಬಿಡಲಾರೆ' ಬಳಿಕ ನಾಯಕಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಚಂದನಾ ಸದ್ಯ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪರಭಾಷಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲಿ ಎನ್ನುವುದು ಅಭಿಮಾನಿಗಳ ಆಶಯ.

  English summary
  Naa Ninna Bidalare fame Actor Deepak Mahadev gets engaged with Chanadana Mahalingaiah.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X