ಜೀ ಕನ್ನಡದಲ್ಲಿ ಅಮ್ಮನ 'ಆತ್ಮ'ಕತೆ; 'ನಾ ನಿನ್ನ ಬಿಡಲಾರೆ' ಎಂದಿನಿಂದ ಶುರು?
ಜೀ ಕನ್ನಡ ಹೊಸ ಹೊಸ ಧಾರಾವಾಹಿಗಳನ್ನು ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಹೊಸದೊಂದು ಧಾರಾವಾಹಿ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ ಹೊರಟಿದೆ. ಈಗಾಗಲೇ ಜೀ ಕನ್ನಡ ಪ್ರೋಮೋವನ್ನು ರಿಲೀಸ್ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದ್ಹಾಗೆ ಆ ಧಾರಾವಾಹಿಯೇ 'ನಾ ನಿನ್ನ ಬಿಡಲಾರೆ'.
'ನಾ ನಿನ್ನ ಬಿಡಲಾರೆ' ಪ್ರೋಮೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಿಲೀಸ್ ಮಾಡಿದೆ. ಹಾಗೇ ಇದು ಕರುಳಬಳ್ಳಿಯ ಕಾಪಾಡಲು ಹೋರಾಡೋ ಅಮ್ಮನ 'ಆತ್ಮ'ಕತೆ ಎಂದು ಹೇಳಿಕೊಂಡಿದೆ. ಪ್ರೋಮೋ ಕೂಡ ಪ್ರಾಮಿಸಿಂಗ್ ಆಗಿದ್ದು, ಮಗಳನ್ನು ಉಳಿಸಿಕೊಳ್ಳಲು ತಾಯಿಯ ಆತ್ಮ ಪರದಾಡುವ ಕಥೆ ಇದಾಗಿದೆ ಅನ್ನೋದು ಗೊತ್ತಾಗುತ್ತಿದೆ.

ಆದಿತ್ಯ ದೊಡ್ಡ ಬ್ಯುಸಿನೆಸ್ ಮ್ಯನ್. ತನ್ನ ಮುದ್ದಾದ ಹೆಂಡತಿಯನ್ನು ಕಳೆದುಕೊಂಡು ಬಿಡುತ್ತಾನೆ. ಆತನಿಗೊಬ್ಬಳು ಮುದ್ದಾದ ಮಗಳು ಕೂಡ ಇರುತ್ತಾಳೆ. ತಾಯಿ ಪ್ರೀತಿ ಇಲ್ಲದ ಮಗುವು ತನ್ನ ತಾಯಿಗಾಗಿ ಹಂಬಲಿಸುತ್ತಿರುತ್ತಾಳೆ. ಆ ಮಗುವನ್ನು ಕಂಡರೆ ಆಗದವರು ಆ ಕುಟುಂಬದಲ್ಲಿಯೇ ಇದ್ದಾರೆ ಅನ್ನೋದನ್ನು ತೋರಿಸಲಾಗಿದೆ. ಆದಿತ್ಯ ತನ್ನ ಹೆಂಡತಿಯ ಕಾರ್ಯವನ್ನು ಮಾಡಬೇಕಾದರೆ ಮಗಳು ಬಹಳ ಬೇಸರದಿಂದ ನದಿಯ ಬಳಿಗೆ ಹೋಗುತ್ತಾಳೆ. ಇದನ್ನೇ ನೋಡಿ ಆ ಕಾರ್ಯದಲ್ಲೇ ಕೂತಿದ್ದವರೊಬ್ಬರು ಆ ಮಗುವನ್ನು ಕೊಲ್ಲಲು ಸೂಚನೆಯನ್ನು ನೀಡುತ್ತಾಳೆ.
ಆಟ ಆಡುತ್ತಾ ನದಿಯ ಬಳಿಗೆ ಬಂದವರೊಬ್ಬರು ಆ ಮಗುವನ್ನು ನದಿಗೆ ತಳ್ಳಿ ಬಿಡುತ್ತಾರೆ. ಇದನ್ನೆಲ್ಲ ಪಕ್ಕದಲ್ಲಿ ನಿಂತು ನೋಡುತ್ತಿದ್ದ ಹುಡುಗಿ ಆ ಮಗುವನ್ನು ಬದುಕಿಸುತ್ತಾಳೆ. ಹಾಗೆಯೇ ಆದಿತ್ಯಗೆ ಸರಿಯಾಗಿಯೇ ಬುದ್ದಿ ಹೇಳಿ ಅಲ್ಲಿಂದ ಹೊರಟಾಗ ಆಕೆಯನ್ನು ಆದಿತ್ಯನ ಹೆಂಡತಿಯ ಆತ್ಮ ನೋಡಿ. ಈಕೆಯೇ ನನ್ನ ಮಗುವಿಗೆ ತಾಯಿ ಆಗಲು ಸಾಧ್ಯ ಎಂದು ನಿರ್ಧಾರ ಮಾಡುತ್ತೆ. ಒಟ್ಟಿನಲ್ಲಿ ಬಹಳ ದಿನಗಳ ಬಳಿಕ ಕಿರುತೆರೆಯಲ್ಲಿ ಆತ್ಮದ ಕಥೆ ಬರುತ್ತಿದೆ.
'ನಾ ನಿನ್ನ ಬಿಡಲಾರೆ' ಧಾರಾವಾಹಿ ಜನವರಿ 27ರಿಂದ ಪ್ರಸಾರ ಆಗಲಿದೆ. ಈ ಮೊದಲೇ ಧಾರಾವಾಹಿ ಸಣ್ಣ ತುಣುಕನ್ನು ಪ್ರಸಾರ ಮಾಡಿತ್ತು. ಇದೀಗ ಮತ್ತೊಮ್ಮೆ ಪ್ರೋಮೊ ರಿಲೀಸ್ ಮಾಡಿ ಕಿರುತೆರೆ ವೀಕ್ಷಕರ ಕಾತುರತೆಯನ್ನು ಮತ್ತಷ್ಟು ಜಾಸ್ತಿ ಮಾಡಿದೆ. ಇನ್ನು ತಾರಾಗಣಕ್ಕೆ ಬರುವುದಾರೆ, ದೆವ್ವದ ರೂಪದಲ್ಲಿ ಕಾಣಿಸಿಕೊಂಡಿರುನ ನಟಿ ನೀತಾ. 'ಯಶೋಧ' ಸೀರಿಯಲ್ ಮೂಲಕ ಜನ ಮನ ಗೆದ್ದಿದ್ದ ಈಕೆ, ಕಿಚ್ಚನ ಜೊತೆ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸಿ ಜನಪ್ರಿಯರಾಗಿದ್ದರು. ವಿವಾಹದ ಬಇಕ ನೀತಾ ಅಶೋಕ್ ಇದೀಗ ಕಿರುತೆರೆಯಲ್ಲಿ ಮತ್ತೆ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ನೀತಾ ಅಶೋಕ್ 'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಪ್ರೋಮೋ ಮೂಲಕವೇ ಗಮನ ಸೆಳೆದಿದ್ದಾರೆ.

'ನೀಲಾಂಬರಿ', 'ನಾ ನಿನ್ನ ಬಿಡಲಾರೆ', 'ಒಲವಿನ ನಿಲ್ದಾಣ' ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. ಇದೀಗ ಮತ್ತೆ ಅದೇ ಹೆಸರಿನ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ. ಮಡಿದ ಮೇಲೂ ಮಿಡಿಯುವುದು ಅಮ್ಮನ ಪ್ರೀತಿ ಎನ್ನುವ ಸಬ್ ಟೈಟಲ್‌ನೊಂದಿಗೆ ಆರಂಭವಾಗುವ ಈ ಸೀರಿಯಲ್ ಅನ್ನು ನೋಡಲು ಧಾರಾವಾಹಿಯ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಮಗಳ ಪಾತ್ರದಲ್ಲಿ ಮಹಿತಾ ಕಾಣಿಸಿಕೊಂಡಿದ್ದಾಳೆ.
'ಚುಕ್ಕಿ ತಾರೆ' ಧಾರಾವಾಹಿಯಲ್ಲಿ ಚುಕ್ಕಿಯಾಗಿ ಮಾಹಿತಾ ನಟನೆ ಮಾಡಿದ್ದಳು. 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಮಿಂಚಿದ ಮಹಿತಾಗೆ ಸಾಕಷ್ಟು ಆಫರ್‌ಗಳು ಬರುತ್ತಿವೆ. ಇನ್ನು ನೀತಾ ಅಶೋಕ್, ತುಳುವಿನ 'ಜಬರ್‌ದಸ್ತ್ ಶಂಕರ' ಸಿನಿಮಾಗೆ ನಾಯಕಿಯಾದ್ರು. ಬಳಿಕ ಸುದೀಪ್ ನಟನೆಯ 'ವಿಕ್ರಾಂತ್ ರೋಣ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು.


Click it and Unblock the Notifications











