Don't Miss!
- Lifestyle
Today Rashi Bhavishya: ಭಾನುವಾರದ ದಿನ ಭವಿಷ್ಯ
- Sports
ಐಪಿಎಲ್ 2022: ಡೆಲ್ಲಿ ಪ್ಲೇಆಫ್ ಕನಸು ಭಗ್ನಗೊಳಿಸಿದ ಮುಂಬೈ: ಪ್ಲೇಆಫ್ಗೆ ಎಂಟ್ರಿಕೊಟ್ಟ ಆರ್ಸಿಬಿ
- Education
IIIT Bangalore Recruitment 2022 : ಮ್ಯಾನೇಜರ್ ಮತ್ತು ಸಿಐಇಟಿ ಸಪೋರ್ಟ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೇಂದ್ರ + ರಾಜ್ಯ: ಕೇರಳದಲ್ಲಿ ಪೆಟ್ರೋಲ್ 12, ಡೀಸೆಲ್ 9 ರೂಪಾಯಿ ಇಳಿಕೆ
- Automobiles
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Finance
Breaking: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ನಾಗಿಣಿ 2' ಹೀರೋ ನಿನಾದ್, ರಮ್ಯಾ ಮದುವೆ ದಿನಾಂಕ ಫಿಕ್ಸ್: ಇವ್ರ ಲವ್ ಸ್ಟೋರಿಯೆ ಬಲು ಚೆಂದ!
ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಹೆಸರಾಂತ ಧಾರಾವಾಹಿಗಳಲ್ಲಿ 'ನಾಗಿಣಿ 2' ಕೂಡ ಒಂದು. ಈ ಸೀರಿಯಲ್ ನಲ್ಲಿ ನಾಗಿಣಿ ಮತ್ತು ನಾಗರಾಜ ಇಬ್ಬರೂ ಪ್ರಮುಖ. ನಾಯಕ ನಟ ನಾಗರಾಜ ಪಾತ್ರಧಾರಿ ತ್ರಿಶೂಲ್ ಬಗ್ಗೆ ನಿಮಗೆ ಗೊತ್ತೇ ಇರುತ್ತೆ.
ಅಂದರೆ ಧಾರಾವಾಹಿಯಲ್ಲಿನ ತ್ರಿಶೂಲ್ ಪಾತ್ರದ ಪರಿಚಯ ನಿಮಗೆ ಇದ್ದೇ ಇರುತ್ತೆ. ತ್ರಿಶೂಲ್ ಅವರು ತಮ್ಮ ನಿಜ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತ್ರಿಶೂಲ್ ನಿಜವಾದ ಹೆಸರು ನಿನಾದ್. ಅವರು ಸದ್ಯ ಮದುವೆ ಆಗುವ ಸಿಹಿ ಸುದ್ದಿ ಕೊಟ್ಟಿದ್ದಾರೆ.
'ನಾಗಿಣಿ'
ಹೀರೋ
ನಿನಾದ್
ಮದುವೆ:
ಲವ್
ಕಮ್
ಮದುವೆ
ಸ್ಟೋರಿ
ಬಗ್ಗೆ
ಇಲ್ಲಿದೆ
ಮಾಹಿತಿ!
ನಿನಾದ್ ಮದುವೆಗೆ ಅಣಿಯಾಗಿದ್ದಾರೆ. ತಾವು ಪ್ರೀತಿಸಿದ, ಇಷ್ಟ ಪಟ್ಟ ಗೆಳತಿ ಜೊತೆಗೆ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆ ನಿಶ್ಚಿತಾರ್ಥ ನೆರವೇರಿದ್ದು, ಮದುವೆ ಕೂಡ ಫಿಕ್ಸ್ ಆಗಿದ್ದು, ಈಗ ದಿನಾಂಕ ರಿವೀಲ್ ಆಗಿದೆ. ಇವರ ಲವ್ ಮತ್ತು ಮ್ಯಾರೇಜ್ ಸ್ಟೋರಿ ಬಗ್ಗೆ ಮುಂದೆ ಓದಿ..

ಮೇ 20ಕ್ಕೆ ರಮ್ಯಾ- ನಿನಾದ್ ಮದುವೆ!
ಸದ್ಯ ಈ ಜೋಡಿಯ ಮದುವೆ ನಿಶ್ಚಿತಾರ್ಥ ಕಾರ್ಯ ನೆರವೇರಿದೆ. ಫೆಬ್ರವರಿ 7ರಂದು ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ. ಇದೀಗ ಮದುವೆ ದಿನಾಂಕ ಕೂಡ ನಿಗದಿ ಆಗಿದೆ. ಇದೇ ಮೇ 20ಕ್ಕೆ ಈ ಜೋಡಿ ಸಪ್ತಪದಿ ತುಳಿಯಲಿದೆ. ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆ. ಅದ್ದೂರಿಯಾಗಿ ನಿನಾದ್, ರಮ್ಯಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ನಯನತಾರ
ವಿಘ್ನೇಶ್
ಮದುವೆ:
ಗುರುಬಲ
ಇಲ್ಲ
ಎಂದ
ಜ್ಯೋತಿಷಿ!

ನಿನಾದ್ ಬಾಳಿಗೆ ಬೆಳಕಾಗುತ್ತಿದ್ದಾರೆ ರಮ್ಯಾ!
ನಿನಾದ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ರಮ್ಯಾ. ಇವರಿಗೆ ಸಿನಿಮಾ, ಸೀರಿಯಲ್ ನಂಟಿಲ್ಲ. ಅವರು ಸೀದಾ ಸಾದ ಸಿ.ಎ ಓದುತ್ತಿರುವ ಹುಡುಗಿ. ಇಬ್ಬರಿಗೂ ಹಲವು ವರ್ಷಗಳಿಂದ ಪರಿಚಯ ಇದ್ದು, ಮನೆಯವರ ಒಪ್ಪಿಗೆಯ ಮೇರೆಗೆ ಅರೇಂಜ್ ಮ್ಯಾರೇಜ್ ಆಗ್ತಿದ್ದಾರೆ. ಇದು ಲವ್ ಮ್ಯಾರೇಜ್ ಎನ್ನುವುದಕ್ಕಿಂತಲೂ ಅರೇಂಜ್ ಮ್ಯಾರೇಜ್ ಎನ್ನಬಹುದು ಹಾಗೆ ನಡೆಯುತ್ತಿದೆ. ಎನ್ನುತ್ತಾರೆ ನಟ ನಿನಾದ್.

ಬಹುಕಾಲದ ಗೆಳತಿಯೇ, ನಿನಾದ್ ಬಾಳ ಸಂಗಾತಿ!
ನಿನಾದ್ ಅವರು ಹೇಳುವ ಹಾಗೆ. ರಮ್ಯಾ ಮತ್ತು ನಿನಾದ್ ಇಬ್ಬರು ಒಬ್ಬ ಕಾಮನ್ ಫ್ರೆಂಡ್ ಮೂಲಕ ಪರಿಚಯ ಆಗಿದ್ದಾರೆ. ನಂತರ ಅವರ ಸ್ನೇಹ ಪ್ರೀತಿಯಾದ ಬಳಿಕ , ಇಬ್ಬರೂ ಒಟ್ಟಿಗೆ ಕೂಡಿ ಬಾಳಲು ನಿರ್ಧರಿಸಿದ್ದಾರೆ. ಇಬ್ಬರ ಮನೆಯಲ್ಲೂ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗ ಈ ಜೋಡಿ ವೈವಾಹಿಕ ಬಾಳಿಗೆ ಕಾಲಿಡಲು ಸಜ್ಜಾಗಿದೆ. ರಮ್ಯಾ ಅವರು ಈಗ ಬಾಳ ಸಂಗಾತಿ ಆಗುತ್ತಿರುವ ಬಗ್ಗೆ ನಿನಾದ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಿಕ್ಕಿ
ಗಲ್ರಾನಿ,
ಆದಿ
ಪಿನಿಶೆಟ್ಟಿ
ಮದುವೆ
ದಿನಾಂಕ
ಫಿಕ್ಸ್!

ಮುಂದೆ ಸಿನಿಮಾದಲ್ಲಿ ನಿನಾದ್ ನಟನೆ!
ನಟ ನಿನಾದ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ನಾಗಿಣಿ ಧಾರಾವಾಹಿ ಮೂಲಕ ಜನಮನ ಗೆದ್ದ ನಿನಾದ್ ಅವರಿಗೆ ಸಿನಿಮಾ ಮತ್ತು ವೆಬ್ ಸರಣಿಯ ಆಫರ್‌ಗಳು ಬರ್ತಿವೆ. ಆದರೆ ಸದ್ಯ ನಾಗಿಣಿ ಧಾರಾವಾಹಿಯಲ್ಲಿ ನಿನಾದ್ ಬ್ಯೂಸಿ ಇದ್ದಾರೆ. ಹಾಗಾಗಿ ಈ ಧಾರಾವಾಹಿ ಮುಗಿದ ಬಳಿಕ ಹೊಸ ಪ್ರಾಜೆಕ್ಟ್ ಶುರುಮಾಡಲಿದ್ದಾರೆ. ನಾಗಿಣಿ ಧಾರಾವಾಹಿ ಜೊತೆ ಜೊತೆಗೆ ಸಿನಿಮಾದಲ್ಲಿ ನಟಿಸು ಯೋಜನೆಯಲ್ಲಿದ್ದಾರೆ.