Naanu Nandini: ಸೋಷಿಯಲ್ ಮೀಡಿಯಾದಲ್ಲಿ 'ನಂದಿನಿ' ಹವಾ: ಕಿರುತೆರೆ ತಾರೆಯರ ರೀಲ್ಸ್ ವೈರಲ್

By ಶೃತಿ ಹರೀಶ್ ಗೌಡ

ಎಲ್ಲೆಲ್ಲೂ 'ನಾನು ನಂದಿನಿ' ಸಾಂಗ್ ಟ್ರೆಂಡ್ ಆಗ್ತಿದೆ. ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಓಪನ್ ಮಾಡಿದ್ರೆ ಇದೇ ರೀಲ್ಸ್ ಕಣ್ಣಿಗೆ ರಾಚುತ್ತಿದೆ. ಎಲ್ಲರೂ ತಮ್ಮದೇ ಸ್ಟೈಲ್‌ನಲ್ಲಿ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಐಟಿ ಕೆಲಸ ಮಾಡುವವರು ಪಿಜಿಯಲ್ಲಿ ಇದ್ದುಕೊಂಡು ಜೀವನ ನಿರ್ವಹಣೆ ಮಾಡುತ್ತಾ ಇರುತ್ತಾರೆ. ಅದಕ್ಕೆ ತಕ್ಕಂತೆ ವಿಕಿಪೀಡಿಯ ವಿಕಾಸ್ ಒಂದು ಹಾಡನ್ನು ಹಾಡಿ, ನೃತ್ಯವನ್ನು ಮಾಡಿದ್ದಾರೆ.

ಈ ಹಾಡನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಾಗ ಮಿಲಿಯನ್ಸ್‌ಗಟ್ಟಲೆ ವ್ಯೂವ್ಸ್ ಕಂಡಿತು. ಯಾವ ಸೆಲೆಬ್ರಿಟಿಗಳಿಗೂ ಕಮ್ಮಿ ಇಲ್ಲದಂತೆ ಈ ಹಾಡು ಎಲ್ಲರನ್ನು ಮುಟ್ಟಿತು. ಇನ್ನು ಕಂಟೆಂಟ್ ಕ್ರಿಯೇಟರ್ ವಿಕಿಪೀಡಿಯ ವಿಕಾಸ್‌ ತಮ್ಮ ಗೆಳೆಯರೊಂದಿಗೆ ಸೇರಿಕೊಂಡು ಹಲವರು ಕಂಟೆಂಟ್ ಗಳನ್ನು ಕ್ರಿಯೇಟ್ ಮಾಡಿ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮುದ್ದು ಕುಮಾರನಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ರಾಜಕೀಯ ಸೇರಿದಂತೆ ಪ್ರಸ್ತುತ ನಡೆಯುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ಸಹ ಹತ್ತಿರವಾಗಿದ್ದಾರೆ.

Naanu-Nandini-Tv-actresses-Reels

"ನಾನು ನಂದಿನಿ ಬೆಂಗಳೂರಿಗ್ ಬಂದೀನಿ, ಪಿಜಿಲಿ ಇರ್ತಿನಿ ಐಟಿ ಕೆಲಸ ಮಾಡ್ತೀನಿ, ಊಟ ಸರಿಯಿಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್‌ ಎಲ್ಲಾ ಮನೆಗ್ ಕಳಿಸ್ತೀನಿ" ಅಂತ ಸಾಂಗ್ ಮುಂದುವರೆಯತ್ತದೆ.'I am barbie girl' ಎಂಬ ಇಂಗ್ಲೀಷ್ ಟ್ಯೂನ್‌ಗೆ ಈ ಹಾಡಿನ ಟ್ಯೂನ್ 'ನಾನು ನಂದಿನಿ' ಎಂದು ಹಾಡು ಮಾಡಲಾಗಿದೆ.

ಎಲ್ಲೆಲ್ಲೂ ನಾನು ನಂದಿನಿ

ಬಸ್ ಸ್ಟ್ಯಾಂಡ್‌ನಿಂದ ಹಿಡಿದು ವಿಧಾನಸೌಧದವರೆಗೆ ರೀಲ್ಸ್ ಮಾಡುವವರಿಗೆ ಬರವಿಲ್ಲ. ಇದಕ್ಕೆ ಸಣ್ಣ ಮಕ್ಕಳು ಕೂಡ ಹೊರತಾಗಿಲ್ಲ, ಸೀರಿಯಲ್ ನಟ ನಟಿಯರು ಕೂಡ 'ನಾನು ನಂದಿನಿ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮುದ್ದು ಪುಟಾಣಿ ಮಹಿತಾ ಕೂಡ ಈ ಸಾಂಗ್‌ಗೆ ಸಕ್ಕತ್ತಾಗಿ ಗಾಗಲ್ ಹಾಕಿಕೊಂಡು ವ್ಯಾನಿಟಿ ಬ್ಯಾಗನ್ನು ಹಿಡಿದುಕೊಂಡು ಎಂಜಾಯ್ ಮಾಡಿದ್ದಾಳೆ. ಕಿರುತೆರೆ ನಟಿ ಸಾರಾ ಅಣ್ಣಯ್ಯ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ರಿತು ಜೊತೆ ಸೇರಿ ವೈಷ್ಣವಿ ಕೂಡ ನಾನು ನಂದಿನಿ ಎಂದು ಹಾಡಿದ್ದಾರೆ.

ನಾಗವಲ್ಲಿಯಾಗಿ ಬದಲಾದ ನಂದಿನಿ

ನಂದಿನಿ ಹಾಡು ಟ್ರೋಲರ್ಸ್ ಹಾಗೂ ಮೀಮ್ಸ್ ಮಾಡುವವರಿಗೆ ಸಕ್ಕತ್ ಮಜಾ ಕೊಟ್ಟಿವೆ. ನೋಡು ನೋಡು ನಂದಿನಿ ನಾಗವಲ್ಲಿಯಾಗಿ ಹೇಗೆ ಬದಲಾಗುತ್ತಿದ್ದಾಳೆ ಎಂದು ಟ್ರೋಲ್ ಮೀಮ್ಸ್‌ಗಳನ್ನು ಮಾಡಿದ್ದಾರೆ. ಅವಿನಾಶ್ ಯಾರು ನೀನು ಎಂದು ಕೇಳುವ ಡೈಲಾಂಗ್‌ನೊಂದಿಗೆ 'ನಾನು ನಂದಿನಿ' ಹಾಡನ್ನು ಸಿಂಕ್ ಮಾಡಲಾಗಿದೆ. ಎಲ್ಲರೂ ಕೂಡ ವಿಕಿಪೀಡಿಯ ಅವರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತಾ ಇದ್ದಾರೆ. ಅಂತೂ ಇಂತೂ ಎಲ್ಲರೂ ನಂದಿನಿಯ ಜಪವನ್ನೇ ಮಾಡುತ್ತಾ ಇದ್ದಾರೆ.

More from Filmibeat

English summary
Kannada Tv actresses Naanu Nandini Reels goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X