ಥಿಯೇಟರ್..ಒಟಿಟಿ..ಈಗ ಟಿವಿಯಲ್ಲೂ ಡಾಲಿಯ 'ಟಗರು ಪಲ್ಯ'ಕ್ಕೆ ಭರ್ಜರಿ ರೆಸ್ಪಾನ್ಸ್: ಬಂದ ಟಿಆರ್‌ಪಿ ಎಷ್ಟು ಗೊತ್ತಾ!?

ಕಳೆದ ವರ್ಷ ಬಂದ ಕನ್ನಡದ ಸಿನಿಮಾಗಳಲ್ಲಿ ನಾಟಿ ಹಿಟ್ ಎಂದು ಭರ್ಜರಿ ಹಿಟ್ ಆಗಿದ್ದು, ಡಾಲಿಯ 'ಟಗರು ಪಲ್ಯ'. ನಟ ರಾಕ್ಷಸ ಧನಂಜಯ್ ತಮ್ಮ ಡಾಲಿ ಪ್ರೊಡಕ್ಷನ್ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ನೀಡುವ ಆಶಯವನ್ನು ಹೊಂದಿದ್ದಾರೆ. ಇದರ ಅಡಿಯಲ್ಲಿಯೇ ಬಂದ ಡಾಲಿ ಪಿಕ್ಚರ್ಸ್ ನ ಮೂರನೇ ಕೊಡುಗೆ ಟಗರು ಪಲ್ಯ ಕಿರುತೆರೆಯಲ್ಲಿಯೂ ದೊಡ್ಡ ಮಟ್ಟದ ಹಿಟ್ ಕಂಡಿದೆ.

ಸಿನಿಮಾ ಮಂದಿರಗಳಲ್ಲಿಯೂ ಜನರಿಂದ ಉತ್ತಮ ರೆಸ್ಪಾನ್ಸ್ ಪಡೆದ 'ಟಗರು ಪಲ್ಯ' ಬಳಿಕ ಒಟಿಟಿ ವೇದಿಕೆ ಅಮೇಜಾನ್ ಪ್ರೈಮ್‌ನಲ್ಲಿಯೂ ತೆರೆಕಂಡಿದ್ದು. ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿತ್ತು.ಥಿ ಯೇಟರ್ ಹಾಗೂ ಒಟಿಟಿ ಎರಡು ವೇದಿಕೆಯಲ್ಲಿಯೂ ಗೆದ್ದಿರುವ ಟಗರು ಪಲ್ಯ ಕಿರುತೆರೆ ಪ್ರೇಕ್ಷಕ ವರ್ಗಕ್ಕೂ ಇಷ್ಟವಾಗಿದೆ. ಇದಕ್ಕೆ ಸಾಕ್ಷಿಯಾಗಿ ಟಿಆರ್‌ಪಿ ಇದೆ.

Nagabhushan, Amulya Prem Starrer, Daali productionss Tagaru Palya Gets Good Trp

ಟಿವಿಯಲ್ಲೂ 'ಟಗರು ಪಲ್ಯ' ಹಿಟ್

ಕಳೆದ ಎರಡು ವಾರದ ಹಿಂದಷ್ಟೇ ಅಂದರೆ ಜನವರಿ 7ರಂದು ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಕಲರ್ಸ್ ಕನ್ನಡ ವಾಹಿನಿಯಲ್ಲಿ ತೆರೆಕಂಡಿತ್ತು. ಕಿರುತೆರೆಗೆ ಅಪ್ಪಳಿಸಿದ್ದ ಈ ಚಿತ್ರ ಟಿಆರ್‌ಪಿಯಲ್ಲಿ ಭರ್ಜರಿ ಕಮಾಲ್ ಮಾಡಿದೆ. ಬರೋಬ್ಬರಿ 7.2 ಟಿಆರ್‌ಪಿ ಟಗರು ಪಲ್ಯ ಸಿನಿಮಾಗೆ ದಕ್ಕಿದೆ. ಹೊಸಬರ ಸಿನಿಮಾಗೆ ಇಷ್ಟು ಟಿಆರ್‌ಪಿ ಬಂದಿರೋದು ನಿಜಕ್ಕೂ ದಾಖಲೆಯೇ ಎನ್ನಲಾಗುತ್ತಿದೆ.

ಈ ಹಿಂದೆ ಡಾಲಿ ಪಿಕ್ಚರ್ಸ್ ನಿರ್ಮಾಣ ಮಾಡಿದ್ದ ಚೊಚ್ಚಲ ಸಿನಿಮಾ 'ಬಡವ ರಾಸ್ಕಲ್' ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ದೊಡ್ಡ ಮಟ್ಟದ ಹಿಟ್ ಕಂಡಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಎರಡು ಅದ್ಭುತ ಚಿತ್ರಗಳನ್ನು ನೀಡಿದೆ ಡಾಲಿ ಪಿಕ್ಚರ್ಸ್. ಎರಡು ಸಿನಿಮಾಗಳು ಕೂಡ ಉತ್ತಮ ಟಿಆರ್‌ಪಿ ಪಡೆದಿವೆ. ಇದು ಡಾಲಿ ಪಿಕ್ಷರ್ಸ್‌ಗೆ ಒಂದು ಹಿರಿಮೆ.

Nagabhushan, Amulya Prem Starrer, Daali productionss Tagaru Palya Gets Good Trp

ಟಗರು ಪಲ್ಯ

ಕಳೆದ ವರ್ಷದ ಅಕ್ಟೋಬರ್‌ 27 ರಂದು ತೆರೆಕಂಡಿದ್ದ ನಟ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾಕ್ಕೆ ಉಮೇಶ್ ಕೆ. ಕೃಪಾ ಆಕ್ಷನ್ ಕಟ್ ಹೇಳಿದ್ದರು. ಇದು ಇವರ ಮೊದಲ ಪ್ರಯತ್ನ. ಚೆಚ್ಚಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡಿದ್ದಾರೆ ನಿರ್ದೇಶಕ ಉಮೇಶ್ ಕೆ. ಕೃಪಾ. ಇನ್ನು, ಕನ್ನಡ ಸಿನಿಮಾರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ನಟ ನಾಗಭೂಷಣ ಅಗರು ಪಲ್ಯಕ್ಕೆ ನಾಯಕರಾಗಿದ್ದರು.

ನಟ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ 'ಟಗರು ಪಲ್ಯ' ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಚಿತ್ರದ ಜೀವಾಳವಾಗಿರುವ ನಟ ರಂಗಾಯಣ ರಘು, ಅಮೃತಾ ಪ್ರೇಮ್ ತಂದೆ ಪಾತ್ರದಲ್ಲಿ ನಟಿಸಿದ್ದರು. ನಟಿ ತಾರಾ ಅನುರಾಧ, ಶರತ್ ಲೋಹಿತಾಶ್ವ, ವಾಸುಕಿ ವೈಭವ್, ಚಿತ್ರಾ ಶೆಣೈ ಮತ್ತು ವೈಜನಾಥ್ ಬಿರಾದಾರ್ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು. ವಾಸುಕಿ ವೈಭವ್ ಸಂಗೀತ ಸಂಯೋಜಿಸುವ ಜೊತೆಗೆ ಒಂದು ಪಾತ್ರದಲ್ಲಿಯೂ ನಟಿಸಿದ್ದಾರೆ.

More from Filmibeat

English summary
Nagabhushan, Amrutha Prem starrer Tagaru Palya gets huge response.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X