twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ 5: ನಾಗಾರ್ಜುನ ಸಂಭಾವನೆಯಲ್ಲಿ 15% ಏರಿಕೆ, ಒಟ್ಟು ಎಷ್ಟಿದೆ?

    |

    ತೆಲುಗು ಬಿಗ್ ಬಾಸ್ ಐದನೇ ಆವೃತ್ತಿ ಆರಂಭವಾಗಿದೆ. ಸೆಪ್ಟೆಂಬರ್ 5 ರಂದು ಹೊಸ ಸೀಸನ್‌ಗೆ ಚಾಲನೆ ಸಿಕ್ಕಿದ್ದು, 19 ಸ್ಪರ್ಧಿಗಳು ಬಿಗ್ ಮನೆ ಸೇರಿದ್ದಾರೆ. ಅದರಲ್ಲಿ ಮೊದಲನೇ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಆರು ಮಂದಿ ಡೇಂಜರ್ ಝೋನ್ ತಲುಪಿದ್ದಾರೆ. ನಿರೂಪಕ ರವಿ, ಆರ್‌ಜೆ ಕಾಜಲ್ ಹಮಿದ, ಜಸ್ವಂತ್ (ಜೆಸ್ಸಿ), ಸರಾಯು ಮತ್ತು ಮಾನಸ್ ನಾಮಿನೇಟ್ ಆಗಿದ್ದಾರೆ. ಈಗ ಬಿಗ್ ಬಾಸ್ ವೀಕ್ಷಕರು ವಾರಾಂತ್ಯದ ಎಪಿಸೋಡ್‌ಗೆ ಕಾತುರದಿಂದ ಕಾಯ್ತಿದ್ದಾರೆ.

    ಮೊದಲನೇ ವಾರ ದೊಡ್ಮನೆಯಿಂದ ಯಾರು ಹೊರಗೆ ಹೋಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಈ ನಡುವೆ ಐದನೇ ಆವೃತ್ತಿಯಲ್ಲೂ ನಿರೂಪಕರಾಗಿ ಮುಂದುವರೆದಿರುವ ನಾಗಾರ್ಜುನ ಅವರ ಸಂಭಾವನೆ ವಿಚಾರವೂ ಅಷ್ಟೇ ಸದ್ದು ಮಾಡ್ತಿದೆ. ಐದನೇ ಅವೃತ್ತಿಯಿಂದ ನಾಗಾರ್ಜುನ ಹೊರಗುಳಿಯಲಿದ್ದಾರೆ ಎನ್ನುವ ಸುದ್ದಿ ಶೋ ಆರಂಭಕ್ಕೂ ಮುಂಚೆ ಹೆಚ್ಚು ಗಮನ ಸೆಳೆದಿತ್ತು. ಅಕ್ಕಿನೇನಿ ಬದಲು ಬೇರೊಬ್ಬ ನಟನ ಎಂಟ್ರಿಯಾಗಲಿದೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು. ಆದರೆ, ನಾಗಾರ್ಜುನ ಅವರೇ ಹೊಸ ಸೀಸನ್‌ಗೂ ಸಾರಥಿಯಾಗಿದ್ದಾರೆ.

    ಬಿಗ್‌ಬಾಸ್ ಸ್ಪರ್ಧಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?ಬಿಗ್‌ಬಾಸ್ ಸ್ಪರ್ಧಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?

    ಅಷ್ಟಕ್ಕೂ, ಐದನೇ ಅವೃತ್ತಿಯಲ್ಲಿ ನಾಗ್ ಪಡೆಯುತ್ತಿರುವ ಸಂಭಾವನೆ ಎಷ್ಟು? ಎಪಿಸೋಡ್ ಲೆಕ್ಕನಾ ಅಥವಾ ಸೀಸನ್ ಲೆಕ್ಕನಾ ಎಂಬ ಕುತೂಹಲ ಸಾಮಾನ್ಯರನ್ನು ಕಾಡ್ತಿದೆ. ಈ ಕುರಿತು ತೆಲುಗು ಫಿಲ್ಮಿಬೀಟ್ ವರದಿ ಮಾಡಿದ್ದು, ನಾಗಾರ್ಜುನ ಅವರು ಸೀಸನ್ ಲೆಕ್ಕದಲ್ಲಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

    ಬಿಗ್‌ಬಾಸ್ ಆರಂಭ: ಸ್ಪರ್ಧಿಗಳು ಇವರೇ ನೋಡಿಬಿಗ್‌ಬಾಸ್ ಆರಂಭ: ಸ್ಪರ್ಧಿಗಳು ಇವರೇ ನೋಡಿ

    ಬಿಗ್ ಬಾಸ್‌ಗಾಗಿ ನಾಗ್ ಪಡೆದ ಸಂಭಾವನೆ ಎಷ್ಟು?

    ಬಿಗ್ ಬಾಸ್‌ಗಾಗಿ ನಾಗ್ ಪಡೆದ ಸಂಭಾವನೆ ಎಷ್ಟು?

    ಈ ಹಿಂದಿಗಿಂತಲೂ ನಾಗಾರ್ಜುನ ಬಿಗ್ ಬಾಸ್ ಸಂಭಾವನೆ ಏರಿಕೆ ಕಂಡಿದೆ ಎನ್ನುವ ವಿಷಯ ಬಹಿರಂಗವಾಗಿದೆ. ತೆಲುಗು ಫಿಲ್ಮಿಬೀಟ್ ಸೇರಿದಂತೆ ಟಾಲಿವುಡ್ ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ ಬಿಗ್ ಬಾಸ್ ಐದನೇ ಆವೃತ್ತಿಗಾಗಿ ನಾಗಾರ್ಜುನ 12 ಕೋಟಿ ವೇತನಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಳೆದ ಆವೃತ್ತಿ ಹೋಲಿಸಿಕೊಂಡರೆ 15% ಏರಿಕೆಯಾಗಿದೆಯಂತೆ.

    ಕಳೆದ ಆವೃತ್ತಿಯಲ್ಲಿ ಅಕ್ಕಿನೇನಿಗೆ ಸಿಕ್ಕಿದ್ದೆಷ್ಟು?

    ಕಳೆದ ಆವೃತ್ತಿಯಲ್ಲಿ ಅಕ್ಕಿನೇನಿಗೆ ಸಿಕ್ಕಿದ್ದೆಷ್ಟು?

    ಇದಕ್ಕೂ ಮುಂಚೆ ನಾಲ್ಕನೇ ಆವೃತ್ತಿಯಲ್ಲಿ ಎಪಿಸೋಡ್‌ವೊಂದಕ್ಕೆ ನಾಗಾರ್ಜುನ ಅವರು 12-14 ಲಕ್ಷ ಸಂಭಾವನೆ ಪಡೆದಿದ್ದಂತೆ. ಮೂರನೇ ಆವೃತ್ತಿಯಲ್ಲಿ 10-12 ಲಕ್ಷ ವೇತನಕ್ಕೆ ಡೀಲ್ ಮಾಡಿದ್ದರು. ತೆಲುಗು ನಟ ನಾನಿ ಸಹ ಬಿಗ್ ಬಾಸ್ ನಿರೂಪಣೆ ಮಾಡಿದ್ದು ಎರಡನೇ ಅವೃತ್ತಿಯ ಪ್ರತಿ ಸಂಚಿಕೆಗಾಗಿ 10-12 ಲಕ್ಷ ಪಡೆದಿದ್ದರಂತೆ. ಮೊದಲ ಆವೃತ್ತಿಯನ್ನು ಜೂನಿಯರ್ ಎನ್‌ಟಿಆರ್ ನಿರೂಪಣೆ ಮಾಡಿದ್ದು ಪ್ರತಿ ಸಂಚಿಕೆಗೆ 35 ಲಕ್ಷ ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿದೆ.

    ಎವರು ಮಿಲೋ ಕೋಟೇಶ್ವರಡು ಶೋಗೆ ಎಷ್ಟು?

    ಎವರು ಮಿಲೋ ಕೋಟೇಶ್ವರಡು ಶೋಗೆ ಎಷ್ಟು?

    ಬಹಳ ವರ್ಷದ ನಂತರ ಮತ್ತೆ ಕಿರುತೆರೆಗೆ ಕಂಬ್ಯಾಕ್ ಆಗಿರುವ ನಟ ಜೂನಿಯರ್ ಎನ್‌ಟಿಆರ್ ಎವರು ಮೀಲೊ ಕೋಟೇಶ್ವರಡು ಕಾರ್ಯಕ್ರಮ ನಿರೂಪಣೆ ಮಾಡ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

    ಸ್ಪರ್ಧಿಗಳ ಸಂಭಾವನೆ ಎಷ್ಟಿದೆ?

    ಸ್ಪರ್ಧಿಗಳ ಸಂಭಾವನೆ ಎಷ್ಟಿದೆ?

    ಇನ್ನು ಬಿಗ್ ಬಾಸ್‌ ತೆಲುಗು 5ನೇ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳ ಪೈಕಿ ಯೂಟ್ಯೂಬರ್ ಶಣ್ಮುಖ್ ಮತ್ತು ನಿರೂಪಕ ರವಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ಸ್ಪರ್ಧಿಗಳು ಎನ್ನಲಾಗಿದೆ. ಈ ಇಬ್ಬರು ಪ್ರತಿವಾರ 4-5 ಲಕ್ಷ ಹಣವನ್ನು ಖಾತೆಗೆ ಪಡೆಯುತ್ತಿದ್ದಾರೆ. ನಟ ಲೋಬೊ ಮತ್ತು ಅನಿ ಮಾಸ್ಟರ್ ಸಹ ಕಡಿಮೆ ಸಂಭಾವನೆಯನ್ನೇನು ಪಡೆಯುತ್ತಿಲ್ಲ, ಅವರೂ ಸಹ ವಾರಕ್ಕೆ 3-4 ಲಕ್ಷದ ಮೊತ್ತ ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

    ಗೆದ್ದವರಿಗೆ 50 ಲಕ್ಷ ನಗದು

    ಗೆದ್ದವರಿಗೆ 50 ಲಕ್ಷ ನಗದು

    ಜಸ್ವಂತ್, ಲಹರಿ, ಶ್ರೀರಾಮ್ ಚಂದ್ರ, ಪ್ರಿಯಾ ಮತ್ತು ಉಮಾದೇವಿ ಅವರುಗಳು ವಾರಕ್ಕೆ 1 ರಿಂದ 2 ಲಕ್ಷ ಹಣವನ್ನು ಪಡೆಯುತ್ತಿದ್ದರೆ, ವಿಶ್ವ, ನಟರಾಜ್, ಶ್ವೇತ ವರ್ಮಾ, ಸರಯು, ಸಿರಿ, ಪ್ರಿಯಾಂಕಾ, ವಿಜೆ ಸನ್ನಿ ಅವರುಗಳು ವಾರಕ್ಕೆ 40 ರಿಂದ 60 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ. ಬಿಗ್‌ಬಾಸ್ ಸೀಸನ್ 4 ರ ವಿಜೇತ ಅಭಿಜಿತ್‌ಗೆ ಬರೋಬ್ಬರಿ 50 ಲಕ್ಷ ರು ಬಹುಮಾನವನ್ನು ನೀಡಲಾಗಿತ್ತು. ಬಿಗ್‌ಬಾಸ್ ಸೀಸನ್ 5ರಲ್ಲೂ ಇದೇ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತಿದೆ.

    English summary
    Nagarjuna Akkineni is apparently taking a whooping remuneration for hosting Bigg Boss Telugu. he is Charging 12 crorw For Hosting Bigg Boss.
    Wednesday, September 8, 2021, 8:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X