For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 6ಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದ ನಾಗಾರ್ಜುನ!

  |

  ಸದ್ಯ ಎಲ್ಲೆಲ್ಲೂ ಬಿಗ್ ಬಾಸ್ ಸುದ್ದಿಯೇ ಹರಿದಾಡುತ್ತಿದೆ. ಈಗ ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 6 ಬರಲಿದೆ. ದಿನೇ ದಿನೇ ಈ ಸೀಸನ್‌ನಲ್ಲಿ ಯಾವೆಲ್ಲಾ ಸ್ಪರ್ಧಿಗಳು ಭಾಗಿ ಆಗುತ್ತಾರೆ. ಮತ್ತು ಕಾರ್ಯಕ್ರಮ ಹೇಗೆ ಮೂಡಿ ಬರಲಿದೆ ಎನ್ನುವ ಬಗ್ಗೆ ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ ಪ್ರೇಕ್ಷಕರು.

  ಈ ಬಾರಿಯ ತೆಲುಗು ಬಿಗ್ ಬಾಸ್ ನಾಗಾರ್ಜುನ ಅವರೆ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ನಾಗಾರ್ಜುನ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೀಸನ್ ಪ್ರಾರಂಭಕ್ಕೆ ಕೆಲವೆ ದಿನಗಳು ಬಾಕಿ ಇದೆ. ಈಗಾಗಲೇ ತೆಲುಗು ಬಿಗ್ ಬಾಸ್ 5 ಸೀಸನ್ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಮುಂದಿನ ತಿಂಗಳಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಗಲಿದೆ.

  ಚಿರಂಜೀವಿಗೆ ಫಸ್ಟ್ ಲವ್ ಆಗಿದ್ದು 7ನೇ ತರಗತಿಯಲ್ಲಿ: ಮೆಗಾಸ್ಟಾರ್ ರಿವೀಲ್ ಮಾಡಿದ್ದೇನು?ಚಿರಂಜೀವಿಗೆ ಫಸ್ಟ್ ಲವ್ ಆಗಿದ್ದು 7ನೇ ತರಗತಿಯಲ್ಲಿ: ಮೆಗಾಸ್ಟಾರ್ ರಿವೀಲ್ ಮಾಡಿದ್ದೇನು?

  ಸೆಪ್ಟಂಬರ್ 4ರಿಂದ ಬಿಗ್ ಬಾಸ್ ತೆಲುಗು ಪ್ರಾರಂಭವಾಗುತ್ತಿದೆ. ಅಂದ ಹಾಗೆ ಈ ಬಾರಿಯೂ ತೆಲುಗು ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರೇ ನಡೆಸಿಕೊಡುತ್ತಿದ್ದಾರೆ. ಮೂರನೇ ಸೀಸನ್ ಇಂದ ನಾಗಾರ್ಜುನ ಎಂಟ್ರಿ ಕೊಟ್ಟಿದ್ದಾರೆ. ಮೂರನೇ ಸೀಸನ್ ಇಂದ ನಾಗಾರ್ಜುನ್ ಅವರೇ ಶೋ ನಡೆಸಿಕೊಟ್ಟಿದ್ದಾರೆ. ಯಶಸ್ವಿಯಾಗಿ ಬಿಗ್ ಬಾಸ್ ನಡೆಸಿಕೊಂಡು ಬಂದಿರುವ ನಾಗಾರ್ಜುನ ಇದೀಗ 6ನೇ ಸೀನನ್‌ಗೆ ಸಜ್ಜಾಗಿದ್ದಾರೆ.

  ಈ ಸೀಸನ್‌ಗೆ ನಾಗಾರ್ಜುನ್ ಭರ್ಜರಿ ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಸೌತ್ ಕಿರುತೆರೆಯ ಬಿಗ್ ಬಾಸ್ ಶೋಗಳಲ್ಲಿಯೇ ನಾಗಾರ್ಜುನ್ ಪಡೆದ ಸಂಭಾವನೆ ಅತೀ ಹೆಚ್ಚು ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಾಗಾರ್ಜುನ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

  ನಾಗಾರ್ಜುನ - ಮಹೇಶ್ ಬಾಬು ಮಲ್ಟಿಸ್ಟಾರರ್ ಸಿನಿಮಾ: ಟ್ವೀಟ್ ಸಂಭಾಷಣೆ ವೈರಲ್!ನಾಗಾರ್ಜುನ - ಮಹೇಶ್ ಬಾಬು ಮಲ್ಟಿಸ್ಟಾರರ್ ಸಿನಿಮಾ: ಟ್ವೀಟ್ ಸಂಭಾಷಣೆ ವೈರಲ್!

  ಈ ಹಿಂದಿನ ಶೋಗಳಿಗೆ ನಾಗಾರ್ಜುನ ಇದಕ್ಕೆ ಅರ್ಧದಷ್ಟು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು. ಈಗ 15 ಕೋಟಿ ರೂ. ಪಡೆಯುತ್ತಿದ್ದಾರೆ. ಮತ್ತೊಂದು ಮೂಲದ ಪ್ರಕಾರ ನಾಗಾರ್ಜುನ ಪ್ರತಿ ಎಪಿಸೋಡ್‌ಗೆ 12 ಲಕ್ಷ ರೂ. ಪಡೆದುಕೊಳ್ಳುತ್ತಿದ್ದಾರೆ.

  ನಾಗಾರ್ಜುನ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ. ಸಿಕ್ಕಾಪಟ್ಟೆ ಫೇಮಸ್ ಆಗಿರುವ ತೆಲುಗು ಬಿಗ್ ಬಾಸ್, ಈ ಬಾರಿ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯತ್ತಿದ್ದಾರೆ. ಈ ಬಾರಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ.

  English summary
  Nagarjuna took 15 Crore Rupees Remuneration For Bigg Boss Telugu, Know More,
  Monday, August 29, 2022, 18:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X