ಬಿಗ್‌ಬಾಸ್ ನಿರೂಪಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ ನಾಗಾರ್ಜುನ?

ನಟ ನಾಗಾರ್ಜುನ ಬಿಗ್‌ಬಾಸ್ 4 ತೆಲುಗು ರಿಯಾಲಿಟಿ ಶೋ ನ ನಿರೂಪಣೆ ಮಾಡುತ್ತಿದ್ದಾರೆ. ಅವರ ನಿರೂಪಣಾ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ ತೆಲುಗು ಪ್ರೇಕ್ಷಕರು.

ಆದರೆ ಬಿಗ್‌ಬಾಸ್‌ ಶೋ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ನಾಗಾರ್ಜುನ ಶೋ ಆಯೋಜಕರ ಮೇಲೆ ಸಿಟ್ಟಾಗಿದ್ದಾರೆ. ಅವರ ಸಿಟ್ಟಿಗೆ ಸಕಾರಣವೇ ಇದೆ.

ತೆಲುಗು ಬಿಗ್‌ಬಾಸ್ ಶೋ ಆರಂಭದ ಕೆಲವು ವಾರಗಳಲ್ಲಿ ಒಳ್ಳೆಯ ಟಿಆರ್‌ಪಿ ಗಳಿಸಿತ್ತು. ಆದರೆ ಶೋ ಮುಂದುವರೆದಂತೆ ಟಿಆರ್‌ಪಿಯಲ್ಲಿ ಕುಸಿತವಾಗುತ್ತಿದೆ, ಇದು ನಾಗಾರ್ಜುನ ಗೆ ಅಸಮಾಧಾನ ಉಂಟುಮಾಡಿದೆ.

Nagarjuna Upset With Bigg Boss Organizers Team

ಯಾವ ದಿನ ಯಾವ ಸ್ಪರ್ಧಿ ಎಲಿಮಿನೇಶನ್ ಆಗುತ್ತಿದ್ದಾರೆ ಎಂಬ ಮಾಹಿತಿ ಬಿಗ್‌ಬಾಸ್ ತಂತ್ರಜ್ಞರ ತಂಡದಿಂದ ಸೋರಿಕೆ ಆಗುತ್ತಿದೆ, ಎಲಿಮಿನೇಶನ್ ರೌಂಡ್‌ನ ಎಲಿಸೋಡ್ ಪ್ರಸಾರವಾಗುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ, ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ಹಾಗಾಗಿ ಪ್ರೇಕ್ಷಕರಿಗೆ ಕುತೂಹಲ ಇಲ್ಲದಾಗುತ್ತಿದೆ, ಟಿಆರ್‌ಪಿ ಕುಸಿತಕ್ಕೆ ಇದೇ ಕಾರಣ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ನಾಗಾರ್ಜುನ ಬಿಗ್‌ಬಾಸ್ ಆಯೋಜಕರ ಮೇಲೆ ಅಸಮಾಧಾನಗೊಂಡಿರುವುದು.

ನಾಗಾರ್ಜುನ ತಮ್ಮ 'ವೈಲ್ಡ್‌ ಡಾಗ್' ಸಿನಿಮಾದ ಚಿತ್ರೀಕರಣಕ್ಕೆಂದು ಬಿಗ್‌ಬಾಸ್ ಶೋ ನಿಂದ ಬಿಡುವು ಸಹ ಪಡೆದಿದ್ದರು. ಆಗ ನಾಗಾರ್ಜುನ ಸೊಸೆ, ನಟಿ ಸಮಂತಾ ಶೋ ಅನ್ನು ನಡೆಸಿಕೊಟ್ಟಿದ್ದರು. ಎರಡು ಎಪಿಸೋಡ್‌ಗಳನ್ನು ಸಮಂತಾ ನಡೆಸಿಕೊಟ್ಟಿದ್ದರು, ನಂತರ ನಾಗಾರ್ಜುನ ಶೋ ನಿರೂಪಣೆ ಮುಂದುವರೆಸಿದರು.

ಸೆಪ್ಟೆಂಬರ್ 6 ರಂದು ಆರಂಭಗೊಂಡ ತೆಲುಗು ಬಿಗ್‌ಬಾಸ್ 4 ರಿಯಾಲಿಟಿ ಶೋ ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಅಭಿಷೇಕ್ ಗೆಲ್ಲುವ ಹಾಟ್ ಫೇವರೇಟ್ ಆಗಿದ್ದಾರೆ.

More from Filmibeat

English summary
Nagarjuna upset with bigg boss organizers team. Elimination news leaking before the episode telecast so Nagarjuna upset with Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X