Namratha Gowda: ಸಕತ್ ಬೋಲ್ಡ್ ಲುಕ್ ಕೊಡ್ತಿರೋ ನಟಿ ನಮ್ರತಾ ಗೌಡ.. ಮುಂದಿನ ಪ್ಲಾನ್ ಏನು?
'ನಾಗಿಣಿ 2' ಧಾರಾವಾಹಿ ಮುಕ್ತಾಯಗೊಂಡ ಮೇಲೆ ನಟಿ ನಮ್ರತಾ ಗೌಡ ಬಹಳ ಫ್ರೀ ಆಗಿ ಇದ್ದಾರೆ. ಸತತವಾಗಿ ಮೂರು ವರ್ಷಗಳಿಗೂ ಹೆಚ್ಚು ಸಮಯ ಪ್ರಸಾರಗೊಂಡ ನಾಗಿಣಿ ಮೂಲಕ ಪ್ರೇಕ್ಷಕರಿಗೆ ಚಿರ ಪರಿಚಿತರಾದರು.
ಬಾಲ ನಟಿ ಆಗಿ ಬಣ್ಣದ ಲೋಕದ ಪಯಣ ಆರಂಭಿಸಿದರೂ, ನಮ್ರತಾ ಅವರಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಶಿವಾನಿ ಪಾತ್ರ ನಿರ್ವಹಿಸಿದ್ದ 'ನಾಗಿಣಿ 2' ಧಾರಾವಾಹಿ.

ಕೆಲ ತಿಂಗಳ ಹಿಂದಷ್ಟೇ ಧಾರಾವಾಹಿ ಮುಕ್ತಾಯಗೊಂಡಿತ್ತು. ಧಾರಾವಾಹಿ ಮುಗಿದ ಮೇಲೆ ನಮ್ರತಾ ಗೌಡ ಕ್ಯಾಮರಾದಿಂದ ದೂರ ಉಳಿದುಕೊಂಡಿದ್ದಾರೆ.
ಅಭಿಮಾನಿಗಳ ಸಂಪರ್ಕದಲ್ಲಿ ನಮ್ರತಾ
ಇತ್ತೀಚೆಗೆ ನಮ್ರತಾ ಹಾಗೂ ಐಶ್ವರ್ಯಾ ಸಿಂಧೋಗಿ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಹಸಿಬಿಸಿ ಎನ್ನುವಷ್ಟು ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಫೋಟೋಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಮ್ರತಾ ಗೌಡ ಅವರಿಗೆ ಪ್ರವಾಸ ಹೋಗುವುದು, ಹೊಸ ಹೊಸ ಜಾಗವನ್ನು ನೋಡುವುದು ಎಂದರೆ ಬಹಳ ಇಷ್ಟವಂತೆ. ಹಾಗಾಗಿ ಅವರು ಆಗಾಗ ಟ್ರಿಪ್ ಗಳಿಗೆ ಹೋಗುತ್ತಿರುತ್ತಾರೆ. ಎಲ್ಲಿಗೆ ಹೋಗಿದ್ದರು ಎಂಬ ಬಗ್ಗೆ ವೀಡಿಯೋ ಕೂಡ ಮಾಡಿ ಯೂಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಲ್ಲದೇ, ನಮ್ರತಾ ಅವರು ಶಾಪಿಂಗ್ ಮಾಡಿದರೆ ಆ ವೀಡಿಯೋವನ್ನು ಶೇರ್ ಮಾಡುತ್ತಾರೆ. ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂದೂ ಕೂಡ ಹೇಳುತ್ತಾರೆ. ತಮ್ಮ ಜೀವನದ ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ.
ರೀಲ್ ಶತ್ರುಗಳೇ ರಿಯಲ್ ಮಿತ್ರರು
ಧಾರಾವಾಹಿಯಲ್ಲಿ ಮಾತ್ರ ನಮ್ರತಾ ಹಾಗೂ ಐಶ್ವರ್ಯಾ ಸಿಂಧೋಗಿ ಶತ್ರುಗಳಾಗಿರುತ್ತಾರೆ. ಆದರೆ, ತೆರೆಯ ಹಿಂದೆ ಇಬ್ಬರದ್ದು ಬಿಟ್ಟಿರಲಾರದಷ್ಟು ಬಾಂಧವ್ಯವಿದೆ. ಎಲ್ಲಿಯೇ ಹೋದರೂ ಜೊತೆಗೆ ಹೋಗುತ್ತಾರೆ. ಇಬ್ಬರ ಸೋಷಿಯಲ್ ಮೀಡಿಯಾ ನೋಡಿದರೇನೆ ಗೊತ್ತಾಗುತ್ತೆ. ಇಬ್ಬರೂ ಎಷ್ಟು ಕ್ಲೋಸ್ ಎಂಬುದು. ಸೋಷಿಯಲ್ ಮೀಡಿಯಾದಲ್ಲಿ, ರೀಲ್ಸ್ ಆಗಿರಲಿ, ಫೋಟೋ ಆಗಿರಲಿ ಒಟ್ಟೊಟ್ಟಿಗೆ ಇರುವ ಫೋಟೋವನ್ನೇ ಹಂಚಿಕೊಳ್ಳುತ್ತಾರೆ. ಆ ಫೋಟೋಗಳನ್ನು ನೋಡಿದವರೆಲ್ಲ ಇಬ್ಬರ ಗೆಳೆತನದ ಬಗ್ಗೆ ಅದಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಮೊನ್ನೆ ಬಾಲಿಯಲ್ಲೂ ಇಬ್ಬರೂ ಎಂಜಾಯ್ ಮಾಡಿದ್ದರು.
ಕಿರುತೆರೆಯಿಂದ ಬ್ರೇಕ್ ಪಡೆದ ನಟಿ
ನಾಗಿಣಿ ಧಾರಾವಾಹಿ ಮುಕ್ತಾಯಗೊಂಡ ಮೇಲೆ ಐಶ್ವರ್ಯ ಸಿಂಧೋಗಿ ಅವರಿಗೆ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ನಮ್ರತಾ ಅವರು ಕೊಂಚ ಶೂಟಿಂಗ್‌ನಿಂದ ಬ್ರೇಕ್ ಪಡೆದಿದ್ದಾರೆ. ಇದರ ಜೊತೆಗೆ ದಿನ ದಿನಕ್ಕೂ ಹೆಚ್ಚೆಚ್ಚು ಬೋಲ್ಡ್ ಆಗುತ್ತಿದ್ದಾರೆ. ನಟನೆಯಿಂದ ಪುಟ್ಟ ಬ್ರೇಕ್ ಪಡೆದಿದ್ದರೂ ಕೂಡ ಫೋಟೋಶೂಟ್‌ಗಳನ್ನು ನಿಲ್ಲಿಸಿಲ್ಲ. ಆಗಾಗ ಡಿಫರೆಂಟ್ ಆಗಿ ಫೋಟೋ ಶೂಟ್‌ಗಳನ್ನು ಮಾಡಿಸುತ್ತಿರುತ್ತಾರೆ. ಇದನ್ನೆಲ್ಲಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸಿನಿಮಾದಲ್ಲಿ ನಟಿಸುತ್ತಾರಾ ನಮ್ರತಾ..?
ನಮ್ರತಾ ಗೌಡಗೆ ಸಾಕಷ್ಟು ಜನ ಅಭಿಮಾನಿಗಳಿದ್ದು, ಈಗ ನಮ್ರತಾ ಅವರ ಬೋಲ್ಡ್ ಫೋಟೋಗಳಿಗೆ ಕೆಲವರು ಬೇಸರವನ್ನೂ ವ್ಯಕ್ತಪಡಿಸಿದ್ದರು. ಆದರೆ, ಮತ್ತೆ ಕೆಲವರು ಹಾಟೀ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ನಮ್ರತಾ ಅವರು ಕಿರುತೆರೆಯಲ್ಲಿ ಮಿಂಚಿದ್ದು, ಈಗ ಹಿರಿತೆರೆಗೆ ಎಂಟ್ರಿ ಕೊಡಲು ಮುಂದಾಗಿದ್ದಾರೆ. ಒಳ್ಳೆಯ ಆಫರ್ ಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಅಗುತ್ತಿದೆ. ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ನಮ್ರತಾ ಅವರಿಗೆ ಈಗ ಯಾವುದಾದರೂ ಒಳ್ಳೆಯ ಚಿತ್ರದಲ್ಲಿ ಹೀರೋಯಿನ್ ಆಗುವ ಚಾನ್ಸ್ ಸಿಗುತ್ತಾ ಎಂದು ಕಾದು ನೋಡಬೇಕಿದೆ.


Click it and Unblock the Notifications











