Namratha Gowda: ನಮ್ರತಾ ಎಲ್ಲಿ ಹೋದ್ರು..? ಎಲ್ಲಿ ಬಂದ್ರು ಫ್ರೆಂಡ್ಸ್ ಟಾರ್ಚರ್ ಮಾತ್ರ ತಪ್ಪುತ್ತಿಲ್ಲ..!

By ಎಸ್ ಸುಮಂತ್

ಸದ್ಯ ನಮ್ರತಾ ಗೌಡ, 'ನಾಗಿಣಿ 2' ಧಾರಾವಾಹಿಯಲ್ಲಿ ಶಿವಾನಿಯಾಗಿ ನಟಿಸುತ್ತಿದ್ದಾರೆ. 23 ವರ್ಷದಿಂದ ವನವಾಸ ಅನುಭವಿಸಿ, ಭೂಮಿಗೆ ಬಂದು ತ್ರಿಶೂಲ್ ನನ್ನು ಹುಡುಕಿ, ಮದುವೆಯಾಗಿ, ಇನ್ನೇನು ನಾಗಮಣಿಯೂ ಕೈ ಸೇರಿತು ಎನ್ನುವಷ್ಟರಲ್ಲಿ ಶಿವಾನಿ ಬದುಕಲ್ಲಿ ಬಿರುಗಾಳಿಯೇ ಬೀಸಿದೆ. ಆದಿಶೇಷನ ಆತ್ಮ ಹೊತ್ತು, ಅಭಯ್ ಬಂದಿದ್ದ. ಆದರೆ, ಕಣ್ಣೂರಿಗೆ ಹೋದ ಮೇಲೆ ಅಭಯ್ ಕೂಡ ನಿಜರೂಪಕ್ಕೆ ಬಂದಿದ್ದಾನೆ.

ಇದರಿಂದ ಶಿವಾನಿ ಸಂಪೂರ್ಣವಾಗಿ ಕಂಗಲಾಗಿದ್ದಾಳೆ. ಆದರೆ, ಅಭಯ್ ಈಗ ಶಿವಾನಿಯ ಪರ ನಿಂತಿದ್ದು, ತ್ರಿಶೂಲ್‌ನನ್ನು ಹುಡುಕಿ ಕೊಡುವ ಭರವಸೆ ನೀಡಿದ್ದಾನೆ. ಶಿವಾನಿಗೆ ಏನು ತೋಚದೆ ನೋವುನಲ್ಲಿಯೇ ಕಾಲ ಕಳೆಯುತ್ತಿದ್ದಾಳೆ. ಸದಾ ದುಃಖದಲ್ಲಿರುವ ಶಿವಾನಿ, ಕ್ಯಾಮೆರಾ ಆಫ್ ಆದ್ಮೇಲೆ ಸಿಕ್ಕಾಪಟ್ಟೆ ಟ್ರಿಪ್ ಹೊಡಿತಾರೆ.

ಪ್ರವಾಸ ಪ್ರಿಯೆ ಈ ನಾಗಿಣಿ

ಪ್ರವಾಸ ಪ್ರಿಯೆ ಈ ನಾಗಿಣಿ

ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್ ಇರುತ್ತೆ. ಟ್ರಿಪ್ ಹೋಗೋದು, ಓದೋದು, ಕಥೆ ಬರೆಯೋದು ಹೀಗೆ. 'ನಾಗಿಣಿ 2' ಧಾರಾವಾಹಿಯ ನಮ್ರತಾ ಗೌಡಗೆ ಸಿಕ್ಕಾಪಟ್ಟೆ ಟ್ರಿಪ್ ಹೊಡೆಯೋ ಕ್ರೇಜ್ ಇದೆ. ಇದೆ ಕಾರಣಕ್ಕೆ ಗ್ಯಾಪ್ ಸಿಕ್ಕಾಗೆಲ್ಲಾ ಟ್ರಿಪ್ ಹೊಡೀತಾ ಇರ್ತಾರೆ. ಎಲ್ಲೆಲ್ಲಿ ಹೋದ್ವಿ, ಯಾರೆಲ್ಲಾ ಹೋದ್ವಿ ಅನ್ನೋದನ್ನು ನಮ್ರತಾ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡುತ್ತಾ ಇರುತ್ತಾರೆ.

ಫ್ರೆಂಡ್ಸ್‌ ಕಾಟ ಅತಿಯಾಯ್ತು

ಫ್ರೆಂಡ್ಸ್‌ ಕಾಟ ಅತಿಯಾಯ್ತು

ನಮ್ರತಾಗೆ ಟ್ರಿಪ್ ಕ್ರೇಜ್ ಎಷ್ಟಿದೆಯೋ, ಫ್ರೆಂಡ್ಸ್ ಅಷ್ಟೇ ಇದ್ದಾರೆ. ಅವರ ಸೀರಿಯಲ್ ಟೀಂ ಜೊತೆಗೆ ಹೆಚ್ಚು ಒಡನಾಟ ಹೊಂದಿದ್ದಾರೆ. ಒಂದು ಹೊಟೇಲ್‌ಗೆ ಹೋಗುವುದಕ್ಕೂ, ಹೊರಗಡೆ ಟ್ರಿಪ್ ಹೋದರೂ, ಹೊಸದಾಗಿ ಒಂದು ರೀಲ್ಸ್ ಮಾಡಿದರು. ಅದು ಅವರ ಟೀಂ ಜೊತೆಗೆ ಕ್ಲೋಸ್ ಆಗಿರುವವರ ಜೊತೆಗೇನೆ ಆಗಿರುತ್ತದೆ. ಹೆಚ್ಚು ನಮ್ರತಾ ಕಾಣಿಸಿಕೊಳ್ಳುವುದು ಕೂಡ ಅವರ ಧಾರಾವಾಹಿ ತಂಡದೊಂದಿಗೇನೆ. ಹಾಗೇ ಸ್ಪೆಷಲ್ ಆಗಿ ಗರ್ಲ್ಸ್ ಗ್ಯಾಂಗ್ ಜೊತೆ ಕಾಣಿಸಿಕೊಳ್ಳುತ್ತಾರೆ. ಇವರದ್ದೇ ಆದ ಗರ್ಲ್ಸ್ ಗ್ಯಾಂಗ್ ಇದೆ.

ನಮ್ರತಾ ಮೇಲೆ ನಿನಾದ್ ಗೆ ಕೋಪ

ನಮ್ರತಾ ಮೇಲೆ ನಿನಾದ್ ಗೆ ಕೋಪ

'ನಾಗಿಣಿ 2' ಧಾರಾವಾಹಿಯಲ್ಲಿ ತ್ರಿಶೂಲ್ ಆಗಿ ಅಭಿನಯಿಸಿರುವುದು ನಿನಾದ್ ಹರಿತ್ಸ. ಶಿವಾನಿಯಾಗಿ ನಮ್ರತಾ ನಟಿಸಿದ್ದಾರೆ. ಈ ಮೊದಲು ಶಿವಾನಿಯನ್ನು ನೋಡಿ ತ್ರಿಶೂಲ್‌ಗೆ ಲವ್ವಾಗಿತ್ತು. ಆಗ ಶಿವಾನಿಯ ಹಿಂದೆ ಹಿಂದೆ ಬಿದ್ದು ಲವ್ ಮಾಡಿ ಮದುವೆಯಾಗಿದ್ದ. ಬಳಿಕ ಧಾರಾವಾಹಿಯಲ್ಲಿ ಇಬ್ಬರ ರೊಮ್ಯಾನ್ಸ್ ಜೋರಾಗಿಯೇ ನಡೆದಿತ್ತು. ಆ ಬಳಿಕ ನಿನಾದ್ ಮತ್ತು ನಮ್ರತಾ ರಿಯಲ್ ಲೈಫ್‌ನಲ್ಲಿ ಬೆಸ್ಟ್ ಫ್ರೆಂಡ್ಸ್. ಇಬ್ಬರು ಕೆಲವೊಂದು ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಾ ಇದ್ರು. ಇವರಿಬ್ಬರು ರಿಯಲ್ ಜೋಡಿಗಳಾಗಲಿ ಎಂದು ಬಯಸಿದವರೇ ಹೆಚ್ಚು. ಇಬ್ಬರ ಬಗೆಗಿನ ಕ್ರೇಜ್ ಹೇಗಿತ್ತು ಅಂದ್ರೆ ಧಾರಾವಾಹಿಯಲ್ಲಿ ಎಂಗೇಜ್ಮೆಂಟ್ ಆಗಿದ್ದ ಫೋಟೋಗಳನ್ನು ರಿಯಲ್ ಎಂದು ಪುಕಾರು ಹಬ್ಬಿಸಿದ್ರು. ಈಗ ನಮ್ರತಾ ಮತ್ತು ಐಶ್ವರ್ಯಾ ಸಿಂಧೋಗಿ ಭೇಟಿ ಆಗಿರುವುದಕ್ಕೆ ನಿನಾದ್ ಕೋಪ ಮಾಡಿಕೊಂಡಿದ್ದಾರೆ. ಫೋಟೋಗೆ ನೈಸ್ ಅಂತ ಹೇಳಿ, ನನ್ನ ಯಾಕೆ ಕರೆದಿಲ್ಲ ಎಂದಿದ್ದಾರೆ.

ಈ ಹಿಂದೆಯೂ ಇದೆ ಆಗಿತ್ತು

ಈ ಹಿಂದೆ ಕೂಡ ನಮ್ರತಾ ಗೌಡಗೆ ಇದೇ ರೀತಿಯ ಕಮೆಂಟ್ ಎದುರಾಗಿತ್ತು. ಯಾವಾಗಲೂ ಐಶ್ಚರ್ಯ ಜೊತೆಗೆ ಓಡಾಡುತ್ತಿದ್ದ ನಮ್ರತಾ, ಅದೊಂದು ದಿನ ಸಡನ್ ಆಗಿ ಭವ್ಯ ಅವರನ್ನು ಭೇಟಿ ಮಾಡಿ ಫೋಟೋ ಹಂಚಿಕೊಂಡಿದ್ದರು. ಆಗ ಐಶ್ವರ್ಯಾ, ನಾನಿನ್ನು ಬದುಕಿದ್ದೀನಿ ಅಂತ ಕೋಪಿಸಿಕೊಂಡಿದ್ದರು. ಈಗ ನಿನಾದ್ ಸರದಿ ಬಂದಿದೆ. ನಮ್ರತಾಗೆ ಇವರನ್ನೆಲ್ಲಾ ಸಮಾಧಾನ ಮಾಡುವುದೇ ಕೆಲಸವಾಗಿ ಹೋಗಿದೆ.'

More from Filmibeat

English summary
Nagini 2 Serial Actress Namratha Gowda New Trip Photos Goes Viral. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X