ಮಕ್ಕಳ ಜೊತೆಗೆ ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ಐಶ್ವರ್ಯ ಸಿಂಧೋಗಿ
ಸಿನಿಮಾ ಲೋಕದಿಂದ ನಟಿ ಐಶ್ವರ್ಯ ಸಿಂಧೋಗಿ ಅವರು ಕಿರುತೆರೆಗೆ ಎಂಟ್ರಿಕೊಟ್ಟರು. ಅವರ ಮೊದಲ ಧಾರಾವಾಹಿಯೇ 'ನಾಗಿಣಿ-2'. ಈ ಧಾರಾವಾಹಿಯಲ್ಲಿ ಮಾಯಾಂಗನೆ ಪಾತ್ರದಲ್ಲಿ ಕಾಣಿಸಿಕೊಂಡರು. ವಿಲನ್ ಪಾತ್ರವಾದರೂ ಜನ ಐಶ್ವರ್ಯ ಅವರು ನಟನೆಯನ್ನು ಮೆಚ್ಚಿಕೊಂಡರು. ಅಥಿತಿ ಪಾತ್ರದಲ್ಲಿ ನಟಿಸುವುದಕ್ಕಾಗಿ ಬಂದ ಮಾಯಾಂಗನೆ ಅವರು ಜನ ಮೆಚ್ಚಿಕೊಂಡ ಕಾರಣ ಧಾರಾವಾಹಿಯಲ್ಲಿ ಮುಂದುವರೆಯಲಾಯ್ತು.
ನಾಗಿಣಿ - 2 ಧಾರಾವಾಹಿಯಲ್ಲಿ ಮಾಯಾಂಗನೆ ಪಾತ್ರದಲ್ಲಿ ಮಿಂಚಿದ ಐಶ್ವರ್ಯ ಅವರು ಹೆಸರಿಗೆ ತಕ್ಕಂತೆ ಸೌಂದರ್ಯದ ಐಶ್ವರ್ಯವನ್ನೇ ಹೊದ್ದುಕೊಂಡಿದ್ದಾರೆ. ಮುದ್ದಾಗಿ ಕಾಣುವ ಈ ಚೆಲುವೆ ಫಿದಾ ಆಗದ ಅಭಿಮಾನಿಗಳಿಲ್ಲ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಂದನವನದ ಉದಯೋನ್ಮುಖ ಪ್ರತಿಭೆ ಐಶ್ವರ್ಯ ಸಿಂಧೋಗಿ ಹೊಟೇಲ್ ಮ್ಯಾನೇಜಮೆಂಟ್ ನಲ್ಲಿ ಪದವಿ ಪಡೆದಿದ್ದಾರೆ. ಅಮೇರಿಕಾದ ಅಮೇರಿಕನ್ ಕ್ಲಬ್ ನಲ್ಲಿ ಇಂಟರ್ನ ಶೆಫ್ ಆಗಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಐಶ್ವರ್ಯ ಸಿಂಧೋಗಿ ಅವರು ಶಾಲಾ ಕಾಲೇಜು ದಿನಗಳಿಂದಲೂ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು.

ರಾಜ್ಯಮಟ್ಟದ ಹಾಕಿ ಆಟಗಾರ್ತಿಯಾಗಿದ್ದರು. ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಐಶ್ವರ್ಯ ಅವರು ಇದರ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಶಾಲಾ ದಿನಗಳಲ್ಲಿ ನೃತ್ಯ ಕೂಡ ಕಲಿಯುತ್ತಿದ್ದರು. ಐಶ್ವರ್ಯ ಸಿಂಧೋಗಿ ಅವರು ನಟನೆಗೆ ಬಂದಿದ್ದು, ಸಿನಿಮಾ ನಾಯಕಿಯಾಗಿ. ಸೃಜನ್ ಲೋಕೇಶ್ ಅವರ ನಟನೆಯ ಸಿನಿಮಾ ಸಪ್ನೋಂಕಿ ರಾಣಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಸಿಂಹಾದ್ರಿ', ಮಟಾಷ್', ಸಂಯುಕ್ತ 2', ಡಾರ್ಕ್, ವಾವ್, ಯಾರು ಯಾರು ನೀ ಯಾರು, ಸೈತಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಕಿರುತೆರೆಯಲ್ಲಿ ನಾಗಿಣಿ-2, ತನಿಷಾ ಹಾಗೂ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿರುವ ಐಶ್ವರ್ಯ ಸಿಂಧೋಗಿ ಅವರು ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ರಿಯಾಲಿಟಿ ಶೋನಲ್ಲಿ ಕುಣಿದು ಸೈ ಎನಿಸಿಕೊಂಡಿದ್ದರು. ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲೂ ಐಶ್ವರ್ಯ ಅವರು ಭಾಗವಹಿಸಿದ್ದರು.

ಇನ್ನು ಡಿಫರೆಂಟ್ ಆಗಿ ಕಾಸ್ಟ್ಯೂಮ್ ಗಳನ್ನು ಧರಿಸುವ ಐಶ್ವರ್ಯ ಅವರು, ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಐಶ್ವರ್ಯ ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ಐಶ್ವರ್ಯ ಸಿಂಧೋಗಿ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಶುರು ಮಾಡಿದ್ದಾರೆ. ಡಿಫರೆಂಟ್ ಆಗಿ ಮಕ್ಕಳ ಜೊತೆಗೆ ಪ್ರೋಮೋ ಮಾಡಿದ್ದಾರೆ. ಇದರಲ್ಲಿ ತಮ್ಮ ಅನುಭವ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.


Click it and Unblock the Notifications











