Namratha Gowda: ನಿಜ ಜೀವನದಲ್ಲಿ ಸಖತ್ ಡಿಫರೆಂಟ್ ನಟಿ ನಮ್ರತಾ ಗೌಡ!

By ಪೂರ್ವ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ನಾಗಿಣಿ 2' ಖ್ಯಾತಿಯ ನಟಿ ನಮ್ರತಾ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ. ಕಿರುತೆರೆ ಮೇಲೆ ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವ ಈ ನಟಿ ನಿಜ ಜೀವನದಲ್ಲಿ ಸಖತ್ ಮಾಡರ್ನ್. ನಮ್ರತಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನೃತ್ಯದ ಬಗ್ಗೆ ಇವರಿಗೆ ಎಲ್ಲಿಲ್ಲದ ಆಸಕ್ತಿ.

ನಮ್ರತಾ ಗೌಡ ಒಳ್ಳೆ ಡಾನ್ಸರ್, ಒಳ್ಳೆ ಆಕ್ಟರ್, ಒಳ್ಳೆ ಕರಾಟೆ ಪಟು ಆಗಿದ್ದರು. ಕಿರುತೆರೆ ನಟ-ನಟಿಯರ ಬಗ್ಗೆ ವೀಕ್ಷಕರು ಅಪಾರ ಅಭಿಮಾನ ಇಟ್ಟುಕೊಂಡಿರುತ್ತಾರೆ. ಸೀರಿಯಲ್ ಕಲಾವಿದರ ಖಾಸಗಿ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ಆಸಕ್ತಿ. ಸೆಲೆಬ್ರಿಟಿಗಳ ಮದುವೆ ಬಗ್ಗೆ ಜನರಿಗೆ ಎಲ್ಲಿಲ್ಲದ ಕೌತುಕ ಇದ್ದೇ ಇರುತ್ತದೆ.

ಕನ್ನಡದ 'ನಾಗಿಣಿ 2' ಧಾರಾವಾಹಿಯ ನಾಯಕಿ

ಕನ್ನಡದ 'ನಾಗಿಣಿ 2' ಧಾರಾವಾಹಿಯ ನಾಯಕಿ

ಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿರುವ ನಟಿ ನಮ್ರತಾ ಗೌಡ. ಸದ್ಯ ಕನ್ನಡದ 'ನಾಗಿಣಿ 2' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಾ ಜನಪ್ರಿಯವಾಗಿರುವ ನಟಿ ನಮ್ರತಾ ಗೌಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತವಾಗಿದ್ದಾರೆ. 'ನಾಗಿಣಿ'ಯಾಗಿ ಶಿವಾನಿ ಪಾತ್ರದಲ್ಲಿ ಅಭಿನಯಿಸುತ್ತಾ ವೀಕ್ಷಕರ ಮನಸ್ಸು ಕದ್ದಿರುವ ನಮ್ರತಾ ಗೌಡ, ಕಿರುತೆರೆ ಮೇಲೆ ಸೀರೆಯುಟ್ಟು, ತಲೆಗೆ ಹೂ ಮುಡಿದು, ಹಣೆಗೆ ಕುಂಕುಮ ಇಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತಾರೆ. ಈ ಧಾರಾವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚಿದೆ ಎನ್ನಬಹುದು.

ನಿಜ ಜೀವನದಲ್ಲಿ ಸಖತ್ ಮಾರ್ಡನ್ ನಮ್ರತಾ ಗೌಡ

ನಿಜ ಜೀವನದಲ್ಲಿ ಸಖತ್ ಮಾರ್ಡನ್ ನಮ್ರತಾ ಗೌಡ

ಅದೇ ನಟಿ ನಿಜ ಜೀವನದಲ್ಲಿ ಸಖತ್ ಮಾರ್ಡನ್ ಹಾಗೂ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಾರೆ. ಅವರ ಫೋಟೊಶೂಟ್‌ಗಳನ್ನು ನೋಡಿದ್ರೆ ಎಷ್ಟು ಮಾಡರ್ನ್ ಅನ್ನೋದು ತಿಳಿಯುತ್ತೆ. ನಮ್ರತಾ ಗೌಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಈ ನಟಿ ಸಖತ್ ಹಾಟಾಗಿ ಕಾಣಿಸುತ್ತಿದ್ದಾರೆ. ತುಂಡು ಉಡುಗೆ ತೊಟ್ಟು ಮಾದಕ ನೋಟ ಬೀರಿದ್ದಾರೆ. 'ಮಿಲನ', 'ಗೇಮ್' , 'ಎಕ್ಸ್‌ಕ್ಯೂಸ್ ಮೀ' , 'ತುತ್ತೂರಿ' ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದಾರೆ.

ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಹಿಮ

ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಹಿಮ

ಈಗಲೂ ಇವರ ಖ್ಯಾತಿ ಕಮ್ಮಿ ಆಗಿಲ್ಲ. 'ನಾಗಿಣಿ 2' ಸೀರಿಯಲ್ ಮೂಲಕ ಮತ್ತೆ ಜನರ ಮನಸಲ್ಲಿ ನೆಲೆಯೂರಿದ್ದಾರೆ. ಈ ಹಿಂದೆ ನಮ್ರತಾ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದರು. ನಾಯಕ ಜಗದೀಶ್‌ ಪ್ರೀತಿಸುವ ಪ್ರೇಯಸಿ ಪಾತ್ರದಲ್ಲಿ ನಮ್ರತಾ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಸಾಕಷ್ಟು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಪರ್ಸನಲ್ ವಿಚಾರಗಳ ಬಗ್ಗೆ ಹಂಚಿಕೊಂಡ 'ನಾಗಿಣಿ 2' ನಟಿ ನಮ್ರತಾ ಗೌಡ ಬಾಲನಟಿ ಯಾಗಿ ಕೂಡ ಕಮಾಲ್ ಮಾಡಿದ್ದಾರೆ.

ನಮ್ರತಾ ಗೌಡ ಜೊತೆ ಅನುಪಮಾ ಗೌಡ

ನಮ್ರತಾ ಗೌಡ ಜೊತೆ ಅನುಪಮಾ ಗೌಡ

ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ನಟಿ ನಮ್ರತಾ ಗೌಡ ಮಿಂಚುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ನಮ್ರತಾ ಗೌಡ ಜೊತೆ ಅನುಪಮಾ ಗೌಡ ಮತ್ತು ರಕ್ಷ್ ಕೂಡ ಇದ್ದು ತಮ್ಮ ಫ್ರೆಂಡ್‌ಶಿಪ್ ಮತ್ತು ಸಿನಿ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ತನ್ನ ಸಿನಿಮಾಗಳು, ಮುಂದಿನ ಪ್ರಾಜೆಕ್ಟ್‌ಗಳು ಮತ್ತು ತನ್ನ ಜೀವನದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Nagini 2 serial fame Namrtha real life. Hear is more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X