Namratha Gowda-Kishan: ನಮ್ರತಾ ಜೊತೆಗೆ ಡ್ಯಾನ್ಸ್ ಮಾಡಿದ್ದಕ್ಕೆ ದೀಪಿಕಾ ದಾಸ್ ಎಲ್ಲಿ ಎಂದ ನೆಟ್ಟಿಗರು..ಕಿಶನ್ ಹೇಳಿದ್ದೇನು?
ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡ ಹಾಗೂ ಕಿಶನ್ ಇಬ್ಬರು ಫುಲ್ ಆಕ್ಟೀವ್ ಆಗಿರುತ್ತಾರೆ. ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸುತ್ತಿರುತ್ತಾರೆ. ಟ್ರೆಂಡಿಂಗ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ನಮ್ರತಾ ಗೌಡ, ಹೊಸದೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕಿಶನ್ ಮೂಲತಃ ಒಳ್ಳೆಯ ಡ್ಯಾನ್ಸರ್. ಸಖತ್ತಾಗಿ ಹೆಜ್ಜೆನೂ ಹಾಕ್ತಾರೆ, ಮೈಯ್ಯನ್ನು ಕುಣಿಸ್ತಾರೆ. ಅವರ ಜೊತೆಗೆ ನಮ್ರತಾ ಗೌಡ ಹೆಜ್ಜೆ ಹಾಕುವುದು ಇತ್ತೀಚೆಗೆ ಕಾಮನ್ ಆಗಿ ಬಿಟ್ಟಿದೆ. ಬಿಗ್ ಬಾಸ್‌ನಿಂದ ಕಿಶನ್ ಮತ್ತು ದೀಪಿಕಾ ದಾಸ್ ಒಳ್ಳೆಯ ಬಾಂಡಿಂಗ್ ಬೆಳೆಸಿಕೊಂಡಿರುವ ಜೋಡಿ. ಇಬ್ಬರನ್ನು ನಿಜವಾದ ಪ್ರೇಮಿಗಳು ಎಂದೇ ಮಾತನಾಡುತ್ತಾರೆ. ಇದೀಗ ಅದೇ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಡಿಮ್ಯಾಂಡ್ ಇಡುತ್ತಿದ್ದಾರೆ.

ಕಿಶನ್ - ನಮ್ರತಾ ಮಸ್ತ್ ಡ್ಯಾನ್ಸ್
ಮೊದಲೇ ಗೊತ್ತಿರುವಂತೆ ಕಿಶನ್ ಉತ್ತಮ ಡ್ಯಾನ್ಸರ್. ಅವರ ಸೋಷಿಯಲ್ ಮೀಡಿಯಾದಲ್ಲೂ ಆ ಡ್ಯಾನ್ಸ್ ಗಮ್ಮತ್ತು ಕಾಣಿಸುತ್ತಾ ಇರುತ್ತದೆ. ಒಳ್ಳೊಳ್ಳೆ ಸ್ಟೆಪ್ಸ್ ಹಾಕಿ ಮನರಂಜನೆ ನೀಡುತ್ತಿರುತ್ತಾರೆ. ಅಷ್ಟೇ ಅವರಿಂದ ಡ್ಯಾನ್ಸ್ ಕಲಿಯುವುದಕ್ಕೇನೆ ಹಲವರು ಪ್ರೊಫೈಲ್ ಫಾಲೋ ಮಾಡ್ತಾರೆ. ಇದೀಗ ನಮ್ರತಾ ಜೊತೆಗೆ ಮತ್ತೊಂದು ಡ್ಯಾನ್ಸ್ ಮಾಡಿದ್ದಾರೆ. ಕಳೆದ ಬಾರಿ ಹಬ್ಬದ ದಿನ ಒಂದು ಅದ್ಭುತವಾದ ಡ್ಯಾನ್ಸ್ ಮಾಡಲಾಗಿತ್ತು. ನಮ್ರತಾ ಜೊತೆಗೆ ಮಾಡಿದ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿವೆ. ಈಗ ಅಂಥದ್ದೇ ಮತ್ತೊಂದು ರೊಮ್ಯಾಂಟಿಕ್ ಸ್ಟೆಪ್ಸ್ ಇರುವಂತ ಡ್ಯಾನ್ಸ್ ಮಾಡಿದ್ದಾರೆ.
ಮಂದಾಕಿನಿಯೇ ಅಂತ ಕುಣಿದ ಜೋಡಿ
"ಮಂದಾಕಿನಿಯೇ ನೀ ಸುಡಬೇಡ ತಡಿಯೇ.." ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದಾರೆ. ನಮ್ರತಾ ವೈಟ್ ಅಂಡ್ ವೈಟ್‌ನಲ್ಲಿ ಮಿಂಚಿದ್ರೆ, ಕಿಶನ್ ಪಿಂಕ್ ಕಲರ್‌ನಲ್ಲಿ ಮಿಂಚಿದ್ದಾರೆ. ಮಂದಾಕಿನಿಯೇ ಹಾಡಿಗೆ ಈಗ ಕಳೆ ಬಂತು ಎಂಬಷ್ಟು ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ರೊಮ್ಯಾಂಟಿಕ್ ಫೀಲ್‌ನಲ್ಲಿ ಹೆಜ್ಜೆ ಹಾಕಿದ್ದು, ಈ ಡ್ಯಾನ್ಸ್ ನಿಜಕ್ಕೂ ಪಡ್ಡೆ ಹೈಕ್ಳ ಹೃದಯ ಕದ್ದಂತೆ ಇದೆ.
ದೀಪಿಕಾ ಎಲ್ಲಿ ಅಂತಿದ್ದಾರೆ ಫಾಲೋವರ್ಸ್
ನಮ್ರತಾ ಗೌಡ ಜೊತೆಗೆ ಕಿಶನ್ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಜನ ಫುಲ್ ಎಂಜಾಯ್ ಮಾಡಿದ್ದಾರೆ. ಆದರೆ, ಒಂದಷ್ಟು ಜನರಿಗೆ ಇದು ಬೇಸರವೂ ಆಗಿದೆ. ಕಿಶನ್ ಪಕ್ಕದಲ್ಲಿ ನಮ್ರತಾ ಅವರನ್ನು ನೋಡುವುದಕ್ಕಿಂತ ದೀಪಿಕಾ ಅವರನ್ನು ನೋಡುವುದೇ ಅವರಿಗೆಲ್ಲಾ ಖುಷಿ ಎನಿಸಿದೆ. ಅದಕ್ಕಾಗಿಯೇ ಬ್ಯಾಕ್ ಟು ಬ್ಯಾಕ್ ಹಲವರು ಮೆಸೇಜ್ ಹಾಕಿದ್ದಾರೆ. ದೀಪಿಕಾರನ್ನು ಎಲ್ಲಿ ಬಿಟ್ಟಿರಿ ಎಂದು ಕೇಳುತ್ತಿದ್ದಾರೆ. ಆ ಜಾಗದಲ್ಲಿ ದೀಪಿಕಾ ಇದ್ದಿದ್ದರೆ ಚೆಂದ ಎನ್ನುತ್ತಿದ್ದಾರೆ.
ಇಬ್ಬರ ಡ್ಯಾನ್ಸ್‌ಗೆ ಸಿಕ್ತು ಬಹುಪರಾಕ್
ಇತ್ತೀಚೆಗೆ ನಮ್ರತಾ ಹಾಗೂ ಐಶ್ವರ್ಯಾ ಸಿಂಧೋಗಿ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಹಸಿಬಿಸಿ ಎನ್ನುವಷ್ಟು ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಫೋಟೋಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಅಲ್ಲಿ ಕಮೆಂಟ್ ಸೆಕ್ಷನ್ ಆಫ್ ಮಾಡಲಾಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಅಲ್ಲಿ ತಮಗನ್ನಿಸಿದ್ದನ್ನು ಕಮೆಂಟ್ ಮಾಡುವ ಆಪ್ಶನ್ ಮಿಸ್ ಆಗಿತ್ತು. ಈಗ ಕಿಶನ್ ಪ್ರೊಫೈಲ್‌ನಲ್ಲಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬಿಕಿನಿ ಫೋಟೋಗಳು ಸೂಪರ್ ಮೇಡಂ ಅಂತ ಇಬ್ಬರು ಅಂದ್ರೆ, ಬಿಕಿನಿ ಹಾಕಿ ಕುಣಿದವರ ಜೊತೆ ನೀವೂ ಕುಣಿಯಬೇಡಿ ಕಿಶನ್ ಅಂತ ಸಲಹೆಗಳನ್ನು ನೀಡುತ್ತಿದ್ದಾರೆ.


Click it and Unblock the Notifications











