For Quick Alerts
  ALLOW NOTIFICATIONS  
  For Daily Alerts

  ಚರ್ಚ್ ಸ್ಟ್ರೀಟ್‌ನಲ್ಲಿ ನಮ್ರತಾ ಗೌಡ ಭರ್ಜರಿ ಶಾಪಿಂಗ್!

  By Priya Dore
  |

  ನಟಿ ನಮ್ರತಾ ಗೌಡ ಬ್ಯೂಟಿಗೆ ಅನೇಕ ಜನ ಮಾರು ಹೋಗಿದ್ದಾರೆ. ಅವರ ನಗು, ಅವರ ಸ್ಟೈಲ್‌ಗೆ ಹಲವರು ಕ್ಲೀನ್ ಬೋಲ್ಡ್ ಆಗಿದ್ದಾರೆ. 'ನಾಗಿಣಿ 2' ಧಾರಾವಾಹಿಯಲ್ಲಿ ಶಿವಾನಿಯಾಗಿ ಎಲ್ಲರ ಮನ ಗೆದ್ದಿದ್ದಾರೆ. ಈ ಮಧ್ಯೆ ಆ ಊರು ಈ ಊರು ಅಂತ ದೂರದೂರುಗಳಲ್ಲಿ ರೌಂಡ್ ಹಾಕುತ್ತಿದ್ದಾರೆ.

  ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಮ್ರತಾ ಗೌಡ, ವಿಡಿಯೋ, ಫೋಟೋಗಳನ್ನು ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಶೂಟಿಂಗ್ ಸ್ಪಾಟ್ ನಲ್ಲಿ ಸೈಕಲ್ ಗ್ಯಾಪ್ ಸಿಕ್ಕಿದರೆ ಸಾಕು ರೀಲ್ಸ್ ಮಾಡುವುದರಲ್ಲಿ ಮುಳುಗಿ ಹೋಗುತ್ತಾರೆ.

  ಅತ್ತಿಗೆಯನ್ನು ದೂಡಿದ ಮೈದುನ: ಪ್ರೀತೂ ವರ್ತನೆಗೆ ಮನೆ ಮಂದಿ ಶಾಕ್ಅತ್ತಿಗೆಯನ್ನು ದೂಡಿದ ಮೈದುನ: ಪ್ರೀತೂ ವರ್ತನೆಗೆ ಮನೆ ಮಂದಿ ಶಾಕ್

  ನಮ್ರತಾ ಗೌಡ ಸದ್ಯ ನಾಗಿಣಿ2 ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಮ್ರತಾ ಪ್ರವಾಸಿ ಪ್ರಿಯೆ ಆಗಾಗ ಸ್ನೇಹಿತರ ಜೊತೆಗೆ ಸುತ್ತಾಡಲು ಹೋಗುತ್ತಿರುತ್ತಾರೆ. ಹೊಸ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

  ನಮ್ರತಾ ಫ್ಯಾನ್ ಫಾಲೋಯಿಂಗ್!

  ನಮ್ರತಾ ಫ್ಯಾನ್ ಫಾಲೋಯಿಂಗ್!

  ನಟ-ನಟಿಯರನ್ನು ಅಭಿಮಾನಿಗಳು ಸಾಕಷ್ಟು ವಿಚಾರದಲ್ಲಿ ಫಾಲೋ ಮಾಡುತ್ತಾರೆ. ಒಳ್ಳೆಯತನ, ನಟನೆ ಹೀಗೆ ಹಲವು ವಿಚಾರದಲ್ಲಿ ಮಾಡೆಲ್ ಆಗಿರುವ ಸೆಲೆಬ್ರೆಟಿಗಳು ಸ್ಟೈಲ್ ವಿಚಾರದಲ್ಲೂ ಮಾದರಿಯಾಗುತ್ತಾರೆ. ಆ ವಿಚಾರದಲ್ಲಿ ನಮ್ರತಾ ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತಾರೆ. ಅವರ ಡ್ರೆಸ್ಸಿಂಗ್ ಸೆನ್ಸ್ ಸಿಕ್ಕಾಪಟ್ಟೆ ಅದ್ಭುತವಾಗಿದೆ. ಅವರ ಒಂದೊಂದು ಸ್ಟೈಲ್ ತುಂಬಾ ಇಂಪ್ರೆಸ್ ಮಾಡುತ್ತಿದೆ. ಸೀರೆ ಪ್ರಿಯರಿಗೆ ಸೀರೆಯ ವಿಭಿನ್ನತೆ, ಮಾಡ್ರನ್ ಪ್ರಿಯರಿಗೆ ಮಾಡ್ರನ್ ಡ್ರೆಸ್ ನಲ್ಲೂ ಕಾಣಿಸಿಕೊಂಡಿದ್ದಾರೆ.

  ಗಟ್ಟಿಮೇಳ: ಮನೆಯಲ್ಲಿಯೇ ಇರುವ ಅಮ್ಮನನ್ನು ವೇದಾಂತ್ ಕಂಡು ಹಿಡಿಯುವುದಾದರೂ ಹೇಗೆ ?ಗಟ್ಟಿಮೇಳ: ಮನೆಯಲ್ಲಿಯೇ ಇರುವ ಅಮ್ಮನನ್ನು ವೇದಾಂತ್ ಕಂಡು ಹಿಡಿಯುವುದಾದರೂ ಹೇಗೆ ?

  ಸೋಷಿಯಲ್ ಮಿಡಿಯಾದಲ್ಲಿ ನಮ್ರತಾ ಸಕ್ರಿಯ!

  ಸೋಷಿಯಲ್ ಮಿಡಿಯಾದಲ್ಲಿ ನಮ್ರತಾ ಸಕ್ರಿಯ!

  ನಮ್ರತಾ ಗೌಡಗೆ ಸಿಕ್ಕಾಪಟ್ಟೆ ಅಭಿಮಾನಿ ಬಳಗವೂ ಇದೆ. ಅವರಿಗಾಗಿಯೇ ಫ್ಯಾನ್ ಪೇಜ್ ಕೂಡ ಕ್ರಿಯೇಟ್ ಆಗಿವೆ. ಧಾರಾವಾಹಿಯಲ್ಲಿ ಬ್ಯುಸಿ ಇರುವ ನಟಿ ಆಗಾಗ ತಮ್ಮ ಫಾಲೋವರ್ಸ್ ಖುಷಿಯಾಗುವಂತ ಸಂದೇಶಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಬಿಡುವಿನ ವೇಳೆಯಲ್ಲಿ ಏನೆಲ್ಲಾ ಮಾಡುತ್ತೀವಿ, ಫ್ರೆಂಡ್ಸ್ ಯಾರು, ಎಲ್ಲೆಲ್ಲಾ ಟ್ರಿಪ್ ಹೋಗ್ತೀವಿ, ಇಂಡಸ್ಟ್ರಿಯಲ್ಲಿ ಯಾರು ಇಷ್ಟ ಹೀಗೆ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಚರ್ಚ್ ಸ್ಟ್ರೀಟ್ ನಲ್ಲಿ ಶಾಪಿಂಗ್ ಮಾಡಿದ್ದಾರೆ. ಇದರ ವೀಡಿಯೋವನ್ನು ಇದೀಗ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

  ನಮ್ರತಾ ಯೂಟ್ಯೂಬ್ ಚಾನೆಲ್!

  ನಮ್ರತಾ ಯೂಟ್ಯೂಬ್ ಚಾನೆಲ್!

  ನಾಲ್ಕು ತಿಂಗಳ ಹಿಂದೆ ಯೂಟ್ಯೂಬ್ ಚಾನೆಲ್ ಅನ್ನು ನಮ್ರತಾ ಗೌಡ ಅವರು ತೆರೆದರು. ತಮಗಿರುವ ಆಸೆ, ಅನಿಸಿಕೆ, ದೈನಂದಿನ ಚಟುವಟಿಕೆಗಳನ್ನೆಲ್ಲಾ ಆ ಯೂಟ್ಯೂಬ್ ನಲ್ಲಿ ಹಾಕಿಕೊಂಡು ಫ್ಯಾನ್ಸ್ ಗೆ ಇನ್ನು ಹತ್ತಿರವಾಗುತ್ತಿದ್ದಾರೆ. ಜಯನಗರದಲ್ಲಿ ಶಾಪಿಂಗ್, ಕಾಶ್ಮೀರ್, ಥೈಲ್ಯಾಮಡ್ ಗೋವಾ ಟ್ರಿಪ್, ಹೋಮ್ ಡೆಕೋರ್, ಹೇರ್ ಕೇರ್ ವೀಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ. ತಮ್ಮ ಧಾರಾವಾಹಿಯಿಲ್ಲದ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ ಗಾಗಿ ಸಮಯ ನೀಡುತ್ತಿದ್ದಾರೆ. ನಮ್ರತಾ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರೀಲ್ಸ್ ನೋಡಿ ಖುಷಿ ಪಡುತ್ತಿದ್ದವರು ಇದೀಗ, ಯೂಟ್ಯೂಬ್ ನಲ್ಲಿ ಮತ್ತಷ್ಟು ವೆರೈಟಿ ವಿಡಿಯೋಗಳನ್ನು ನೋಡುತ್ತಿದ್ದಾರೆ.

  ಚರ್ಚ್ ಸ್ಟ್ರೀಟ್ ನಲ್ಲಿ ಶಾಪಿಂಗ್!

  ಚರ್ಚ್ ಸ್ಟ್ರೀಟ್ ನಲ್ಲಿ ಶಾಪಿಂಗ್!

  ಇದೀಗ ನಮ್ರತಾ ಗೌಡ ಚರ್ಚ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡಿದ್ದಾರೆ. ಚರ್ಚ್ ಸ್ಟ್ರೀಟ್‌ನಲ್ಲಿ ಏನೆಲ್ಲಾ ಸಿಗುತ್ತದೆ ಎಂದು ವೀಡಿಯೋ ಮಾಡಿದ್ದು, ಅವರು ಕೂಡ ಕೆಲ ವಸ್ತುಗಳನ್ನು ಶಾಪಿಂಗ್ ಮಾಡಿದ್ದಾರೆ. ಮೊದಲಿಗೆ ಇಷ್ಟ ಪಟ್ಟು ಶುಗರ್ ಕ್ಯಾಂಡಿ ಅನ್ನು ಖರೀದಿಸಿ ತಿಂದ ನಮ್ರತಾ ನಂತರ ಹ್ಯಾಟ್ ಪರ್ಚೇಸ್ ಮಾಡಿದರು. ಬಳಿಕ ಬ್ಯಾಗ್ ಅಂಗಡಿಗೆ ಹೋದರು. ಹೀಗೆ ಡೆನಿಮ್ಸ್, ಮ್ಯೂಸಿಕ್ ಭಾರಿಸುವ ವಸ್ತು ಸೇರಿದಂತೆ ಕೆಲ ವಸ್ತುಗಳನ್ನು ಶಾಪ್ ಮಾಡಿದರು. ಇದನ್ನು ಯೂಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

  English summary
  Nagini 2 Serial Fame Namratha Gowda Church Street Shopping Video Viral, What she purchased.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X