Deepika Das: ಬಾಕ್ಸರ್ ಲುಕ್‌ನಲ್ಲಿ ದೀಪಿಕಾ ದಾಸ್ ಕಂಡು 'ಲೇಡಿ ಕ್ವೀನ್' ಎಂದ ನೆಟ್ಟಿಗರು

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ'. ಈ ಧಾರಾವಾಹಿಯ ನಾಯಕಿ ಅಮೃತಾ ಪಾತ್ರದಲ್ಲಿ ದೀಪಿಕಾ ದಾಸ್ ನಟಿಸಿ ಮನಗೆದ್ದಿದ್ದರು. ಧಾರಾವಾಹಿ ಹೊರತಾಗಿ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಹೊಸ ಫೋಟೊಗಳನ್ನು ಶೇರ್ ಮಾಡುತ್ತಾರೆ.

ದೀಪಿಕಾ ದಾಸ್ ತಮ್ಮ ಕುರಿತು ಹೊಸ ಅಪ್‍ಡೇಟ್ಸ್ ಕೊಡುತ್ತಲೇ ಇರುತ್ತಾರೆ. ಈ ನಟಿಗೆ ಅಡ್ವೆಂಚರ್ಸ್ ಟ್ರಿಪ್ ಹೋಗುವುದು ಅಂದರೆ ತುಂಬಾ ಇಷ್ಟ. ಹಾಗಾಗಿ ಆಗಾಗ ಸಣ್ಣಪುಟ್ಟ ಪ್ರವಾಸಗಳನ್ನಾದರೂ ಮಾಡುತ್ತಲೇ ಇರುತ್ತಾರೆ. ಇನ್ನು ಬಿಡುವಿದ್ದಾಗ ದೀಪಿಕಾ ಹೊಸ ಹೊಸ ಫೋಟೊಶೂಟ್ ಮಾಡಿಸುತ್ತಾರೆ. ಇತ್ತೀಚೆಗೆ ದೀಪಿಕಾ ದಾಸ್ ಬಾಕ್ಸರ್ ಲುಕ್‍ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಈ ಫೋಟೊ ಎಲ್ಲೆಡೆ ವೈರಲ್ ಆಗಿದೆ.

Nagini fame actress Deepika Das new look photoshoot as boxer goes Viral

ಬಾಕ್ಸರ್ ಲುಕ್‌ನಲ್ಲಿ ದೀಪಿಕಾ ಮಿಂಚು

ಕಿರುತೆರೆ ನಟಿ ದೀಪಿಕಾ ದಾಸ್ ತಮ್ಮ ಬಾಕ್ಸರ್ ಫೋಟೋಗಳನ್ನು ಶೇರ್ ಮಾಡುವುದರೊಂದಿಗೆ, "ನಾನು ಯೋಧ ಅಲ್ಲ, ಏಕೆಂದರೆ, ನಾನು ಯಾವಾಗಲೂ ಗೆಲ್ಲುತ್ತೇನೆ. ಆದರೆ ನಾನು ಯಾವಾಗಲೂ ಹೋರಾಡುತ್ತೇನೆ"ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.

'ಲೇಡಿ ಕ್ವೀನ್' ಎಂದ ನೆಟ್ಟಿಗರು

ಈಗಾಗಲೇ ಈ ಪೋಸ್ಟ್ ಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕೆಲವರು ಸೂಪರ್ ಎಂದರೆ ಇನ್ನು ಕೆಲವರು ಲೇಡಿ ಕ್ವೀನ್ ಎಂದು ಕರೆದಿದ್ದಾರೆ. ಹಲವರು ನೀವು ನಿಜವಾದ ಹೋರಾಟಗಾರ್ತಿ, ಛಲಗಾರ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಅಂದ ಹಾಗೆ ನಟಿ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಅದರಲ್ಲಿ ಪಾಯಲ್ ಎಂಬ ಪಾತ್ರವನ್ನು ಮಾಡುತ್ತಿದ್ದಾರಂತೆ. ಇನ್ನು ಸಿನಿಮಾ ಟೈಟಲ್ ಕುರಿತಂತೆ ತಿಳಿಸಿಲ್ಲ. ಆದರೆ, ಆ ಸಿನಿಮಾದ ಪಾತ್ರಕ್ಕಾಗಿಯೇ ದೀಪಿಕಾ ದಾಸ್ ಬಾಕ್ಸರ್ ಕೊಡುತ್ತಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಯಾಗಿ ಮಿಂಚಿದ ಬೆಡಗಿ

ನಾಗಿಣಿಯ ಅಮೃತಾ ಪಾತ್ರ ಮುಖಾಂತರ ಕರ್ನಾಟಕದಾದ್ಯಂತ ಮನೆ ಮಾತಾದ ನಟಿ ನಂತರ ಬಿಗ್ ಬಾಸ್‍ಗೂ ಎಂಟ್ರಿ ಕೊಟ್ಟರು. ಬಿಗ್ ಬಾಸ್ ಸೀಸನ್ 9ಗೆ ಬಂದಿದ್ದ ದೀಪಿಕಾ ಕೊನೆಯ ಸುತ್ತಿನ ಟಾಪ್ 3 ನಲ್ಲಿ ಒಬ್ಬರಾಗಿದ್ದರು. ತಮ್ಮ ಅದ್ಭುತವಾದ ಆಟ ಹಾಗೂ ನೋಟದ ಮೂಲಕ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾದ ಹೆಮ್ಮೆ ದೀಪಿಕಾ ದಾಸ್ ರದ್ದು. ಇದಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಮನೆಗೆ ಮೂರು ಬಾರಿ ಅವಕಾಶ ಪಡೆದ ಖ್ಯಾತಿ ಇವರದ್ದು.

Nagini fame actress Deepika Das new look photoshoot as boxer goes Viral

"ಗ್ರೇಟ್ ಥಿಂಗ್ಸ್ ಟೇಕ್ಸ್ ಮೋರ್ ಟೈಮ್" ಎನ್ನುವಂತೆ ದೀಪಿಕಾ ದಾಸ್ ಪಾಲಿಗೆ ಇದೀಗ ಸಿನಿಮಾ ಕದ ತಟ್ಟಿದೆ. ಅಲ್ಲದೆ ತಮ್ಮ ಪ್ರೀತಿಯ ನಟಿಯನ್ನು ಬೆಳ್ಳಿತೆರೆಯಲ್ಲಿ ಕಂಡು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Nagini fame actress Deepika Das new look photoshoot as boxer goes Viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X