Deepika Das: ಹಾಂಗ್ ಕಾಂಗ್‌ನಲ್ಲಿ ನಟಿ ದೀಪಿಕಾ ದಾಸ್ ಮಸ್ತ್ ಮಜಾ.. ಜಾಕಿಚಾನ್ ಜೊತೆ ಪೋಸ್!
ನಟಿ ದೀಪಿಕಾ ದಾಸ್ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಾಗಿಣಿ ಪಾತ್ರವನ್ನು ಮಾಡಿದ ನಟಿ ಇವರು. ತಮ್ಮ ಅಭಿನಯದ ಮೂಲಕವೇ ಜನರಿಗೆ ಹತ್ತಿರವಾದ ನಟಿ ಕನ್ನಡ ಕಿರುತೆರೆಗೆ ಬಂದು ಹೆಚ್ಚು ಕಮ್ಮಿ ಒಂದು ದಶಕ ಆಗುತ್ತಾ ಬಂದಿದೆ.
ನಟಿ ದೀಪಿಕಾ ದಾಸ್ ನಟನೆಯ ಹೊರತಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಒಂದಷ್ಟು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವೈರಲ್ ಆಗಿದ್ದಾರೆ.

ಹಾಗಾದರೆ, ಏನಿದು ಫೋಟೋಗಳು ಎಂದು ನೋಡೋಣ ಬನ್ನಿ. ಇತ್ತೀಚೆಗಷ್ಟೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಂಗ್ ಕಾಂಗ್ ಪ್ರವಾಸದ ಒಂದಷ್ಟು ಫೋಟೋಗಳನ್ನು ನಟಿ ದೀಪಿಕಾ ದಾಸ್ ಶೇರ್ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಹಾಗೂ ವಿದೇಶಿ ಸಿನಿಮಾದ ಆಕ್ಷನ್ ಕಿಂಗ್ ಜಾಕಿಚಾನ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಹಾಗೆಂದ ಮಾತ್ರಕ್ಕೆ ಇವರು ಆ ಕಲಾವಿದರನ್ನು ಭೇಟಿಯಾಗಿದ್ದಾರೆ ಎಂದುಕೊಳ್ಳಬೇಡಿ. ಬದಲಿಗೆ ಈಕೆ ಪೋಸ್ ಕೊಟ್ಟಿರುವುದು ಮಹಾನ್ ಕಲಾವಿದರ ಮೇಣದ ಪ್ರತಿಮೆಯೊಂದಿಗೆ. ಹೌದು, ಸದ್ಯಕ್ಕೆ ನಟಿ ದೀಪಿಕಾ ದಾಸ್ ಹಾಂಗ್ ಕಾಂಗ್‌ನಲ್ಲಿ ತಮ್ಮ ಲಾಂಗ್ ವೆಕೇಶನನ್ನು ಕಳೆಯುತ್ತಿದ್ದಾರೆ.

ಹಾಂಗ್ ಕಾಂಗ್‌ನ ವಿಶ್ವವಿಖ್ಯಾತ ಮ್ಯೂಸಿಯಂ ಮೇಡಂ ಟುಸ್ಸಡ್‌ಗೆ ತೆರಳಿದ್ದು ಅಲ್ಲಿಯ ಒಂದಷ್ಟು ಮೇಣದ ಪ್ರತಿಮೆಯೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಫೋಟೋಗೆ ಚೆನ್ನಾಗಿ ಪೋಸ್ ನೀಡಿರುವ ದೀಪಿಕಾ ಅವೆಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ವೆಕೇಷನ್ ಕ್ಷಣಗಳನ್ನು ಅಭಿಮಾನಿಗಳೊಂದಿಗೆ, ಫಾಲೋವರ್ಸ್‌ಗಳೊಂದಿಗೆ ಹಂಚಿಕೊಂಡಿದ್ದಾರೆ.
ದೀಪಿಕಾ ದಾಸ್ ಹಂಚಿಕೊಂಡಿರುವ ಈ ಫೋಟೋಗಳಿಗೆ ಬಹಳಷ್ಟು ಪ್ರೀತಿಯ ಕಾಮೆಂಟ್ ಗಳ ಸುರಿಮಳೆ ಸುರಿಯುತ್ತಿದೆ. ಅಭಿಮಾನಿಗಳಂತೂ ಆಕೆಯ ಪ್ರವಾಸದ ವಿಚಾರಗಳನ್ನು ಇನ್ನಷ್ಟು ತಿಳಿಯಲು ಕಾತುರರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಆಗಿರುವ ಈಕೆ ಅವೆಲ್ಲವನ್ನು ಹಂಚಿಕೊಳ್ಳುತ್ತಾ ತಮ್ಮ ಫಾಲೋವರ್ಸ್ ಅನ್ನು ಎಂಗೇಜಿಂಗ್ ಆಗಿ ಇಟ್ಟುಕೊಂಡಿದ್ದಾರೆ.
ಅಂದ ಹಾಗೆ ಹೆಚ್ಚು ಕಮ್ಮಿ 8 ವರ್ಷಗಳ ಹಿಂದೆ 'ನಾಗಿಣಿ' ಧಾರಾವಾಹಿ ಮೂಲಕ ಎಲ್ಲರಿಗೂ ಚಿರಪರಿಚಿತರಾದರು. ಹಲವಾರು ತಿಂಗಳುಗಳ ಕಾಲ ನಡೆದ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ದೀಪಿಕಾ ದಾಸ್ 'ನಾಗಿಣಿ' ಪಾತ್ರವನ್ನು ಬಹಳ ಚೆನ್ನಾಗಿ ನಟಿಸಿದ್ದರು. ಅದಾದ ಮೇಲೆ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಕನ್ನಡದ ಬಿಗ್ ಮನೆಗೆ ಕಾಲಿಟ್ಟರು.
ಅಲ್ಲಿಯೂ ಸಹ ತಮ್ಮ ನೇರ ದಿಟ್ಟ ಮಾತುಕತೆ ನಡೆ-ನುಡಿಗೆ ಎಲ್ಲರಿಗೂ ಇಷ್ಟವಾದರು. ಮನೆಯಲ್ಲಿನ ಎಲ್ಲಾ ಸದಸ್ಯರೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದಷ್ಟೇ ಅಲ್ಲದೇ ಎಲ್ಲಾ ಟಾಸ್ಕ್‌ನಲ್ಲೂ ಸಹಿ ಎನಿಸಿಕೊಂಡವರು ಟಾಪ್ ಫೈವ್ ಸ್ಪರ್ಧಿಗಳಲ್ಲಿ ಒಂದಾಗಿದ್ದರು. ಅದಾದ ಮೇಲೆ ಆಗಾಗ ಒಂದಷ್ಟು ಜಾಹೀರಾತುಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡ ಇವರು ಇತ್ತೀಚೆಗೆ 'ಅಂತರಪಟ' ಧಾರಾವಾಹಿಯಲ್ಲಿ ಕೆಲ ಎಪಿಸೋಡ್‌ಗಳಲ್ಲಿ ನಟಿಸಿದ್ದಾರೆ.
ಆದರೆ, ಯಾವುದೇ ಪ್ರಮುಖ ಪಾತ್ರದೊಂದಿಗೆ ನಟನೆಗೆ ಕಂಬ್ಯಾಕ್ ಆಗದೇ ಇರುವ ಕಾರಣ ಇವರ ನಟನೆಯನ್ನು ಪೂರ್ಣ ಪ್ರಮಾಣದಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನು ಕಾಯುತ್ತಿದ್ದಾರೆ.


Click it and Unblock the Notifications











