Namratha Gowda: ನಟನೆಗೆ ಬಂದ್ಮೇಲೆ ಮನೆಯವರೇ ಕೀಳಾಗಿ ನೋಡಿದ್ದರಂತೆ: 'ನಾಗಿಣಿ' ನಟಿ ನಮ್ರತಾ ಗೌಡ ಅಳಲು

By ಎಸ್ ಸುಮಂತ್

ಯಶಸ್ಸು ಪಡೆದವರ ಹಿಂದಿನ ಕಥೆ ಕೇಳಿದ್ರೆ ಖಂಡಿತ ಅವರ ಹಿಂದೊಂದು ಮನಕಲುಕುವ ವಿಚಾರಗಳು ಅನಾವರಣವಾಗದೆ ಇರದು. ಅದರಲ್ಲೂ ತೆರೆ ಮೇಲೆ ಅತಿ ಶ್ರೀಮಂತರು ಎನಿಸುವ, ಯಾವಾಗಲೂ ನಗುತ್ತಾ ಎಲ್ಲರನ್ನೂ ರಂಜಿಸುವುದರ ಹಿಂದೆ ಊಹಿಸಲಾಧ್ಯವಾದ ವಿಚಾರಗಳು ಅಡಗಿರುತ್ತವೆ. ಅದಕ್ಕೊಂದು ಉದಾಹರಣೆ ನಮ್ರತಾ ಗೌಡ ಜೀವನ.

ಜೀ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಗ್ಯಾಂಗ್ ಅನ್ನೋ ಒಂದು ರಿಯಾಲಿಟಿ ಶೋ ಬರ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಕಾರ್ಯಕ್ರಮವನ್ನ ಅದ್ಭುತವಾಗಿ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ನೇಹಿತರ ತಂಡವೊಂದನ್ನ ಕರೆಯಿಸಿ, ಅವರ ಬಾಂಧವ್ಯ, ಬದುಕು ಜೊತೆ ಜೊತೆಗೆ ಒಂದಷ್ಟು ಹಾಸ್ಯದಿಂದಲೇ ಜನರನ್ನು ಮನರಂಜಿಸುತ್ತಿದ್ದಾರೆ.

ನೀವೂ ನೋಡಿರದ ನಮ್ರತಾ ಗೌಡ ಜೀವನ ಹೇಗಿದೆ ಗೊತ್ತಾ..?

ನಮ್ರತಾ ಗೌಡ.. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲರ ಮನಸ್ಸನ್ನು ಗೆದ್ದಿದ್ದು, ಎಲ್ಲರ ಮನಸ್ಸಲ್ಲಿ ಜಾಗ ಪಡೆದಿದ್ದು ಮಾತ್ರ 'ಪುಟ್ಟಗೌರಿ' ಧಾರಾವಾಹಿ ಮೂಲಕ. ಆ ಧಾರಾವಾಹಿಯನ್ನು ಈಗಲು ಅದೆಷ್ಟೋ ಜನ ನೆನಪಿಟ್ಟುಕೊಂಡಿದ್ದಾರೆ. ಅದರಲ್ಲಿ ಮಾಯಾ ಅನ್ನೋ ಪಾತ್ರ ಮಾಡಿದ್ದು ಇದೇ ನಮ್ರತಾ.

ಈ ವಾರದ ಗೋಲ್ಡನ್ ಗ್ಯಾಂಗ್ ಶೋನಲ್ಲಿ ಪುಟ್ಟಗೌರಿ ಟೀಂ ಒಂದಾಗಿದೆ. ನಮ್ರತಾ, ರಂಜನಿ, ರಕ್ಷ್, ಅನುಪಮಾ ಗೌಡ ಈಗಾಗಲೇ ನಕ್ಕು ನಗಿಸಿದ್ದಾರೆ. ಆದರೆ ಒಂದು ವಿಚಾರ ಎಲ್ಲರ ಮನಸ್ಸಿಗೂ ಬೇಸರ ಉಂಟು ಮಾಡಿದ್ದು ಅಂದ್ರೆ ಅದು ನಮ್ರತಾ ಜೀವನ ಗಾಥೆ.

ನಾವೂ ನೋಡಿದ ನಮ್ರತಾನೇ ಬೇರೆ

ನಮ್ರತಾ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಶ್ರೀಮಂತರ ಮನೆಯ ಹುಡುಗಿಯಾಗಿ, ಬೇಕು ಅಂದಿದ್ದು ಪಡೆದು, ತಂದೆ ತಾಯಿಯ ಪ್ರೀತಿ ಪಡೆದು, ಅತ್ತೆಯ ಮಮಕಾರದಲ್ಲಿ ಬೆಳೆದ ಹುಡುಗಿ. ಮುಗ್ಧತೆ ಅನ್ನೋದು ಆ ಧಾರಾವಾಹಿಯಲ್ಲೂ ಎದ್ದು ಕಾಣುತ್ತಿತ್ತು. ಆ ಧಾರಾವಾಹಿಯಲ್ಲಿ ನಮ್ರತಾ ಅವರನ್ನು ನೋಡಿದಾಗ ಅದೆಷ್ಟು ಶ್ರೀಮಂತಿಕೆಯ ಹುಡುಗಿ, ನಿಜ ಜೀವನದಲ್ಲೂ ಬಯಸಿದ್ದೆಲ್ಲಾ ಇವರಿಗೆ ಸಿಕ್ಕಿರಬಹುದು ಎಂಬ ಕಲ್ಪನೆ ಎಲ್ಲರಲ್ಲೂ ಇತ್ತು.

ಆದರೆ ಇವೆಲ್ಲವೂ ಉಲ್ಟಾ ಆಗಿದೆ. ಪ್ರೇಕ್ಷಕರ ನಿರೀಕ್ಷೆ ಉಸಿಯಾಗಿದೆ. ನಮ್ರತಾ ಪ್ಯಾಮಿಲಿ ಬೇರೆ ರೀತಿಯಲ್ಲಿಯೇ ನಡೆದುಕೊಂಡಿದೆ. ಯಾರು ಅನುಭವಿಸದ ಅವಮಾನವನ್ನು ಅನುಭವಿಸಿದ್ದಾರೆ. ಆದರೆ ಆ ಅವಮಾನ, ಸಂಕಟ, ನೋವು ಎಲ್ಲವನ್ನು ಉಂಡಿದ್ದು ಅವರ ತಂದೆ-ತಾಯಿ.

ತುಂಬು ಕುಟುಂಬದಲ್ಲಿ ಬೆಳೆದರು ನಮ್ರತಾಗೆ ಪ್ರೀತಿ ಸಿಕ್ಕಿಲ್ಲ

ನಮ್ರತಾ ನಟನಾ ಫೀಲ್ಡ್‌ಗೆ ಬರುತ್ತಾರೆ ಅನ್ನೋ ಕಲ್ಪನೆ ಕೂಡ ಅವರಲ್ಲಿ ಇರಲಿಲ್ಲ. ಯಾಕಂದ್ರೆ ಅವರು ಹುಟ್ಟಿದ್ದು ತುಂಬು ಕುಟುಂಬದಲ್ಲಿ. ನಮ್ರತಾ ತಂದೆ ತಾಯಿಗೆ ಗಂಡು ಮಗು ಆಗಬೇಕು ಅನ್ನೋದು ಕುಟುಂಬಸ್ಥರ ಬಯಕೆ. ಆದರೆ ನಮ್ರತಾ ಹೆಣ್ಣು ಮಗುವಾದ್ದರಿಂದ ಅವಮಾನಗಳು ಜಾಸ್ತಿಯಾಗಿದ್ದವಂತೆ.

ಊಟ-ತಿಂಡಿ ಕೊಡದೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದರಂತೆ. ಅವರ ತಂದೆ ತಾಯಿ ಇದ್ಯಾವುದೂ ಮಗಳಿಗೆ ತಿಳಿಯಬಾರದು ಎಂಬ ಕಾರಣಕ್ಕೆ ನಮ್ರತಾಳನ್ನು ಡ್ಯಾನ್ಸ್, ಆಕ್ಟಿಂಗ್ ಅಂತ ಎಲ್ಲಾ ಕ್ಲಾಸ್‌ಗಳಿಗೂ ಸೇರಿಸಿ, ಬ್ಯುಸಿ ಮಾಡಿದ್ದರಂತೆ. ಇದೆಲ್ಲಾ ನೋವು ಸಂಕಟ ತಿಳಿದ ಮೇಲೆ ನಮ್ರತಾ ಹಠ ತೊಟ್ಟು, ಮನೆಯಿಂದ ತಂದೆ-ತಾಯಿಯನ್ನು ಹೊರಗೆ ಕರೆ ತಂದು ಸಾಕಬೇಕು ಎಂದುಕೊಂಡು ತನ್ನ ಟ್ಯಾಲೆಂಟ್‌ನಿಂದ ಮೇಲೆ ಬಂದಿದ್ದಾರೆ.

Nagini serial Namratha Gowda emotional story about her life

ನಟನೆಗೆ ಬಂದ ಮೇಲೆ ಕೀಳಾಗಿ ನೋಡಿದ್ದರಂತೆ..!

ಹೆಣ್ಣು ಮಗು ಅಂತ ತಂದೆ ಮನೆ ಕಡೆಯವರು ಒಂದು ರೀತಿಯಲ್ಲಿ ಅವಮಾನ ಮಾಡಿದ್ದರೆ ತಾಯಿ ಮನೆ ಕಡೆಯವರು ಮತ್ತೊಂದು ರೀತಿ ಚಿತ್ರ ಹಿಂಸೆ ಕೊಟ್ಟಿದ್ದರಂತೆ. ಅವಳು ಸಿನಿಮಾ ಫೀಲ್ಡ್ ನಲ್ಲಿದ್ದಾಳೆ. ಬಟ್ಟೆಯೆಲ್ಲಾ ಬೇರೆ ರೀತಿಯಲ್ಲಿ ಹಾಕುತ್ತಾರೆ. ಇದೆಲ್ಲಾ ನಮ್ಮ ಮಕ್ಕಳ ಮೇಲೆ ಬೇರೆ ರೀತಿ ಪರಿಣಾಮ ಬೀರುತ್ತೆ ಎಂದು ಆಡಿಕೊಂಡಿದ್ದರಂತೆ.

ನಮ್ರತಾ ಅವರ ತಾಯಿ ಜೊತೆ ಗೋಲ್ಡನ್ ಗ್ಯಾಂಗ್‌ನಲ್ಲಿ ಕುಳಿತು, ತಾಯಿಯ ತ್ಯಾಗದ ಬಗ್ಗೆ, ಅವರಿಗಿರುವ ಕಾಳಜಿ, ಅನುಭವಿಸಿದ ನೋವಿನ ಕಥೆಯನ್ನು ಹೇಳುತ್ತಿದ್ದರೆ ಪ್ರೇಕ್ಷಕ ಮೂಕನಾಗಿ ನೋಡುವಂತಾಗಿದೆ.

More from Filmibeat

English summary
Nagini serial Namratha Gowda emotional story. Here is the details about
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X