ಆ ದಿನಗಳನ್ನ ನೆನೆದ ದೀಪಿಕಾ ದಾಸ್ ; 08 ವರ್ಷದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ನಾಗಿಣಿ

By ಪ್ರಿಯಾ ದೊರೆ

ಒಂದೇ ಧಾರಾವಾಹಿಯಲ್ಲಿ ನಟಿಸಿ ಹಲವು ವರ್ಷಗಳ ಬಳಿಕವೂ ಸಿಕ್ಕಾಪಟ್ಟೆ ಫೇಮಸ್ ಆದ ನಟಿಯರ ಸಾಲಿನಲ್ಲಿ ಮೊದಲಿಗೆ ನಿಲ್ಲುವ ನಟಿಯೇ ದೀಪಿಕಾ ದಾಸ್. ನಾಗಿಣಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿ ನಟಿ ದೀಪಿಕಾ ದಾಸ್ ಅವರು ಇಂದಿಗೂ ನಾಗಿಣಿ ಪಾತ್ರದ ಮೂಲಕವೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ 7 ಮತ್ತು 9 ಎರಡರಲ್ಲೂ ಕೂಡ ಭಾಗವಹಿಸಿ ಅಭಿಮಾನಿಗಳ ಬಳಗವನ್ನು ಹೆಚ್ಚಸಿಕೊಂಡಿದ್ದ ನಟಿ ದೀಪಿಕಾ ದಾಸ್ ಅತೀ ಹೆಚ್ಚು ಟ್ರಾವೆಲ್ ಮಾಡಲು ಹೊಸ ಹೊಸ ಜಾಗಗಳಿಗೆ ಭೇಟಿ ನೀಡಲು ಬಯಸುತ್ತಾರೆ.

ನಾಗಿಣಿ ಅವತಾರ ತಂದುಕೊಟ್ಟ ಖ್ಯಾತಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಮೂಲಕ ಕಿರುತೆರೆ ಪಯಣವನ್ನು ಆರಂಭಿಸಿದ ದೀಪಿಕಾ ದಾಸ್ ಅವರಿಗೆ ಒಳ್ಳೆಯ ಖ್ಯಾತಿಯನ್ನು ತಂದು ಕೊಟ್ಟಿತು. ಈ ಧಾರಾವಾಹಿಯಲ್ಲಿ ಅಮೃತಾ ಹಾಗೂ ನಾಗಿಣಿ ಪಾತ್ರದಲ್ಲಿ ನಟಿಸಿದ್ದರು. ಇದರಲ್ಲಿ ದೀಪಿಕಾ ಅವರ ಜೋಡಿ ಅರ್ಜುನ್ ಪಾತ್ರದಲ್ಲಿ ನಟ ದೀಕ್ಷಿತ್ ಅವರು ಬಣ್ಣ ಹಚ್ಚಿದ್ದರು. ಹಿಂದಿಯಲ್ಲಿ ಪ್ರಸಾರವಾಗಿದ್ದ ನಾಗಿಣಿ ಧಾರಾವಾಹಿ ರಿಮೇಕ್ ಇದಾಗಿತ್ತು. ರಿಮೇಕ್ ಧಾರಾವಾಹಿಯಾದರೂ ಕೂಡ ಕನ್ನಡದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಕರುನಾಡಿನ ಮನೆ ಮನೆಯಲ್ಲೂ ನಾಗಿಣಿ ಧಾರಾವಾಹಿ ಫೇಮಸ್ ಆಗಿತ್ತು. ದೀಪಿಕಾ ದಾಸ್ ಅಂತೂ ನಾಗಿಣಿ ಅವತಾರದಲ್ಲಿ ಥೇಟ್ ಹಾವಿನ ರೂಪವನ್ನೇ ತಾಳಿದ್ದರು. ಈ ಧಾರಾವಾಹಿ 2016 ಫ್ರಬ್ರವರಿ 8ರಂದು ಪ್ರಸಾರ ಆರಂಬಿಸಿ ಸುಮಾರು 1060ಕ್ಕೂ ಅಧಿಕ ಸಂಣಚಿಕೆಗಳು ಮೂಡಿ ಬಂದಿತ್ತು.

Nagini serial remembered by actress deepika das

ನಾಗಿಣಿ ಧಾರಾವಾಹಿ ನೆನೆದ ದೀಪಿಕಾ

ನಂತರ ಬಂದ ನಾಗಿಣಿ 2 ಧಾರಾವಾಹಿಯಲ್ಲೂ ದೀಪಿಕಾ ಅವರು ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ನಾಗಿಣಿ ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಪಡೆದಿರುವ ದೀಪಿಕಾ ದಾಸ್ ಅವರು ಈ ಧಾರಾವಾಹಿಯನ್ನು ಈಗ ನೆನಪಿಸಿಕೊಂಡಿದ್ದಾರೆ. ನಾಗಿಣಿ ಧಾರಾವಾಹಿ ಆರಂಭವಾಗಿ ಇಂದಿಗೆ 8 ವರ್ಷವಾಗಿದ್ದು, ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ನಾಗಿಣಿ 3 ಮಾಡಿ ಅದರಲ್ಲಿ ನೀವು ಮತ್ತೆ ನಮ್ರತಾ ಇಬ್ಬರೂ ಲೀಡ್ ರೋಲ್ ನಲ್ಲಿ ನಟಿಸಿ ಎಂದು ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ.

Nagini serial remembered by actress deepika das

ದೀಪಿಕಾ ದಾಸ್ ಇತರೆ ಪ್ರಾಜೆಕ್ಟ್ ಗಳು

ದೀಪಿಕಾ ದಾಸ್ ಅವರು 2014 ರಲ್ಲಿ ತೆರೆಕಂಡ ಸ್ಯಾಮುವೆಲ್ ಟೋನಿ ನಿರ್ದೇಶನದ ದೂದ್ ಸಾಗರ್ ಚಿತ್ರದಿಂದ ಸಿನಿಪಯಣ ಆರಂಭಿಸಿದ ದೀಪಿಕಾ ದಾಸ್ ಅವರು ತೆಲುಗಿನ ಓ ಮನಸೇ ಚಿತ್ರದಲ್ಲಿ ನಟಿಸಿದ್ದರು. 2017 ರಲ್ಲಿ ತೆರೆಕಂಡ ಡ್ರೀಮ್ ಗರ್ಲ್ ಚಿತ್ರದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡರು. ಇನ್ನು ಪಾಯಲ್ ಚಿತ್ರದಲ್ಲಿ ನಟಿಸಿರುವ ಅವರು, ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಭಾಗಿಯಾಗಿದ್ದ ದೀಪಿಕಾ ದಾಸ್, ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ. ಯಶ್ ಅವರ ಚಿಕ್ಕಮ್ಮನ ಮಗಳು ದೀಪಿಕಾ ದಾಸ್.

Nagini serial remembered by actress deepika das

ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ನಟಿ

ದೀಪಿಕಾ ದಾಸ್ ಅವರು ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿ ಇರುತ್ತಾರೆ. ತಮ್ಮ ಅಭಿಮಾನಿಗಳ ಜೊತೆಗೆ ಯಾವಾಗಲೂ ಒಂದು ಒಡನಾಟವನ್ನ ಇಟ್ಟುಕೊಳ್ಳುತ್ತಿರುತ್ತಾರೆ. ಅದೇ ರೀತಿ ಅವರು ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಟ್ರೆಡಿಷನಲ್ ಹಾಗೂ ಮಾಡ್ರನ್ ಲುಕ್ ಎರಡರಲ್ಲೂ ಸಖತ್ ಆಗಿ ಕಾಣುತ್ತಿರುತ್ತಾರೆ. ದೀಪಿಕಾ ಅವರಿಗೆ ಟ್ರಾವೆಲ್ ಮಾಡುವುದೆಂದರೆ ಬಹಳ ಇಷ್ಟವಂತೆ. ಸದ್ಯ ದುಬೈ, ಲಂಡನ್, ಸ್ಕಾಟ್ ಲ್ಯಾಂಡ್, ಆಫ್ರಿಕಾ, ಹೀಗೆ ಸಾಕಷ್ಟು ಕಡೆಗಳಿಗೆ ಭೇಟಿ ನೀಡಿದ್ದಾರೆ. ಟ್ರಕ್ಕಿಂಗ್ ಕೂಡ ಮಾಡುತ್ತಾ ದೀಪಿಕಾ ದಾಸ್ ಅವರು ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Actress deepika das remembers her nagini serial and celebrates anniversary of serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X