Couple Kitchen: ಮನೆಯಲ್ಲಿ ಅಡುಗೆ ಮಾಡೋದೇ ನಿನಾದ್.. ಹೇಗಿದೆ 'ನಾಗಿಣಿ 2' ನಿನಾದ್ ಮ್ಯಾರೇಜ್ ಲೈಫ್!

By ಎಸ್ ಸುಮಂತ್

'ನಾಗಿಣಿ 2' ಧಾರಾವಾಹಿ ಸದ್ಯ ಸ್ಟಾಪ್ ಆಗಿದೆ. ಆದರೆ, ಆ ಧಾರಾವಾಹಿಯ ಶಿವಾನಿ ಹಾಗೂ ತ್ರಿಶೂಲ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದರು. ಅವರಿಬ್ಬರ ಹೆಸರಲ್ಲಿ ಫ್ಯಾನ್ ಪೇಜ್‌ಗಳೇ ಸೃಷ್ಟಿಯಾಗಿ ಬಿಟ್ಟಿವೆ. ರಿಯಲ್ ಲೈಫ್‌ನಲ್ಲೂ ನೀವಿಬ್ಬರೇ ಒಂದಾಗಿ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆ ಇಬ್ಬರ ಫೋಟೋಗಳಿಗೆ ರೊಮ್ಯಾಂಟಿಕ್ ಸಾಂಗ್ ಹಾಕಿ ಎಡಿಟ್ ಮಾಡ್ತಾ ಇದ್ರು. ಆದರೆ, ರಿಯಲ್ ಲೈಫ್‌ನಲ್ಲಿ ನಿನಾದ್ ರಮ್ಯಾರನ್ನ ಮದುವೆಯಾಗಿ ಬಿಟ್ಟರು.

ನಿನಾದ್ ಹಾಗೂ ನಮ್ರತಾ ಗೌಡ ಧಾರಾವಾಹಿಯಲ್ಲಿ ಗಂಡ ಹೆಂಡತಿಯಾದರೆ ರಿಯಲ್ ಲೈಫ್‌ನಲ್ಲಿ ಬೆಸ್ಟ್ ಫ್ರೆಂಡ್ಸ್. ಇಬ್ಬರೂ ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಬ್ಬರ ಬಾಂಧವ್ಯದ ಫೋಟೋಗಳು ಕಾಣಿಸುತ್ತಿರುತ್ತವೆ. ಸದ್ಯ ನಿನಾದ್ ಮದುವೆಯಾಗಿದೆ. ಅದು ಲವ್ ಮ್ಯಾರೇಜ್ ಅಂತ ಕೂಡ ಹೇಳಲಾಗುತ್ತಿತ್ತು. ಈ ಬಗ್ಗೆ ನಿನಾದ್ ಕ್ಲಾರಿಟಿ ನೀಡಿದ್ದಾರೆ.

Nagini2 actor Ninaad Harithsa and his wife Ramya in Reality show Couples Kitchen on July 30th

ನಿನಾದ್ ಕೈರುಚಿ ಇಷ್ಟಪಡುವ ರಮ್ಯಾ

ಜೀ ಕನ್ನಡದಲ್ಲಿ ವೀಕೆಂಡ್‌ಗೆ ಅಂತ ಒಂದು ಶೋ ನಡೆಸಿ ಕೊಡಲಾಗುತ್ತಿದೆ. ಅದುವೇ 'ಕಪಲ್ಸ್ ಕಿಚನ್'. ಮನರಂಜನೆಯ ಜೊತೆಗೆ ಗಂಡ ಹೆಂಡತಿಯ ಬಾಂಡಿಂಗ್ ಕೂಡ ಈ ಶೋ ಮೂಲಕ ಅನಾವರಣವಾಗುತ್ತದೆ. ಈ ವಾರ ನಿನಾದ್ ಹಾಗೂ ರಮ್ಯಾ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಮನೆಯಲ್ಲಿ ಅಡುಗೆ ಮಾಡೋದು ಯಾರು ಎಂಬ ಪ್ರಶ್ನೆಗೆ ನಿನಾದ್ ಉತ್ತರಿಸಿದ್ದಾರೆ. "ಮನೆಯಲ್ಲಿ ಹೆಚ್ಚು ನಿನಾದ್ ಕುಕ್ ಮಾಡ್ತಾರೆ. ಅದು ನಂಗೆ ಖುಷಿ ಕೂಡ" ಅಂತ ರಮ್ಯಾ ಹೇಳಿದ್ರೆ, "ಇಲ್ಲ ಅವ್ಳು ಮಾಡಲ್ಲ ಅಂತ ಅಲ್ಲ, ಅನ್ನ ಸಾರು, ಅನ್ನ ಉಳಿ ತುಂಬಾ ಚೆನ್ನಾಗಿ ಮಾಡ್ತಾಳೆ" ಎಂದು ಹೆಂಡತಿಗೆ ಸಪೋರ್ಟ್ ಮಾಡಿದ್ದಾರೆ.

ಮ್ಯಾರೇಜ್ ಬಗ್ಗೆ ಕಪಲ್ ಹೇಳಿದ್ದೇನು..?

ನಿನಾದ್ ಮತ್ತು ರಮ್ಯಾ ಲವ್ ಮ್ಯಾರೇಜ್ ಅಂತಾನೆ ಎಲ್ಲರೂ ಹೇಳುತ್ತಿದ್ದಾರೆ. ಈ ಶೋನಲ್ಲಿ ಈ ಬಗ್ಗೆ ನಿನಾದ್ ಮಾತನಾಡಿದ್ದಾರೆ. "ನೋಡಿದ ಕೂಡಲೇ ಇಷ್ಟಪಟ್ಟು. ಐ ಲವ್ಯೂ ಅಂತೆಲ್ಲಾ ಆರಂಭದಲ್ಲಿ ಇರಲಿಲ್ಲ. ಆರಂಭದಿಂದಾನೂ ಇಬ್ಬರು ಫ್ರೆಂಡ್ಸ್ ಆಗಿದ್ವಿ. ಈಗಲೂ ಒಳ್ಳೆ ಫ್ರೆಂಡ್ಸ್ ಆಗಿದ್ದೀವಿ. ಈಗಂತೂ ಬೆಸ್ಟ್ ಫ್ರೆಂಡ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದೀನಿ" ಎಂದಿದ್ದಾರೆ.

ನಿನಾದ್‌ಗೆ ನೆನಪಿಲ್ಲದ್ದನ್ನು ರೇಗಿಸಿದ ರಮ್ಯಾ

"ಇನ್ಮುಂದೆ ನಮ್ಮ ಜೀವನವನ್ನು ಒಟ್ಟಾಗಿ, ಇನ್ನು ಚೆನ್ನಾಗಿ‌ ಕಳೆಯೋಣಾ ಅಂತ ಹೇಳಿ 6 ತಿಂಗಳು ಆದ್ಮೇಲೆ, ಚಪಾತಿ, ಕಾಜು ಮಸಾಲ ಗೋಡಂಬಿ ಹಾಕಿ ಮಾಡಿಕೊಟ್ಟಿದ್ದೆ" ಎಂದು ನಿನಾದ್ ಹೇಳಿದ್ದಾರೆ. ಆದರೆ, ಅದೇ ಸಮಯಕ್ಕೆ ಅಂದು ಮಾಡಿದ್ದ ಸ್ವೀಟ್ ಬಗ್ಗೆ ಕೇಳಿದ್ರೆ ನಿನಾದ್ ಹೇಳಿದ್ದು, "ಜಾಮೂನು, ಶಾವಿಗೆ ಪಾಯಸ" ಅಂತೆಲ್ಲಾ ಹೇಳಿ ಹೆಂಡತಿ ಬಳಿ ತಗಲಾಕಿಕೊಂಡಿದ್ದಾರೆ.

Nagini2 actor Ninaad Harithsa and his wife Ramya in Reality show Couples Kitchen on July 30th

ಜೀ ಪ್ರಶ್ನೆಗೆ ನಕ್ಕು ನಕ್ಕು ಸುಸ್ತಾದ ನಿನಾದ್

"ನಮಗೆ ಆ ಶಾಸ್ತ್ರ ಬೇಡವಾಗಿತ್ತು. ಆದರೂ ಆ ಶಾಸ್ತ್ರ ಮಾಡಿದ್ವಿ. ಎಲ್ಲರಿಗೂ ಗೊತ್ತಿರುವ ಹಾಗೇ ಉಪ್ಪಿಟ್ಟು ಮಾಡಿದ್ವಿ. ಕಾಫಿ ಮಾಡಿದ್ವಿ" ಎಂದು ರಮ್ಯಾ ಹೇಳುತ್ತಿರುವಾಗ ನಿನಾದ್ ಮಧ್ಯ ಪ್ರವೇಶಿಸಿ, "ಹ.. ಉಪ್ಪಿಟ್ಟು ಎಲ್ಲಾ ಚೆನ್ನಾಗಿತ್ತು. ಅದು ನಮ್ಮ ಅತ್ತೆ ಅಂದ್ರೆ ಇವರ ಅಮ್ಮ ಮಾಡಿದ್ದು" ಎಂದು ಕಾಲೆಳೆದಿದ್ದಾರೆ.

More from Filmibeat

English summary
Nagini 2 actor Ninaad Harithsa and wife Ramya in Couple's Kitchen Reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X