ಕಿರಣ್ ರಾಜ್ ರನ್ನು ಕಿನ್ನರಿ ಧಾರಾವಾಹಿಯಿಂದ ಕೈ ಬಿಟ್ಟ ನಿರ್ಮಾಪಕರು
Recommended Video

'ಕಿನ್ನರಿ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನರ ಮನ್ನಣೆಯನ್ನು ಪಡೆದುಕೊಂಡಿರುವ ಧಾರಾವಾಹಿ. ಕಾಲಕ್ಕೆ ತಕ್ಕಂತೆ ಧಾರಾವಾಹಿಯ ಕಲಾವಿದರನ್ನು ಹಾಗೂ ಕಥೆಯನ್ನು ಅಪ್ಡೇಟ್ ಮಾಡಿಕೊಂಡು ಬರುತ್ತಿರುವ 'ಕಿನ್ನರಿ' ಸೀರಿಯಲ್ ನಾಯಕ ನಕುಲ್ ಪಾತ್ರಧಾರಿ ಆಗಿರುವ ಕಿರಣ್ ರಾಜ್‌ಗೆ ಕಿನ್ನರಿ ತಂಡ ಗೇಟ್ ಪಾಸ್ ಕೊಟ್ಟಿದೆಯಂತೆ.
'ಕಿನ್ನರಿ' ಧಾರಾವಾಹಿ ಎರಡು ವಿಚಾರವಾಗಿ ಈಗಾಗಲೇ ಸುದ್ದಿ ಆಗಿದೆ. ಉತ್ತಮ ಕಥೆ ಹಾಗೂ ಕಲಾವಿದರ ಅಭಿನಯವನ್ನು ಜನರ ಮೆಚ್ಚಿಕೊಂಡಿದ್ದರೆ ಮತ್ತೊಂದು ಕಡೆ ವಿವಾದವಾಗಿಯೂ ಸುದ್ದಿ ಆಗಿತ್ತು. ಇದೇ ಕಾರಣದಿಂದ ಚಿತ್ರದ ನಾಯಕನ ಪಾತ್ರಧಾರಿ ಕಿರಣ್ ರಾಜ್ ಅವರನ್ನು ಎತ್ತಂಗಡಿ ಮಾಡಿದ್ದಾರೆ ನಿರ್ಮಾಪಕರು ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಧಾರಾವಾಹಿ ನಾಯಕ ಕಿರಣ್ ರಾಜ್ ರನ್ನು ಸೀರಿಯಲ್ ನಿಂದ ಕೈ ಬಿಡಲು ಕಾರಣವೇನು? ಸಣ್ಣದೊಂದು ವಿವಾದವೇ ನಕುಲ್ ಸೀರಿಯಲ್ ಅಭಿನಯಕ್ಕೆ ಕುತ್ತು ಬತ್ತಾ? ನಕುಲ್ ವಿಚಾರವಾಗಿ ಆದ ವಿವಾದವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಸೀರಿಯಲ್ ನಿಂದ ನಕುಲ್ ಗೆ ಗೇಟ್ ಪಾಸ್
ಕಿರುತೆರೆ ನಟ ಕಿರಣ್ ರಾಜ್‌ಗೆ 'ಕಿನ್ನರಿ' ಧಾರಾವಾಹಿಯಿಂದ ಗೇಟ್ ಪಾಸ್ ನೀಡಲಾಗಿದೆ. 'ಕಿನ್ನರಿ' ಧಾರಾವಾಹಿಯಲ್ಲಿ ನಕುಲ್ ಪಾತ್ರವನ್ನು ನಿರ್ವಹಿಸಿದ್ದ ಕಿರಣ್ ರಾಜ್ ಇನ್ನು ಕೆಲವು ದಿನಗಳ ನಂತರ ಕಿನ್ನರಿ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ವಿವಾದ ಮಾಡಿಕೊಂಡಿದ್ದ ಕಿರಣ್ ರಾಜ್
ಕಿರಣ್ ರಾಜ್ ಮದುವೆಯಾಗುವುದಾಗಿ ನಂಬಿಸಿ ಮುಂಬಯಿ ಮೂಲದ ರೂಪದರ್ಶಿಯ ಜತೆ ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ಹಲ್ಲೆ ನಡೆಸಿದ ಆರೋಪದ ಮೇಲೆ ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಿಂದ ಬಿಡುಗಡೆಯಾದ ನಂತರ 'ಕಿನ್ನರಿ' ಧಾರಾವಾಹಿಯಲ್ಲಿ ಮತ್ತೆ ಕಿರಣ್ ತೊಡಗಿಕೊಂಡಿದ್ದರು.

ಡೇಟ್ಸ್ ಸಮಸ್ಯೆಯಿಂದ ಕಿನ್ನರಿ ಬಿಟ್ಟ ನಾಯಕ
ಮೂಲಗಳ ಪ್ರಕಾರ ವಿವಾದದ ನಂತರ ನಕುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಬೇಡ ಎನ್ನುವ ನಿರ್ಧಾರವನ್ನು ಕಿನ್ನರಿ ತಂಡ ತೆಗೆದುಕೊಂಡಿದೆಯಂತೆ. ಆದರೆ ಮತ್ತೊಂದು ಕಡೆ ಕಿರಣ್ ರಾಜ್ ಮುಂಬೈನ ಟಿವಿ ಶೂಟಿಂಗ್ ನಲ್ಲೂ ತೊಡಗಿಸಿಕೊಂಡಿದ್ದು ಇದರಿಂದ ಇಲ್ಲಿಯ ಧಾರಾವಾಹಿಗೆ ಸಮಸ್ಯೆ ಆಗುತ್ತಿದೆ ಆ ಕಾರಣದಿಂದ ಅವರನ್ನು ತಂಡದಿಂದ ಕೈ ಬಿಡಲಾಗಿದೆ ಎನ್ನವ ಮಾತುಗಳು ಕೇಳಿ ಬರುತ್ತಿದೆ.

ಸಿನಿಮಾ-ಕಿರುತೆರೆ ನಟ ಕಿರಣ್
ಕಿನ್ನರಿ ಧಾರಾವಾಹಿಯಲ್ಲಿ ಮಾತ್ರವಲ್ಲದೆ ಕಿರಣ್ ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. 'ವಾಚ್ ಮ್ಯಾನ್', 'ಅಸತೋಮ ಸದ್ಗಮಯ' ಇನ್ನು ಅನೇಕ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.


Click it and Unblock the Notifications











