Sridisha: ರಿಯಾ ಎಷ್ಟು ಹಾರ್ಡ್ ವರ್ಕರ್ ಗೊತ್ತಾ..? ಪ್ರತಿಬಾರಿ ಶೂಟಿಂಗ್‌ಗೆ ಮೈಸೂರಿಂದ ಬೆಂಗಳೂರಿಗೆ ಬರ್ತಾಳೆ !

By ಎಸ್ ಸುಮಂತ್

'ನಮ್ಮ ಲಚ್ಚಿ' ಧಾರಾವಾಹಿಯಲ್ಲಿರುವ ರಿಯಾಳನ್ನು ನೋಡ್ತಾ ಇದ್ರೆ ಎಲ್ಲರಿಗೂ ಒಂದು ಕ್ಷಣ ಕೋಪವೇ ಬರುತ್ತದೆ. ಯಾಕೆ ರಿಯಾ ಈ ರೀತಿ ಆಡ್ತಾಳೆ. ಪಾಪ ಲಚ್ಚಿ‌‌ ಮೇಲೆ ಯಾವಾಗಲೂ ಕೆಂಡಕಾರುತ್ತಾಳಲ್ಲ ಅಂತಾನೇ ಬೇಸರ ಮಾಡಿಕೊಳ್ಳುತ್ತಾಳೆ. ಲಚ್ಚಿಯನ್ನು ಯಾವಾಗಲೂ ಮನೆಯಿಂದ ಹೊರಗೆ ಹಾಕುವುದಕ್ಕೆ ಕಾಯುತ್ತಿರುತ್ತಾಳೆ. ಮನೆಯಲ್ಲಿ ಲಚ್ಚಿ ಇರ ಎಲ್ಲರ ಪ್ರೀತಿ ಗಳಿಸಿಬಿಡುತ್ತಾಳೆ ಎಂಬ ಭಯ ರಿಯಾಳದ್ದು.

ಆದರೆ, ಎರಡು ಮಕ್ಕಳು ಆಫ್ ದಿ ಕ್ಯಾಮರ ಆ ಥರ ಇಲ್ಲ. ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಇಬ್ಬರ ಸೋಷಿಯಲ್ ಮೀಡಿಯಾ ನೋಡಿದ್ರೇನೆ ಗೊತ್ತಾಗುತ್ತೆ. ಶೂಟಿಂಗ್ ಬಿಡುವಿನ ವೇಳೆ ಇಬ್ಬರು ರೀಲ್ಸ್ ಮಾಡ್ಕೊಂಡು, ಕಿತ್ತಾಡ್ಕೊಂಡು ಕೂತ್ಕೊಂಡಿರ್ತಾರೆ.

Namma Lacchi actress baby Shridisha urf Riya Coming from Mysore to Bengaluru for a shoot

ಲಚ್ಚಿಗೆ ದೆವ್ವವಾಗಿ ಕಾಡುವ ರಿಯಾ

ಮೊದಲೇ ತಿಳಿದಿರುವಂತೆ ಲಚ್ಚಿ ಕಂಡರೆ ರಿಯಾಗೆ ಆಗಲ್ಲ. ಅದಕ್ಕೆ ಏನೇನೋ ಪ್ಲ್ಯಾನ್ ಮಾಡಿದ್ಲು. ಸಾಯುವುದಕ್ಕೆ ನೋಡಿದ್ಲು, ಮನೆ ಬಿಟ್ಟು ಓಡಿಸಿದ್ಲು. ಯಾವುದು ವರ್ಕೌಟ್ ಆಗ್ಲಿಲ್ಲ. ಮತ್ತೆ ಲಚ್ಚಿ, ಸಂಗಮ್ ಮನೆಗೆ ವಾಪಾಸ್ ಬಂದಳು. ಈಗ ದೆವ್ವದ ನಾಟಕವಾಡುವುದಕ್ಕೆ ಶುರು ಮಾಡಿದ್ದಾಳೆ. ಜೆಜೆ ಜೊತೆ ಸೇರಿ, ದೆವ್ವದ ವೇಷ ಹಾಕಿ ಹೆದರಿಸುವ ಪ್ರಯತ್ನ ಮಾಡ್ತಿದ್ದಾಳೆ. ಆದರೆ, ಇದು ಲಚ್ಚಿಗೆ ಗೊತ್ತಾಗಿದೆ. ಜೆಜೆ ಮುಂದೆ ತನ್ನ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳುತ್ತಿದ್ದಾಳೆ.

ಕ್ಯಾಮರಾ ಹಿಂದೆ ಹೇಗಿರ್ತಾರೆ..?

ಲಚ್ಚಿ ಅಲಿಯಾಸ್ ಸಾಂಘವಿ, ರಿಯಾ ಅಲಿಯಾ ಶ್ರೀದಿಶಾ ಇಬ್ಬರು ಕ್ಯಾಮರಾ ಹಿಂದೆ ಬೆಸ್ಟ್ ಫ್ರೆಂಡ್ಸ್. ಇಬ್ಬರು ಒಂದೇ ವಯಸ್ಸಿನವರಾಗಿರುವ ಕಾರಣ, ಬಹಳ ಬೇಗ ಫ್ರೆಂಡ್ಸ್ ಆಗಿದ್ದಾರೆ. ಧಾರಾವಾಹಿಯಲ್ಲಿ ರಿಯಾ ಕಂಪ್ಲೀಟ್ ನೆಗೆಟಿವ್ ರೋಲ್‌ ಪ್ಲೇ ಮಾಡ್ತಿರುವ ಕಾರಣ, ಡೈಲಾಗ್‌ಗಳು ಹಾಗೇ ಇರುತ್ತವೆ. ಆದರೆ, ಮಕ್ಕಳು ಅಲ್ವಾ ಹೆಚ್ಚು ರೀಟೇಕ್ ತೆಗೆದುಕೊಳ್ಳಲ್ಲ. ಹೇಳಬೇಕಾದ್ದನ್ನು ಅಷ್ಟೇ ಗತ್ತು, ಗಾಂಭೀರ್ಯದಿಂದ ಹೇಳಿ ಮುಗಿಸಿ ಬಿಡುತ್ತಾಳೆ. ಕಟ್ ಕಟ್ ಎಂದಾಕ್ಷಣ ರಿಯಾ ಮತ್ತೆ ಲಚ್ಚಿ ಬಿದ್ದು ಬಿದ್ದು ನಗಾಡ್ತಾರಂತೆ.

ಹಾರ್ಡ್ ವರ್ಕರ್ ಅಂದ್ರೆ ರಿಯಾ

ರಿಯಾ ಇನ್ನು ಚಿಕ್ಕ ಹುಡುಗಿ. ನಾಲ್ಕನೆ ಕ್ಲಾಸ್ ಅಷ್ಟೇ.‌ಆದ್ರೆ ಕೆಲಸದ ಮೇಲೆ ಅದೆಷ್ಟು ಶ್ರದ್ಧೆ ಅಂತೀರಾ. ನಟನೆ ಮಾಡಲು ಬಂದಿರುವ ಶ್ರೀದಿಶಾ, ಬೆಳಗ್ಗೆ ಏಳೋದು 4 ಗಂಟೆಗೆ. ಶೂಟಿಂಗ್ ಇದ್ದಾಗ ಬೇಗನೇ ಎದ್ದು, ಸ್ನಾನ ಎಲ್ಲಾ ಮುಗಿಸಿ, ಸ್ಪಾಟ್ ಗೆ ಬರುತ್ತಾಳೆ‌. ಹೆಚ್ಚು ಹಾರ್ಡ್ ವರ್ಕರ್ ಕೂಡ. ತಿಂಗಳ 24 ದಿನ ಶೂಟಿಂಗ್ ಇದ್ದರು, ತನ್ನ ಓದು, ಭರತನಾಟ್ಯ ಹೀಗೆ ಹಲವು ಕಾರ್ಯಗಳನ್ನು ನಿಲ್ಲಿಸಿಲ್ಲ.

Namma Lacchi actress baby Shridisha urf Riya Coming from Mysore to Bengaluru for a shoot

ಪ್ರತಿಬಾರಿ ಮೈಸೂರಿನಿಂದ ಜರ್ನಿ

ಬೆಂಗಳೂರಿನಲ್ಲಿ ಓಡಾಡೋರಿಗೇನೆ ಉಫ್ ಸುಸ್ತಪ್ಪ ಅಂತ ಕೂತ್ಕೋತಾರೆ. ಆದ್ರೆ ಶ್ರೀದಿಶಾ ಮೂಲತಃ ಮೈಸೂರಿನವಳು‌. 'ನಮ್ಮ ಲಚ್ಚಿ' ಶೂಟಿಂಗ್ ಇದ್ದಾಗ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಾಳೆ‌. ಬೆಂಗಳೂರಿನಿಂದ ಶೂಟಿಂಗ್ ಮುಗಸಿಕೊಂಡು ವಾಪಾಸ್ ಹೋಗುತ್ತಾಳೆ‌. ಎಲ್ಲಿಯೂ ಆ ಸುಸ್ತನ್ನ ಹೊರ ಹಾಕಿಲ್ಲ. ಸುಸ್ತು ಅಂತ ಓದಿನ ವಿಚಾರಕ್ಕಾಗಲೀ, ನಟನೆ ವಿಚಾರಕ್ಕೆ ಆಗಲಿ ಮಧ್ಯೆ ತಂದಿಲ್ಲ. ನಮ್ಮ ಲಚ್ಚಿ ಟಿಆರ್‌ಪಿಯಲ್ಲೂ ಮೊದಲ ಸ್ಥಾ‌ನ ಪಡೆದಿರುವ ಕಾರಣ, ಸದ್ಯ ತಿಂಗಳಲ್ಲಿ 24 ಗಂಟೆ ಶೂಟಿಂಗ್ ನಡೆಯಲಿದೆ. ಆದರೂ ರಿಯಾ ಎಲ್ಲವನ್ನು ಬ್ಯಾಲೆನ್ಸ್ ಮಾಡುತ್ತಿದ್ದಾಳೆ.

More from Filmibeat

English summary
Namma Lacchi actress baby shridisha urf Riya Coming from Mysore to Bengaluru for a shoot. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X