Namma Lacchi: ಸಾರಾ ಅಣ್ಣಯ್ಯ ಜಾಗಕ್ಕೆ ಐಶ್ಚರ್ಯಾ ಸಿಂಧೋಗಿ ಎಂಟ್ರಿ.. ಏನಂತಾರೆ ವೀಕ್ಷಕರು?

By ಎಸ್ ಸುಮಂತ್

ದೀಪಿಕಾಗೆ ಹೇಗಾದರೂ ಮಾಡಿ ಮಗಳನ್ನು ಸ್ಟಾರ್ ಸಿಂಗರ್ ಮಾಡಲೇಬೇಕೆಂದು ಹಠ ತೊಟ್ಟಿದ್ದಾಳೆ. ಯಾಕಂದ್ರೆ ಸಂಗಮ್ ಈಗಾಗಲೇ ದೊಡ್ಡ ಸ್ಟಾರ್ ಸಿಂಗರ್ ಆಗಿ ಹೆಸರು ಮಾಡಿದ್ದಾನೆ.‌ ಆದ್ರೆ‌ ಮಗಳಿಗೆ ಒಂದು ಚೂರು ಅಪ್ಪನ ಗುಣ ಬಂದಿಲ್ಲ. ಅದಕ್ಕೆ ಸಂಗಮ್‌ಗೂ ರಿಯಾ ಬಗ್ಗೆ ಸ್ವಲ್ಪ ಬೇಸರ ಇದೆ. ಸಾಕಷ್ಟು ಸಲ‌ ಕಲಿಸಿಕೊಡುವ ಪ್ರಯತ್ನ ಮಾಡಿದ್ದ. ಆದರೆ ರಿಯಾ ಆಸಕ್ತಿ ತೋರುತ್ತಿಲ್ಲ.

ಈಗ ಸಂಗಮ್‌ನ ಸ್ವಂತ ಮಗಳು ಲಚ್ಚಿಯದ್ದು ಕಂಚಿನ ಕಂಠ ಎಂದು ಗೊತ್ತಾಗಿದೆ. ತಂದೆಗಷ್ಟೇ ಗೊತ್ತಾಗಬೇಕಿದೆ. ಆದರೆ, ಲಚ್ಚಿಯ ಟ್ಯಾಲೆಂಟ್ ದೀಪಿಕಾಗೆ ಗೊತ್ತಾದ ಮೇಲೆ ಈಗ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ. ಈಗ ರಿಯಾಳನ್ನು ಫೇಮಸ್ ಮಾಡುವುದಕ್ಕೆ ಹೋಗಿ ಈಗ ಸಿಕ್ಕಿ ಬೀಳುವ ಸಾಧ್ಯತೆ ಇದೆ.

Namma Lacchi Aishwarya Sindogi replaced Sara Annaiah for Deepika Role

ಅಮ್ಮನ ಚಿತ್ರ ಬರೆದ ಲಚ್ಚಿ

ಲಚ್ಚಿಗೆ ಓದುವುದಕ್ಕೆ ಬರೆಯುವುದಕ್ಕೆ ಬರುವುದಿಲ್ಲ. ಅದನ್ನ ಈಗಾಗಲೇ ಸಂಗಮ್ ಬಳಿ ಹೇಳಿ ಆಗಿದೆ. ಆದರೆ ಸಂಗಮ್ ಅಮ್ಮನ ಮಡಿಲಲ್ಲಿ ಮಲಗಿದ್ದಾಗ ಲಚ್ಚಿ ಅಲ್ಲೇ ಪಕ್ಕದಲ್ಲಿ ಕೂತು ಬರೆಯುತ್ತಾ ಇದ್ದಳು. ಆಗ ನೋಡಿದ ಸಂಗಮ್, ಬರೆಯುವುದಕ್ಕೇ ಬರಲ್ಲ ಎಂದ ಲಚ್ಚಿ ಏನು ಬರೆಯುತ್ತಿದ್ದಾನೆ ಅಂತ ನೋಡಿದರೆ, ಅಮ್ಮ ಮತ್ತು ಅವಳ ಚಿತ್ರವನ್ನು ಬಿಡಿಸಿದ್ದ. ಅದು ಲಚ್ಚಿಗೆ ಕಾಡುವ ಚಿತ್ರವದು. ಸಂಗಮ್‌ಗೆ ಆ ಚಿತ್ರವನ್ನು ನೋಡಿ ತುಂಬಾ ಖುಷಿಯಾಗಿದೆ.

ಈ ಕಡೆ ರಿಯಾಳನ್ನು ದೊಡ್ಡ ಸಿಂಗರ್ ಅಂತ ಈಗಾಗಲೇ ಎಲ್ಲಾ ಕಡೆ ಅನೌನ್ಸ್ ಮಾಡಿ ಆಗಿದೆ. ಅದಕ್ಕೆ ತಕ್ಕನಾಗಿ ಲಚ್ಚಿಯ ಧ್ವನಿಯನ್ನು ನೀಡಲಾಗಿದೆ. ಆದ್ರೆ ನಾಳೆ ತುಂಬಾ ಮುಖ್ಯವಾದ ದಿನ. ರಿಯಾ, ದೊಡ್ಡ ಮ್ಯೂಸಿಕ್ ಮಾಲೀಕರ ಮುಂದೆ ಹಾಡಬೇಕಾಗಿದೆ. ಅಲ್ಲಿ ಸಕ್ಸಸ್ ಆದ್ರೆ ರಿಯಾ ದೊಡ್ಡ ಸ್ಟಾರ್ ಸಿಂಗರ್ ಅಂತ ಅನೌನ್ಸ್ ಅಧಿಕೃತವಾಗಿ ಆಗಲಿದೆ. ಅದಕ್ಕೆ ಯಾವುದೇ ವಿಘ್ನ ಬಾರದಿರಲಿ ಅಂತ ದೀಪಿಕಾ ದೇವರಿಗೆ ಪೂಜೆ ಸಲ್ಲಿಸಿದ್ದಾಳೆ. ಇದನ್ನು ನೋಡಿ ಜೀಜೂ ಫುಲ್ ಶಾಕ್ ಆಗಿದ್ದಾಳೆ.

ಐಶ್ವರ್ಯಾ ಶಿಂಧೋಗಿ ಎಂಟ್ರಿ

ಈಗಾಗಲೇ ದೀಪಿಕಾ ಪಾತ್ರಧಾರಿ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆ ಬದಲಾವಣೆ ಇಂದಿನ ಎಪಿಸೋಡಿನಿಂದ ಕಾಣಿಸುತ್ತಿದೆ. ಪಾತ್ರ ಬದಲಾವಣೆಯನ್ನು ಎಲ್ಲಿಯೂ ಡ್ಯಾಮೇಜ್ ಆಗುವಂತೆ ಮಾಡಿಲ್ಲ. ಐಶ್ವರ್ಯಾ ಶಿಂಧೋಗಿ ದೇವರಿಗೆ ಆರತಿ ಬೆಳಗುತ್ತಾ ಇರುವಾಗ, ಅಮ್ಮ ಬಂದು ಮಾತನಾಡಿಸುತ್ತಾರೆ. ಆಗ ತಿರುಗಿದಾಗ ಬದಲಾವಣೆ ಕಾಣುತ್ತದೆ. ಯಾರಿಗೂ ತೀರಾ ಬದಲಾವಣೆ ಅನ್ನಿಸುವುದಿಲ್ಲ. ಆದರೆ ರೆಗ್ಯೂಲರ್ ಆಗಿ ಈ ಧಾರಾವಾಹಿ ನೋಡುವವರಿಗೆ ಆ ಬದಲಾವಣೆ ಎದ್ದು ಕಾಣುತ್ತೆ.

Namma Lacchi Aishwarya Sindogi replaced Sara Annaiah for Deepika Role

ದೀಪಿಕಾ ಪಾತ್ರ ನೆಗೆಟಿವ್ ಪಾತ್ರ. ಸಾರಾ ಅಣ್ಣಯ್ಯ ಈ ಪಾತ್ರವನ್ನು ನಿಭಾಯಿಸುತ್ತಾ ಇದ್ರು. ಈಗ ಆ ಜಾಗಕ್ಕೆ ಐಶ್ವರ್ಯಾ ಶಿಂಧೋಗಿ ಬಂದಿದ್ದಾರೆ. ಇದನ್ನು ನೋಡುಗರು ರಿಸೀವ್ ಮಾಡಿಕೊಳ್ಳುತ್ತಿಲ್ಲ. ಬದಲಾವಣೆಯ ಪ್ರೋಮೋಗೆ ಎಲ್ಲರೂ ಕಮೆಂಟ್ ಹಾಕುತ್ತಿದ್ದಾರೆ. ಅಷ್ಟು ಕಮೆಂಟ್‌ಗಳಲ್ಲಿ ಐಶ್ವರ್ಯಾ ಓಕೆ ಎಂದವರು ಬೆರಳೆಣಿಕೆ ಮಾತ್ರ. ಆದ್ರೂ ಸಾಕಷ್ಟು ಜನರ ಅಭಿಪ್ರಾಯ ಮೊದಲಿದ್ದಂತೆ ಆ ಪಾತ್ರಕ್ಕೆ ಸಾರಾ ಅಣ್ಣಯ್ಯ ಅವರೇ ಬೆಸ್ಟ್ ಎನ್ನುವುದು. ಒಂದು ಪಾತ್ರ ಬದಲಾವಣೆಯಾದಾಗ ಅದನ್ನು ಸ್ವೀಕರಿಸುವುದಕ್ಕೆ ಹಲವರಿಗೆ ಕಷ್ಟ. ಆದರೆ ಕಥೆಯ ಮೇಲೆ ಆ ಬದಲಾವಣೆ ಮರೆಮಾಚುತ್ತಾ ಹೋಗುತ್ತದೆ.

More from Filmibeat

English summary
Star suvarna serial Namma Lacchi Written Update on May 10th episode. Here is the details about Aishwarya shindogi entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X