Namma Lacchi: ಸಾಗರ್‌ಗೆ ಸತ್ಯ ಗೊತ್ತಿಲ್ಲ.. ಗೋಪಾಲ ಮಾತು ಸಂಗಮ್‌ಗೆ ಅರ್ಥ ಆಗ್ತಿಲ್ಲ..ಲಚ್ಚಿ ಜಾಗಕ್ಕೆ ಇನ್ಯಾರೋ ಬಂದ್ರೆ..?

By ಎಸ್ ಸುಮಂತ್

ಲಚ್ಚಿಗೆ ಇರುವ ಕಂಠಕ್ಕೆ ಸಂಗಮ್ ಅಭಿಮಾನಿಯಾಗಿದ್ದಾನೆ. ತನ್ನ ಬಾಲ್ಯದ ಗುಣಗಳೆಲ್ಲಾ ಲಚ್ಚಿಯಲ್ಲಿ ಕಾಣುತ್ತಿದ್ದಾನೆ. ಅವನ ಕಂಠಕ್ಕೆ ಸರಿಸಾಟಿಯೇ ಇಲ್ಲ ಅನ್ನೋದು ಅವನ ನಂಬಿಕೆ. ಇದಿಷ್ಟೇ ಅಲ್ಲ, ದೀಪಿಕಾ ಲಚ್ಚಿಗೆ ಮೋಸ ಮಾಡುತ್ತಿರುವುದನ್ನು ಸಹಿಸುವುದಕ್ಕೆ ಆಗಿಲ್ಲ. ಲಚ್ಚಿಯ ಧ್ವನಿಯನ್ನೇ ತಗೊಂಡು, ಅವಳಿಗೆ ಅನ್ಯಾಯ ಮಾಡುತ್ತಿದ್ದಾರೆ ಅನ್ನೋದು ಸಂಗಮ್‌ಗಿರುವ ಆಕ್ರೋಶ. ಅದಕ್ಕೆ ಲಚ್ಚಿಗೆ ನ್ಯಾಯ ಕೊಡಿಸುವುದಕ್ಕೆ ಹೊರಟಿದ್ದಾನೆ.

ಲಚ್ಚಿ ಎಷ್ಟೇ ಒಳ್ಳೆಯವಳು ಎಂದು ಗೊತ್ತಾದರೂ ರಿಯಾ ಅದನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಯಾವಾಗಲೂ ಲಚ್ಚಿಯಯನ್ನು ಮನೆಯಿಂದ ಹೊರ ಕಳುಹಿಸುವುದಕ್ಕೆ ನೋಡುತ್ತಿದ್ದಾಳೆ. ಬರೀ ಹೊರಗೆ ಕಳುಹಿಸುವುದಷ್ಟೇ ಅಲ್ಲ ಸಾಯಿಸುವುದಕ್ಕೂ ಮುಂದಾಗಿದ್ದಾಳೆ. ಸಾಕಷ್ಟು ಸಲ ಕೊಲೆ ಪ್ರಯತ್ನ ಮಾಡಿ ಫೇಲ್ ಆಗಿದ್ದಳು. ಈಗ ಮತ್ತೆ ಸಾಯಿಸಲು ಹೋಗಿ ಮನೆಯಿಂದ ಹೊರ ಹೋಗುವ ಪರಿಸ್ಥಿತಿ ತಂದುಕೊಂಡಿದ್ದಾಳೆ.

Namma Lacchi Seri Written Update on July 6th episode

ಶಾಂತಾಳ ಪ್ಲ್ಯಾನ್ ಸಕ್ಸಸ್ ಆಗುತ್ತಾ..?

ಶಾಂತಾಗೆ, ಗಿರಿಜಾಳ ಸತ್ಯ ಗೊತ್ತಿತ್ತು. ಹೀಗಾಗಿಯೇ ಬ್ಲಾಕ್ ಮೇಲ್ ಮಾಡಿ ಲಚ್ಚಿಯಿಂದ ಹಣ ಮಾಡಿಕೊಳ್ಳುತ್ತಿದ್ದಳು. ಗಿರಿಜಾ ಸತ್ತ ಮೇಲೆ ಲಚ್ಚಿಯ ಜಾಗಕ್ಕೆ ತನ್ನ ಮಗಳನ್ನು ಸೇರಿಸುವ ಪ್ಲ್ಯಾನ್ ಮಾಡಿದಳು. ಸಂಗಮ್ ಮನೆಗೆ ಸುಗ್ಗಿಯನ್ನು ಕಳುಹಿಸುವುದಕ್ಕೆ ಯೋಚನೆ ರೂಪಿಸಿದಳು. ಅದಕ್ಕಾಗಿಯೇ ಸುಗ್ಗಿಯನ್ನು ಸಿದ್ದ ಮಾಡಿದ್ದಾಳೆ.

ಸಾಗರ್ ಗೊತ್ತಿದೆ ಅರ್ಧ ಸತ್ಯ

ಶಾಂತಾ ನೇರವಾಗಿ ಸಂಗಮ್‌ನನ್ನು ಕಾಂಟ್ಯಾಕ್ಟ್ ಮಾಡಿಲ್ಲ. ಅದರ ಬದಲಿಗೆ ಸಾಗರ್‌ನನ್ನು ಸಂಪರ್ಕಿಸಿದ್ದಾಳೆ. ಸಾಗರ್‌ಗೆ ಎಲ್ಲಾ ಸತ್ಯವನ್ನು ಹೇಳಿದ್ದಾಳೆ. ಲಚ್ಚಿಯೇ ಮಗಳು ಎಂದು ಹೇಳಿಲ್ಲ. ಬದಲಿಗೆ ಸುಗ್ಗಿ ಮಗಳು ಎಂದಿದ್ದಾಳೆ. ಶಾಂತಾ ಹೇಳುವ ಎಲ್ಲಾ ಮಾತನ್ನು ನಂಬಿ, ಸಂಗಮ್ ಮತ್ತು ಗಿರಿಜಾಳ ಮಗಳನ್ನು ಮನೆಗೆ ಕರೆತರುವುದಕ್ಕೆ ನಿರ್ಧರಿಸಿದ್ದ. ಅದಕ್ಕೆ ಶಾಂತಾ ದಿನೇ ದಿನೇ ಡಿಸ್ಟರ್ಬ್ ಮಾಡ್ತಾ ಇದ್ದಾಳೆ.

ಗೋಪಾಲ್‌ಗೆ ಸಿಕ್ತಿಲ್ಲ ಅವಕಾಶ

ಶಾಂತಾಳಿಂದ ಏನಾದರೂ ಯಡವಟ್ಟು ಆಗುತ್ತೆ ಅನ್ನೋದು ಗೋಪಾಲನಿಗೆ ತಿಳಿದಿದೆ. ಹೀಗಾಗಿ ಲಚ್ಚಿಯ ವಿಚಾರವನ್ನು ಸಂಗಮ್‌ಗೆ ತಿಳಿಸಲೇಬೇಕು ಎಂದು ಮತ್ತೆ ಮನೆಯ ಬಳಿ ಬಂದಿದ್ದಾನೆ. ಆದರೆ, ಗೋಪಾಲನಿಗೆ ಮತ್ತೆ ಆ ಸೆಕ್ಯೂರಿಟಿಯ ಕಾಟವೇ ಶುರುವಾಗಿದೆ. ಒಳಗೆ ಬಿಡುವ ನಾಟಕವಾಡಿ, ಸಂಗಮ್ ಇಲ್ಲ ಅನ್ನೋದನ್ನು ನಂಬಿಸಿದ್ದಾನೆ. ಆಗ ಸಂಗಮ್‌ಗೆ ಗೋಪಾಲ ಪತ್ರ ಬರೆದಿದ್ದಾನೆ. ಲಚ್ಚಿಯ ಸತ್ಯ ಆ ಪತ್ರದಲ್ಲಿ ಅಡಗಿದೆ. ಆದರೆ, ಆ ಪತ್ರ ಸಂಗಮ್ ಕೈಗೆ ಸಿಕ್ಕಿದರೆ ಮಾತ್ರ ಲಚ್ಚಿಯ ಭವಿಷ್ಯ ಉಳಿಯುತ್ತೆ.

Namma Lacchi Seri Written Update on July 6th episode

ಲಚ್ಚಿಗೆ ಅಪ್ಪನ ಪ್ರೀತಿ ಸಿಗಲ್ವಾ..?

ಸಾಗರ್‌ಗೆ ಶಾಂತಾ ಹೇಳಿದ್ದೆ ಸತ್ಯ ಎಂದುಕೊಂಡಿದ್ದಾನೆ. ಹೀಗಾಗಿ ಸಂಗಮ್ ಮಗಳಿಗೆ ನ್ಯಾಯ ಕೊಡಿಸಬೇಕೆಂದುಕೊಂಡು ದತ್ತು ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದಾರೆ. ಸಾಗರ್ ಹೆಂಡತಿಗೆ ಲಚ್ವಿಯನ್ನು ದತ್ತು ಪಡೆಯುವ ಆಸೆ. ಆದರೆ ಸಾಗರ್‌ಗೆ, ಸಂಗಮ್ ಮತ್ತು ಗಿರಿಜಾಳ ಮಗಳನ್ನು ದತ್ತು ಪಡೆಯುವ ಆಸೆಯಾಗಿದೆ. ಹೀಗಾಗಿ ಮಾನಸ ಬಳಿ ಆ ಸತ್ಯವನ್ನು ಹೇಳಿ, ಸಂಗಮ್ ಮಗಳನ್ನು ದತ್ತು ಪಡೆತಲು ಹೊರಟಿದ್ದಾನೆ. ಸಾಗರ್ ತಪ್ಪು ತಿಳುವಳಿಕೆಯಿಂದ ಲಚ್ಚಿಗೆ ಅನ್ಯಾಯವಾಗುವ ಎಲ್ಲಾ ಸಾಧ್ಯತೆಯೂ ಇದೆ.

More from Filmibeat

English summary
Star suvarna serial Namma Lacchi Written Update on July 6th episode. Here is the details about Sagar took the wrong decision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X