Namma Lacchi: ಸೆಟ್‌ನಲ್ಲಿ ನಿರ್ದೇಶಕರ ಸಹಾಯಕ್ಕೆ ನಿಂತ ವಿಜಯ್ ಸೂರ್ಯ ಮಾಡಿದ್ದೇನು?

By ಎಸ್ ಸುಮಂತ್

ಯಾವುದೇ ಸಿನಿಮಾ ಆಗಲಿ, ಸೀರಿಯಲ್ ಆಗಲಿ. ಕಲಾವಿದರು ಅವರ ಸೀನ್ ಬಂದಾಗ ನಟಿಸುತ್ತಾರೆ. ಇನ್ನುಳಿದಂತೆ ವಿಶ್ರಾಂತಿ ಪಡೆಯುತ್ತಾರೆ. ಇತ್ತೀಚೆಗೆ ರೀಲ್ಸ್ ಸಂಪ್ರದಾಯ ಹೆಚ್ಚಾಗಿದ್ದು, ಗ್ಯಾಪ್ ಸಿಕ್ಕ ಕೂಡಲೇ ರೀಲ್ಸ್ ಮಾಡುತ್ತಾರೆ. ತೆರೆ ಮೇಲೆ ವಿಲನ್ ಆದವರು ಕೂಡ ರೀಲ್ಸ್ ಮಾಡುವಾಗ, ದೋಸ್ತಿಗಳಾಗಿ ಬಿಡುತ್ತಾರೆ.

ಹೀಗೆ ಶೂಟಿಂಗ್ ಸಮಯದಲ್ಲಿ ಬಿಡುವು ಸಿಕ್ಕಾಗ, ನಿರ್ದೇಶಕರ ಜೊತೆಗೂಡಿ ಒಂದಷ್ಟು ಚರ್ಚೆ, ಕಲಿಕೆ ಮಾಡುವುದು ಬೆರಳೆಣಿಕೆಯ ಕಲಾವಿದರಷ್ಟೇ. ಆದರೆ, ವಿಜಯ್ ಸೂರ್ಯ ಈ ವಿಚಾರದಲ್ಲಿ ಗಮನ ಸೆಳೆದಿದ್ದಾರೆ. ನಿರ್ದೇಶಕರ ಬಳಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನೋಡುವುದಲ್ಲ. ಸ್ವತಃ ಸಹಾಯವನ್ನು ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ವಿಜಯ್ ಸೂರ್ಯ ಬದ್ಧತೆಗೆ ಸಲಾಂ ಎಂದಿದ್ದಾರೆ.

Namma Lacchi serial actor Vijay Surya became an assistant to the director

'ನಮ್ಮ ಲಚ್ಚಿ'ಯಲ್ಲಿ ಸಂಗಮ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ನಮ್ಮ‌ ಲಚ್ಚಿ' ಧಾರಾವಾಹಿ ಪ್ರಸಾರ ಆಗ್ತಿರೋದು ಎಲ್ಲರಿಗೂ ಗೊತ್ತಿದೆ. ಹಾಗೇ ಆ ಧಾರಾವಾಹಿ ಎಲ್ಲರ ನೆಚ್ಚಿನ ಧಾರಾವಾಹಿಯಾಗಿದೆ. ಟಿಆರ್‌ಪಿಯಲ್ಲೂ 'ನಮ್ಮ ಲಚ್ವಿ' ಧಾರಾವಾಹಿ ಟಾಪ್ ನಲ್ಲಿಯೇ ಇದೆ. ಈ ಧಾರಾವಾಹಿ ಮೂಲಕ ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದರು. ಈ ಧಾರಾವಾಹಿಯಲ್ಲಿ ಫೇಮಸ್ ಸಿಂಗರ್ ಆಗಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ.

ಸೆಟ್ ಅಸಿಸ್ಟೆಂಟ್ ಆಗಿ ಕೆಲಸ

ವಿಜಯ್ ಸೂರ್ಯ ಅದೆಷ್ಟೋ ಹೆಂಗಳೆಯರ ಹೃದಯ ಸಿಂಹಾಸನದಲ್ಲಿ ಕುಳಿತಿದ್ದಾರೆ. ಧಾರಾವಾಹಿ-ಸಿನಿಮಾ ಲೋಕದಲ್ಲಿ ರಂಜಿಸುತ್ತಾ ಇದ್ದಾರೆ. ಕೇವಲ ನಟನೆಯನ್ನಷ್ಟೇ ಮಾಡುತ್ತಿಲ್ಲ. ತಂಡದ ಜೊತೆಗೆ ಆತ್ಮೀಯವಾಗಿ ಇರುತ್ತಾರೆ. ಶಾಟ್ ಬಂದಾಗ ಬಂದು ನಟಿಸುವ ಬದಲಿಗೆ ಇನ್ಯಾರದ್ದೋ ಕೆಲಸವನ್ನು ಎಂಜಾಯ್ ಮಾಡಿಕೊಂಡು ಮಾಡುತ್ತಾರೆ. ಇಡೀ ತಂಡದಲ್ಲಿ ಆಕ್ಟೀವ್ ಆಗಿರುತ್ತಾರೆ. ಥರ್ಮಾಕೋಲ್ ಹಿಡಿದು ಅಸಿಸ್ಟೆಂಟ್ ಕೆಲಸವನ್ನು ಮಾಡಿದ್ದಾರೆ. ಈ ವಿಡಿಯೋಗೆ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶೂಟಿಂಗ್ ಹೇಗೆ ನಡೆಯುತ್ತೆ?

ಧಾರಾವಾಹಿಯಾಗಲಿ, ಸಿನಿಮಾವಾಗಲಿ ನಾವೂ ತೆರೆ ಮೇಲೆ ನೋಡುವುದೇ ಬೇರೆ. ಆದರೆ, ಆ ಒಂದು ದೃಶ್ಯ ತೆಗೆಯಬೇಕು ಎಂದರೆ ಅದರ ಹಿಂದಿನ ಶ್ರಮ ಅಷ್ಟಿಷ್ಟಲ್ಲ. ಸಾಕಷ್ಟು ಜನರ ಶ್ರಮ ಇರುತ್ತದೆ. ರೀಟೇಕ್‌ಗಳು ಇರುತ್ತವೆ. ಅದಾದ ಮೇಲೆ ನಮ್ಮ ಕಣ್ಣಿಗೆ ಕಾಣುವ ಅದ್ಭುತ ದೃಶ್ಯ ರೆಡಿಯಾಗುತ್ತದೆ. 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಲಚ್ಚಿ ತಲೆ ಸುತ್ತಿ ಬೀಳುವಂತ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಶೂಟ್ ಮಾಡುವ ಮುನ್ನ ಹಾಗೂ ಶೂಟ್ ಆದ ಮೇಲೆ ಹೇಗಿರಲಿದೆ ಎಂಬುದು ಆ ವಿಡಿಯೋದಲ್ಲಿ ಕಾಣಬಹುದಾಗಿದೆ‌.

ಹೊಸ ವಿಡಿಯೋ ಹಂಚಿಕೊಂಡ ಸಂಪೃಥ್ವಿ

ಮಕ್ಕಳ ಧಾರಾವಾಹಿಯನ್ನು ಹೆಚ್ಚು ಪ್ರೀತಿಯಿಂದ ನಿರ್ದೇಶನ ಮಾಡುವ ನಿರ್ದೇಶಕ ಸಂಪೃಥ್ವಿ. ನಮ್ಮ ಲಚ್ಚಿ ತಂಡದಲ್ಲಿ ಆಗುವ ಫನ್ನಿ ಅನಾಹುತಗಳನ್ನು ಆಗಾಗ ವಿಡಿಯೋ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಸಂಗಮ್ ಪಾತ್ರಧಾರಿ ವಿಜಯ್ ಸೂರ್ಯ, ಶೂಟಿಂಗ್ ಸಮಯದಲ್ಲಿ ಹೇಗೆಲ್ಲಾ ಆತ್ಮೀಯವಾಗಿ ಇರುತ್ತಾರೆ ಎಂಬುದು ಪ್ರೂವ್ ಆಗುವಂತಹ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಪಾಸಿಟಿವ್ ಕಮೆಂಟ್‌ಗಳೇ ಹರಿದು ಬಂದಿದೆ. ಸೂಪರ್ ನಟನೆ ಜೊತೆಗೆ ತಂಡಕ್ಕೆ ಬೆಂಬಲವಾಗಿಯೂ ನಿಂತಿದ್ದಾರಲ್ಲ ಎಂದೆಲ್ಲ ಕಮೆಂಟ್‌ಗಳನ್ನು ಹಾಕಿದ್ದಾರೆ.

More from Filmibeat

English summary
Namma Lacchi serial actor Vijay Surya became an assistant to the director:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X