Radhika Kumaraswamy:'ನಮ್ಮ ಲಚ್ಚಿ' ಜೊತೆ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ: ಏನ್ ಸಮಾಚಾರಾ?

By ಎಸ್ ಸುಮಂತ್

ರಾಧಿಕಾ ಕುಮಾರಸ್ವಾಮಿ ಅವರು ದಮಯಂತಿ ಸಿನಿಮಾ ಆದ್ಮೇಲೆ ಕೊಂಚ ಸಿನಿಮಾ ಇಂಡಸ್ಟ್ರಿಯಿಂದ ದೂರವೇ ಇದ್ದರು. ಬಳಿಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಪ್ರೋಮೋ ವೈರಲ್ ಆಗಿತ್ತು. ಆದರೆ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳಲಿಲ್ಲ. ಇದೀಗ ಮತ್ತೆ ಆಕ್ಟೀವ್ ಆಗಿದ್ದಾರೆ. ಏಳು ಭಾಷೆಗಳಲ್ಲಿ ಸೇರಿ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ರಾಧಿಕಾ ಕುಮಾರಸ್ವಾಮಿಯವರ ಫೋಟೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಚಿತ್ತ ಸೆಳೆದಿದೆ. ಯಾಕಂದ್ರೆ, ಅದು ಸೀರಿಯಲ್ ವಿಚಾರವಾಗಿ. ಸ್ಟಾರ್ ಸುವರ್ಣದಲ್ಲಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ಅಂದ್ರೆ ನಮ್ಮ ಲಚ್ಚಿ. ಈ ಧಾರವಾಹಿಯ ನಟಿಯೊಂದಿಗೆ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ.

Namma Lacchi serial actrees Sanghavi and Shreedisha Met Radhika Kumaraswamy

ಲಚ್ಚಿ ಕಂಡರೆ ರಿಯಾಳಿಗೆ ಅಷ್ಟಕ್ಕಷ್ಟೇ

ರಿಯಾಳಿಗೆ ಮೊದಲಿನಿಂದಾನು ಲಚ್ಚಿ ಕಂಡರೆ ಆಗುತ್ತಿಲ್ಲ. ಲಚ್ಚಿಗೆ ಏನೇ ಕೆಡುಕು ಮಾಡಿದರು ಅದೆಲ್ಲವೂ ಒಳ್ಳೆಯದ್ದೆ ಆಗುತ್ತಿದೆ. ಲಚ್ಚಿಯನ್ನು ಕೊಲ್ಲುವುದಕ್ಕೆ ನೋಡಿದಳು ಅದು ಸಾಧ್ಯವಾಗಲಿಲ್ಲ. ಬಳಿಕ ಮನೆ ಬಿಟ್ಟು ಕಳುಹಿಸುವುದಕ್ಕೆ ನೋ ಎಂದಿಳು ಅದು ಸಕ್ಸಸ್ ಆಗಲಿಲ್ಲ. ಇದೀಗ ಪರ್ಮನೆಂಟ್ ಆಗಿ ಮನೆ ಬಿಟ್ಟು ಕಳುಹಿಸಿದ್ದಾಳೆ. ಆದರೂ ಸಂಗಮ್ ಹುಡುಕಿಕೊಂಡು ಬಂದಿದ್ದಾನೆ. ತಂದೆಯಿಂದಾಗಿ ನಮ್ಮ ಲಚ್ಚಿ ಸೇಫ್ ಆಗಿ ಮನೆ ಸೇರಿದ್ದಾಳೆ. ಆದರೆ ರಿಯಾಳಿಗೆ ಇದನ್ನು ಕಂಡರೆ ಆಗುತ್ತಿಲ್ಲ.

ರಿಯಾ & ಲಚ್ಚಿ ತೆರೆ ಹಿಂದೆ ಫ್ರೆಂಡ್ಸ್

ಲಚ್ಚಿ ಪಾತ್ರ ಮಾಡುತ್ತಿರುವ ಸಾಂಘವಿ ಹಾಗೂ ರಿಯಾ ಪಾತ್ರ ಮಾಡುತ್ತಿರುವ ಶ್ರೀದಿಶಾ ಇಬ್ಬರು ಸೆಟ್‌ನಲ್ಲಿ ಸಿಕ್ಕಾಪಟ್ಟೆಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಗ್ಯಾಪ್ ಸಿಕ್ಕಿದರೆ ಸಾಕು ರೀಲ್ಸ್ ಮಾಡುವುದರಲ್ಲಿ ಬ್ಯುಸಿ ಆಗಿ ಬಿಡುತ್ತಾರೆ. ಬರೀ ಈ ಇಬ್ಬರೇ ಅಲ್ಲ ಸೆಟ್‌ನಲ್ಲಿ ಇರುವವರನ್ನು ಕೂಡಿಸಿಕೊಳ್ಳುತ್ತಾರೆ. ಯಾವಾಗಲೂ ಬೆಸ್ಟ್ ಫ್ರೆಂಡ್ಸ್ ಆಗಿಯೇ ಇರುತ್ತಾರೆ. ಆದರೆ, ತೆರೆಮೇಲೆ ಮಾತ್ರ ಲಚ್ಚಿ ಕಂಡರೆ ಆಗುವುದೇ ಇಲ್ಲವೆಂಬಂತೆ ವರ್ತಿಸುತ್ತಾಳೆ ರಿಯಾ.

ರಾಧಿಕಾ ಕುಮಾರಸ್ವಾಮಿ ಭೇಟಿಯಾದ ನಮ್ಮ ಲಚ್ಚಿ

ರಾಧಿಕಾ ಕುಮಾರಸ್ವಾಮಿ ಸದ್ಯ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಏಳು ಭಾಷೆಯಲ್ಲಿ ಸಿದ್ದವಾಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲೂ ಮೋಡಿ ಮಾಡಿದ್ದಾರೆ. ಡ್ಯಾನ್ಸ್ ಮಾಡುವ ವಿಡಿಯೋ ಹಾಕಿ ಅಭಿಮಾನಿಗಳ ಪಾಲಿಗೆ ಮತ್ತಷ್ಟು ಥ್ರಿಲ್ ನೀಡುತ್ತಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಹಾಕಿ, ಆಕ್ಟೀವ್ ಆಗಿದ್ದಾರೆ. ಇದೀಗ ನಮ್ಮ ಲಚ್ಚಿ ಮತ್ತು ರಿಯಾ, ರಾಧಿಕಾ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಂಘವಿ ತಮ್ಮ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಕಿರುತೆರೆಗೆ ಬರ್ತಾರಾ ರಾಧಿಕಾ ಕುಮಾರಸ್ವಾಮಿ?

ರಾಧಿಕಾ ಕುಮಾರಸ್ವಾಮಿ ಈಗಾಗಲೇ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸಿಂಗ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡು, ವೇದಿಕೆ ಮೇಲೆ ತಮ್ಮ ನೃತ್ಯ ಪ್ರದರ್ಶನವನ್ನು ಮಾಡಿದ್ದಾರೆ. ಇದೀಗ ನಮ್ಮ ಲಚ್ಚಿ ಟೀಂ ಜೊತೆ ಕಾಣಿಸಿಕೊಂಡಿರುವುದು ಈ ಸೀರಿಯಲ್‌ನಲ್ಲಿ ಮುಖ್ಯವಾದ ಪಾತ್ರವೇನಾದರೂ ಮಾಡಿದ್ದಾರಾ ಎಂಬ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಯಾಕಂದ್ರೆ, ಲಚ್ಚಿ ತನ್ನ ಪಾತ್ರದ ವೇಷದಲ್ಲಿಯೇ ಆ ಫೋಟೋದಲ್ಲಿ ಕಾಣಿಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಇನ್ನು "ಒಂದು ಛಾಯಾ ಚಿತ್ರವೂ ಒಂದು ಕ್ಷಣವೂ ಓಡಿ ಹೋಗದಂತೆ ನೋಡಿಕೊಳ್ಳಿ" ಎಂದು ಸಾಂಘವಿ ಬರೆದುಕೊಂಡಿದ್ದಾಳೆ.

More from Filmibeat

English summary
Namma Lacchi serial actrees Sanghavi and Shreedisha Met Radhika Kumaraswamy, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X