Namma Lacchi: ನನ್ನಪ್ಪ ಯಾರು ಮಾಮ..? ಲಚ್ಚಿಯ ಈ ಡೈಲಾಗ್‌ಗೆ ಅಜ್ಜಿ ಕಣ್ಣೀರು..!
ಮಕ್ಕಳು ಅಂದ್ರೆನೇ ಒಂಥರ ಮುದ್ದು. ಅವರಾಡುವ ಮಾತುಗಳು, ಅವರು ಮಾಡುವ ತುಂಟಾಟಗಳೆಲ್ಲ ತುಂಬಾನೇ ಖುಷಿ ಕೊಡುತ್ತವೆ. ನಗಿಸುವ ಮಕ್ಕಳೇ ಕೆಲವೊಂದು ಸಲ ಕರುಳು ಕಿತ್ತು ಬರುವಂತೆ ದುಃಖ ತರಿಸುತ್ತವೆ. ನಟನೆ ಅಂತ ಗೊತ್ತಿದ್ದರೂ ಆ ನಟನೆಯನ್ನೇ ನೋಡಿ ಅಳುವಂತೆ ಮಾಡುವ ಮಕ್ಕಳ ಕಲೆಗೆ ಹ್ಯಾಟ್ಸ್ ಆಪ್ ಹೇಳಲೇಬೇಕು.
ಸ್ಟಾರ್ ಸುವರ್ಣದಲ್ಲಿ ಇತ್ತೀಚೆಗಷ್ಟೇ 'ನಮ್ಮ ಲಚ್ಚಿ' ಎಂಬ ಧಾರಾವಾಹಿ ಆರಂಭವಾಗಿದೆ. ಆ ಧಾರಾವಾಹಿಯ ಕಥೆಯೇ ಹಾಡುಗಾರಿಕೆ. ಅಪ್ಪ ಹಾಡುಗಾರ, ಫೇಮಸ್ ಸಿಂಗರ್. ಮಗಳಿಗೆ ಅಪ್ಪನ ಹೆಸರು ಗೊತ್ತಿಲ್ಲ. ಆದರೂ ಆತನ ಅಪ್ಪಟ ಅಭಿಮಾನಿ. ಹುಟ್ಟು ಗುಣ ಅಂತಾರಲ್ಲ ಅದು ಎಲ್ಲಿ ಹೋಗಬೇಕು. ಮಗಳಿಗೆ ಅಂಟಿಕೊಂಡೆ ಬಂದಿದೆ. ಅಮ್ಮನಿಗೆ ಇದು ಇಷ್ಟವಿಲ್ಲ. ಅಮ್ಮ - ಮಗಳು - ಸಂಗೀತದ ಜಂಜಾಟದ ನಡುವೆ ಕಥೆ ಸಾಗುತ್ತಿದೆ.

ಅಪ್ಪನಿಗಾಗಿ ಹಂಬಲಿಸುವ ಲಚ್ಚಿ
ಲಚ್ಚಿಯ ಅಪ್ಪ ಫೇಮಸ್ ಸಿಂಗರ್ ಸಂಗಮ್ ಎಂಬುದನ್ನು ಗಿರಿಜಾ ಯಾರ ಬಳಿಯೂ ಹೇಳಿಲ್ಲ. ಫೇಮಸ್ ಆಗುವುದಕ್ಕೂ ಮುನ್ನವೇ ಗಿರಿಜನ ಮದುವೆ, ಮಗು ಆಗಿತ್ತು. ಆದರೆ, ಕೆಲಸಕ್ಕಾಗಿ ಹೋದಾತ ಹಿಂತಿರುಗಿ ಬಾರದೆ, ಅಲ್ಲಿಯೇ ಮದುವೆಯಾದ. ಈ ಪರಿಸ್ಥಿತಿಯಲ್ಲಿ ಮಗಳಿಗೆ ಆಗಲಿ, ಊರಿನವರಿಗೆ ಆಗಲಿ ಹೇಗೆ ತಾನೇ ಗಿರಿಜಾ ತನ್ನ ಪ್ರೀತಿ, ಗಂಡನ ಬಗ್ಗೆ ಹೇಳಿಯಾಳು. ಆದರೆ ಎಲ್ಲರೂ ಕೇಳುವ ಆ ಒಂದು ಪ್ರಶ್ನೆಗೆ ನಿನ್ನ ಅಪ್ಪ ಯಾರು ಎಂಬುದಕ್ಕೆ ಲಚ್ಚಿ ಕೂಡ ಉತ್ತರ ಹುಡುಕುತ್ತಿದ್ದಾಳೆ. ಇದಕ್ಕೆ ಉತ್ತರ ಮಾವನಿಗೆ ಮಾತ್ರ ಗೊತ್ತಿರುವುದರಿಂದ, ಅವನ ಹಿಂದೆ ಬಿದ್ದು, "ನನ್ನ ಅಪ್ಪ ಯಾರು ಹೇಳು ಮಾಮ" ಅಂತ ಪ್ರಶ್ನಿಸಿದ್ದಾಳೆ.

ಅಜ್ಜಿಯ ಮನಸ್ಸು ಕರಗಿದೆ..!
ಲಚ್ಚಿಯದ್ದು ದೊಡ್ಡ ವಯಸ್ಸೇನು ಅಲ್ಲ. ಇನ್ನು ಸಂಬಂಧಗಳ ಬಗ್ಗೆಯೆಲ್ಲಾ ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವಳು ಅಲ್ಲ. ಆದರೆ ಯಾರಾದ್ರೂ ನೋವು ಮಾಡಿದರೂ ಅದನ್ನು ಮನಸ್ಸಿಗೆ ಹೆಚ್ಚು ಹಾಕಿಕೊಳ್ಳುವುದಿಲ್ಲ. ಆದರೆ ಲಚ್ಚಿ ಆಡುವ ಒಂದೊಂದು ಮಾತನ್ನು ಕೇಳಬೇಕು ಎನಿಸುತ್ತೆ. ಆಗಾಗ ಸಿಂಪತಿಯೂ ಹುಟ್ಟುತ್ತೆ. "ನಮ್ಮ ಅಪ್ಪ ಯಾರು ಹೇಳು ಮಾಮಾ" ಎಂಬ ಲಚ್ಚಿಯ ಆ ಒಂದು ಡೈಲಾಗ್ ಎಂಥ ಕಲ್ಲು ಹೃದಯವನ್ನು ಕರಗಿಸುತ್ತೆ. ಈಗ ಈ ಡೈಲಾಗ್‌ಗೆ ಅಜ್ಜಿಯೊಬ್ಬರ ಮನಸ್ಸು ಕರಗಿದ್ದು, ಬಹಳ ನೊಂದು ಕೊಂಡಿದ್ದಾರೆ.

ಮಾರಿಕಾಂಬ ಜಾತ್ರೆಯಲ್ಲಿ ಲಚ್ಚಿ ಸುತ್ತಾಟ..!
'ನಮ್ಮ ಲಚ್ಚಿ' ಧಾರಾವಾಹಿ ಇತ್ತೀಚೆಗಷ್ಟೇ ಶುರುವಾಗಿದೆ. ಲಚ್ಚಿ ಪಾತ್ರವನ್ನು ಸಾಂಘವಿ ನಿರ್ವಹಿಸಿದ್ದಾರೆ. ಸದ್ಯ ಶೂಟಿಂಗ್‌ನಿಂದ ಬಿಡುವು ಸಿಕ್ಕಿದ್ದು, ಫ್ಯಾಮಿಲಿ ಜೊತೆಗೆ ಶಿವಮೊಗ್ಗ ಕಡೆಗೆ ಹೊರಟಿದ್ದಾರೆ. ಸಾಗರದ ಮಾರಿಕಾಂಬ ಜಾತ್ರೆ ಸಿಕ್ಕಾಪಟ್ಟೆ ಫೇಮಸ್. ಈ ಜಾತ್ರೆಯಲ್ಲಿ ರೌಂಡ್ ಹಾಕಿರುವ ಸಾಂಘವಿ, ಸಖತ್ ಎಂಜಾಯ್ ಮಾಡಿದ್ದಾರೆ.
ಅಜ್ಜಿ ವಿಡಿಯೋ ಹಂಚಿಕೊಂಡ ಸಾಂಘವಿ
ಇನ್ನು ಸಾಂಘವಿಯ ನಟನೆ ಅದೆಷ್ಟು ಅದ್ಭುತವಾಗಿದೆ ಎಂದರೆ, ಇಷ್ಟು ಚಿಕ್ಕ ವಯಸ್ಸಿಗೇನೆ ಪಾತ್ರದ ಒಳಗೆ ಪ್ರವೇಶ ಮಾಡಿದಂತೆ ಇದೆ. ಒಂದು ಮಗು ತನ್ನ ಅಪ್ಪನಿಗಾಗಿ ರಿಯಲ್ ಆಗಿ ಹೇಗೆ ಒದ್ದಾಡುತ್ತೋ ಅಷ್ಟೇ ರಿಯಲ್ ಆಗಿ ಒದ್ದಾಡುತ್ತಾಳೆ 'ನಮ್ಮ ಲಚ್ಚಿ'. ಈ ನಟನೆ ನೋಡಿದವರಿಗೆಲ್ಲಾ ಸಾಂಘವಿ ಬಹಳ ಇಷ್ಟವಾಗಿದ್ದಾಳೆ. ಜಾತ್ರೆಯಲ್ಲಿ ಸಾಂಘವಿಯನ್ನು ಗುರುತಿಸಿದ ಅಜ್ಜಿಯೊಬ್ಬರು "ನನ್ನ ಅಪ್ಪ ಯಾರು ಹೇಳು ಮಾಮೋ" ಎಂಬ ಡೈಲಾಗ್ ಪುನರುಚ್ಛರಿಸಿ, ಲಚ್ಚಿಯನ್ನು ಹೊಗಳಿದ್ದಾರೆ. ಈ ವಿಡಿಯೋವನ್ನು ಲಚ್ಚಿ ಹಂಚಿಕೊಂಡಿದ್ದಾಳೆ.


Click it and Unblock the Notifications











