Sara Annaiah : 'ನಮ್ಮ ಲಚ್ಚಿ'ಯಿಂದ ಹೊರಬಿದ್ರಾ ಸಾರಾ ಅಣ್ಣಯ್ಯ? ಅಂತಹದ್ದೇನಾಯ್ತು?

By ಎಸ್ ಸುಮಂತ್

'ನಮ್ಮ ಲಚ್ಚಿ' ಧಾರಾವಾಹಿ ಈಗ ಎಲ್ಲರ ಅಚ್ಚು ಮೆಚ್ಚಾಗಿದೆ. ತಂದೆಯ ಮನೆಯಲ್ಲಿಯೇ ಇದ್ದರು ತಂದೆ ಯಾರೆಂದು ನಮ್ಮ ಲಚ್ಚಿಗೆ ತಿಳಿಯುತ್ತಿಲ್ಲ. ಅಮ್ಮ ಇದ್ದಾಗಲೂ ಕಷ್ಟದ ಬದುಕನ್ನೇ ಅವೆಸಿದಳು. ಗಿರಿಜಾ, (Neha Gowda) ತನ್ನ ಗಂಡ ಯಾರೆಂಬುದನ್ನು ತಿಳಿಸದೆ ಲಚ್ಚಿಯನ್ನು ಕಷ್ಟಪಟ್ಟು‌ ಸಾಕಿದಳು. ಮನೆಯಲ್ಲಿ ಏನಿರುತ್ತೋ ಅದನ್ನೇ ಟೈಮಿಗೆ ಸರಿಯಾಗಿ ಮಾಡಿ ಬಡಿಸುತ್ತಿದ್ದಳು. ಲಚ್ಚಿಗೆ ಅವ್ವ, ಹಾಡು ಇದ್ದರೆ ಮುಗೀತು ಬೇರೆ ಏನು ಬೇಡ. ಖುಷಿಯಾಗಿ ಇರ್ತಾ ಇದ್ಲು.

ಈಗ ಲಚ್ಚಿ‌ ಒಬ್ಬಂಟಿ ಎಂದುಕೊಳ್ಳುವಾಗಲೇ ಅವಳ ಸ್ವಂತದವರು ಸಿಕ್ಕಿದ್ದಾರೆ. ಆದರೆ, ಅದು ಇಬ್ಬರಿಗೂ ಗೊತ್ತಿಲ್ಲ. ಊರಲ್ಲಿದ್ದಾಗ ಲಚ್ಚಿಯ ಕಂಠವನ್ನು ಬಳಸಿಕೊಂಡು ಶಾಂತ ಹಣ ಮಾಡ್ತಾ ಇದ್ಲು, ಈ ಕಡೆ ಅದೇ ಲಚ್ಚಿಯ ಧ್ವನಿ ಬಳಸಿಕೊಂಡು ದೀಪಿಕಾ (Sara annaiah) ತನ್ನ ಮಗಳಿಗೆ ಹೆಸರು ಮಾಡುತ್ತಿದ್ದಾಳೆ.

Namma Lacchi serial deepika role Aishwarya Sindhogi may replace Sara Annaiah

ಸ್ವಾರ್ಥದಲ್ಲೇ ಬದುಕುವ ದೀಪಿಕಾ

ದೀಪಿಕಾ (Sara annaiah) ಅಂದ್ರೆ ಸ್ವಾರ್ಥ.. ಸ್ವಾರ್ಥ ಅಂದ್ರೆ ದೀಪಿಕಾ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವತ್ತಿಗೂ ಮನೆಯವರ ಬಗ್ಗೆ ಯೋಚನೆ ಮಾಡುವುದೆ ಇಲ್ಲ. ಬರೀ ಶ್ರೀಮಂತಿಕೆ, ರಾಯಲ್ ಜೀವನದ ಬಗ್ಗೆಯೇ ಯೋಚನೆ ಮಾಡುತ್ತಾ ಇರುವಂತ ಕ್ಯಾರೆಕ್ಟರ್ ಅದು. ಸದ್ಯ ತನ್ನ ಮಗಳು ರಿಯಾ (Sreedisha)ಳನ್ನು ದೊಡ್ಡ ಸ್ಟಾರ್ ಸಿಂಗರ್ ಮಾಡಬೇಕು ಎಂಬುದೇ ಅವಳ ದೊಡ್ಡ ಕನಸು. ಅದಕ್ಕಾಗಿಯೇ ಹೋರಾಟ ಕೂಡ‌ ಮಾಡುತ್ತಿದ್ದಾಳೆ.

ಲಚ್ಚಿಯನ್ನು ಬಳಸಿಕೊಳ್ಳುತ್ತಿರೋ ದೀಪಿಕಾ

ರಿಯಾ (Shreedisha)ಗೆ ಎಷ್ಟು ಸಲ ಹೇಳಿಕೊಟ್ಟರು ಸಂಗೀತದ ಕಲೆ ಅವಳಿಗೆ ಹತ್ತಲೇ ಇಲ್ಲ. ಅದೇ ಯೋಚನೆಯಲ್ಲಿ ಹೋಗುತ್ತಿದ್ದಾಗ ದೀಪಿಕಾ (Sara annaiah) ಗೆ ಕೇಳಿಸಿದ್ದು ಲಚ್ಚಿ ವಾಯ್ಸ್. ಅಂದಿನಿಂದಾನೇ ರಿಯಾ ಸ್ಟಾರ್ ಸಿಂಗರ್ ಆಗಿ ಹೋದ್ಲು.‌ ದೀಪಿಕಾ ಈಗ ಲಚ್ಚಿ (Saanghavi)ಯನ್ನು ಕೇವಲ ರಿಯಾಳನ್ನು ಫೇಮಸ್ ಮಾಡುವುದಕ್ಕಷ್ಟೇ ಬಳಸಿಕೊಳ್ಳುತ್ತಿದ್ದಾಳೆ. ಲಚ್ಚಿಯ ಧ್ವನಿಗೆ ರಿಯಾಳ ಆಕ್ಷನ್ ಕೂಡಿಸುತ್ತಿದ್ದಾಳೆ.

Namma Lacchi serial deepika role Aishwarya Sindhogi may replace Sara Annaiah

ನಮ್ಮ ಲಚ್ಚಿಯಿಂದ ಹೊರ ಬಂದ್ರಾ ಸಾರಾ ಅಣ್ಣಯ್ಯ

ನಮ್ಮ ಲಚ್ಚಿ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ಸಾರಾ ಅಣ್ಣಯ್ಯ ಖಳನಾಯಕಿಯಾಗಿ ನಟಿಸುತ್ತಿದ್ದರು. ಯಾರ ಬಗ್ಗೆಯೂ ಯೋಚಿಸದ ದೀಪಿಕಾ, ಸಂಗಮ್ (Vijay Surya) ಮನೆಯವರಿಗೂ ಗೌರವ ಕೊಡಲ್ಲ. ಈ ಹಿಂದೆ ಕೂಡ ಸಾರಾ ಅಣ್ಣಯ್ಯ ವಿಲನ್ ಪಾತ್ರದಲ್ಲಿಯೇ ಮಿಂಚಿದ್ದರು. ಈಗ ಮತ್ತೆ ದೀಪಿಕಾ ಪಾತ್ರದಲ್ಲಿ ಖಳನಾಯಕಿಯಾಗಿ ಅಬ್ಬರಿಸುತ್ತಿದ್ದಾರೆ. ಆದ್ರೀಗ, ಕಿರುತೆರೆ ವಲಯದಲ್ಲಿ ಹೊಸ ಸುದ್ದಿಯೊಂದ ಓಡಾಡುತ್ತಿದ್ದು, ಈಗ ದೀಪಿಕಾ ಪಾತ್ರದಾರಿ ಬದಲಾಗುತ್ತಾರೆ ಎನ್ನಲಾಗುತ್ತಿದೆ. ದೀಪಿಕಾ ಪಾತ್ರವನ್ನು ಬೇರೊಬ್ಬರು ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಮಾಯಾಂಗನೆ ಇನ್ಮುಂದೆ ದೀಪಿಕಾ..?

ನಮ್ಮ ಲಚ್ಚಿ ನೋಡುಗರಿಗೆ ದೀಪಿಕಾ ಈಗಾಗಲೇ ಮನಸ್ಸಲ್ಲಿ ಉಳಿದು ಬಿಟ್ಟಿದ್ದಾರೆ. ಆ ಕೋಪ, ಆ ಮುನಿಸು, ಆ ಮಾತು ಎಲ್ಲವೂ ಇಷ್ಟವಾಗಿ ಬಿಟ್ಟಿದೆ. ಈಗ ಆ ಜಾಗಕ್ಕೆ ಐಶ್ವರ್ಯಾ ಸಿಂಧೋಗಿ (Aishwarya sindhogi) ಬರಲಿದ್ದಾರೆ ಎನ್ನುತ್ತಿವೆ ಮೂಲಗಳು. ಐಶ್ವರ್ಯಾ ಕೂಡ ಈ ಹಿಂದೆ ನೆಗೆಟಿವ್ ಪಾತ್ರದಲ್ಲಿಯೇ ಮಿಂಚಿದ್ದರು. 'ನಾಗಿಣಿ 2' ಧಾರಾವಾಹಿಯಲ್ಲಿ ಮಾಯಾಂಗನೆ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಅಷ್ಟಕ್ಕೂ ಸಾರಾ ಅಣ್ಣಯ್ಯ ನಮ್ಮ ಲಚ್ಚಿ ಧಾರಾವಾಹಿಯಿಂದ ಯಾಕೆ ಹೊರ ಹೋದರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಹಾಗಂತ ಸ್ಟಾರ್ ಸುವರ್ಣ ಹಾಗೂ ಸ್ವತ: ನಟಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಕಿರುತೆರೆ ಲೋಕದಲ್ಲಿ ಇಂತಹದ್ದೊಂದು ಸುದ್ದಿಯಂತೂ ಬಲವಾಗಿ ಓಡಾಡುತ್ತಿದೆ.

More from Filmibeat

English summary
Namma Lacchi serial deepika role Aishwarya Sindhogi may replace Sara Annaiah. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X