ಲಚ್ಚಿ ಜೊತೆ ಪಾರ್ಕ್‌ನಲ್ಲಿ ಕುಣಿದ ಕಿರುತೆರೆ ನಟಿ ನೇಹಾ ಗೌಡ; ಲಚ್ಚಿ-ಜಾಜಿಗೆ ಮನಸೋತ ನೆಟ್ಟಿಗರು!

By ಎಸ್ ಸುಮಂತ್

ಮಕ್ಕಳು ಜೊತೆಗೆ ಇದ್ದರೆ ಸಾಕು, ಲೋಕದ ಪರಿವೆಯೇ ಇಲ್ಲದೆ ದೊಡ್ಡವರು ಕೂಡ ಮಕ್ಕಳಾಗಿ ಬಿಡುತ್ತಾರೆ. ಮಗುವಂತಾಗಿಸುವ ಸಾಮಾರ್ಥ್ಯ ಸಾಮಾನ್ಯವಾಗಿ ಮಕ್ಕಳಲ್ಲಿ ಬಂದು ಬಿಡುತ್ತದೆ. ಎದುರಿದ್ದವರು ಕೂಡ ಮಕ್ಕಳಂತೆ ಮಾತನಾಡುವುದು, ಮಕ್ಕಳ ರೀತಿಯೇ ಆಟವಾಡುತ್ತಾರೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ 'ನಮ್ಮ ಲಚ್ಚಿ' ಧಾರಾವಾಹಿ.

ಪುಟ್ಟ ಮಗು ಲಚ್ವಿಯನ್ನು ಬಿಟ್ಟು ಗಿರಿಜಾ ಸತ್ತೆ ಹೋಗಿದ್ದಳು. ದೇವರ ದಯೆಯಿಂದ ಲಚ್ಚಿ ಸೇರಬೇಕಾದ ಮನೆಯನ್ನೇ ಸೇರಿದ್ದಾಳೆ. ಅಪ್ಪನ ಜೊತೆಗೆನೇ ಜೀವನ ಕಳೆಯುತ್ತಿದ್ದಾಳೆ. ಈಗಾಗಲೇ ತನ್ನ ಸ್ವಂತ ತಂದೆ ತಾನು ಆರಾಧಿಸುತ್ತಿದ್ದ ಸಂಗಮಪ್ಪನೇ ಎಂಬುದು ಗೊತ್ತಾಗಿದೆ. ಈ ಟ್ವಿಸ್ಟ್ ಜೊತೆಗೆ ಗಿರಿಜಾ ಕೂಡ ಮನೆಗೆ ಬಂದಿದ್ದಾಳೆ. ಆದರೆ ಜಾಜಿ ಅವತಾರದಲ್ಲಿ ಎಂಟ್ರಿ ಆಗಿದೆ. ನಿರ್ದೇಶಕ ಸಂಪೃಥ್ವಿ ಈ ಕಥೆಯನ್ನು ವಿಭಿನ್ನವಾಗಿಯೇ ತೆಗೆದುಕೊಂಡು ಹೋಗುತ್ತಿದ್ದಾರೆ.

Namma Lacchi serial fame actress Neha Gowda dance video goes viral

ಗಿರಿಜಾಳ ರಕ್ಷಣೆಗೆ ನಿಂತ ಸಂಗಮ್

ಸಂಗಮ್ ಎಲ್ಲಾ ಮರೆತು ದೀಪಿಕಾಳ ಜೊತೆಗೆ ಸಂಸಾರ ಮಾಡುತ್ತಿದ್ದ. ಆದರೆ ದೀಪಿಕಾಳ ಕಿತಾಪತಿ, ಕೆಲವೊಂದು ಘಟನೆಗಳು ಸಂಗಮ್‌ಗೆ ಗಿರಿಜಾಳ ನೆನಪು ಕಾಡುವಂತೆ ಮಾಡಿತ್ತು. ಸಂಪಿಗೆಹಳ್ಳಿಗೆ ಹೋದ ಸಂಗಮ್‌ಗೆ ಗಿರಿಜಾ, ಜಾಜಿಯಾಗಿ ಸಿಕ್ಕಳು. ಅಂದಿನಿಂದ ಮನೆಗೆ ಕರೆದುಕೊಂಡು ಬಂದು ಅಮ್ಮ-ಮಗಳನ್ನು ಹಾರೈಕೆ ಮಾಡುತ್ತಿದ್ದಾನೆ. ದುಷ್ಟರ ಕಣ್ಣುಗಳು ಬಿದ್ದರು, ಅದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾನೆ.

ಪಾರ್ಕ್‌ನಲ್ಲಿ ಕುಣಿದು ಕುಪ್ಪಳಿಸಿದ ನೇಹಾ ಗೌಡ

ನಮ್ಮ ಲಚ್ಚಿ ಸಾರ್ವಜನಿಕ ಸ್ಥಳದಲ್ಲೂ ಹೆಚ್ಚಿನ ಚಿತ್ರೀಕರಣ ನಡೆಯುತ್ತದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಾರ್ಕಿನ ದೃಶ್ಯವಿದೆ. ಲಚ್ಚಿ ಹಾಗೂ ಗಿರಿಜಾಳ ದೃಶ್ಯ ಅದು. ಆ ಸಮಯದಲ್ಲಿ ಶೂಟಿಂಗ್‌ಗೆ ಬ್ರೇಕ್ ಇತ್ತು ಎನಿಸುತ್ತದೆ. ಸೈಕಲ್ ಗ್ಯಾಪ್‌ನಲ್ಲಿ ಲಚ್ಚಿಯ ಜೊತೆಗೆ ಕುಣಿದು ಕುಪ್ಪಳಿಸಿದ್ದಾರೆ ಕಿರುತೆರೆ ನಟಿ ನೇಹಾ. ಲಚ್ಚಿಗೆ ನಗು ಬರಿಸುವಷ್ಟು ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದಾರೆ.

ಸೆಟ್‌ನಲ್ಲಿದ್ದರೂ ಇವರಿಬ್ಬರು ಪ್ರೀತಿ ಪಾತ್ರರೇ

ನೇಹಾ ಗೌಡ ಮಕ್ಕಳಿಗೆ ಬೇಗ ಕನೆಕ್ಟ್ ಆಗುತ್ತಾರೆ. ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಅಮ್ಮನಾಗಿ ಪಾತ್ರ ನಿಭಾಯಿಸುತ್ತಾ ಇದ್ದು, ಶೂಟಿಂಗ್ ಸೆಟ್‌ನಲ್ಲೂ ರಿಯಲ್ ಅಮ್ಮನಂತೆಯೇ ಇರುತ್ತಾರೆ. ಲಚ್ಚಿ ಕೂಡ ಹೆಚ್ಚಾಗಿ ನೇಹಾ ಗೌಡ ಜೊತೆಯಲ್ಲಿಯೇ ಸಮಯ ಕಳೆಯುತ್ತಾಳೆ. ಈ ರೀತಿಯ ಚೆಂದದ ವಿಡಿಯೋಗಳನ್ನು ನಿರ್ದೇಶಕ ಸಂಪೃಥ್ವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಗಿರಿಜಾ ಹಾಗೂ ಲಚ್ಚಿ, ಫನ್ನಿಯಾಗಿ ಕುಣಿದಿರುವ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಜಾಜಿಯೇ ಗಿರಿಜಾ ಎಂಬ ಸತ್ಯಕ್ಕಾಗಿ ಕಾತರ

ನಮ್ಮ ಲಚ್ಚಿ ಆರಂಭದಿಂದಾನೂ ಒಳ್ಳೆ ರೆಸ್ಪಾನ್ಸ್ ಪಡೆದಿರುವಂತ ಧಾರಾವಾಹಿಯಾಗಿದೆ. ಅದರಲ್ಲೂ ನೇಹಾಗೌಡ ಕಮ್‌ಬ್ಯಾಕ್ ಮಾಡಿದ್ದಂತ ಧಾರಾವಾಹಿಯಾಗಿದೆ. ಆರಂಭದಲ್ಲಿ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದ ನೇಹಾ ಗೌಡ, ಅವರ ಭಾಷೆ, ಅವರ ಪಾತ್ರಕ್ಕೆ ನಿಜಕ್ಕೂ ನೋಡುಗರು ವ್ಹಾವ್ ಎಂದಿದ್ದರು. ಆದರೆ ನೋಡ ನೋಡುತ್ತಲೇ ಅವರ ಪಾತ್ರ ಕಡಿಮೆ ಸಮಯಕ್ಕೇನೆ ಸತ್ತೆ ಹೋಯಿತು. ಮಕ್ಕಳ ಮೇಲೆ ಹೆಚ್ಚು ಫೋಕಸ್ ಮಾಡಿದ್ದರು ನಿರ್ದೇಶಕರು. ಗಿರಿಜಾಳ ಗೈರು ನೋಡುಗರಿಗೆ ಕೊಂಚ ಬೇಸರ ತರಿಸಿತ್ತು ಕೂಡ. ಆದರೆ, ಈಗ ಮತ್ತೆ ಗಿರಿಜಾ ಕಮ್ ಬ್ಯಾಕ್ ಆಗಿದ್ದಾಳೆ. ಜಾಜಿ ರೂಪದಲ್ಲಿ. ಜಾಜಿಯೇ ಗಿರಿಜಾ, ಇಷ್ಟು ದಿನ ಎಲ್ಲಿದ್ದಳು, ಹೇಗಿದ್ದಳು ಈ ಎಲ್ಲಾ ಅಂಶ ರಿವಿಲ್ ಆಗೋದನ್ನೇ ಪ್ರೇಕ್ಷಕರು ಕಾಯುತ್ತಿದ್ದಾರೆ.

More from Filmibeat

English summary
Here is the details about Namma Lacchi serial actress Neha Gowda dance video:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X