'ಲಕ್ಷ್ಮೀ ಬಾರಮ್ಮ' ಟೀಂ ಜೊತೆಗೆ ಲಚ್ಚಿ-ರಿಯಾ ಕಾಣಿಸಿಕೊಂಡ ಉದ್ದೇಶವೇನು ಗೊತ್ತಾ..?
ಸದ್ಯ ಮನರಂಜನಾ ವಿಚಾರದಲ್ಲಿ ಸ್ಟಾರ್ ಸುವರ್ಣ ಹಾಗೂ ಕಲರ್ಸ್ ಕನ್ನಡ ಎರಡು ವಾಹಿನಿಗಳು ಧಾರಾವಾಹಿಯ ವಿಚಾರದಲ್ಲಿ ಸ್ಪರ್ಧೆ ನೀಡುತ್ತಿದೆ. ಒಳ್ಳೊಳ್ಳೆ ಧಾರಾವಾಹಿಗಳನ್ನು ನೀಡಿ, ಜನರನ್ನು ತಮ್ಮ ವಾಹಿನಿಗಳತ್ತ ಸೆಳೆಯುವ ಪ್ರಯತ್ನ ಮಾಡ್ತಿದೆ. ಅದರಲ್ಲಿ ಸ್ಟಾರ್ ಸುವರ್ಣದಲ್ಲಿ 'ನಮ್ಮ ಲಚ್ಚಿ', ಕಲರ್ಸ್ ಕನ್ನಡದಲ್ಲಿ 'ಲಕ್ಷ್ಮೀ ಬಾರಮ್ಮ' ಎರಡು ಧಾರವಾಹಿಗಳು ಟಾಪ್‌ನಲ್ಲಿವೆ. ಆದರೆ, ಈ ಎರಡು ಧಾರಾವಾಹಿಗಳು ಒಂದಾಗೋಕೆ ಸಾಧ್ಯವಾ..? ನೋ ವೇ ಚಾನ್ಸೇ ಇಲ್ಲ.
ಸ್ಟಾರ್ ಸುವರ್ಣ ಒಂದು ಕುಟುಂಬ, ಕಲರ್ಸ್ ಕನ್ನಡ ಒಂದು ಕುಟುಂಬ. ಆ ಕುಟುಂಬದೊಳಗೆ ನಡೆಯುವ ಬೇರೆ ಧಾರಾವಾಹಿಗಳಿಗೆ ಇನ್ಜೊಂದು ಧಾರಾವಾಹಿಯ ಕಲಾವಿದರು ಗೆಸ್ಟ್ ಆಗಿ ಹೋಗ್ತಾರೆ. ಯಾಕಂದ್ರೆ ಅವರವರು ಒಂದೇ ಕುಟುಂಬದವರಿದ್ದಂತೆ. ಆದರೆ, ಈಗ ಓಡಾಡುತ್ತಿರುವ ಫೋಟೋ ಬೇರೆಯದ್ದೆ ಕಥೆ ಹೇಳುತ್ತಿದೆ. ವಾವ್ ಸೂಪರ್ ಅಂತ ಎಲ್ರೂ ಹೇಳ್ತಾ ಇದ್ರು, ಇದು ಇಂಪಾಸಿಬಲ್ ಅನ್ನೋದು ನೆನಪಾಗುತ್ತಿದೆ.

ನಮ್ಮ ಲಚ್ಚಿಗೆ ಮೆಚ್ಚಿದ ಪ್ರೇಕ್ಷಕರು
ಲಚ್ಚಿ ಹಳ್ಳಿ ಹುಡುಗಿ. ಅಪ್ಪನನ್ನು ಹುಡುಕಿಕೊಂಡು ಸಿಟಿಗೆ ಬಂದಿದ್ದಾಳೆ. ಆದರೆ ಸಿಟಿಯಲ್ಲಿ ಅಪ್ಪನ ಜೊತೆಗೆ ಇದ್ದರೂ ಸತ್ಯ ಗೊತ್ತಿಲ್ಲ. ತಂಗಿ ರಿಯಾ ಸಾಕಷ್ಟು ಕಾಟ ಕೊಟ್ಟಿದ್ದಾಳೆ.. ಕೊಡುತ್ತಿದ್ದಾಳೆ. ಲಚ್ವಿಯ ಮುಗ್ಧತೆಗೆ ಜನ ಮಾರು ಹೋಗಿದ್ದಾರೆ. ಆದಷ್ಟು ಬೇಗ ಸಂಗಮ್‌ಗೆ ಈ ವಿಚಾರ ತಿಳಿಯಲಿ ಎಂದೇ ಬಯಸುತ್ತಿದ್ದಾರೆ.
ಲಕ್ಷ್ಮೀಬಾರಮ್ಮ ಮಿಸ್ ಮಾಡದೆ ನೋಡುವ ವರ್ಗ
ಈ ಕಡೆ ಕಲರ್ಸ್ ಕನ್ನಡದಲ್ಲಿ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಎಲ್ಲರ ಅಚ್ಚುಮೆಚ್ಚು. ಲಕ್ಷ್ಮೀ ಯಾರಿಗೂ, ಯಾವತ್ತಿಗೂ ಕೆಡುಕನ್ನು ಬಯಸದ ಹುಡುಗಿ. ವೈಷ್ಣವ್ ಮದುವೆಯಾಗಿದ್ದಾಳೆ. ಆದರೆ, ಇನ್ನು ಆ ಪ್ರೀತಿ ಸಿಕ್ಕಿಲ್ಲ. ಆ ಪ್ರೀತಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾಳೆ. ನೋಡುಗರು ಕಾವೇರಿಗೆ ಶಾಪ ಹಾಕಿ, ಕೀರ್ತಿ ದೂರ ಹೋಗಿ, ಲಕ್ಷ್ಮೀ ಮೇಲೆ ಪ್ರೀತಿ ಹುಟ್ಟಲಿ ಎಂದೇ ಬಯಸುತ್ತಿದ್ದಾರೆ. ಹೀಗಾಗಿ ಕಲರ್ಸ್ ಕನ್ನಡದ ಟಾಪ್ 1ರಲ್ಲಿ ಇದೆ.

ನಮ್ಮ ಲಚ್ಚಿಯ ಸಾಂಘವಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಸುಮಾರು 72 ಸಾವಿರ ಮಂದಿ ಸಾಂಘವಿಯನ್ನು ಫಾಲೋ ಮಾಡ್ತಾಯಿದ್ದಾರೆ. ಪ್ರತಿ ದಿನ ಏನಾದರೊಂದು ವಿಡಿಯೋ ಹಂಚಿಕೊಳ್ಳುತ್ತಲೇ ಇರುತ್ತಾಳೆ. ಅದರಲ್ಲೂ ದೀಪಿಕಾ, ಜೆಜೆ, ರಿಯಾ ಜೊತೆಗೆ ರೀಲ್ಸ್ ಮಾಡುವ ಲಚ್ಚಿ, ತನ್ನ ಅಪ್ಪನ ಜೊತೆಗೂ ಹೆಚ್ಚು ವಿಡಿಯೋಗಳನ್ನು ಹಾಕುತ್ತಿರುತ್ತಾಳೆ. ಸಾಂಘವಿ ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀಯ ಫೋಟೋಗಳು ರಾರಾಜಿಸುತ್ತಿವೆ. ಅದುವೇ ಎರಡೂ ಟೀಮ್‌ನವರು ಶೂಟಿಂಗ್ ಸ್ಪಾಟ್‌ನಲ್ಲಿರೋದು.
ಒಂದೇ ಮನೆಯಲ್ಲಿ ನಡೆಯುವ ಧಾರಾವಾಹಿ
ಇಬ್ಬರ ಫೋಟೋ ನೋಡೊ ಏನು ವಿಶೇಷ ಅಂತ ಕೇಳಬಹುದು. ಅದರ ವಿಷಯ ಬೇರೆನೆ ಇದೆ. ಹೀಗೆ ನಮ್ಮ ಲಚ್ಚಿ ಮತ್ತು ಲಕ್ಷ್ಮೀ ಬಾರಮ್ಮ ಒಂದಾಗುವುದಕ್ಕೆ ಕಾರಣ ಬೇರೆನೆ ಇದೆ. ಅದುವೇ ಅ ಒಂದು ಮನೆ. ಎಸ್.. 'ಲಕ್ಷ್ಮೀ ಬಾರಮ್ಮ' ಹಾಗೂ 'ನಮ್ಮ ಲಚ್ಚಿ' ಶೂಟಿಂಗ್ ನಡೆಯುವುದು ಒಂದೇ ಮನೆಯಲ್ಲಿ. ಅದು ಯಲಹಂಕದ ಬಳಿ ಇದೆ. ಹೀಗಾಗಿ ಶೂಟಿಂಗ್‌ಗೆ ಅಂತ ಸಿಕ್ಕಾಗ ಫೋಟೋಗೆ ತೆಗೆಸಿಕೊಂಡಿದ್ದಾರೆ. ವೈಷ್ಣವ್ ಜೊತೆಗೆ ಊಟದ ಜಾಗದಲ್ಲಿ ತೆಗೆಸಿಕೊಂಡ್ರೆ, ಲಕ್ಷ್ಮೀ ಜೊತೆಗೆ ಮನೆ ಪಕ್ಕದ ಗಾರ್ಡನ್ ಬಳಿ ತೆಗೆಸಿಕೊಂಡಿದ್ದಾರೆ. ವಿಚಾರ ಇಷ್ಟೆ.


Click it and Unblock the Notifications











