ಸಂಗಮ್ ಬಂದ ಪ್ರೇಮ ಪತ್ರದ ಬಗ್ಗೆ ದೀಪಿಕಾ ಆಕ್ರೋಶ; ಜಾಜಿ ಎಂಟ್ರಿಗೆ ಫುಲ್ ಸೈಲೆಂಟ್

By ಎಸ್ ಸುಮಂತ್

ಸಂಗಮ್ ಬದುಕಲ್ಲಿ ಜಾಜಿಯ ಆಗಮನವಾಗಿದೆ. ಜಾಜಿಯ ಗುಣಲಕ್ಷಣಗಳೆಲ್ಲಾ ಗಿರಿಜಾಳನ್ನು ನೆನಪಿಸುವಂತೆ ಇದೆ. ಸಂಗಮ್‌ಗಾಗಿ ಜಾಜಿಯ ಮನಸ್ಸು ಮಿಡಿಯುತ್ತಿದೆ. ಸಂಗಮ್‌ಗೆ ಸ್ವಲ್ಪ ಕೆಟ್ಟದಾದರೂ ಜಾಜಿ ಸಹಿಸುವುದಿಲ್ಲ. ಸಂಗಮ್ ಕಷ್ಟ ಎಂದರೆ ಜಾಜಿಗೆ ಬೇಗ ಗೊತ್ತಾಗಿ ಬಿಡುತ್ತದೆ. ಹೀಗಾಗಿಯೇ ಇಬ್ಬರ ನಡುವಿನ ಬಾಂಧವ್ಯ ಹೆಚ್ಚಾಗುತ್ತಿದೆ.

ಸಂಗಮ್ ಇತ್ತೀಚೆಗೆ ಅಪಾಯದಲ್ಲಿ ಸಿಲುಕಿದ್ದರು. ತಾಳಿ ಕಟ್ಟಿಸಿಕೊಂಡ ಹೆಂಡತಿಗೆ ಸಂಗಮ್ ಕಷ್ಟದಲ್ಲಿರುವುದು ತಿಳಿಯಲೇ ಇಲ್ಲ. ಆದರೆ, ಪ್ರೀತಿಸಿದ ಹೃದಯ ಗಿರಿಜಾಳದ್ದಾಗಿದ್ದ ಕಾರಣ, ಸಂಗಮ್ ಎಲ್ಲಿದ್ದಾನೆ ಎಂಬುದು ಗೊತ್ತಾಗಿತ್ತು. ಲಚ್ಚಿ ಹಾಗೂ ಜಾಜಿ ಆ ಸ್ಥಳಕ್ಕೆ ಹೋಗಿ, ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕಾಪಾಡಿದ್ದರು. ಇನ್ನು ಗಂಡನ ಮೇಲೆ ಕೈ ಮಾಡಿದರೆ ಜಾಜಿ ಸುಮ್ಮನೆ ಬಿಡುತ್ತಾಳಾ..?

Namma lacchi serial Jaji break Deepika ego in December 28th episode

ಜಾಜಿ- ಲಚ್ಚಿ ನೆರಳಲ್ಲಿ ಸಂಗಮ್

ಸಂಗಮ್‌ಗೆ ಹಳೆಯ ಪ್ರೀತಿ ನೆನಪಾಗಿ, ಸಂಪಿಗೆಹಳ್ಳಿಗೆ ಹೋದಾಗ ಗಿರಿಜಾಳ ರೂಪವಿರುವ ಜಾಜಿ ಕಣ್ಣ ಮುಂದೆ ಬಂದಳು. ಅವಳಿಗೆ ಪ್ರಾಣಪಾಯವಿದ್ದ ಕಾರಣ ಸಂಗಮ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಾಜಿಯನ್ನು ಸಂಗಮ್ ನೋಡಿಕೊಳ್ಳುವುದರ ಜೊತೆಗೆ, ಸಂಗಮ್‌ನನ್ನು ಜಾಜಿಯೇ ಕಾಳಜಿ ಮಾಡುತ್ತಿದ್ದಾಳೆ. ಹಳೆಯ ಪ್ರೇಮ, ಹೊಸ ಬಂಧವಾಗಿ ಸಂಗಮ್ ಹೃದಯದಲ್ಲಿ ಚಿಗುರುತ್ತಿದೆ.

ದೀಪಿಕಾಗೆ ಹುಟ್ಟುಹಬ್ಬದ ಸಂಭ್ರಮ

ಇಂದು ದೀಪಿಕಾಳ ಹುಟ್ಟುಹಬ್ಬ. ಹೆಂಡತಿಯ ಹುಟ್ಟುಹಬ್ಬವನ್ನು ಸಂಗಮ್ ಸಂಭ್ರಮದಿಂದಾನೇ ಆಚರಿಸಿದ್ದಾನೆ. ಮನೆಯಲ್ಲೆಲ್ಲಾ ಅಲಂಕಾರ ಮಾಡಿದ್ದಾನೆ. ಮಡದಿಗಾಗಿ ಮನೆಯವರೆಲ್ಲಾ ವಿಶ್ ಮಾಡಿದ್ದಾರೆ. ದೀಪಿಕಾ ಕೂಡ ಸೀರೆಯುಟ್ಟು, ಎಲ್ಲರಿಗೂ ಸಪ್ರೈಸ್ ಕೊಟ್ಟಿದ್ದಾಳೆ. ಸೀರೆ ಎಂದರೆ ದೀಪಿಕಾಗೆ ಬೋರಿಂಗ್ ಡ್ರೆಸ್. ಆದರೆ ಸಂಗಮ್‌ಗೆ ಸೀರೆಯಲ್ಲಿಯೇ ನೋಡುವಾಸೆ. ಹೀಗಾಗಿ ಸಂಗಮ್‌ನನ್ನು ಇಂಪ್ರೆಸ್ ಮಾಡಲು ಸೀರೆಯುಟ್ಟು ಬಂದಿದ್ದಾಳೆ.

Namma lacchi serial Jaji break Deepika ego in December 28th episode

ಬೊಕ್ಕೆ ಜೊತೆಗೆ ಪ್ರೇಮ ಪತ್ರ

ದೀಪಿಕಾಳ ಹುಟ್ಟುಹಬ್ಬಕ್ಕೆ ಬ್ಯೂಟಿಫುಲ್ ಆಗಿರುವಂತ ಹೂವಿನ ಬೊಕ್ಕೆಯೊಂದು ಬಂದಿದೆ. ಆ ಬೊಕ್ಕೆಯನ್ನು ಸಂಗಮ್ ತಂದುಕೊಟ್ಟಿರಬಹುದು ಎಂದು ದೀಪಿಕಾ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾಳೆ. ಆದರೆ ಆ ಬೊಕ್ಕೆ ಕೊಟ್ಟಿದ್ದು ನಾನಲ್ಲ ಎಂದು ಸಂಗಮ್ ಹೇಳಿದಾಗಲೇ ಎಲ್ಲರಿಗೂ ಶಾಕ್ ಆಗಿದೆ. ಬೊಕ್ಕೆಯ ಜೊತೆಗೆ ಒಂದು ಲೆಟರ್ ಕೂಡ ಇಡಲಾಗಿತ್ತು. ಆ ಲೆಟರ್ ಅನ್ನು ಸಂಗಮ್ ಓದಿದ್ದಾನೆ. ಅದರಲ್ಲಿ ಸಂಗಮ್‌ಗೆ ಪ್ರೇಮ ಪತ್ರ ಬರೆದು ಉಲ್ಲೇಖಿಸಲಾಗಿತ್ತು. ನಿನ್ನ ಬಿಟ್ಟು ಇರುವುದಕ್ಕೆ ಸಾಧ್ಯವಿಲ್ಲ. ಈ ಜನ್ಮವಲ್ಲ, ಮುಂದಿನ ಏಳೇಳು ಜನ್ಮವಿದ್ದರೂ ನಿನ್ನನ್ನೇ ನಾನು ಪ್ರೀತಿ ಮಾಡುತ್ತೀನಿ ಅಂತೆಲ್ಲಾ ಬರೆದಿತ್ತು. ಈ ಪತ್ರ ನೋಡಿದ ದೀಪಿಕಾ, ಕೆಂಡಾಮಂಡಲಳಾಗಿದ್ದಾಳೆ.

ದೀಪಿಕಾಳ ಕೋಪಕ್ಕೆ ಜಾಜಿ ಬ್ರೇಕ್

ದೀಪಿಕಾಗೆ ಕೋಪ ಅಂತ ಬಂದರೆ ಗಂಡ ಎಂಬುದನ್ನು ನೋಡುವುದಿಲ್ಲ. ಹೀಗಾಗಿ ಕೊರಳ ಪಟ್ಟಿ ಹಿಡಿದು ಕೇಳಿದ್ದಾಳೆ. ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಅಷ್ಟೇನಾ ಅಥವಾ ತಾಳಿ ಏನಾದರೂ ಕಟ್ಟಿದ್ದೀಯಾ..? ಈ ಜನ್ಮ ಮಾತ್ರ ಅಲ್ಲ ಮುಂದಿನ ಜನ್ಮಕ್ಕೂ ಇರುತ್ತೀನಿ ಅಂತ ಬರೆದಿದ್ದಾಳೆ. ಯಾರು ಅವಳು ಅಂತ ಕಿರುಚಾಡಿದ್ದಾಳೆ. ಇದನ್ನು ಮನೆಯವರೆಲ್ಲಾ ಶಾಕಿಂಗ್ ಎನಿಸುವಂತೆ ನೋಡುತ್ತಾ ನಿಂತಿದ್ದರು. ಆದರೆ ಜಾಜಿ ಅಲ್ಲಿಗೆ ಬಂದು, ದೀಪಿಕಾಳ ಕೊಬ್ಬು ಇಳಿಸಿದ್ದಾಳೆ. ಕೊರಳ ಪಟ್ಟಿಯಿಂದ ಕೈಯನ್ನು ಕಿತ್ತು, ಬಿಸಾಡಿದ್ದಾಳೆ. ಎಚ್ಚರಿಕೆಯನ್ನು ನೀಡಿದ್ದಾಳೆ.

More from Filmibeat

English summary
Namma lacchi serial Jaji break Deepika ego in December 28th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X