Namma Lacchi: ರಿಯಾ ಸಿಕ್ಕಿದ ಮೇಲೆ ರೀಲ್ಸ್‌ನಲ್ಲಿ ಬ್ಯುಸಿಯಾದ 'ನಮ್ಮಲಚ್ಚಿ'
ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಮ್ಮ ಲಚ್ಚಿ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಲಚ್ಚಿಯ ಬದುಕಿನ ಬಗ್ಗೆ ಎಲ್ಲರಿಗೂ ಕನಿಕರವಿದೆ. ತಂದೆಯ ಮನೆಯಲ್ಲಿಯೇ ಇದ್ದರು ಇವರೇ ನಮ್ಮ ತಂದೆ ಎಂಬುದು ಲಚ್ಚಿಗೆ ಗೊತ್ತಾಗುತ್ತಿಲ್ಲ. ಕರುಳ ಸಂಬಂಧ ಆಗಾಗ ಸಂಗಮ್‌ಗೆ ಸದ್ದು ಮಾಡುತ್ತೆ. ಅಲರ್ಟ್ ಆದ ಮನಸ್ಸು ಗುರುತಿಸುವಲ್ಲಿ ಫೇಲ್ ಆಗ್ತಾ ಇದೆ.
ಸದ್ಯ ಲಚ್ಚಿ ಈಗ ಹುಡುಗ ಅಲ್ಲ ಹುಡುಗಿ. ಇದು ಹೇಳಿ ಕೇಳಿ ರೀಲ್ಸ್ ಕಾಲ. ನಮ್ಮ ಲಚ್ಚಿ ಕೂಡ ರೀಲ್ಸ್ ಮಾಡುವಲ್ಲಿ ಬ್ಯುಸಿಯಾಗಿದ್ದಾಳೆ. ಅದೆಲ್ಲೂ ರಿಯಾ ಬೇರೆ ಜೊತೆಯಾಗಿರುವುದು ಇನ್ನಷ್ಟು ಎನರ್ಜಿ ತಂದಿದೆ. ಸದ್ಯ ಅಕ್ಕ ತಂಗಿಯರನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಹಾರ್ಟ್ ನೀಡುತ್ತಿದ್ದಾರೆ.
ಲಚ್ಚಿ ಕಂಡರೆ ಕೋಪಿಸಿಕೊಳ್ಳುವ ರಿಯಾ
ಲಚ್ಚಿ ಕೂಡ ಸಂಗಮ್ ಮಗಳು. ಆದರೆ, ಅದನ್ನು ಹೇಳುವ ಮುನ್ನ ದೀಪಿಕಾಳ ಕಾರು ಅಪಘಾತದಿಂದ ಗಿರಿಜಾ ಹೋಗೆ ಬಿಟ್ಟಳು. ಗೋಪಾಲ, ಮಗಳನ್ನಾದರೂ ಸಂಗಮ್ ಬಳಿ ತಲುಪಿಸೋಣಾ ಎನ್ನುವಷ್ಟರಲ್ಲಿ ಕಥೆ ಏನೇನೋ ಆಗೋಯ್ತು. ಆದರೂ ಕಡೆಗೆ ಲಚ್ಚಿ ಸಂಗಮ್ ಮನೆಗೆ ಬಂದಿದ್ದಾಳೆ. ಸ್ಲಂನಿಂದ ಬಂದ ಲಚ್ಚಿಯನ್ನು ಕಂಡರೆ ರಿಯಾಗೆ ಒಂಚೂರು ಇಷ್ಟವಾಗುವುದಿಲ್ಲ. ಯಾವಾಗಲೂ ಅವಳನ್ನು ಬೈಯ್ಯುತ್ತಲೇ ಇರುತ್ತಾಳೆ. ಆದರೆ ರಿಯಲ್ ಲೈಫ್‌ನಲ್ಲಿ ಹಾಗಲ್ಲ.ಇಬ್ಬರು ಕ್ಲೋಸ್ ಅಂದ್ರೆ ಕ್ಲೋಸ್.

ಲಚ್ಚಿ - ರಿಯಾ ಕಾಂಬಿನೇಷನ್ ಸೂಪರ್
ಧಾರಾವಾಹಿಯ ಒಳಗೆ ರಿಯಾಗೆ ಸಂಗೀತದ ಗಂಧ ಗಾಳಿ ಗೊತ್ತಿಲ್ಲ. ಈಗಿನ ಟ್ರೆಂಡ್‌ಗೆ ಹೊಂದುಕೊಂಡಿದ್ದಾಳೆ. ಅಂದ್ರೆ, ರ್ಯಾಪ್ ಸಾಂಗ್ ಆಡೋದು, ರೀಲ್ಸ್ ಮಾಡೋದು. ಲಚ್ಚಿ ಹಂಗಲ್ಲ. ಕಂಠ ಅಂದ್ರೆ, ಹೀಗಿರಬೇಕೆಂಬಂತೆ ಇದೆ. ಆದರೆ, ರಿಯಲ್ ಲೈಫ್‌ನಲ್ಲಿ ರಿಯಾ ಮತ್ತು ಲಚ್ಚಿ ಸೇರಿ ಸಿಕ್ಕಾಪಟ್ಟೆ ರೀಲ್ಸ್ ಮಾಡುತ್ತಾರೆ. ಲಚ್ಚಿ ಹುಡುಗ ರಿಯಾ ಹುಡುಗಿ. ಶೂಟಿಂಗ್ ಸ್ಪಾಟ್ ನಲ್ಲಿ ಗ್ಯಾಪ್ ಸಿಕ್ಕಿದ್ರೆ ಸಾಕು, ರೀಲ್ಸ್ ಮಾಡೋದು, ಅಪ್ಲೋಡ್ ಮಾಡೋದು. ಇದರಿಂದ ಇಬ್ಬರಿಗೂ ಫ್ಯಾನ್ಸ್ ಫಾಲೋವರ್ಸ್ ಕೂಡ ಹೆಚ್ಚಾಗಿದ್ದಾರೆ.
ಲಚ್ಚಿಗೆ ಫ್ಯಾನ್ಸ್ ಜಾಸ್ತಿ
ನಮ್ಮ ಲಚ್ಚಿ ಧಾರಾವಾಹಿ ಬಂದಾಗಿನಿಂದ ಲಚ್ಚಿ ಅಲಿಯಾಸ್ ಸಾಂಘವಿಕಗೆ ಫ್ಯಾನ್ಸ್ ಏನು ಕಡಿಮೆ ಇಲ್ಲ. ಸಾಂಘವಿಕ ನಟನೆಗೆ ಫಿದಾ ಆಗಿದ್ದಾರೆ. ಯಾಕಂದ್ರೆ ಇಷ್ಟು ಚಿಕ್ಕ ವಯಸ್ಸಿಗೆ, ಅವಮಾನ, ಹಸಿವು, ತಾಯಿ ಕಳೆದುಕೊಳ್ಳುವುದು ಎಲ್ಲಾ ರೀತಿಯ ನಟನೆಯನ್ನು ಸಲೀಸಾಗಿ ನಿಭಾಯಿಸುತ್ತಾಳೆ. ಅಷ್ಟೆ ಅಲ್ಲ ಸಹಜವಾಗಿಯೇ ಮೂಡಿ ಬರುತ್ತೆ. ಅಷ್ಟೇ ಅಲ್ಲ ಅಷ್ಟುದ್ದುದ್ದ ಹಳ್ಳಿ ಸೊಗಡಿನ ಭಾಷೆಯಿದ್ದರೂ ಡೈಲಾಗ್ ಸಖತ್ತಾಗಿನೇ ಹೇಳುತ್ತಾಳೆ. ಹೀಗಾಗಿ ಲಚ್ಚಿಯ ನಟನೆಗೆ ಎಲ್ಲರೂ ಫ್ಯಾನ್ಸ್ ಆಗಿದ್ದಾರೆ. ಈಗ ರಿಯಾ ಮತ್ತು ಲಚ್ಚಿ ರೀಲ್ಸ್‌ಗೂ ಲಚ್ಚಿಯ ನಟನೆಗೆ ಬೇಷ್ ಎಂದಿದ್ದಾರೆ.

ಲಚ್ಚಿಯನ್ನು ಬಳಸಿಕೊಳ್ಳುತ್ತಿರುವ ದೀಪಿಕಾ
ಲಚ್ಚಿಯನ್ನು ಬೆಂಗಳೂರಿಗೆ ಕರೆದುಕೊಂಡು ಬರುವಾಗ ಶಾಂತಾಳ ಕೈಗೆ ಸಿಗಬಾರದು ಎಂಬ ಕಾರಣಕ್ಕೆ ಗೋಪಾಲ ಹುಡುಗನ ವೇಷ ಹಾಕಿದ. ಈಗ ಲಚ್ಚಿಗೆ ಅದೇ ವೇಷ ಮುಂದುವರೆದಿದೆ. ಆದರೆ ಲಚ್ಚಿಗೆ ಮತ್ತೆ ಹುಡುಗಿ ವೇಷಕ್ಕೆ ಮರಳುವ ಆಸೆ. ಅದನ್ನ ಇತ್ತೀಚೆಗೆ ಸ್ನಾನ ಮಾಡುವಾಗಲೂ ಅಂದುಕೊಳ್ಳುತ್ತಿದ್ದಳು. ಆದರೆ ಅದ್ಯಾವಾಗ ಸಾಧ್ಯವಾಗುತ್ತೋ ಏನೋ. ಆದ್ರೆ ದೀಪಿಕಾ ಮಾತ್ರ ಲಚ್ಚಿಗೆ ಇರುವ ಧ್ವನಿಯಿಂದ ಅವಳನ್ನ ಸ್ವಂತ ಮಗಳಷ್ಟೇ ಮುದ್ದು ಮಾಡುತ್ತಿದ್ದಾಳೆ.


Click it and Unblock the Notifications











