Namma Lacchi: ಗಿರಿಜಾಳ ಸಾವಿನ ಸತ್ಯ ಸಂಗಮ್ ಎದುರು ಬಯಲು; ಹಾಗಾದ್ರೆ ಜಾಜಿ ಯಾರು?

By ಎಸ್ ಸುಮಂತ್

'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ವೀಕ್ಷಕರು ಬಯಸಿದಂತಹ ದೃಶ್ಯಗಳೇ ಮೂಡಿ ಬರುತ್ತಿವೆ. ಅದುವೇ ಗಿರಿಜಾ ವಾಪಾಸ್ ಬಂದಿದ್ದು. ನೇಹಾ ಗೌಡ 'ನಮ್ಮ ಲಚ್ಚಿ' ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದರು. ಆದರೆ, ಬಹಳಷ್ಟು ಸಮಯ ಧಾರಾವಾಹಿಯಲ್ಲಿ ಉಳಿದುಕೊಳ್ಳಲಿಲ್ಲ. ಗಿರಿಜಾ ಪಾತ್ರ ನೋಡ ನೋಡುತ್ತಲೇ ಸತ್ತೇ ಹೋಯಿತು.

ಗಿರಿಜಾಳ ಹಳ್ಳಿ ಗೆಟಪ್, ಆ ಮಾತು, ಲಚ್ಚಿ ಹಾಗೂ ಗಿರಿಜಾ ಬಾಂಡಿಂಗ್ ಎಲ್ಲವೂ ನೋಡುಗರನ್ನು ಸೆಳೆದಿತ್ತು. ಆದರೆ, ಬೇಗ ಆ ಪಾತ್ರ ಮುಗಿದು ಹೋಗಿದ್ದು ಮಾತ್ರ ವೀಕ್ಷಕರಿಗೆ ಬೇಸರ ತರಿಸಿತ್ತು. ಆ ಬೇಸರವನ್ನು ನೋಡುಗರು ಹೊರಗೆ ಹಾಕಿದ್ದರು. ನಿರ್ದೇಶಕರು ಮತ್ತೆ ಆ ಪಾತ್ರವನ್ನು ತರುತ್ತಾರೆ ಎಂಬ ನಂಬಿಕೆ ವೀಕ್ಷಕರಿಗೆ ಇರಲಿಲ್ಲ. ಆದರೆ, ಈಗ ಆ ಪಾತ್ರವನ್ನು ತಂದು ಆಸಕ್ತಿ ಮೂಡಿಸಿದ್ದಾರೆ.

Namma Lacchi serial Sagar revealed Girijas death Who is Jaji?

ಸತ್ಯ ಹೇಳಲು ಸಾಗರ್ ತಯಾರಿ

ಸಾಗರ್‌ಗೆ ತನ್ನ ತಮ್ಮನ ಪ್ರೀತಿ ವಿಚಾರ ಗೊತ್ತು. ಗಿರಿಜಾಳನ್ನು ಹುಡುಕಿ ಹೆಚ್ಚು ಕಾಳಜಿ ಮಾಡಿದ್ದೆ ಸಾಗರ್. ಗಿರಿಜಾ ಮತ್ತು ಸಂಗಮ್‌ಗೆ ಒಬ್ಬ ಮಗಳಿದ್ದಾಳೆ ಎಂಬುದು ಗೊತ್ತು. ಆದರೆ, ಆ ಮಗಳು ತಮ್ಮ ಮನೆಯಲ್ಲಿಯೇ ಇದ್ದಾಳೆಂಬುದು ಮಾತ್ರ ಗೊತ್ತಿಲ್ಲ. ಈಗ ಗಿರಿಜಾಳ ಸಾವಿನ ವಿಚಾರವನ್ನು ಸಂಗಮ್‌ಗೆ ತಿಳಿಸುವುದಕ್ಕೆ, ಸಾಗರ್ ಕಂಠಪೂರ್ತಿ ಕುಡಿದಿದ್ದಾನೆ.

ಗಿರಿಜಾಳ ವಿಚಾರ ತಿಳಿಸಿದ ಸಾಗರ್

ಸಂಗಮ್ ಕಿವಿಗೆ ಬಿತ್ತು ಗಿರಿಜಾ ವಿಷ್ಯ

ಕುಡಿದ ಮತ್ತಿನಲ್ಲಿದ್ದ ಸಾಗರ್, ಸಂಗಮ್ ಬಳಿ ವಿಚಾರವನ್ನು ತಿಳಿಸಿದ್ದಾನೆ. "ಈ ಮೊದಲೇ ವಿಚಾರವನ್ನು ತಿಳಿಸಬೇಕಿತ್ತು. ಆದರೆ, ತಿಳಿಸುವುದಕ್ಕೆ ಆಗಲಿಲ್ಲ. ಮೊದಲೇ ಸತ್ಯ ಹೇಳಿದ್ದರೆ ಜಾಜಿಯನ್ನು ನೀನು ಗಿರಿಜಾ ಎಂದು ಮನೆಗೆ ಕರೆದುಕೊಂಡು ಬರುತ್ತಾ ಇರಲಿಲ್ಲ. ಗಿರಿಜಾ ಯಾವತ್ತೋ ಈ ಲೋಕ ಬಿಟ್ಟು ಹೋಗಿದ್ದಾಳೆ" ಎಂದು ಸತ್ಯವನ್ನು ಹೇಳಿದ್ದಾನೆ. ಗಿರಿಜಾಳ ಸಾವಿನ ಬಗ್ಗೆ ಕಡೆಗೂ ಸಂಗಮ್ ಬಳಿ ಬಾಯ್ಬಿಟ್ಟಿದ್ದಾನೆ.

ಜಾಜಿಯ ಆರೈಕೆಯಲ್ಲಿದ್ದ ಸಂಗಮ್

ಸಂಗಮ್ ಗೆ ಗಿರಿಜಾಳ ಸಾವನ್ನು ಸಹಿಸುವ ಶಕ್ತಿ ಇಲ್ಲ. ಸಾಗರ್ ಹೇಳಿದಾಕ್ಷಣ ದಿಗ್ಭ್ರಾಂತನಾಗಿದ್ದಾನೆ. ಗಿರಿಜಾ ಬದುಕಿಲ್ಲ ಎಂಬುದನ್ನೇ ಅವನಿಂದ ಸಹಿಸುವುದಕ್ಕೆ ಸಾಧ್ಯವಿಲ್ಲ. ಜಾಜಿ ಸಿಕ್ಕ ಮೇಲೆ ಸಂಗಮ್ ಖುಷಿಯಾಗಿದ್ದಾನೆ. ತನ್ನ ಹಳೆಯ ಗೆಳತಿಯೇ ಸಿಕ್ಕಿದ್ದಾಳೆಂಬ ಖುಷಿಯಲ್ಲಿದ್ದಾನೆ. ಜಾಜಿಯನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದಾನೆ. ಕಾಳಜಿ ಮಾಡುತ್ತಿದ್ದಾನೆ. ಅದರ ಜೊತೆಗೆ ಲಚ್ಚಿ ಕೂಡ ತನ್ನ ಅವ್ವನಂತೆಯೇ ಕಾಣುತ್ತಿದ್ದಾಳೆ. ಆದರೆ ಈಗ ಸಾಗರ್ ಹೇಳಿದ ಮಾತು ಸಂಗಮ್‌ಗೆ ಎದೆ ಒಡೆದಂತೆ ಆಗಿದೆ. ಗಿರಿಜಾ ಬದುಕಿಲ್ಲವಾ..? ಜಾಜಿ, ಗಿರಿಜಾ ಅಲ್ಲವಾ ಎಂಬ ಪ್ರಶ್ನೆಗಳನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ.

More from Filmibeat

English summary
Namma Lacchi serial Sagar revealed Girija's death. Than who is Jaji
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X