Namma Lacchi: ಲಚ್ಚಿಯ ಹಾಡಿನಿಂದಾನೇ ಉಳಿಯಿತು ಪ್ರಾಣ.. ಕಾಣದೂರಿನಲ್ಲಿ ಜೊತೆಯಾದ ಗಲ್ಲಿ ಬಾಯ್ಸ್..!
ಲಚ್ಚಿ ಊರಿನಿಂದ ಬೆಂಗಳೂರಿಗೆ ಬಂದವಳು ಏನಾಗಿ ಬಿಡುತ್ತಾಳೋ ಎಂಬ ಭಯವಿತ್ತು. ಆದರೆ ಲಚ್ಚಿಗೆ ದೇವರಂತ ಸ್ನೇಹಿತರು ಸಿಕ್ಕಿದ್ದಾರೆ. ತಮ್ಮಂತೆಯೇ ಅವಳನ್ನು ನೋಡಿಕೊಳ್ಳುತ್ತಿದ್ದಾರೆ. ಗೋಪಾಲ ಮೊದಲೇ ಪ್ಲ್ಯಾನ್ ಮಾಡಿದ್ದು ಒಳ್ಳೆಯದ್ದೆ ಆಯ್ತು. ಲಚ್ಚಿಗೆ ಹುಡುಗನ ವೇಷ ಹಾಕಿದ್ದನು. ಈಗ ಅವನನ್ನು ಹುಡುಗ ಎಂದುಕೊಂಡೆ ಎಲ್ಲರೂ ಸ್ನೇಹ ಬೆಳೆಸಿದ್ದಾರೆ. ತಾವೂ ತಿನ್ನುವ ಆಹಾರದಲ್ಲಿಯೇ ಅವನಿಗೂ ನೀಡುತ್ತಿದ್ದಾರೆ. ತಾವೂ ಹಾಕುವ ಬಟ್ಟೆಯನ್ನೇ ಅವನಿಗೂ ಕೊಡುತ್ತಿದ್ದಾರೆ.
ಲಚ್ಚಿಗೆ ಯಾರ ನೆನಪು ಬಾರದಂತೆ ಆ ಮೂರು ಜನ ಅಣ್ಣಯ್ಯಂದಿರು ನೋಡಿಕೊಳ್ಳುತ್ತಿದ್ದಾರೆ. ಕಷ್ಟ ಸುಖದಲ್ಲೂ ಜೊತೆಯಾಗಿದ್ದಾರೆ. ಲಚ್ಚಿ ಇಂಥದ್ದು ಬೇಕು ಎಂದರೆ ಸಾಕು ಅದು ಕಷ್ಟವೇ ಆದರೂ ಅದನ್ನು ಈಡೇರಿಸಲು ಯತ್ನಿಸುತ್ತಾರೆ. ಈಗ ಅದೇ ಆಸೆಯಿಂದ ಲಚ್ಚಿಯ ಪ್ರಾಣಕ್ಕೆ ಕುತ್ತು ಬಂದಿದೆ.

ತಂದೆಯ ಮನೆಯಲ್ಲಿಯೇ ಸಂಕಷ್ಟಕ್ಕೆ ಸಿಲುಕಿದ ಲಚ್ಚಿ
ಲಚ್ಚಿ ಎಲ್ಲಿ ಸೇರಬೇಕೋ ಅಲ್ಲಿಗೆ ಸೇರಿದ್ದಾಳೆ. ಆದರೆ ಸೇರಿದ ರೀತಿ ಸರಿಯಾಗಿಲ್ಲ. ಮಗಳಾಗಿ ಬರಬೇಕಾದವಳು ಕೆಲಸದಾಳಿನ ಕಡೆಯವಳಾಗಿ ಬಂದಿದ್ದಾಳೆ. ಅಪ್ಪ ಇವರೇ ಎಂದು ಗೊತ್ತಿಲ್ಲದೆ ಅವರ ಮನೆಯಲ್ಲಿಯೇ ಊಟ ಮಾಡುತ್ತಾಳೆ. ಸಂಗಮ್‌ನನ್ನು ನೋಡಲೇಬೇಕೆಂದು ಒಳಗೆ ಹೋದ ಲಚ್ಚಿ ಲಗಲಾಕಿಕೊಂಡಿದ್ದಾಳೆ. ಅಲ್ಲಿಂದ ಹೊರಗೆ ಬರಲಾಗದೆ ಹಲವು ರೀತಿಯಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದಳು. ವಾಷಿಂಗ್ ಮಶಿನ್ ಒಳಗೆ ಸಿಲುಕಿ ಪ್ರಾಣ ಉಳಿಸಿಕೊಂಡವಳು, ಈಗ ಹೊಂಡಕ್ಕೆ ಬಿದ್ದಿದ್ದಾಳೆ.
ಲಚ್ಚಿ ಏನಾದಳು ಅಂತ ಹುಡುಗರೆಲ್ಕಾ ಹುಡುಕುತ್ತಾ ಇದ್ದರು. ಆದರೂ ಎಲ್ಲಿಯೂ ಸಿಕ್ಕಿಲ್ಲ. ಕಡೆಗೆ ಮೂವರು ಮಾತನಾಡುತ್ತಾ ಬರುವಾಗ ಲಚ್ಚಿ ಆ ಕೆಸರಿನ ಹೊಂಡದಲ್ಲಿ ಬಿದ್ದಿದ್ದು ಗೊತ್ತಾಯ್ತು. ತಕ್ಷಣ ಗರಿಗಳನ್ನೆಲ್ಲಾ ತೆಗೆದು ಬಿಸಾಕಿ, ಅಲ್ಲಿಯೇ ಇದ್ದ ಕಡ್ಡಿಗಳನ್ನು ಜೋಡಿಸಿ, ಲಚ್ವಿಯನ್ನು ಕಾಪಾಡಿದರು. ಲಚ್ವಿ ಅವರು ನೀಡಿದ ಕಡ್ಡಿಗಳ ಸಹಾಯದಿಂದ ಮೇಲೆ ಹತ್ತಿಕೊಂಡು ಬಂದಳು. ಸ್ನೇಹಿತನ ಪ್ರಾಣ ಉಳಿದಿದ್ದಕ್ಕೆ ಮೂವರು ನಿಟ್ಟುಸಿರು ಬಿಟ್ಟಿದ್ದಾರೆ. ಲಚ್ಚಿಗೂ ಹೊಸ ಜೀವನ ಸಿಕ್ಕಂತೆ ಆಗಿದೆ.
ಲಚ್ಚಿಯ ಸ್ನೇಹಿತರು ಅದೆಷ್ಟು ಒಳ್ಳೆಯವರು
ಲಚ್ಚಿಗೆ ಬೆಂಗಳೂರಿನ ಬೀದಿಯಲ್ಲಿ ಸಿಕ್ಕವರು ಈ ಸ್ನೇಹಿತರು. ಅಂದಿನಿಂದ ಲಚ್ಚಿಯನ್ನು ತಮ್ಮ ಜನರು ತೆಗೆ ಹುಟ್ಟಿದವನಂತೆ ಸಾಕುತ್ತಿದ್ದಾರೆ. ಈಗ ಅವನು ಕಾಣದೆ ಇರುವುದಕ್ಕೆ ಎಲ್ಲಾ ಕಡೆ ಹುಡುಕುತ್ತಾ ಬಂದರು. ಲಚ್ಚಿಗೆ ಅವರು ಬರುತ್ತಿದ್ದ ಧ್ವನಿ ಕೇಳಿದಾಗ, ಹಾಡು ಹೇಳಲು ಶುರು ಮಾಡಿದಳು. ಲಚ್ಚಿಯ ಧ್ವನಿ ಕೇಳುತ್ತಿದ್ದಂತೆ, ಇಲ್ಲೆ ಎಲ್ಲೋ ಇದ್ದಾಳೆ ಎಂದು ಭಾಸವಾಗಿ, ಲಚ್ಚಿಯನ್ನು ಕಂಡು ಹಿಡಿದಿದ್ದಾರೆ. ಕಡೆಗೂ ಲಚ್ಚಿಯನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ.

ದೀಪಿಕಾಗೆ ಮಗಳದ್ದೇ ದೊಡ್ಡ ಟೆನ್ಶನ್ ಆಗಿದೆ. ಅವಳನ್ನು ದೊಡ್ಡ ದೊಡ್ಡ ಸಿಂಗರ್ ಆಗಿ ಮಾಡಬೇಕೆಂಬುದು ದೀಪಿಕಾಳ ಆಸೆ. ಸಂಗಮ್ ರೀತಿಯಲ್ಲಿಯೇ ರಿಯಾ ಕೂಡ ಹೆಸರು ಮಾಡಬೇಕು ಎಂದು. ಆದರೆ ರಿಯಾಗೆ ಸಂಗೀತದ ಗಂಧ ಗಾಳಿಯೂ ಗೊತ್ತಿಲ್ಲ. ಸಂಗಮ್ ಸಾಕಷ್ಟು ಸಲ ಹೇಳಿಕೊಟ್ಟರು ರಿಯಾ ಕೇಳುವ ಗೋಜಿಗೆ ಹೋಗಿಲ್ಲ. ಆ ಶ್ರದ್ಧೆ ಅವಳಲ್ಲಿ ಇಲ್ಲ ಎಂಬುದಂತು ಸಂಗಮ್‌ಗೆ ಅರ್ಥವಾಯ್ತು. ಹೀಗಾಗಿ ರಿಯಾಗೆ ಸಂಗೀತ ಹೇಳಿಕೊಡುವ ಹುಸಾಬರಿಗೆ ಹೋಗಲ್ಲ. ದೀಪಿಕಾಗೆ ಇದೇ ಚಿಂತೆ. ಅದೇ ಚಿಂತೆಯಲ್ಲಿ ರಸ್ತೆಯಲ್ಲಿ ಹೋಗುವಾಗ ಕೇಳಿಸಿದ್ದು ಲಚ್ಚಿ ಧ್ವನಿ. ಆ ಧ್ವನಿಯನ್ನೇ ಹುಡುಕಿಕೊಂಡು ಹೊರಟಿದ್ದಾಳೆ ದೀಪಿಕಾ.


Click it and Unblock the Notifications











