Namma Lacchi: ಲಚ್ಚಿ ಕಂಡರೆ ಕೆಂಡ ಕಾರುವ ರಿಯಾ, ಅವಳನ್ನೇ ಪ್ರೀತಿ ಮಾಡುವ ಕಾಲ ದೂರವಿಲ್ಲ!
ರಿಯಾಳನ್ನು ಟಾಪ್ ಸಿಂಗರ್ ಮಾಡಬೇಕು ಎಂದುಕೊಂಡು ದೀಪಿಕಾ ಸಾಕಷ್ಟು ಹರಸಾಹಸ ಮಾಡುತ್ತಿದ್ದಾಳೆ. ರಿಯಾಗೆ ದೊಡ್ಡ ಸ್ಟಾರ್ ಆಗುವ ಯಾವ ಲಕ್ಷಣವೂ ಇಲ್ಲ. ಆದರೆ ಹೇಗಾದರೂ ಮಾಡಿ ಅವಳನ್ನು ಸ್ಟಾರ್ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾಳೆ. ಸಂಗಮ್ ಕೈನಲ್ಲಿ ಕೂಡ ರಿಯಾಳಿಗೆ ಸಂಗೀತ ಕಲಿಸಿಕೊಡುವುದಕ್ಕೆ ಸಾಧ್ಯವೇ ಆಗಲಿಲ್ಲ.
ಆದರೆ, ದೀಪಿಕಾ ಮಾಡಿದ ಪ್ಲ್ಯಾನ್‌ಗೆ ಇವತ್ತು ರಿಯಾಳಿಗೆ ಸ್ಟಾರ್ ಸಿಂಗರ್ ಆಗುವ ಎಲ್ಲಾ ಲಕ್ಷಣಗಳು ಇದೆ ಎಂದು ಎಲ್ಲರೂ ನಂಬುತ್ತಿದ್ದಾರೆ. ಲಚ್ಚಿಯ ಧ್ವನಿಗೆ ಲಿಪ್ ಸಿಂಕ್ ಮಾಡಿ ರಿಯಾ ಫೇಮಸ್ ಆಗುತ್ತಿದ್ದಾಳೆ. ಆದರೆ, ಆ ಸತ್ಯ ತಿಳಿಯದೆ ಯಾವಾಗಲೂ ಲಚ್ಚಿಯ ಮೇಲೆ ಕೆಂಡಕಾರುತ್ತಿದ್ದಾಳೆ.

ಸ್ನೇಹಿತರ ಮುಂದೆ ಲಚ್ಚಿಗೆ ಅವಮಾನ
ರಿಯಾಗೆ ಲಚ್ಚಿಯನ್ನು ಕಂಡರೆ ಆಗುವುದಿಲ್ಲ. ಅದರಲ್ಲೂ ತನ್ನ ಮಮ್ಮ ತನಗಿಂತ ಅವನನ್ನು ಪ್ರೊಟೆಕ್ಟ್ ಮಾಡುವುದು ಸ್ವಲ್ಪವೂ ಇಷ್ಟವಿಲ್ಲ. ಹೀಗಾಗಿ ಲಚ್ಚಿಯನ್ನು ಕಂಡಾಗೆಲ್ಲಾ ಬೈಯ್ಯುತ್ತಲೇ ಇರುತ್ತಾಳೆ. ಈಗ ಮನೆಗೆ ಫ್ರೆಂಡ್ಸ್ ಬೇರೆ ಬಂದು ಬಿಟ್ಟಿದ್ದಾರೆ. ಅವರ ಜೊತೆಗೆ ಕೂತೂ ಹರಟೆ ಹೊಡೆಯುತ್ತಿದ್ದಾಳೆ ರಿಯಾ. ಅದೇ ಸಮಯಕ್ಕೆ ಪಾಪ ಲಚ್ಚಿ ಕೂಡ ಅಲ್ಲಿಗೆ ಬಂದಿದ್ದಾಳೆ. ತಕ್ಷಣ ರಿಯಾ, ಹೇ ಸ್ಲಂ ಬಾಯ್ ಅಂತ ಕರೆದು, ಫ್ರೆಂಡ್ಸ್ ಮುಂದೆ ಅವಮಾನ ಮಾಡಿದ್ದಾಳೆ.
ಲಚ್ಚಿಯ ರಿಯಲ್ ವಾಯ್ಸ್ ಕೇಳಿದ್ದರೆ ಅಷ್ಟೇ
ರಿಯಾಗೆ ಸಂಗೀತದ ಗಂಧ ಗಾಳಿಯೂ ಗೊತ್ತಿಲ್ಲ. ಆದರೆ, ಲಚ್ಚಿ ಅದರಲ್ಲಿ ಪಂಟರು. ಕಲಿಯದೇನೆ ಸಂಗೀತ ಕಲಾ ದೇವಿ ಒಲಿದು ಬಂದಿದ್ದಾಳೆ. ಲಚ್ಚಿಯ ಕಂಠಕ್ಕೆ ಮನಸೋಲದವರು ಇಲ್ಲ. ಅಪ್ಪನ ಕಂಠವೇ ಬಂದಿದೆ. ಅದಕ್ಕೆ ಗಿರಿಜಾ ಅವಳನ್ನು ಹಾಡುವುದಕ್ಕೆ ಬಿಡುತ್ತಿರಲಿಲ್ಲ. ಈಗ ರಿಯಾ ಅವಮಾನ ಮಾಡುತ್ತಿದ್ದಾಳೆ. ನನ್ನ ಹಾಡಿನ ಬಗ್ಗೆ ಕಮೆಂಟ್ ಮಾಡುತ್ತಿದ್ದೀಯಲ್ಲ. ನೀನು ಹಾಡು ನೋಡೋಣಾ ಎಂದಾಗ, ಲಚ್ಚಿ ತನ್ನ ವಾಯ್ಸ್ ಬದಲಾಯಿಸಿಕೊಂಡಿದ್ದಾಳೆ. ಯಾಕಂದ್ರೆ, ದೀಪಿಕಾಗೆ ಯಾರ ಮುಂದೆಯೂ ಹಾಡುವುದಿಲ್ಲ ಎಂದು ಲಚ್ಚಿ ಪ್ರಾಮೀಸ್ ಮಾಡಿದ್ದಾಳೆ.
ಮಗಳಿಗೆ ಬುದ್ದಿ ಹೇಳಿದ ದೀಪಿಕಾ
ಲಚ್ಚಿಯನ್ನು ರಿಯಾ ಫ್ರೆಂಡ್ಸ್ ಎಲ್ಲಾ ಸೇರಿಕೊಂಡು ಕಿಂಡಲ್ ಮಾಡುತ್ತಾ ಇದ್ದದ್ದನ್ನು ದೀಪಿಕಾ ಗಮನಿಸಿ, ಗದರಿದ್ದಾಳೆ. ರಿಯಾಳ ಫ್ರೆಂಡ್ಸ್ ಎಲ್ಲಾ, ದೀಪಿಕಾಗಳಿಗೆ ಎದುರು ಮಾತನಾಡಿದ್ದಾರೆ. ಬಳಿಕ ಫ್ರೆಂಡ್ಸ್ ಮುಂದೆ ಅವಮಾನ ಆಯ್ತು ಅಂತ ರಿಯಾ ಕೋಪ ಮಾಡಿಕೊಂಡಿದ್ದಾಳೆ. ಆದರೆ, ದೀಪಿಕಾ ಅವಳನ್ನು ಸಮಾಧಾನ ಮಾಡಿ, ಒಳಗೆ ಕರೆದುಕೊಂಡು ಹೋಗಿದ್ದಾಳೆ. ಅವಳನ್ನು ಯಾಕೆ ಅಷ್ಟು ಪ್ರೊಟೆಕ್ಟ್ ಮಾಡುವುದು ಎಂಬುದನ್ನು ತಿಳಿಸಿದ್ದಾಳೆ. ಅವಳದ್ದೇ ಧ್ವನಿಯಿಂದ ನೀನು ಫೇಮಸ್ ಆಗಿರುವುದು ಎಂಬುದನ್ನು ಹೇಳಿದ್ದಾಳೆ.

ಸಂಗಮ್‌ಗೆ ನಿಜವಾದ ಧ್ವನಿ ಗೊತ್ತಾಗುವ ಸಮಯ
ಲಚ್ಚಿಗೆ ತುಂಬಾ ಬೇಸರ ಆದಾಗ ಹಾಡು ಹಾಡುತ್ತಾ ಕುಳಿತು ಬಿಡುತ್ತಾಳೆ. ಅಷ್ಟೇ ಅಲ್ಲ ಅಮ್ಮನ ನೆನಪಾದಾಗಲೂ ಹಾಡು ಹಾಡುತ್ತಾಳೆ. ಈಗ ಒಬ್ಬಳೆ ಕೂತು ಹಾಡು ಹಾಡುತ್ತಾ ಕುಳಿತಿದ್ದಾಳೆ. ಆ ಹಾಡಿನ ಗಾನ ಸಂಗಮ್ ಕಿವಿಗೆ ಬಿದ್ದಿದೆ. ಈ ಧ್ವನಿಯನ್ನು ಮಗಳು ರಿಯಾದ್ದೇ ಎಂದು ದೀಪಿಕಾ ನಂಬಿಸಿಬಿಟ್ಟಿದ್ದಾಳೆ. ಆದರೆ, ಎದುರಿಗೆ ಹಾಡುವುದಕ್ಕೆ ಆಗಲ್ಲ ಎಂದಿದ್ದಾಳೆ. ಈಗ ಮನೆಯಿಂದಾನೇ ಆ ಧ್ವನಿ ಬರುತ್ತಿರುವ ಕಾರಣ ಮಗಳದ್ದೇ ಎಂದುಕೊಂಡು ಹೋಗಿದ್ದಾನೆ. ಮಗಳ ವಾಯ್ಸ್ ಕೇಳಬೇಕು ಎಂಬ ಆಸೆಯಿಂದ ಹೋಗಿದ್ದಾನೆ. ಆದರೆ, ಸತ್ಯ ಗೊತ್ತಾಗುವಷ್ಟರಲ್ಲಿ ದೀಪಿಕಾ ಬೇರೆಯದ್ದೇ ಪ್ಲ್ಯಾನ್ ಮಾಡುತ್ತಾಳೆ ಎನಿಸುತ್ತಿದೆ.


Click it and Unblock the Notifications