Namma Lacchi: ಕಡೆಗೂ ಸಂಗಮ್‌ನಿಂದ ಲಚ್ಚಿಯನ್ನು ಮರೆಮಾಚಿದ ದೀಪಿಕಾ.. ತಂದೆಗೆ ಮಗಳು ಸಿಗೋದೇ ಇಲ್ವಾ?

By ಎಸ್ ಸುಮಂತ್

ದೀಪಿಕಾಗೆ ತನ್ನ ಮಗಳನ್ನು ಹೇಗಾದರೂ ಮಾಡಿ ದೊಡ್ಡ ಸಿಂಗರ್ ಮಾಡಬೇಕು ಎಂದುಕೊಂಡಿದ್ದಾಳೆ. ಆದರೆ ಸಿಂಗರ್ ಮಾಡುವವರು ಮೊದಲು ನಿಮ್ಮ ಅಪ್ಪನ ರೀತಿ ಸಂಗೀತ ಕಲಿ ಅಂತಾನೇ ಹೇಳ್ತಿದ್ದಾರೆ. ಅದ್ದೂರಿಯಾಗೆ ಅಸಾಧ್ಯವಾದ ಮಾತಾಗಿದೆ. ಎಷ್ಟೇ ಪ್ರಾಕ್ಟೀಸ್ ಮಾಡಿಸಿದರೂ ರಿಯಾಳಿಗೆ ಸಂಗೀತದ ಜ್ಞಾನ ಹತ್ತುತ್ತಿಲ್ಲ. ಆದರೆ, ದೀಪಿಕಾಳ ಹಠ ಗೆದ್ದಿದೆ. ಕಡೆಗೂ ಸೋಷಿಯಲ್ ಮೀಡಿಯಾದಲ್ಲಿ ರಿಯಾ ದೊಡ್ಡ ಸಿಂಗರ್ ಆಗಿದ್ದಾಳೆ.

ಲಚ್ಚಿಗೂ ನ್ಯಾಯ ಬೇಕಿತ್ತು. ಗೋಪಾಲ ಹೇಗಾದರೂ ಮಾಡಿ ಲಚ್ಚಿಯನ್ನು ತಂದೆಯ ಬಳಿ ಸೇರಿಸಬೇಕು ಎಂದೇ ಕರೆದುಕೊಂಡು ಬಂದಿದ್ದ. ಆದರೆ ಅದು ಸಾಧ್ಯವಾಗಲೇ ಇಲ್ಲ. ಗೋಪಾಲ ಮಾಡಿದ್ದನ್ನು ವಿಧಿಯೇ ಮಾಡಿ ತೋರಿಸಿದೆ. ಸದ್ಯ ಲಚ್ಚಿಗೆ ಸಿಗಬೇಕಾದ ಪ್ರೀತಿ ಸಿಗುತ್ತಾ ಇದೆ.

Namma Lacchi Serial Written Update on April 26th episode

ರಿಯಾಗೆ ಗೊತ್ತಾಯ್ತು ಧ್ವನಿಯ ಸತ್ಯ

ರಿಯಾಳಿಗೆ ಅದೇನೋ ಲಚ್ಚಿಯನ್ನು ಕಂಡರೆ ಆಗುವುದಿಲ್ಲ. ಅವನು ಸ್ಲಂ ಬಾಯ್ ಎಂದೇ ಯೋಚಿಸುತ್ತಾಳೆ. ಅದರಲ್ಲೂ ಈಗ ದೀಪಿಕಾ, ಲಚ್ಚಿಯನ್ನು ಇಷ್ಟ ಪಡುತ್ತಾ ಇರುವುದನ್ನು ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಅಮ್ಮನ ಮೇಲೂ ಕೋಪ ಮಾಡಿಕೊಂಡಿದ್ದಾಳೆ. ಮನೆ ಬಿಟ್ಟು ಹೋಗುತ್ತೇನೆ ಎಂದಾಗ ರಿಯಾಳಿಗೆ ಅರ್ಥವಾಗುವಂತೆ, ಲಚ್ಚಿಯ ವಾಯ್ಸ್ ಎಷ್ಟು ಮುಖ್ಯ. ಅವಳು ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾಳೆ. ಬಳಿಕ ಅರ್ಥ ಮಾಡಿಕೊಂಡು ಸುಮ್ಮನೆ ಆಗಿದ್ದಾಳೆ.

ಲಚ್ಚಿಗೆ ಆಗಿದೆ ಬೇಸರ

ರಿಯಾಳ ನಡವಳಿಕೆ ಲಚ್ಚುಗೆ ಸಾಕಷ್ಟು ಬೇಸರ ತರಿಸಿದೆ. ಅಮ್ಮನ ಜೊತೆಗೆ ಜಗಳವಾಡುವುದು, ಲಚ್ಚಿಯನ್ನು ಅವಮಾನಿಸುವುದನ್ನೇ ಮಾಡುತ್ತಾ ಇರುತ್ತಾಳೆ. ಇದು ಲಚ್ಚಿಗೆ ತುಂಬಾ ಬೇಸರ ತರಿಸಿದೆ. ಹೀಗಾಗಿ ಒಬ್ಬಳೇ ಅಳುತ್ತಾ ಕೂತಿದ್ದಾಳೆ. ಆಕಾಶವನ್ನು ನೋಡಿ, ರಿಯಾಳು ಮಾಡಿದ ಅವಮಾನವನ್ನು ನೆನೆದು ದುಃಖಿಸುತ್ತಿದ್ದಾಳೆ. ಇದನ್ನು ಕಂಡ ರಿಯಾಳ ದೊಡ್ಡಮ್ಮ ಲಚ್ಚಿಗೆ ಸಮಾಧಾನ ಮಾಡಲು ಬಂದಿದ್ದಾಳೆ. ಆಗ ಲಚ್ಚಿ, ನನ್ನಿಂದ ಎಲ್ಲರಿಗೂ ತೊಂದರೆ. ದಯವಿಟ್ಟು ನನ್ನನ್ನು ಕಳುಹಿಸಿಬಿಡಿ ಎಂದು ಅಂಗಲಾಚಿದ್ದಾಳೆ. ಇದನ್ನು ಕೇಳಿದ ದೊಡ್ಡಮ್ಮನಿಗೆ ದುಃಖ ಉಕ್ಕಿ ಬಂದಿದೆ.

ಬೇಸರದಲ್ಲಿ ಹಾಡುತ್ತಾ ಕುಳಿತ ಲಚ್ಚಿ

ಲಚ್ಚಿಗೆ ಬೇಸರವಾದಾಗೆಲ್ಲಾ ಹಾಡು ಹಾಡುವ ಅಭ್ಯಾಸವಿದೆ. ಈಗ ರಿಯಾ ಮಾಡಿದ ಅವಮಾನ ಲಚ್ಚಿಯ ಮನಸ್ಸನ್ನು ಕದಡಿದೆ. ಅದಕ್ಕೆ ಆಕಾಶ ನೋಡಿ ತನ್ನ ನೋವು ಹೇಳಿಕೊಂಡಿದ್ದಾಳೆ. ಆಕಾಶದಲ್ಲಿ ಕಾಣುವ ನಕ್ಷತ್ರವೊಂದು ತನ್ನ ತಾಯಿಯೆಂದೆ ಭಾವಿಸುತ್ತಾಳೆ. ಅದರ ಜೊತೆಗೇನೆ ಮಾತನಾಡುತ್ತಾಳೆ. ಈಗ ನೋವಾಗಿರುವುದನ್ನು ಹೇಳುತ್ತಾ, ನಾನೀಗ ಹುಡುಗನ ಅವತಾರದಲ್ಲಿದ್ದೀನಿ ಎಂಬುದನ್ನು ಹೇಳಿ, ಈಗ ಹಾಡು ಹಾಡ್ತೀನಿ ಕೇಳಿ ಮಲಗು, ನಾನು ಮಲಗುತ್ತೇನೆ ಅಂತ ಹೇಳಿದ್ದಾಳೆ.

Namma Lacchi Serial Written Update on April 26th episode

ಲಚ್ಚಿಯ ಧ್ವನಿ ಕೇಳಿ ಬಂದ ಸಂಗಮ್

ರಾತ್ರಿ ಸಮಯವಾಗಿದ್ದರಿಂದ ಸಂಗಮ್ ಮಲಗಿದ್ದ. ಲಚ್ಚಿಯ ಧ್ವನಿ ಕೇಳುತ್ತಿದ್ದಂತೆ ಎಚ್ಚರವಾಗಿದೆ. ರಿಯಾಳದ್ದೇ ಧ್ವನಿ ಎಂದು ನಂಬಿದ್ದ ಸಂಗಮ್‌ಗೆ ಮಗಳು ಹಾಡುತ್ತಿದ್ದಾಳೆಂಬ ಖುಷಿಯಲ್ಲಿದ್ದ. ಇದೇ ವೇಳೆ ದೀಪಿಕಾಳನ್ನು ಎಚ್ಚರಿಸಿದ್ದಾನೆ. "ರಿಯಾ ಹಾಡ್ತಾ ಇದ್ದಾಳೆ, ನೋಡೋಣಾ ಬಾ" ಎಂದಾಗ ದೀಪಿಕಾ ತಡೆದಿದ್ದಾಳೆ. ಆದರೂ ಸಂಗಮ್, ರಿಯಾಳ ರೂಮಿಗೆ ಹೋದಾಗ ಏನು ಶಬ್ಧವೇ ಬರುತ್ತಿರಲಿಲ್ಲ. ಆದರೆ ಅಷ್ಟರಲ್ಲಿ ದೀಪಿಕಾ, ಆ ಹಾಡು ಬಾಲ್ಕನಿಯಲ್ಲಿ ಕೇಳುತ್ತಾ ಇದೆ ಎಂಬುದನ್ನು ಅರಿತು, ಓಡಿದ್ದಳು. ಸಂಗಮ್‌ಗೆ ಕೂಡ ಅದು ಬಾಲ್ಕನಿಯಲ್ಲಿಯೇ ಬರುತ್ತಿದೆ ಎಂಬುದಂತು ತಿಳಿಯಿತು. ಸಂಗಮ್ ಬರುವಷ್ಟರಲ್ಲಿ ದೀಪಿಕಾ ಹಾಡನ್ನು ನಿಲ್ಲಿಸಿದ್ದಳು.

More from Filmibeat

English summary
Star suvarna serial Namma Lacchi Written Update on April 26th episode. Here is the details about Deepika hide Lacchi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X