Namma Lacchi: ಅಪ್ಪನ ಸ್ಪರ್ಶಕ್ಕೆ ಮಗಳು ಖುಷಿ.. ಲಚ್ಚಿಯ ಸ್ಪರ್ಶಕ್ಕೆ ಸಂಗಮ್ ಭಾವುಕ..!
ಕರುಳ ಕನೆಕ್ಷನ್ ಅನ್ನೋದನ್ನು ಸುಮ್ಮನೆ ಹೇಳುವುದಿಲ್ಲ ಅಲ್ಲವಾ. ಎಷ್ಟೇ ದೂರವಿದ್ದರೂ, ಸ್ವಂತ ಮಕ್ಕಳು ಹತ್ತಿರ ಬಂದಾಗ ಹೆತ್ತವರಿಗೆ ಅದೇನೋ ಒಂಥರ ಖುಷಿಯಾಗುತ್ತೆ. ಈಗ ಸಂಗಮ್ ವಿಚಾರದಲ್ಲೂ ಅದೇ ಆಗ್ತಾ ಇರೋದು. ಲಚ್ವಿ ಹತ್ತಿರವಿದ್ದಷ್ಟು ಮನಸ್ಸಿಗೆ ಏನೋ ಸ್ಪೆಷಲ್ ಭಾವನೆ. ತನ್ನದೊಂದು ಇಲ್ಲಿದೆ ಎಂಬ ಖುಷಿ.
ಲಚ್ಚಿ ಸದ್ಯ ಸೇರಬೇಕಾದ ಮನೆಯನ್ನೇ ಸೇರಿದ್ದಾಳೆ. ಗೋಪಾಲ ಪಟ್ಟ ಕಷ್ಟ ಲಚ್ವಿಯ ಧ್ವನಿಯಿಂದ ನನಸಾಗಿದೆ. ಲಚ್ಚಿಗೋ ಸಂಗಮ್ ಸಾತನೂರು ಅಂದ್ರೆ ದೇವರ ಸಮಾನ. ಅವರನ್ನು ಹತ್ತಿರದಿಂದ ನೋಡುವುದೇ ಖುಚಿ ಎಂದುಕೊಂಡಿದ್ದಾಗ, ಅವರ ಜೊತೆಯಲ್ಲಿಯೇ ಇರುವುದು ಅಂದ್ರೆ ಆ ಖುಷಿ ಬಗ್ಗೆ ಕೇಳಬೇಕಾ. ಈಗಂತು ಅವ್ವ ಇಲ್ಲ ಎಂಬ ಬೇಸರ ಬಿಟ್ಟರೆ, ತುಂಬಾ ಅಂದ್ರೆ ತುಂಬಾ ಖುಷಿಯಾಗಿದ್ದಾಳೆ.

ಸಂಗಮ್ ಸ್ಪರ್ಶಕ್ಕೆ ನೋವು ಲೆಕ್ಕಕ್ಕಿಲ್ಲ
ರಿಯಾಳಿಗೆ ಇನ್ನು ಕೆಡುಕು ಬುದ್ಧಿ ಹೋಗಿಲ್ಲ. ಲಚ್ವಿಯ ಧ್ವನಿಯಿಂದಾನೇ ನೀನು ಫೇಮಸ್ ಆಗುತ್ತಾ ಇರುವುದು ಎಂಬ ಸತ್ಯ ಹೇಳಿದರು. ಲಚ್ಚಿಗೆ ತೊಂದರೆ ಕೊಡುವುದನ್ನು ಮಾತ್ರ ಬಿಟ್ಟಿಲ್ಲ. ಸ್ಲಂ ಬಾಯ್ ವಾಯ್ಸ್ ನಂಗೆ ಬೇಡವೆಂದು, ಅವಳ ಕೈಯನ್ನೇ ಸುಟ್ಟಿದ್ದಾನೆ. ಆದರೆ ಅದೇ ಕೈಯನ್ನು ಸಂಗಮ್ ಮುಟ್ಟಿದ್ದರಿಂದ ಪಾಪ ಲಚ್ಚಿ, ನೋವು ತಡೆದುಕೊಳ್ಳುತ್ತಿದ್ದಾಳೆ. ಆದರೆ ಆ ಕೈಗೆ ಔಷಧ ಕೂಡ ಹಚ್ಚಿಸಿಕೊಳ್ಳುತ್ತಿಲ್ಲ.
ನೋವಿನಿಂದ ಬಳಲುತ್ತಿದ್ದ ಲಚ್ಚಿಯನ್ನು ನೋಡಿ ದೊಡ್ಡಮ್ಮನ ಮನಸ್ಸು ಕರಗಿದೆ. ಲಚ್ಚಿಗೆ ಸಂಬಂಧವೇ ಬೇಕಿಲ್ಲ. ಎಲ್ಲರ ಮನಸ್ಸನ್ನು ಗೆದ್ದು ಬಿಡುತ್ತಾಳೆ. ಸಂಗಮ್ ಅವರ ಅತ್ತಿಗೆಯನ್ನು ದೊಡ್ಡವ್ವ ಎಂದು ಕರೆದಾಗ ಅವರಿಗಾದ ಖುಷಿ ಅಷ್ಟಿಷ್ಟಲ್ಲ. ಹಾಗೇ ನೋಡಿದರೆ ಸ್ವಂತದಲ್ಲೂ ದೊಡ್ಡಮ್ಮನೇ ಆಗಬೇಕು. ಆದರೆ ಸತ್ಯ ಗೊತ್ತಿಲ್ಲ. ಈಗ ಕೈಗೆ ಔಷಧ ಹಚ್ಚಿ, ಹಾರೈಕೆ ಮಾಡಲು ಹೋದಾಗಲೂ ನಿರಾಕರಿಸಿದ್ದಾಳೆ.
ಲಚ್ಚಿಗೆ ಮಾತು ಕೊಟ್ಟ ಸಂಗಮ್
ಸಂಗಮ್ ಸ್ಪರ್ಶಿಸಿದ್ದ ಕೈಯಿದು ಎಂದು ಯಾರ ಹತ್ತಿರವೂ ಆ ಕೈಯನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಬಳಿಕ ಸಂಗಮ್ ಅಲ್ಲಿಗೆ ಬಂದು ಔಷಧ ಹಚ್ಚಿದ್ದಾನೆ. ಈ ರೀತಿ ಹಠ ಎಲ್ಲಾ ಮಾಡಬಾರದು ಎಂದು ಬುದ್ದಿ ಹೇಳಿದ್ದಾನೆ. ಬೇಕಾದರೆ ಪ್ರತಿ ದಿನ ನಿಂಗೆ ಶೇಕ್ ಹ್ಯಾಂಡ್ ಮಾಡುತ್ತೇನೆ. ಆದರೆ ಕೈ ತೊಳೆಯಬೇಕಾದ ಸಂದರ್ಭ ಬಂದ್ರೆ ಕೈ ತೊಳೆಯಬೇಕು ಎಂದಿದ್ದಾನೆ. ಆಗ ಲಚ್ಚಿ, "ಪ್ರಾಮೀಸ್ ಮುಟ್ಟುತ್ತೀರಾ" ಎಂದು ಕೇಳಿದಾಗ ಹೌದು ಎಂದು ಮಾತು ಕೊಟ್ಟಿದ್ದಾನೆ. ಸಂಗಮ್ ಎಂದರೆ ಲಚ್ವುಗೆ ಅದೆಷ್ಟು ಇಷ್ಟ ಅಂದ್ರೆ ಬರೀ ಪದದಲ್ಲಿ ವರ್ಣಿಸೋಕೆ ಸಾಧ್ಯವೇ ಇಲ್ಲ.

ಲಚ್ಚಿಗೆ ಇನ್ನೊಂದು ಆಸೆಯಾಗಿದೆ. ನಾನು ಕೂಡ ನಿಮ್ಮನ್ನು ಮುಟ್ಟಬಹುದಾ ಅಂತ ಕೇಳಿದ್ದಾಳೆ. ಆಗ ಸಂಗಮ್, ಅವಳ ಪುಟಾಣಿ ಕೈಗಳನ್ನು ತನ್ನ ಅಂಗೈನಲ್ಲಿಟ್ಟುಕೊಂಡಿದ್ದಾನೆ. ಇದಕ್ಕೆ ಇನ್ನಷ್ಟು ಖುಷಿಯಾದ ಲಚ್ಚಿ, ತನ್ನ ಕೈಯಿಂದ ಸಂಗಮ್ ಕೆನ್ನೆಯನ್ನು ಸ್ಪರ್ಶಿಸಿದ್ದಾಳೆ. ತಕ್ಷಣ ಸಂಗಮ್ ಕಣ್ಣಲ್ಲಿ ನೀರು ಬಂದಿದೆ. ತನ್ನವರೇ ಎಂಬ ಭಾವ ಮೂಡಿದೆ. ಬಳಿನ ಲಚ್ಚಿಯನ್ನು ರೆಸ್ಟ್ ಮಾಡಲು ಕಳುಹಿಸಿದ್ದಾನೆ. ತನ್ನ ಹಾಡಿನಿಂದ ಇಂಥ ಅಭಿಮಾನಿಗಳು ಸಿಕ್ಕ ಮೇಲೆ ತನ್ನ ಜೀವನ ಸಾರ್ಥಕ ಎಂದುಕೊಂಡಿರೋ ಸಂಗಮ್ ಗೆ ಆಕೆ ತನ್ನ ಮಗಳು ಎಂಬುದು ತಿಳಿದರೆ ಇನ್ನೆಷ್ಟು ಖುಷಿಯಾಗುತ್ತೋ. ಆ ದಿನ ಬೇಗ ಬರಲಿ ಅಂತಿದ್ದಾರೆ ಪ್ರೇಕ್ಷಕರು.


Click it and Unblock the Notifications











