Namma Lachchi: ಗಂಡನನ್ನೇ ಭಿಕ್ಷುಕ ಎಂದ ದೀಪಿಕಾ.. ತಾಳ್ಮೆ ಕಳೆದುಕೊಂಡ ಸಂಗಮ್!

By ಎಸ್ ಸುಮಂತ್

ಸಂಗಮ್ ಬದಲಾಗುವುದಕ್ಕೆ ಪ್ರಯತ್ನ ಮಾಡಿದ್ದಾನೆ. ದೀಪಿಕಾ ಕೂಡ ಅದನ್ನು ಒಪ್ಪುವುದಕ್ಕೆ ಪ್ರಯತ್ನ ಪಟ್ಟಿದ್ದಾಳೆ. ಆದರೆ, ಅದು ಆ ಸೆಕಂಡಿಗೆ ಮಾತ್ರ. ಸಂಗಮ್ ಎಷ್ಟೇ ಪ್ರೀತಿ ತೋರಿಸಲು ಪ್ರಯತ್ನಪಟ್ಟಾಗಲೂ ದೀಪಿಕಾಳಿಗೆ ಆ ಪ್ರೀತಿಗಿಂತ ಅಹಂ ಎದುರಾಗುತ್ತದೆ‌.

ನನ್ನಪ್ಪ ಶ್ರೀಮಂತ, ನನ್ನಪ್ಪ ಇಲ್ಲ ಅಂದಿದ್ರೆ, ಸಂಗಮ್ ಬೆಳೆಯೋದಕ್ಕೆ ಸಾಧ್ಯ ಇರಲಿಲ್ಲ ಎಂಬುದೇ ದೀಪಿಕಾಳ ವಾದವಾಗಿದೆ. ಅದನ್ನೇ ಪ್ರತಿ ಸಲ ಹೇಳಿ ಹೇಳಿ ಸಂಗಮ್ ಬಾಯಿ ಕಟ್ಟಿ ಹಾಕುತ್ತಿದ್ದಾಳೆ. ದೀಪಿಕಾಳಿಗೆ ಹೆದರಿಕೊಂಡು ಅಲ್ಲ, ಇನ್ಯಾವುದೋ ಕಾರಣಕ್ಕೆ ಸಂಗಮ್ ಕೂಡ ಎಲ್ಲವನ್ನು ಸಹಿಸುತ್ತಿದ್ದಾನೆ.

Namma Lacchi Serial Written Update on April 6th episode

ಸಂಗಮ್‌ಗೂ ನೋಡಿ ನೋಡಿ ಸಾಕಾಗಿದೆ. ದೀಪಿಕಾ ಇವತ್ತು ಬದಲಾಗುತ್ತಾಳೆ. ನಾಳೆ ಬದಲಾಗುತ್ತಾಳೆ ಅಂತಾನೇ ಕಾಯುತ್ತಿದ್ದಾನೆ. ಆದರೆ ಅವಳು ಬದಲಾಗುವುದಿರಲಿ, ಸಂಗಮ್ ಮನೆಯವರಿಗೆ ನೋವು ಕೊಡದೆಯೂ ಇರುವುದಿಲ್ಲ. ಪ್ರತಿ ಸಲ ನೋವು ಕೊಡುತ್ತಲೇ ಇರುತ್ತಾಳೆ. ಆದರೆ ಸಂಗಮ್ ತಾಳ್ಮೆ ಇಂದು ಒಡೆದಿದೆ. ದೀಪಿಕಾಳಿಗೆ ಪಾಠ ಹೇಳಲು ಶುರು ಮಾಡಿದ್ದಾನೆ.

ಮನೆ ಬಿಡಲು ನಿರ್ಧರಿಸಿದ ಸಂಗಮ್ ಫ್ಯಾಮಿಲಿ

ದೀಪಿಕಾ ಮತ್ತು ಅವಳ ಅಮ್ಮ ಮಾಡುವ ಅವಮಾನವನ್ನು ಎಷ್ಟು ಅಂತ ಸಹಿಸಿಕೊಳ್ಳುವುದು. ಎಲ್ಲರಿಗೂ, ಎಲ್ಲದಕ್ಕೂ ಇಂದು ಇತಿಮಿತಿ ಇದ್ದೇ ಇರುತ್ತೆ. ಅದನ್ನು ಮೀರಿದಾಗ ಎಂಥವರಿಗೂ ಸಹಿಸುವುದಕ್ಕೆ ಆಗುವುದಿಲ್ಲ. ಯಾವಾಗಲೂ ಗತಿ ಕೆಟ್ಟವರು ಎಂದು ದೀಪಿಕಾ ಹೇಳುತ್ತಿದ್ದರೆ ಸಹಿಸುವುದಕ್ಕೆ ಮನೆಯವರಿಂದಲೂ ಆಗುವುದಿಲ್ಲ. ಅದಕ್ಕೆ ಅಮ್ಮ, ಅತ್ತಿಗೆ ಮನೆ ಬಿಟ್ಟು ಹೊರಟಿದ್ದರು. ಸಂಗಮ್ ಮತ್ತೆ ರಿಕ್ವೆಸ್ಟ್ ಮಾಡಿಕೊಂಡಾಗ ಅಣ್ಣನ ಮನಸ್ಸು ಕರಗಿದೆ. ಎಲ್ಲರನ್ನು ಮತ್ತೆ ಮನೆಯಲ್ಲಿಯೇ ಇರಿಸಿಕೊಂಡಿದ್ದಾನೆ.

Namma Lacchi Serial Written Update on April 6th episode

ಸಂಗಮ್ ಆದಷ್ಟು ಮನೆಯವರನ್ನೆಲ್ಲಾ ಸಮಾಧಾನ ಮಾಡುತ್ತಿದ್ದ, ದೀಪಿಕಾಳ‌ ಪರವಾಗಿ ಕ್ಷಮೆಯನ್ನು ಕೇಳುತ್ತಿದ್ದ. ಆದರೆ, ಅಲ್ಲಿಗೆ ಬಂದ ದೀಪಿಕಾ ಏಕಾಏಕಿ ಮತ್ತೆ ಅವಮಾನದ ಮಾತುಗಳನ್ನು ಆಡಿದ್ದಳು. "ಇನ್ನು ಇಲ್ಲೆ ಇದ್ದೀರಾ. ಇಷ್ಟೊತ್ತಿಗೆ ಗೇಟಲ್ಲಿ ಇರುತ್ತೀರಾ ಅಂತ ಅಂದುಕೊಂಡಿದ್ದೆ. ಆದರೆ, ಎಷ್ಟೇ ಅವಮಾನ ಮಾಡಿದರೂ ಇಲ್ಲಿಯೇ ಇದ್ದೀರಲ್ಲ. ಮೊದಲು ಇಲ್ಲಿಂದ ಹೊರಡಿ" ಎಂದು ಹೇಳಿದ್ದಾಳೆ.

ರೊಚ್ಚಿಗೆದ್ದ ಸಂಗಮ್

ಇಷ್ಟು ದಿನ ದೀಪಿಕಾ ಎಷ್ಟೇ ಬೈದರೂ, ಅವಮಾನ ಮಾಡಿದರೂ ಅದನ್ನು ಸಹಿಸಿಕೊಳ್ಳುತ್ತಿದ್ದ. ಆದರೆ ಇಂದು ದೀಪಿಕಾಳ ಮಾತನ್ನು ಕೇಳುವ ಸಂಯಮ ಸಂಗಮ್‌ಗೆ ಇಲ್ಲ. ಯಾಕಂದ್ರೆ ಅಮ್ಮ, ಅತ್ತಿಗೆ, ಅಣ್ಣ ಮನೆ ಬಿಟ್ಟು ಹೋಗಲು ರೆಡಿಯಾಗಿದ್ದಾರೆ. ಅದಕ್ಕೆ ದೀಪಿಕಾಳಿಗೆ ನೀನೆ ಮನೆ ಬಿಟ್ಟು ಹೊರಡು ಅದೇ ಬೆಸ್ಟ್ ಎಂದಿದ್ದಾನೆ. ನಿನಗೆ ಅಡ್ಜೆಸ್ಟ್ ಆಗ್ತಿಲ್ಲ ಅಲ್ವಾ, ನೀನೆ ಇಲ್ಲಿಂದ ಹೊರಡು ಅಂತ ಕಟ್ಟು ನಿಟ್ಟಾಗಿ ಹೇಳಿದ್ದಾನೆ.

ದೀಪಿಕಾ, ಸಂಗಮ್ ಮಾತು ಕೇಳಿಸಿಕೊಂಡವಳು ಮತ್ತೆ ರೊಚ್ಚಿಗೆದ್ದಿದ್ದಾಳೆ. ಮತ್ತೆ ಹಾರಾಡಿದ್ದಾಳೆ. "ನಾನ್ಯಾಕೆ ಮನೆ ಬಿಟ್ಟು ಹೋಗಬೇಕು. ಇದು ನನ್ನ ಡ್ಯಾಡಿ ನಿನಗೆ ಭಿಕ್ಷೆ ಕೊಟ್ಟಿರುವುದು. ನೀನೊಬ್ಬ ಭಿಕ್ಷುಕ. ನನಗೆ ಮನೆ ಬಿಟ್ಟು ಹೋಗು ಅನ್ನೋದಕ್ಕೆ ಎಷ್ಟು ಧೈರ್ಯ ನಿನಗೆ" ಅಂತ ಜೋರು ಮಾಡಿಯೇ ಕೇಳಿದ್ದಾಳೆ. ಇದಲ್ಲೆದನ್ನು ನೋಡಿ ನೋಡಿ ಸಾಕಾದ ಸಂಗಮ್, "ಯಾವ ಬಡ್ಡಿ ಮಗ ಹೇಳಿದ್ದು" ಅಂತ ಜೋರಾಗಿಯೇ ಕಿರುಚಿದ್ದಾನೆ.

More from Filmibeat

English summary
Star suvarna serial Namma Lacchi Written Update on April 6th episode. Here is the details about Sangam reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X