Namma Lacchi: ಲಚ್ಚಿಯ ತಂದೆ ಹೆಸರೇಳಿ ಗಿರಿಜಾಳ ಬಾಯಿ ಮುಚ್ಚಿಸಿದ ಶಾಂತಾ..!

By ಎಸ್ ಸುಮಂತ್

ಜೀವನದಲ್ಲಿ ಏನು ನಡೆಯಬಾರದು ಎಂದುಕೊಂಡಿದ್ದಳೋ ಗಿರಿಜಾಳ ಜೀವನದಲ್ಲಿ ಅದೇ ನಡೆಯುತ್ತಿದೆ. ಲಚ್ಚಿಗೆ ಯಾವ ಗುಣ ಬರಬಾರದು ಅಂತ ಶತಕೋಟಿ ದೇವರಲ್ಲಿ ಬೇಡಿಕೊಂಡಳೊ ಈಗ ಅದೇ ಗುಣ ಬಂದಿದೆ. ಅದಕ್ಕಾಗಿ ಗಿರಿಜಾ ಪ್ರತಿ ದಿನ ಶಪಿಸುತ್ತಿದ್ದಾಳೆ. ಮಗಳಿಗೆ ನೋವು ಕೊಡುವ ಮನಸ್ಸು ಇಲ್ಲದೆ ಇದ್ದರು ಲಚ್ಚಿಯ ಪುಟ್ಟ ಮನಸ್ಸನ್ನು ನೋಯಿಸುತ್ತಿದ್ದಾಳೆ.

ಲಚ್ಚಿಗೆ ಎರಡು ಸಂಗತಿ ತುಂಬಾನೇ ಮುಖ್ಯ. ಒಂದು ಸಂಗೀತ ಅಂದ್ರೆ, ಮತ್ತೊಂದು ತಾಯಿ. ಹಾಡು ಹಾಡದೆ ಇರುವವಳಲ್ಲ ಲಚ್ಚಿಗೆ. ಹಾಗೇ ತನ್ನ ಅವ್ವನಿಗೆ ನೋವಾದರೆ ಸಹಿಸುವವಳಲ್ಲ. ಈ ತಿಕ್ಕಾಟದ ನಡುವೆಯೇ ನಮ್ಮ ಲಚ್ಚಿಯ ಜೀವನ ನಡೆಯುತ್ತಿದೆ. ಆದರೆ, ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಯಾರಿಗೆ ತಿಳಿಯಬಾರದೋ ಅವರಿಗೆ ತಿಳಿದು ಹೋಗಿದೆ. ಈಗ ಶಾಂತಾಳ ಕೈಗೆ ಸಿಕ್ಕಿ ಗಿರಿಜಾ ವಿಲವಿಲ ಅಂತ ಒದ್ದಾಡುತ್ತಿದ್ದಾಳೆ.

ಇನ್ನು ಗಿರಿಜಾಳ ಸಂಕಷ್ಟ ಜಾಸ್ತಿ..!

ಇನ್ನು ಗಿರಿಜಾಳ ಸಂಕಷ್ಟ ಜಾಸ್ತಿ..!

ಗಿರಿಜಾ ತನ್ನ ಎದೆಯೊಳಗೆ ಕೆಂಡದಂತಹ ಸತ್ಯವನ್ನು ಮುಚ್ಚಿಟ್ಟುಕೊಂಡಿದ್ದಾಳೆ. ಸಂಗಮ್ ಸಾತನೂರ್ ಕನ್ನಡದಲ್ಲಿಯೇ ಅತಿ ಫೇಮಸ್ ಸಿಂಗರ್. ಸಂಗಮ್ ಹಾಡು ಎಂದರೆ ಎಲ್ಲರೂ ತಣ್ಣಗಾಗಿ ಕೂತು ಬಿಡುತ್ತಾರೆ. ಆದರೆ ಆತನೆ ಲಚ್ಚಿಯ ಅಪ್ಪ ಅನ್ನೋದು ಇಡೀ ಊರಲ್ಲಿ ಯಾರಿಗೂ ಗೊತ್ತಿಲ್ಲ. ಊರಿಗೆ ಇರಲಿ ಲಚ್ಚಿಗೂ ಗೊತ್ತಿಲ್ಲ. ಆದ್ರೆ ಲಚ್ಚಿಯ ಮಾವ, ಗಿರಿಜಾಳ ಅಣ್ಣ ಯಾವುದೋ ನಿದ್ದೆ ಕಣ್ಣಿನಲ್ಲಿ ಹೇಳಿದ ಸತ್ಯ ಇಂದು ಶಾಂತಾಳ ಅಸ್ತ್ರವಾಗಿ ಬದಲಾಗಿದೆ. ಗಿರಿಜಾಳನ್ನು ಕೈಗೊಂಬೆ ಮಾಡಿಕೊಂಡಿದ್ದಾಳೆ.

ತಾಯಿ ಮಾತನ್ನೇ ಮೀರಿಸಿತು ಸಂಗೀತ..!

ತಾಯಿ ಮಾತನ್ನೇ ಮೀರಿಸಿತು ಸಂಗೀತ..!

ಲಚ್ಚಿಗೆ ಸಂಗೀತ ತಂದೆಯಿಂದಾನೇ ಒಲಿದು ಬಂದಿದೆ. ಆದರೆ, ಅದಕ್ಕಾಗಿ ಮನೆಯಲ್ಲಿ ಯುದ್ಧವೇ ನಡೆಯುತ್ತಿದೆ. ಸಂಗೀತದ ವಿಚಾರಕ್ಕೆ ಗಿರಿಜಾ ತನ್ನ ಮಗಳು ಲಚ್ಚಿಯನ್ನು ಮಾತಿನ ನಂಬಿಕೆಯಿಂದ ಕಟ್ಟು ಹಾಕಿದ್ದಳು. "ಮಾರವ್ವನ ಗುಡಿ ಮುಂದೆ ದೀಪ ಹಚ್ಚಿ ಬರುವ ತನಕ ಈ ಗೆರೆ ದಾಟಬಾರದು" ಎಂದು ಗಿರಿಜಾ ತಾಕೀತು ಮಾಡಿ ಹೋಗಿದ್ದಳು. ಆದರೆ, ಲಚ್ಚಿಗೆ ಅವರ ಅಪ್ಪ ಅಂದ್ರೆ ಸಂಗಮ್ ಹಾಡು ಎಂದರೆ ಮೈಮರೆತು ಹೊರಟೆ ಬಿಡುತ್ತಾಳೆ. ಅದರಂತೆ ಸಂಗಮ್ ಸಾತನೂರು ಧ್ವನಿಗೆ ಮೈಮರೆತು ಗೆರೆಯನ್ನು ದಾಟಿ ಹೊರಟೆ ಬಿಟ್ಟಳು.

ಕಾರ್ಯಕ್ರಮದಲ್ಲಿ ಹಾಡಿಯೇ ಬಿಟ್ಟಳು ಲಚ್ಚಿ..!

ಕಾರ್ಯಕ್ರಮದಲ್ಲಿ ಹಾಡಿಯೇ ಬಿಟ್ಟಳು ಲಚ್ಚಿ..!

ಗಿರಿಜಾಗೆ ಇದನ್ನು ನಂಬುವುದಕ್ಕೆ ಆಗುತ್ತಿಲ್ಲ. ಮಗಳು ವೇದಿಕೆ ಮೇಲೆ ಹಾಡುತ್ತಿದ್ದನ್ನು ನೋಡಿ, ಕೆಮ್ಮು ಜಾಸ್ತಿಯಾಗಿದೆ. ಅವ್ವನ ಕೆಮ್ಮು ಕೇಳಿಸಿಕೊಂಡು ಮಗಳು ವೇದಿಕೆಯಿಂದ ಹಾಡುವುದನ್ನು ನಿಲ್ಲಿಸಿ ಓಡೋಡಿ ಬಂದಿದ್ದಾಳೆ. ಅವ್ವನನ್ನು ಅಪ್ಪಿಕೊಂಡು ತಪ್ಪಾಯ್ತು ಎಂದು ಕೇಳಿದ್ದಾಳೆ. ಇನ್ಯಾವತ್ತು ಹಾಡುವುದಿಲ್ಲ ಎಂದು ಬೇಡಿಕೊಂಡಿದ್ದಾಳೆ. ಆದರೆ ಗಿರಿಜಾಗೆ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಸುಮ್ಮನೆ ಕಣ್ಣೀರು ಹಾಕಿದ್ದಾಳೆ.

ಗಿರಿಜಾಳ ವೀಕ್ನೆಸ್ ತಿಳಿದ ಶಾಂತಾ..!

ಗಿರಿಜಾಳ ವೀಕ್ನೆಸ್ ತಿಳಿದ ಶಾಂತಾ..!

ಶಾಂತಾಳಿಗೆ ನಾದಿನಿ, ಮಗು ಎಂಬ ಪ್ರೀತಿಗಿಂತ ಅವರನ್ನು ಸಾಕುತ್ತಿರುವುದೇ ಭಾರ ಎಂದುಕೊಂಡಿದ್ದಾಳೆ. ತನ್ನ ಮಕ್ಕಳನ್ನು ಒಂದು ರೀತಿಯಾಗಿ ನೋಡಿದರೆ, ಗಿರಿಜಾ ಮತ್ತು ಲಚ್ಚಿಯನ್ನು ಬೇರೆ ರೀತಿಯಾಗಿ ನೋಡುತ್ತಾಳೆ. ಆದರೆ, ಈಗ ಶಾಂತಾ ಬಯಸಿದಂತ ದಿನ ಬಂದಿದೆ. ಲಚ್ಚಿಯ ಅಪ್ಪ ಯಾರು ಎಂಬ ಸತ್ಯ ಗೊತ್ತಾಗಿದೆ. ಅದನ್ನು ಬಂಡವಾಳ ಮಾಡಿಕೊಂಡು ಹಣ ಮಾಡಲು ನಿಂತಿದ್ದಾಳೆ. ಲಚ್ಚಿ ಹಾಡುವುದಕ್ಕೆ ಬಿಡದೆ ಹೋದರೆ ಸಂಗಮ್ ಸಾತನೂರೇ ಅವಳ ಅಪ್ಪ ಅಂತ ಇಡೀ ಊರಿಗೆ ಹೇಳಿ ಬಿಡುತ್ತೀನಿ ಅಂತ ಧಮ್ಕಿ ಹಾಕುತ್ತಿದ್ದಾಳೆ. ಆ ಸತ್ಯ ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಇರುವುದಕ್ಕೆ ಗಿರಿಜಾ ಮೌನವಾಗಿ ನಿಂತಿದ್ದಾಳೆ.

More from Filmibeat

English summary
Namma Lacchi Serial Written Update On February 14th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X