Namma Lacchi:ಲಚ್ಚಿ ಹಾಡಿನ ಮೂಲಕ ಅಮ್ಮನ ಗುಣಗಾನ.. ಶಾಂತಳ ಭಯಕ್ಕೆ ಬೆಚ್ಚಿದ ಗಿರಿಜಾ..!

By ಎಸ್ ಸುಮಂತ್

ಯಾವುದು ಆಗಬಾರದು ಎಂದುಕೊಂಡಿದ್ದಳೋ ಸದ್ಯ ಅದೇ ನಡೆದು ಹೋಗಿದೆ. ಲಚ್ಚಿಯ ಬಾಯಲ್ಲಿ ಸಂಗೀತ ಬರಬಾರದು ಅಂತ ಗಿರಿಜಾ ಪಟ್ಟ ಕಷ್ಟ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಬೇಡ ಎಂದ ವಿಚಾರವನ್ನೇ ಲಚ್ಚಿ ಮೈಗೂಡಿಸಿಕೊಂಡಿದ್ದಾಳೆ. ಬೇಡವೆಂದರೂ ಅವಳ ಕಂಠದಲ್ಲಿ ನಾದಸ್ವರ ಕೇಳಿ ಬಂದಿದೆ.

ಗಿರಿಜಾಳ ಮನಸ್ಥಿತಿಗಿಂತ ಶಾಂತಾಳಿಗೆ ಮನಿಸ್ಥಿತಿಯೇ ಮುಖ್ಯವಾಗಿದೆ. ಹೀಗಾಗಿ ಲಚ್ಚಿಗೆ ಇರುವ ಪ್ರತಿಭೆಯನ್ನು ಹಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾಳೆ. ಸ್ವಾರ್ಥವೋ, ಹಣದ ಆಸೆಯೋ ಲಚ್ಚಿಗೆ ಹಾಡುವ ಕನಸು ನನಸಾಗಿದೆ. ಬೇಡ ಬೇಡ ಎನ್ನುತ್ತಿದ್ದ ತಾಯಿಯಿಂದಾನೇ ಅನುಮತಿ ಸಿಕ್ಕಿದೆ. ಆದರೆ, ಲಚ್ಚಿಯ ಒಂದೊಂದು ಪದವೂ ತಾಯಿ ಗಿರಿಜಾ ಕಣ್ಣಲ್ಲಿ ನೀರು ತರಿಸಿದೆ.

ಆರ್ಕೆಸ್ಟ್ರಾದಲ್ಲಿ ಹಾಡಿದ ಲಚ್ಚಿ..!

ಆರ್ಕೆಸ್ಟ್ರಾದಲ್ಲಿ ಹಾಡಿದ ಲಚ್ಚಿ..!

ಅಪ್ಪ ಯಾರೆಂದು ಗೊತ್ತಿಲ್ಲದ ಲಚ್ಚಿಗೆ ಹುಟ್ಟಿನಿಂದಾನೇ ಅಪ್ಪನ ಗುಣವೇ ಒತ್ತಾಸೆಯಾಗಿ ಬಂದಿದೆ. ಸಂಗೀತ ಕಲಿತವರ ಕಂಠದಲ್ಲೂ ಅಷ್ಟು ಸುಲಲಿತವಾಗಿ ಹಾಡು ಬರುತ್ತೋ ಇಲ್ವೋ, ಸಂಗೀತ ಕಲಿಯದೇನೇ ಹಾಡುತ್ತಾಳೆ ʻನಮ್ಮ ಲಚ್ಚಿʼ. ಸಂಗಮ್ ಸಾತನೂರ್ ಅವರೇ ತನಗೂ ತಂದೆ ಎಂಬುದು ಗೊತ್ತಿಲ್ಲದೆಯೇ ತಂದೆಯ ಶಿಷ್ಯಳಾಗಿದ್ದಾಳೆ. ಅವನ ಹಾಡನ್ನು ಕೇಳಿಕೊಂಡೆ ಏಕಲವ್ಯನ ರೀತಿಯಲ್ಲಿ ಸಂಗೀತ ಕಲಿತಿದ್ದಾಳೆ. ಇಷ್ಟು ದಿನ ಹಾಡು ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ತಾಯಿಯೇ ಅನಿವಾರ್ಯತೆಗೆ ಕಟ್ಟುಬಿದ್ದು, ಹಾಡು ಹಾಡಲು ಒಪ್ಪಿಗೆ ಸೂಚಿಸಿದ್ದಾಳೆ.

ಶಾಂತಾಳ ಭಯಕ್ಕೆ ಬೆಚ್ಚಿದ ಗಿರಿಜಾ..!

ಶಾಂತಾಳ ಭಯಕ್ಕೆ ಬೆಚ್ಚಿದ ಗಿರಿಜಾ..!

ಲಚ್ಚಿ ಮತ್ತು ಗಿರಿಜಾಳನ್ನು ಶಾಂತಾ ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ. ನಮಗೆಲ್ಲಾ ಭಾರವೆಂಬಂತೆ ಫೀಲ್ ಮಾಡುತ್ತಾಳೆ. ಆದರೆ, ಈಗ ಲಚ್ಚಿಯ ಕಂಠದಿಂದ ಹಣ ಮಾಡಬಹುದು ಎಂದು ತಿಳಿದಾಗ ಆ ಹಾದಿಯನ್ನು ಹಿಡಿದಿದ್ದಳು. ಆದರೆ, ಅದು ಗಿರಿಜಾಳ ಕೋಪದಿಂದ ಕೈತಪ್ಪಿ ಹೋಗಿತ್ತು. ಈಗ ಗಿರಿಜಾ ಮುಚ್ಚಿಟ್ಟ ಕೆಂಡದಂತ ಸತ್ಯ ತಿಳಿದ ಮೇಲೆ ಶಾಂತಳಿಗೆ ದಾರಿ ಸುಲಭವಾಗಿದೆ. ಸಂಗಮ್ ಹೆಸರಿಟ್ಟುಕೊಂಡೇ ಲಚ್ಚಿಯ ಕಂಠದಿಂದ ಹಣ ಮಾಡಲು ಶುರು ಮಾಡಿದ್ದಾಳೆ. ತಂದೆಯ ಹೆಸರು ಯಾರಿಗೂ ಗೊತ್ತಾಗ ಬಾರದು ಅಂತ ಇಷ್ಟು ಕಷ್ಟ ಪಟ್ಟಳೋ, ಅವಳಿಗೆಲ್ಲಿ ಗೊತ್ತಾಗಿ ಬಿಡುತ್ತೋ ಅಂತ ಲಚ್ಚಿಗೆ ಹಾಡು ಹಾಡಲು ಬಿಟ್ಟಿದ್ದಾಳೆ.

ಒಂದೊಂದು ಪದವೂ ಅಮ್ಮನ ಪ್ರೀತಿಯೇ..!

ಒಂದೊಂದು ಪದವೂ ಅಮ್ಮನ ಪ್ರೀತಿಯೇ..!

ಶಾಂತ ಅದ್ಯಾವಾಗ ಸಂಗಮ್ ಸಾತನೂರ್ ಹೆಸರನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದಳೋ ಗಿರಿಜಾ ಅಸಹಾಯಕ ಸ್ಥಿತಿಯಲ್ಲಿ ನಿಂತು ಬಿಟ್ಟಳು. ಲಚ್ಚಿ ಹಾಡು ಹಾಡುವುದಕ್ಕೂ ಅನುಮತಿ ಕೊಟ್ಟಳು. ಆದರೆ, ಲಚ್ಚಿಯ ಒಂದೊಂದು ಪದದಲ್ಲೂ ಅಮ್ಮನ ಪ್ರೀತಿ, ಮಮಕಾರ, ಆಕೆಯ ಕಷ್ಟ, ಸಾಕಿದ ರೀತಿಯೇ ಅಡಗಿತ್ತು. ಇದನ್ನು ಕೇಳಿದ ಗಿರಿಜಾ ನಿಂತಲ್ಲಿಯೇ ಕಣ್ಣೀರಾದಳು. ಮಗಳ ಪ್ರೀತಿಗೆ ಮನತುಂಬಿ ಅಳಬೇಕೋ, ಮಗಳು ಅಪ್ಪನ ದಾರಿಯನ್ನೇ ಹಿಡಿದಿದ್ದಕ್ಕೇ ಕೊರಗಬೇಕೋ ಗಿರಿಜಾಗೆ ತಿಳಿಯದಾಯಿತು.

ಲಚ್ಚಿಯೇ ಔಷಧವಾಗುತ್ತಾಳಾ..?

ಲಚ್ಚಿಯೇ ಔಷಧವಾಗುತ್ತಾಳಾ..?

ಗಿರಿಜಾಗೆ ತುಂಬಾ ಟೆನ್ಶನ್ ಮಾಡಿಕೊಂಡರೆ ಕೆಮ್ಮು ಜಾಸ್ತಿಯಾಗುತ್ತೆ. ಈಗ ಮಗಳ ವಿಚಾರಕ್ಕೆ ಆ ಕಾಯಿಲೆ ಮತ್ತೆ ಮತ್ತೆ ಬರುತ್ತಿದೆ. ಮಗಳು ಹಾಡು ಹಾಡುತ್ತಿದ್ದರೆ ಈ ಕಡೆ ಗಿರಿಜಾಳ ಕಾಯಿಲೆ ಜಾಸ್ತಿಯಾಗುತ್ತಿದೆ. ಆದರೆ, ಹಣದ ಆಸೆಗೆ ಬಿದ್ದಿರುವ ಶಾಂತ ಆ ಕಾಯಿಲೆಯನ್ನು ಲೆಕ್ಕಿಸದೆ ಎಳೆದುಕೊಂಡು ಬಂದಿದ್ದಾಳೆ. ಇದೇ ವೇಳೆ ಕಾಯಿಲೆ ಜಾಸ್ತಿಯಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಗಿರಿಜಾ. ಈಗ ಲಚ್ಚಿಯೇ ಕಾಪಾಡಬೇಕಾಗಿದೆ.

More from Filmibeat

English summary
Namma Lacchi Serial Written Update on February 15th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X