Namma Lacchi: ರಿಯಾ ಸಂಗೀತ ಕೇಳಿ ಕೋಪಗೊಂಡ ಸಂಗಮ್.. ಲಚ್ಚಿಯನ್ನು ಬೆಳೆಸುತ್ತಾನಾ..?

By ಎಸ್ ಸುಮಂತ್

ಕೆಲವೊಂದು ಪ್ರತಿಭೆ ಹುಟ್ಟು ಗುಣದಿಂದಾನೆ ಬಂದಿರುತ್ತೆ. ಅವುಗಳನ್ನು ಏನೇ ಮಾಡಿದರೂ ಅಳಿಸುವುದಕ್ಕೆ ಆಗಲ್ಲ. ಬೇಡವೆಂದರೂ ಒಂದಲ್ಲ ಒಂದು ದಿನ ಆ ಪ್ರತಿಭೆ ಅನಾವರಣವಾಗುತ್ತದೆ. ಈಗ ಲಚ್ಚಿಯ ಬದುಕಲ್ಲಿ ಮಡೆಯುತ್ತಿರುವುದು ಅದೆ. ಗಿರಿಜಾ ಸಾಕಷ್ಟು ಕಷ್ಟಪಟ್ಟರು ಲಚ್ಚಿಯಿಂದ ಹಾಡು ಹಾಡಿಸದೇ ನಿಲ್ಲಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ ಅಲ್ಲಿ ದೀಪಿಕಾಳಿಂದ ರಿಯಾಗೆ ಸಂಗೀತ ಕಲಿಸುವುದಕ್ಕೂ ಸಾಧ್ಯವಾಗಲಿಲ್ಲ.

ಲಚ್ವಿಯ ಕಂಠ ಎಂಥದ್ದು ಎಂಬುದು ಇಡೀ ಊರಿಗೆ ಗೊತ್ತು. ಅವಳ ಧ್ವನಿಗೆ ಸ್ಚತಃ ಚಾಮುಂಡಿ ತಾಯಿಯೇ ಒಲಿದು, ಪ್ರಸಾದವನ್ನು ನೀಡಿದ್ದಾಳೆ. ಊರಿನವರ ಮನಸ್ಥಿತಿ ಬದಲಾಗುವಂತೆ ಮಾಡಿದ್ದಾಳೆ. ಆದರೆ, ರಿಯಾ ಅಹಂಕಾರದ ಕೈಗೊಂಬೆಯಾಗಿದ್ದಾಳೆ. ಇನ್ನೆಲ್ಲಿ ಒಲಿ ಎಂದರೂ ಸಂಗೀತ ಒಲಿಯುವುದು.

ಅಮ್ಮನ ಆತಂಕದಲ್ಲಿ ಲಚ್ಚಿ

ಅಮ್ಮನ ಆತಂಕದಲ್ಲಿ ಲಚ್ಚಿ

ಇಷ್ಟು ದಿನ ಹಾಡುವುದನ್ನು ವಿರೋಧಿಸುತ್ತಿದ್ದಳು. ರೇಡಿಯೋವನ್ನು ಕಿತ್ತೆಸೆಯುತ್ತಿದ್ದಳು. ಚಿಕ್ಕಿಯನ್ನು ತಿನ್ನುವುದಕ್ಕೆ ಬಿಡುತ್ತಿರಲಿಲ್ಲ. ಹಿಂಗಿದ್ದ ಅಮ್ಮ, ಅದ್ಯಾಕೋ ಇದ್ದಕ್ಕಿದ್ದ ಹಾಗೇ ಹೋಗು ಹಾಡು ಎಂದು ವೇದಿಕೆ ಕಡೆಗೆ ತಳ್ಳಿಯೇ ಬಿಟ್ಟಳು. ಆಯ್ತು ಹಾಡೇನೋ ಹಾಡಿ ಆಯ್ತು ಮುಂದೆಯೇ ನಿಂತಿದ್ದ ಗಿರಿಜವ್ವ ಹಾಡು ಮುಗಿದ ಮೇಲೆ ಕಾಣಿಸುತ್ತಿಲ್ಲ. ಇದು ಲಚ್ಚಿಯ ಆತಂಕಕ್ಕೆ ಕಾರಣವಾಗಿದೆ. ಕೆಮ್ಮು ಜಾಸ್ತಿಯಾದ ಗಿರಿಜಾಳನ್ನು ರಕ್ಷಿಸದೆ ಶಾಂತಾ ಬಿದ್ದಲ್ಲಿಯೇ ಬಿಟ್ಟು ಬಂದಿದ್ದಾಳೆ. ಇದು ತಿಳಿಯದ ಲಚ್ಚಿ, ಕಣ್ಣು ಹೋದಷ್ಟು ದೂರ ಅವ್ವನನ್ನು ಹುಡುಕುತ್ತಿದ್ದಾಳೆ.

ಲಚ್ಚಿಗೆ ಹೊಗಳಿಕೆಯ ಮಹಾಪೂರ

ಲಚ್ಚಿಗೆ ಹೊಗಳಿಕೆಯ ಮಹಾಪೂರ

ಲಚ್ಚಿಯ ಸ್ವರ ಸಂಗೀತಕ್ಕೆ ಮಾರು ಹೋಗದವರಿಲ್ಲ. ಹಾಡು ಅಂದ್ರೆ ಸಾಕು ಅರ್ಥಪೂರ್ಣ ಪದ ಜೋಡಿಸಿ, ಮನಸ್ಸಿಗೆ ನಾಟುವಂತೆ ಹಾಡಲು ನಿಂತು ಬಿಡುತ್ತಾಳೆ. ಲಚ್ಚಿಯ ಹಾಡಿಗೆ ಮನಸೋತವರೆಲ್ಲಾ ಚಪ್ಪಾಳೆ ತಟ್ಟಿದರು. ಕೈಲಾದಷ್ಟು ಹಣದ ಹಾರವನ್ನು ಹಾಕಿದರು. ಅದರ ಜೊತೆಗೆ ಚಕ್ಕುಲಿ, ನಿಪ್ಪಟ್ಟಿನ ಹಾರವೂ ಲಚ್ಚಿ ಮೈಮೇಲೆ ಇತ್ತು. ಜನರ ಹೊಗಳಿಕೆಯನ್ನು ಎಂಜಾಯ್ ಮಾಡುವ ಮನಸ್ಥಿತಿಯಲ್ಲಿ ಲಚ್ಚಿ ಇರಲಿಲ್ಲ. ಅಮ್ಮನ ಹುಡುಕಾಟದಲ್ಲಿದ್ದಳು. ಆದರೆ ಇದರ ನಡುವೆ ಮದ್ಯ ವ್ಯಸನಿಯೊಬ್ಬ ಬಂದು, ತಂದೆಯೇ ಗೊತ್ತಿಲ್ಲದವಳು ಅಂತ ಮತ್ತೆ ಲಚ್ಚಿಯ ಮನಸ್ಸನ್ನು ನೋಯಿಸಿದ್ದಾನೆ.

ರಿಯಾ ಹಾಡಿಗೆ ಸಂಗಮ್ ಕೋಪ

ರಿಯಾ ಹಾಡಿಗೆ ಸಂಗಮ್ ಕೋಪ

ರಿಯಾಗೆ ಸರಿಗಮಪ ಅಂತ ಸಂಗೀತ ಕಲಿಯುವ ಯಾವ ಆಸಕ್ತಿಯೂ ಇಲ್ಲ. ಬದಲಿಗೆ ರ್ಯಾಪ್ ಸಾಂಗ್‌ಗಳನ್ನು ಹಾಡಬೇಕು ಎಂಬುದೇ ಅವಳ ಇಷ್ಟ. ಅದಕ್ಕೆ ತಕ್ಕಂತೆ ದೀಪಿಕಾ ಕೂಡ ಕುಣಿಯುತ್ತಿದ್ದಾಳೆ. ರಿಯಾಗೆ ಸಂಗೀತ ಬರುತ್ತೋ ಬಿಡುತ್ತೋ, ಆದರೆ, ದೊಡ್ಡ ದೊಡ್ಡ ಮ್ಯೂಸಿಕ್ ಡೈರೆಕ್ಟರ್‌ಗಳ ಮುಂದೆ ಅವಳನ್ನು ಫ್ಯೂಚರ್ ಸಿಂಗರ್ ಅಂತ ಅನೌನ್ಸ್ ಮಾಡಬೇಕು ಅಷ್ಟೇ ಅನ್ನೋ ಹಠ. ಸಂಗಮ್ ಸಾಕಷ್ಟು ಸಲ ಬುದ್ದಿ ಹೇಳಿದ. ಹುಟ್ಟುಹಬ್ಬದ ಪಾರ್ಟಿಯಲ್ಲಿ ರಿಯಾ ಕೆಟ್ಟದಾಗಿ ಹಾಡಲು ಶುರು ಮಾಡಿದಾಗ ಸಂಗಮ್ ಕೋಪ ನೆತ್ತಿಗೇರಿತ್ತು. ಹಾಡು ನಿಲ್ಲಿಸಲು ಹೇಳಿ, ಬುದ್ದಿ ಮಾತು ಹೇಳಿದ್ದಾನೆ.

ತಂದೆ - ಮಗಳ ಸಮಾಗಮ ಯಾವಾಗ..?

ತಂದೆ - ಮಗಳ ಸಮಾಗಮ ಯಾವಾಗ..?

ದೊಡ್ಡ ಸ್ಟಾರ್ ಸಿಂಗರ್ ಎಂಬ ಪಟ್ಟ ಹೊತ್ತುಕೊಂಡಿರುವ ಸಂಗಮ್ ಗೆ ಸ್ಪೆಷಲ್ ಗುಣವೊಂದಿದೆ. ಅದುವೇ ಬಡವರಿಗಾಗಿ ಆತನ ಹೃದಯ ಹೆಚ್ಚಾಗಿಯೇ ಮಿಡಿಯುತ್ತೆ. ಹೀಗಾಗಿ ಅಪ್ಪ ಮಗಳ ಸಮಾಗಮವಾದಾಗ ಲಚ್ಚಿಯ ಟ್ಯಾಲೆಂಟ್ ನೋಡಿ, ಸಂಗಮ್ ಬೆಳೆಸುವ ಸಾಧ್ಯತೆ ಹೆಚ್ಚಿದೆ. ಆದಷ್ಟು ಬೇಗ ಅಪ್ಪ ಮಗಳ ಸಮಾಗಮವಾಗಲಿ ಎಂದೆ ನೋಡುಗರ ಹಾರೈಕೆಯಾಗಿದೆ.

More from Filmibeat

English summary
Namma Lacchi serial Written Update on February 16th episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X