Namma Lacchi: ಕ್ಯಾನ್ಸರ್‌ನಿಂದ ಬಳಲುತ್ತಿರೋ ಗಿರಿಜಾ ಲಚ್ಚಿಗೆ ತಂದೆಯ ಪರಿಚಯ ಮಾಡಿಸ್ತಾಳಾ?
ಲಚ್ಚಿಗಾಗಿ ಜೀವ ಕೈನಲ್ಲಿ ಹಿಡಿದು ಬದುಕುತ್ತಿದ್ದಾಳೆ ಗಿರಿಜಾ. ಬೇಗ ಬರ್ತೀನಿ ಅಂತ ಹೋದ ಸಂಗಮ್ ಹಿಂತಿರುಗಿ ಬರಲೇ ಇಲ್ಲ. ಇತ್ತ ಗರ್ಭಿಣಿಯಾಗಿದ್ದ ಗಿರಿಜಾ, ಯಾರಿಗೂ, ಏನನ್ನೂ ಹೇಳದೆಯೆ ಕೆಟ್ಟ ಕೆಟ್ಟ ಮಾತುಗಳನ್ನು ಕೇಳಿದಳು. ಬೈಗುಳ ತಿಂದಳು, ಅವಮಾನವನ್ನು ಎದುರಿಸಿದಳು. ಆದರೂ ಸಂಗಮ್ ಹೆಸರನ್ನು ಪ್ರಸ್ತಾಪ ಮಾಡಲಿಲ್ಲ.
ಲಚ್ಚುಗೆ ತನ್ನ ತಂದೆಯ ಹೆಸರನ್ನು ತಿಳಿಯುವ ಕುತೂಹಲ. ಕುತೂಹಲ ಎನ್ನುವುದಕ್ಕಿಂತ ಅನಿವಾರ್ಯತೆ. ಯಾರೋ ಬಂದು, ಅಪ್ಪ ಯಾರು ಅಂತಾನೇ ಗೊತ್ತಿಲ್ಲದವಳು ಎಂದು ನಿಂದಿಸಿದಾಗ, ಲಚ್ಚಿಗೆ ನೋವಾಗುವುದ ಸಹಜ. ಎಲ್ಲರೂ ಮನಸ್ಸಿಗೆ ಘಾಸಿ ಮಾಡಿದಾಗ, ಲಚ್ಚಿ ಅವಳ ಅವ್ವನ ಬಳಿ ಓಡಿ ಬಂದು ಕೇಳುವುದು ಒಂದೇ ಪ್ರಶ್ನೆ 'ನನ್ನಪ್ಪ ಯಾರು ಹೇಳು ಅವ್ವ' ಎಂಬುದು.

ಕೆಮ್ಮಿನಿಂದ ಬಳಲುತ್ತಿರುವ ಗಿರಿಜಾ
ಗಿರಿಜಾ ತನ್ನ ಆರೋಗ್ಯ,ತನ್ನ ಜೀವನದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಗಳು ಚೆನ್ನಾಗಿರಬೇಕು ಆದರೆ ಹಾಡು ಹೇಳಬಾರದು ಎಂಬುದೇ ಅವಳ ಬಯಕೆ. ಆದರೆ ಲಚ್ಚಿಗೆ ಅದನ್ನು ಬಿಟ್ಟು ಇರುವುದಕ್ಕೆ ಸಾಧ್ಯವೇ ಇಲ್ಲ. ಮಗಳ ಜವಾಬ್ದಾರಿ, ಶಾಂತಾಳ ಕಿರಿಕಿರಿ, ಊರಿನ ಜನರ ಮಾತುಗಳು ಇದರ ನಡುವೆಯೇ ಗಿರಿಜಾಳ ದಿನ ಕಳೆದು ಹೋಗುತ್ತಿದೆ. ಇನ್ನೆಲ್ಲಿ ಆರೋಗ್ಯದ ಕಡೆ ಗಮನ ಕೊಟ್ಟಾಳು. ವಿಪರೀತ ಕೆಮ್ಮಿನಿಂದ ಬಳಲುತ್ತಿದ್ದಾಳೆ. ಅದೇ ಇವತ್ತು ಮುಳ್ಳಾಗಿದೆ.

ಗಿರಿಜಾಗೆ ಬ್ಲೆಡ್ ಕ್ಯಾನ್ಸರ್
ಗಿರಿಜಾಗೆ ಟೆನ್ಶನ್ ಆದಾಗೆಲ್ಲಾ ವಿಪರೀತ ಕೆಮ್ಮು ಬರುತ್ತೆ. ಆಮೇಲೆ ನಿಂತು ಹೋಗುತ್ತೆ. ಅಂತ ಕೆಮ್ಮನ್ನು ಗಿರಿಜಾ ಅಷ್ಟು ಸೀರಿಯಸ್ ಆಗಿ ಏನು ತೆಗೆದುಕೊಂಡಿರಲಿಲ್ಲ. ಆದರೆ, ಲಚ್ಚಿಗೆ ಹಾಡು ಹಾಡುವಂತೆ ಬಲವಂತ ಮಾಡಿದ ಶಾಂತಾಳಿಂದ ಕೆಮ್ಮು ಜಾಸ್ತಿಯಾಗಿತ್ತು. ಪ್ರಜ್ಞೆ ತಪ್ಪಿ ಬಿದ್ದಳು. ಈಗ ವೈದ್ಯರ ಬಳಿ ಕೇಳಿದಾಗ ಗಿರಿಜಾಗೆ ರಕ್ತದ ಕ್ಯಾನ್ಸರ್ ಇರುವುದು ಬೆಳಕಿಗೆ ಬಂದಿದೆ. ಇದು ಗಿರಿಜಾ ಅಣ್ಣನಿಗೆ ನುಂಗಲಾರದ ತುತ್ತಾಗಿದೆ. ಶಾಂತಾಳಿಗೂ ಕೈಕಾಲು ಓಡುತ್ತಿಲ್ಲ. ಚಿಕಿತ್ಸೆಗೆಂದು ಖರ್ಚು ಮಾಡುವಷ್ಟು ಶ್ರೀಮಂತರಲ್ಲ. ಸಣ್ಣಮಟ್ಟದ ಚಿಕಿತ್ಸೆಯನ್ನು ಕೊಡಿಸುವಷ್ಟು ಅನುಕೂಲವಿಲ್ಲ. ಹೀಗಾಗಿ ಮುಂದೇನು ಎಂಬ ಚಿಂತೆ ಎದುರಾಗಿದೆ.

ಹಾಸಿಗೆ ಹಿಡಿದ ತಾಯಿ ಬಳಿ ಮನವಿ
ಹಾಡಿನ ಕಾರ್ಯಕ್ರಮ ಮುಗಿಸಿಕೊಂಡು ಲಚ್ಚಿ ಓಡೋಡಿ ಮನೆಗೆ ಬಂದಿದ್ದಾಳೆ. ಆ ಕಾರ್ಯಕ್ರಮದಲ್ಲಿ ಮತ್ತೆ ಅದೇ ತಂದೆಯ ಪ್ರಶ್ನೆ ಎದುರಾಗಿತ್ತು. ಆ ಪ್ರಶ್ನೆಗೆ ಉತ್ತರ ಪಡೆಯಲೇಬೇಕೆಂದು ಲಚ್ಚಿ ಗೋಳಾಡುತ್ತಾ ಓಡಿ ಬಂದಿದ್ದಾಳೆ. ಅಮ್ಮನ ಬಳಿ, ಅವ್ವ ನನ್ನ ಅಪ್ಪ ಯಾರು ಎಂದು ಮತ್ತೆ ಪ್ರಶ್ನೆ ಹಾಕಿದ್ದಾಳೆ. ಹಾಸಿಗೆ ಹಿಡಿದಿರುವ ಗಿರಿಜಾ ಹೇಳಲೇಬೇಕಾದ ಅನಿವಾರ್ಯತೆ ಇದೆ.

ತಂದೆಯ ಬಳಿ ಲಚ್ಚಿ ಸೇರುವುದಾದರೂ ಹೇಗೆ..?
ಗಿರಿಜಾ ಎಲ್ಲರಿಂದ ವಿಷಯ ಮುಚ್ವಿಟ್ಟು ತಪ್ಪು ಮಾಡಿದ್ದಾಳೆ. ಅದರಲ್ಲೂ ಲಚ್ಚಿಯ ಬಳಿಯೂ ವಿಷಯ ಮುಚ್ಚಿಟ್ಟಿದ್ದಾಳೆ. ಈಗ ಬೇರೆ ಆರೋಗ್ಯದ ಸಮಸ್ಯೆ ಎದುರಾಗಿದೆ. ಈಗಲೂ ಸತ್ಯ ಹೇಳದೆ ಹೋದರೆ, ಶಾಂತಾಳ ದುರಾಸೆಗೆ ಲಚ್ಚಿ ಬಂಡವಾಳವಾಗುತ್ತಾಳೆ. ಆಕೆಯ ಹಾಡನ್ನು ಹಣ ಮಾಡಲಷ್ಟೇ ಬಳಸಿಕೊಳ್ಳುತ್ತಾಳೆ. ಒಂದು ವೇಳೆ ತಾಯಿಯಿಂದ ಸತ್ಯ ಗೊತ್ತಾಗದೆ ಹೋದರು ಲಚ್ಚಿಯ ಹಾಡುಗಾರಿಜೆಯೇ ಅವಳನ್ನು ಅವಳ ಅಪ್ಪನ ಬಳಿ ಕರೆಸಬಹುದು. ಆದರೆ ಅಪ್ಪ ಎಂಬ ಸತ್ಯ ಗೊತ್ತಾಗದೆ ಅಲ್ಲಿಯೂ ಒದ್ದಾಡಬಹುದೇನೋ.


Click it and Unblock the Notifications











