Namma Lacchi: ಗಿರಿಜಾ ಸಾಯೋದು ಪ್ರೇಕ್ಷಕರಿಗೆ ಇಷ್ಟವಿಲ್ಲ.. ದೀಪಿಕಾ ಬದುಕಿರೋದು ಬೇಕಿಲ್ಲ..ಮುಂದೇನು?

By ಎಸ್ ಸುಮಂತ್

'ನಮ್ಮ ಲಚ್ಚಿ'ಗೆ ಬಯಸಿದ ದಿನ ಹತ್ತಿರವಾಗುತ್ತಿದೆ. ತನ್ನ ತಂದೆಗಾಗಿ ಲಚ್ಚಿಯ ಮನಸ್ಸು ತುಡಿಯುತ್ತಲೇ ಇತ್ತು. ಅಪ್ಪ-ಅಮ್ಮ, ಬಂಧು-ಬಳಗ ಎಲ್ಲವೂ ಗಿರಿಜಾಳೇ ಆಗಿದ್ದಳು. ಹೀಗಾಗಿ ಲಚ್ಚಿ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಊರಿನವರೆಲ್ಲಾ ಲಚ್ಚಿಯ ತಲೆಯನ್ನು ತಿನ್ನುವುದಕ್ಕೆ ಶುರು ಮಾಡಿದ್ದಾರೆ. ಮನಸ್ಸಿಗೆ ನೋವು ಕೊಡುವುದಕ್ಕೆ ಆರಂಭಿಸಿದ್ದಾರೆ. ಅಪ್ಪ ಇಲ್ಲದೆ ಇರೋಳು ಅಂತೆಲ್ಲಾ ವ್ಯಂಗ್ಯವಾಡುತ್ತಿದ್ದಾರೆ.

ಹಾಡು ಹುಟ್ಟಿನಿಂದಲೇ ಬಂದಿದ್ದು. ಆದರೆ ಅಪ್ಪ ಯಾರು ಎಂಬುದು ಗೊತ್ತಿಲ್ಲದೆ ಬೆಳೆಯುತ್ತಿರುವ ಲಚ್ಚಿಗೆ ಅಪ್ಪನ ಬಗ್ಗೆ ತಿಳಿದುಕೊಳ್ಳುವ ಕಾತುರ ಶುರುವಾಗಿದೆ. ಅಮ್ಮನನ್ನು ಕಾಡಿಸಿ, ಪೀಡಿಸಿದರು ಗಿರಿಜಾ ಬಾಯಿ ಬಿಡುತ್ತಿರಲಿಲ್ಲ. ಇದೀಗ ಎಲ್ಲದನ್ನು ಹೇಳುವುದಕ್ಕೆ ನಿರ್ಧಾರ ಮಾಡಿದ್ದಾಳೆ.

ಸಾವಿನ ದಾರಿಯಲ್ಲಿದ್ದಾಳೆ ಗಿರಿಜಾ

ಸಾವಿನ ದಾರಿಯಲ್ಲಿದ್ದಾಳೆ ಗಿರಿಜಾ

ಗಿರಿಜಾಗೆ ಸಿಕ್ಕಾಪಟ್ಟೆ ಕೆಮ್ಮು ಇದೆ. ಈ ಕೆಮ್ಮು ಟೆನ್ಶನ್ ಮಾಡಿಕೊಂಡಾಗ ಜಾಸ್ತಿಯಾಗುತ್ತಿತ್ತು. ಆದರೆ ಸಡನ್ ಆಗಿ ಟೆನ್ಶನ್ ಜಾಸ್ತಿಯಾಗಿ, ತಲೆ ತಿರುಗಿ ಬಿದ್ದು, ಪ್ರಜ್ಞೆ ತಪ್ಪಿದ್ದಳು. ಆಗ ಪರೀಕ್ಷೆ ಮಾಡಿಸಿದಾಗ ರಕ್ತದ ಕ್ಯಾನ್ಸರ್ ಇರುವುದು ಬೆಳಕಿಗೆ ಬಂದಿದೆ. ಗಿರಿಜಾಗೆ ಈಗ ಮಗಳ ಬಗ್ಗೆ ಚಿಂತೆ ಶುರುವಾಗಿದೆ. ಮಗಳಿಗೆ ಅಪ್ಪ ಯಾರು ಎಂಬುದು ಹೇಳಿಲ್ಲ. ಶಾಂತಾ, ಲಚ್ಚಿಯನ್ನು ಚೆನ್ನಾಗಿ ನೋಡಿಕೊಳ್ಳಲ್ಲ. ನಾನಿಲ್ಲದೆ ಹೋದರೆ ಮಗಳ ಮುಂದಿನ ಜೀವನ ಸಾಗುವುದಾದರೂ ಹೇಗೆ ಎಂಬ ಚಿಂತೆ ಶುರುವಾಗಿದೆ.

ಮಗಳಿಗೆ ಸತ್ಯ ಹೇಳಲು ಮುಂದಾದ ಗಿರಿಜಾ

ಮಗಳಿಗೆ ಸತ್ಯ ಹೇಳಲು ಮುಂದಾದ ಗಿರಿಜಾ

ಲಚ್ಚಿ ಮತ್ತೆ ಅಳುತ್ತಾ ಬಂದಳು. ಕಾರ್ಯಕ್ರಮದಲ್ಲಿ ಯಾರೋ ಒಬ್ಬ ಅಪ್ಪನ ಬಗ್ಗೆ ಮಾತನಾಡಿದ್ದನ್ನು ಹೇಳಿದಳು. ಹಾಸಿಗೆಯ ಮೇಲಿದ್ದ ಗಿರಿಜಾ ನಾಳೆ ಎಲ್ಲವನ್ನು ಹೇಳುತ್ತೇನೆ ಎಂದಳು. ಆ ನಾಳೆಗಾಗಿ ಲಚ್ಚಿ ನಿದ್ದೆ ಮಾಡದೆ ಕಾಯುತ್ತಿದ್ದಳು. ಕಡೆಗೂ ಆ ಘಳಿಗೆ ಬಂದೇ ಬಿಟ್ಟಿತು. ಗಿರಿಜಾ, ಲಚ್ಚಿಯನ್ನು ಕರೆದುಕೊಂಡು ತೋಟ, ಬೆಟ್ಟ ಗುಡ್ಡಗಳಿರುವೆಡೆಗೆ ಹೊರಟಳು. ಲಚ್ಚಿ ಆಸೆಯ ಕಣ್ಗಳಿಂದಾನೇ ಅಪ್ಪನನ್ನು ಹುಡುಕುತ್ತಾ ಹೊರಟಳು.

ಸಂಗಮ್ ಪ್ರೀತಿ ಬಗ್ಗೆ ಗೊತ್ತಾಯ್ತಾ ಲಚ್ಚಿಗೆ..?

ಸಂಗಮ್ ಪ್ರೀತಿ ಬಗ್ಗೆ ಗೊತ್ತಾಯ್ತಾ ಲಚ್ಚಿಗೆ..?

ಗಿರಿಜಾ ಅಷ್ಟು ದಿನದಿಂದ ಹುದುಗಿಟ್ಟ ಸತ್ಯವನ್ನು ಇಂದು ಮಗಳ ಮುಂದೆ ಅನಾವರಣ ಮಾಡುವುದಕ್ಕೆ ಸಿದ್ಧಳಾಗಿದ್ದಾಳೆ. ಸಂಗಮ್ ಜೊತೆಗೆ ಶುರುವಾದ ಪ್ರೇಮ ಕಥೆಯನ್ನು ತಿಳಿಸಿದ್ದಾಳೆ. ಪ್ರೀತಿ ಶುರುವಾದ ಪರಿಯನ್ನು ಹೇಳಿದ್ದಾಳೆ. ಯಾರಿಗೂ ಗೊತ್ತಾಗದೆ ಮದುವೆಯಾಗಿದ್ದನ್ನು ತಿಳಿಸಿದ್ದಾಳೆ. ಆದ್ರೆ ತಂದೆ ಯಾರು ಎಂಬುದನ್ನು ಹೆಸರಿಸಿ ಹೇಳಿಲ್ಲ. ಆದರೂ ಇಷ್ಟೆಲ್ಲಾ ಕೇಳಿದ ಲಚ್ಚಿ, ತಾಯಿಗೆ ಮಾತು ಕೊಟ್ಟಿದ್ದಾಳೆ. ನಾನು, ನಿನ್ನ ಮತ್ತು ಅಪ್ಪಯ್ಯನನ್ನು ಒಂದು ಮಾಡಿಯೇ ಮಾಡ್ತೀನಿ ಅವ್ವ ಎಂದಿದ್ದಾಳೆ.

ಪ್ರೇಕ್ಷಕರ ಆಸೆ ಏನು..?

ಪ್ರೇಕ್ಷಕರ ಆಸೆ ಏನು..?

'ನಮ್ಮ ಲಚ್ಚಿ' ಧಾರಾವಾಹಿ ಪ್ರೇಕ್ಷಕರನ್ನು ಎಷ್ಟು ಇಷ್ಟಪಡುತ್ತಿದ್ದಾರೆ ಅನ್ನೋದು ಕಮೆಂಟ್‌ಗಳಲ್ಲಿಯೇ ಗೊತ್ತಾಗುತ್ತಿದೆ. ಗಿರಿಜಾಗೆ ಬ್ಲೆಡ್ ಕ್ಯಾನ್ಸರ್ ಇರೋದು ಗೊತ್ತಾಗುತ್ತಿದ್ದಂತೆ ಪ್ರೇಕ್ಷಕರೆಲ್ಲಾ ಮನವಿ ಮಾಡುತ್ತಿದ್ದಾರೆ. "ಆ ಸುಂದರ ಪ್ರೇಮಾ ಹಾಗೇ ಮುಂದುವರೆಯಲಿ. ಗಿರಿಜಾ ಸಾಯುವುದು ಬೇಡ. ದೀಪಿಕಾ ಬದುಕುವುದು ಬೇಡ. ಮತ್ತೆ ಸಂಗಮ್ ಹಾಗೂ ಗಿರಿಜಾ ಒಂದಾಗಲಿ. ಅವರ ಪ್ರೇಮ ಕಥೆ ಮುಂದುವರೆಯಲಿ" ಎಂದು ಮನವಿ ಮಾಡಿದ್ದಾರೆ. ಆ ಕಡೆ ಲಚ್ಚಿಗೂ ತನ್ನ ತಂದೆ ತಾಯಿಯ ಪ್ರೇಮ ಕಥೆಯನ್ನು ಕೇಳಿ ಖುಷಿಯಾಗಿದೆ. ಅಪ್ಪ ಸಿಕ್ಕಿದಷ್ಟೇ ಸಂತಸವಾಗಿದೆ. ಆದಷ್ಟು ಬೇಗ ಸಂಗಮ್ ಮತ್ತು ಲಚ್ಚಿಯ ಭೇಟಿಯಾಗಲಿ ಎಂದೇ ಪ್ರೇಕ್ಷಕರು ಬಯಸುತ್ತಿದ್ದಾರೆ.

More from Filmibeat

English summary
Star suvarna Namma Lacchi Serial Written Update on February 20th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X