Namma Lacchi: ಮಂಡ್ಯಕ್ಕೆ ಬರುತ್ತಿರೋ ಅಪ್ಪನನ್ನು ಗುರುತಿಸುತ್ತಾಳಾ ಲಚ್ಚಿ..?

By ಎಸ್ ಸುಮಂತ್

ಲಚ್ಚಿಗೆ ತಂದೆಯನ್ನು ತಿಳಿಯುವ ಕಾತರ. ಗಿರಿಜಾಗೆ ಮಗಳನ್ನು ತಂದೆಯಿಂದ ದೂರವಿಡುವ ಅನಿವಾರ್ಯತೆ. ಆದ್ರೆ ಮಗಳ ಒದ್ದಾಟ ನೋಡಲಾಗದೆ, ಅವಳ ನೋವನ್ನು ಹೆಚ್ಚು ಮಾಡಲು ಇಷ್ಟವಿಲ್ಲದ ಗಿರಿಜಾ ಕಡೆಗೂ ತನ್ನ ಒಲವಿನ ಪ್ರೇಮಗೀತೆ ಹೇಳಿಕೊಳ್ಳಲು ನಿರ್ಧರಿಸಿದಳು. ಆದರೆ ಆ ಪ್ರೇಮ ಕಥೆಯಲ್ಲಿ ತಂದೆ ಜೊತೆಗಿನ ನಂಟನ್ನಷ್ಟೇ ಹೇಳಿದಳೇ ವಿನಃ ಆ ತಂದೆಯ ಹೆಸರನ್ನಾಗಲೀ, ತಂದೆಯ ಸುಳಿವನ್ನಾಗಲೀ ಗಿರಿಜಾ ಬಿಟ್ಟು ಕೊಡುವುದಾಗಲೀ ಮಾಡಲಿಲ್ಲ.

ಆದರೆ, ಇಷ್ಟು ಸುಳಿವನ್ನು ಕೊಟ್ಟಿದ್ದೇ ಲಚ್ಚಿಗೆ ಮಹಾ ಸಂತೋಷವಾಗಿದೆ. ತನ್ನ ತಂದೆಯನ್ನು ನೋಡಿದಷ್ಟೇ ಖುಷಿಯಾಗಿದೆ. ತಂದೆಯನ್ನು ಕಲ್ಪನೆಯಲ್ಲಿಯೇ ಕಂಡಿದ್ದಾಳೆ. ಅವ್ವನನ್ನು ಅಪ್ಪ‌ನನ್ನು ಮತ್ತೆ ಒಂದು ಮಾಡುತ್ತೀನಿ ಎಂಬ ಆಸೆಯಿಂದ ಇದ್ದಾಳೆ. ಅವ್ವನಿಗೂ ಅದೇ ಮಾತು ಕೊಟ್ಟಿದ್ದಾಳೆ.

ಲಚ್ಚಿಯನ್ನು ಹಿಡಿಯಲು ಸಾಧ್ಯವಾ..?

ಲಚ್ಚಿಯನ್ನು ಹಿಡಿಯಲು ಸಾಧ್ಯವಾ..?

ಗಿರಿಜಾ ತನ್ನ ಪ್ರೇಮ ಕಥೆಯನ್ನು ಹೇಳುತ್ತಿದ್ದಳು. ಅದರ ಜೊತೆಗೆ ಗಿರಿಜಾಳ ಕೆಮ್ಮು ಹೆಚ್ಚಾಗುತ್ತಾ ಇತ್ತು. ಅದನ್ನು ಕಂಡ ಲಚ್ಚಿ ಇನ್ನು ಮುಂದೆ ಯಾವತ್ತು ನಿಂಗೆ ನೋವಾಗುವಂತೆ ನಡೆದುಕೊಳ್ಳುವುದಿಲ್ಲ ಅವ್ವ ಎಂದಿದ್ದಳು. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಅಂತ ಹೇಳಿದ್ದೇ ತಡ, ಸಂಗಮ್ ಅವರ ವಿಚಾರ ಕೇಳಿ ಓಡಿ ಹೋದಳು. ಗಿರಿಜಾ ಎಷ್ಟೇ ತಡೆದರು ನಿಲ್ಲುತ್ತಿಲ್ಲ. ಲಚ್ಚಿ ಓಡುತ್ತಿದ್ದನ್ನು ಕಂಡು ಗಿರಿಜಾ ಕೂಡ ಹಿಂದೆ ಹಿಂದೆ ಓಡಿದ್ದಾಳೆ. ಕಡೆಗೂ ಲಚ್ಚಿಯನ್ನು ಹಿಡಿದಿದ್ದಾಳೆ.

ಲಚ್ಚಿಯ ಖುಷಿಯೇ ತಂದೆ

ಲಚ್ಚಿಯ ಖುಷಿಯೇ ತಂದೆ

ಲಚ್ಚಿಗೆ ಸಂಗಮ್ ಎಂದರೆ ಎಲ್ಲಿಲ್ಲದ ಪ್ರೀತಿ. ಏನೇ ಭಾಷೆ, ಆಣೆ ಪ್ರಮಾಣ ಮಾಡಿದ್ದರೂ ಕೂಡ ಸಂಗಮ್ ಹೆಸರು ಬಂದಾಕ್ಷಣ ಲಚ್ಚಿಗೆ ಯಾವುದು ನೆನಪಿರುವುದಿಲ್ಲ. ಈಗಲೂ ಅದೇ ಕೆಲಸ ಮಾಡಿದ್ದಾಳೆ. ಸಂಗಮ್ ಹಾಡಿನ ಬಗ್ಗೆ ಅನೌನ್ಸ್ ಮೆಂಟ್ ಮಾಡುತ್ತಿದ್ದಂತೆ, ಲಚ್ಚಿ ಮಾಮ ನಿಲ್ಲು ನಾನು ಬರ್ತೀನಿ ಅಂತ ಓಡಿದ್ದಾಳೆ.

ತಂದೆಯನ್ನು ಹೊಗಳಿದ ಲಚ್ಚಿ

ತಂದೆಯನ್ನು ಹೊಗಳಿದ ಲಚ್ಚಿ

ಸಂಗಮ್ ಹಾಡುವುದಕ್ಕೆ ಮಾತ್ರವಲ್ಲ ನೋಡುವುದಕ್ಕೂ ಅದ್ಭುತವಾಗಿ ಕಾಣಿಸುತ್ತಾರೆ. ಅದು ಲಚ್ಚಿಗೂ ಗೊತ್ತು. ಆಟೋದಲ್ಲಿ ಅನೌನ್ಸ್ ಮೆಂಟ್ ಆಗುತ್ತಿದ್ದರೆ, ಈ ಕಡೆ ಗಿರಿಜಾ ಲಚ್ಚಿಯ ಕೈಯನ್ನು ಹಿಡಿದುಕೊಂಡು ಎಳೆಯುತ್ತಿದ್ದಾಳೆ. ಅದರ ಗಮನವಿಲ್ಲದ ಲಚ್ಚಿ, "ಸಂಗಮ್ ಎಷ್ಟು ಸುಂದರವಾಗಿದ್ದಾರೆ ಅಲ್ವಾ ಅವ್ವ. ಹೀರೋ ಇದ್ದಂಗೆ ಇದ್ದಾರೆ ನಮ್ಮ ಸಂಗಮ್ ಅಪ್ಪ" ಎಂದಾಕ್ಷಣ ಗಿರಿಜಾಗೆ ಮಾತುಗಳೇ ಬರುತ್ತಿಲ್ಲ. ತಂದೆ ಯಾರೆಂಬುದು ಗೊತ್ತಿಲ್ಲದೆ ತಂದೆಯನ್ನೇ ಹೊಗಳುತ್ತಿರುವಾಗ ಹೆತ್ತ ತಾಯಿಗೆ ಎಷ್ಟೆಲ್ಲಾ ನೋವಾಗಬೇಡ. ಇತ್ತ ತಾಯಿಗೆ ತಂದೆ ಯಾರೆಂಬುದನ್ಮು ಹೇಳುವುದಕ್ಕೂ ಆಗದೆ ಆ ಜೀವ ಒದ್ದಾಡುತ್ತಿದೆ.

ಅಪ್ಪ ಮಗಳ ಮುಖಾಮುಖಿಗೆ ಸಮಯ ಹತ್ತಿರ

ಅಪ್ಪ ಮಗಳ ಮುಖಾಮುಖಿಗೆ ಸಮಯ ಹತ್ತಿರ

ಸಂಗಮ್ ಸಾತನೂರ್ ಮತ್ತು ಗಿರಿಜಾಳ ಪ್ರೇಮ ಕಥೆ ಶುರುವಾಗಿದ್ದು ಮಂಡ್ಯ ಜಿಲ್ಲೆಯಲ್ಲಿ. ಏನೋ ಸಾಧಿಸುವ ಹಂಬಲದಲ್ಲಿ ಹೋದ ಸಂಗಮ್, ಹಳ್ಳಿಯ ಗಿರಿಜಾಳನ್ನು ನೋಡಲು ಬರಲಾಗದ ಪರಿಸ್ಥಿತಿಗೆ ಸಿಲುಕಿದ್ದ. ಆದರೆ ವಾಪಸ್ಸು ಬರುವುದಕ್ಕೆ ಈಗ ಅಂತಸ್ತು, ಹೆಸರು, ಇನ್ನೊಂದು ಸಂಸಾರ ಕೂಡ ಅಡ್ಡ ಬರುತ್ತಾ ಇದೆ. ಆದ್ರೆ ಸಂಗಮ್ ಇಷ್ಟು ವರ್ಷಗಳ ಬಳಿಕ ಮತ್ತೆ ಮಂಡ್ಯಕ್ಕೆ ಬರುತ್ತಿದ್ದಾರೆ. ಮತ್ತೆ ಹಳೇ ಪ್ರೇಮ ನೆನಪಾಗುವುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ, ಸಂಗಮ್ ಮನಸ್ಸು ಕೂಡ ಗಿರಿಜಾಗೋಸ್ಕರ ತುಡಿಯುತ್ತಾ ಇದೆ. ಇದರ ಜೊತೆಗೆ ತನ್ನ ಹಾಡನ್ನು ಕೇಳಿಕೊಂಡು ಲೀಲಾಜಾಲವಾಗಿ ಹಾಡುವ ಲಚ್ಚಿಯನ್ನು ಕಂಡು ಶಿಷ್ಯೆಯನ್ನಾಗಿ ಮಾಡಿಕೊಳ್ಳುವು ಮೂಲಕ ತಂದೆ ಮಗಳ ಜರ್ನಿ ಆರಂಭವಾಗಬಹುದು.

More from Filmibeat

English summary
Namma Lacchi serial Written Update on February 21st episode. Here is the details about Sangam meet Lacchi soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X