Namma Lacchi: ಲಚ್ಚಿಯ ಅಪ್ಪ - ಅಮ್ಮ ಇಬ್ಬರಿಗೂ ಅಪಾಯ.. ಯಾರನ್ನು ಉಳಿಸುತ್ತಾಳೆ ಲಚ್ಚಿ?

By ಎಸ್ ಸುಮಂತ್

ಗಿರಿಜಾಗೆ ತನಗೆ ಬ್ಲೆಡ್ ಕ್ಯಾನ್ಸರ್ ಇರುವುದು ಗೊತ್ತೋ ಗೊತ್ತಿಲ್ವೋ ಗೊತ್ತಿಲ್ಲ. ಆದರೆ ಕೆಮ್ಮು ಮಾತ್ರ ಕಡಿಮೆಯಾಗಿಲ್ಲ. ಅವಳಿಗೆ ಅಣ್ಣನೊಬ್ಬನೇ ಆಸರೆಯಾಗಿರುವುದು. ಅವನಿಗೆ ಅಷ್ಟೊಂದು ಭರಿಸುವಷ್ಟು ಶಕ್ತಿಯಿಲ್ಲ. ಹೀಗಾಗಿ ಗಿರಿಜಾಗೆ ಏನನ್ನು ಹೇಳುವುದಕ್ಕೆ ಹೋಗಿಲ್ಲ. ಆದರೆ ಗಿರಿಜಾ ಕೂಡ ಆ ಕಡೆ ಗಮನ ಕೊಡದೆ ಮತ್ತಷ್ಟು ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾಳೆ.

ಲಚ್ಚಿಗೆ ತಮ್ಮ ಪ್ರೇಮಾ ಕಥೆಯನ್ನೆಲ್ಲಾ ಹೇಳಿದಳು. ಆದರೆ ಆ ಪ್ರೇಮಕಥೆಯಲ್ಲಿ ನಾಯಕನ ಹೆಸರನ್ನು ಹೇಳಲೇ ಇಲ್ಲ. ಲಚ್ಚಿಗೆ ಅಷ್ಟಕ್ಕೆ ಖುಷಿ ಪಟ್ಟಿದ್ದಾಳೆ. ಇದರ ಜೊತೆಗೆ ತಂದೆಯೇ ಊರಿಗೆ ಬರ್ತಾ ಇದ್ದಾನೆ. ಆದರೆ, ಆ ಕಡೆ ಅಪ್ಪ ಈ ಕಡೆ ಅವ್ವ ಇಬ್ಬರು ಅಪಾಯದಲ್ಲಿ ಸಿಲುಕಿದ್ದಾರೆ.

ಗಿರಿಜಾಳಿಗೆ ಇರುವ ಭಯವೇ ಬೇರೆ..!

ಗಿರಿಜಾಳಿಗೆ ಇರುವ ಭಯವೇ ಬೇರೆ..!

ಲಚ್ಚುಗೆ ಹಾಡುಗಾರಿಕೆ ಎಂಬುದು ಹುಟ್ಟಿನಿಂದಾನೇ ವರವಾಗಿ ಬಂದಿದೆ. ಅದು ಅಪ್ಪನ ಗುಣ. ಆದರೆ, ಅದೇ ಸಂಗೀತದ ಹಿಂದೆ ಹೋದ ಸಂಗಮ್ ಮತ್ತೆ ವಾಪಾಸ್ ಬರಲೇ ಇಲ್ಲ. ಗಿರಿಜಾಳಿಗೆ ಇರುವ ಭಯವೂ ಅದೇ. ಹಾಡು ಹಾಡುವುದಕ್ಕೆ ಬಿಟ್ಟರೆ ಲಚ್ಚಿ ಕೂಡ ಇನ್ನೆಲ್ಲಿ, ದೊಡ್ಡ ಮಟ್ಟಕ್ಕೆ ಬೆಳೆದು, ನನ್ನನ್ನು ಬಿಟ್ಟು ಹೋಗಿ ಬಿಡುತ್ತಾಳೋ ಎಂಬ ಭಯ. ಸಂಗೀತ, ಆ ಖ್ಯಾತಿಯಿಂದೆ ಹೋದ ಸಂಗಮ್ ಇಂದು ಬಯಸಿದರೂ ಸಿಗುತ್ತಿಲ್ಲ. ಹೀಗಾಗಿ ಇನ್ನೆಲ್ಲಿ ಲಚ್ಚಿ ಕೂಡ ಅದೆ ರೀತಿ ಆಗಿ ಬಿಡುವಳೋ ಎಂಬ ಭಯ.

ತಂದೆಯ ಬಗ್ಗೆ ಲಚ್ಚಿಗೆ ಸಿಕ್ತು ಸಾಕ್ಷಿ..!

ತಂದೆಯ ಬಗ್ಗೆ ಲಚ್ಚಿಗೆ ಸಿಕ್ತು ಸಾಕ್ಷಿ..!

ಗಿರಿಜಾ, ಮಗಳು ಲಚ್ಚಿಯನ್ನು ಸಮಾಧಾನ ಮಾಡುವಾಗ ಸಂಗಮ್ ಬಗ್ಗೆ ಕೆಲವೊಂದು ಗುಣಗಳನ್ನು ಹೇಳುತ್ತಾ ಇದ್ದಳು. ಆಗ, "ನೀನು ಗಂಡು ಮಗ ಆಗಿದ್ದರೆ, ನಿಮ್ಮ ಅಪ್ಪನ ರೀತಿಯೇ ದೊಡ್ಡ ಸಂಗೀತಗಾರನಾಗು ಅಂತ ಕಳುಹಿಸುತ್ತಿದ್ದೆ" ಎನ್ನುತ್ತಾಳೆ. ಇದನ್ನು ಕೇಳಿಸಿಕೊಂಡ ಲಚ್ವಿಗೆ ಫುಲ್ ಖುಷಿ. "ಹಾಗಾದ್ರೆ ನಮ್ಮ ಅಪ್ಪ ದೊಡ್ಡ ಸಂಗೀತಗಾರನಾಗಿದ್ದಾರಾ ಅವ್ವ. ಹೆಣ್ಣು ಮಕ್ಕಳಾದ್ರೆ ಯಾಕೆ ಸಂಗೀತ ಕಲಿಯಬಾರದು" ಎಂದು ಪ್ರಶ್ನಿಸಿದ್ದಾಳೆ.

ಮೇಲುಕೋಟೆಗೆ ಬಂದ ಸಂಗಮ್

ಮೇಲುಕೋಟೆಗೆ ಬಂದ ಸಂಗಮ್

ಪ್ರೀತಿ ಮಾಡಿ, ಮದುವೆಯಾಗಿ, ಮಾತು ಕೊಟ್ಟು ಹೋದ ಬಳಿಕ ಸಂಗಮ್ ಮತ್ತೆ ವಾಪಾಸ್ ಆಗಲೇ ಇಲ್ಲ. ಗಿರಿಜಾಳ ನೆನಪೊಂದೇ ಅವನ ಮನದಲ್ಲಿದೆ. ಲಚ್ಚಿ ಎಂಬ ಕೋಗಿಲೆಮರಿ ಮಗಳಿದ್ದಾಳೆ ಎಂಬ ಸೂಕ್ಷ್ಮತೆಯೂ ಅವನಿಗೆ ಇಲ್ಲ. ಈಗ ಎಷ್ಟೋ ವರ್ಷಗಳ ಬಳಿಕ ಮೇಲುಕೋಟೆಗೆ ಬರುತ್ತಿದ್ದಾನೆ. ಆದರೆ ಬಂದು ಗಿರಿಜಾಳನ್ನು ನೋಡುವುದಕ್ಕೂ ಮುನ್ನವೇ ಅಪಾಯದಲ್ಲಿ ಸಿಲುಕಿದ್ದಾನೆ. ಬ್ರೇಕ್ ಫೇಲ್ ಆದ ಜೀಪ್ ತೆಗೆದುಕೊಂಡು ಹೊರಟಿದ್ದಾನೆ. ಅದನ್ನು ತಿಳಿಸಬೇಕು ಎಂದರು, ದೀಪಿಕಾಳ ಮೇಲಿನ ಕೋಪಕ್ಕೆ ಫೋನನ್ನೇ ಸೈಡಿಗೆ ಬಿಸಾಡಿ ಹೋಗಿದ್ದಾನೆ.

ಬೀದಿಯಲ್ಲಿಯೇ ಬಿದ್ದ ಗಿರಿಜಾ

ಬೀದಿಯಲ್ಲಿಯೇ ಬಿದ್ದ ಗಿರಿಜಾ

ಅತ್ತ ಸಂಗಮ್ ಬ್ರೇಕ್ ಸರಿಯಿಲ್ಲದ ಜೀಪ್ ತೆಗೆದುಕೊಂಡು ಹೊರಟಿದ್ದಾನೆ. ಇತ್ತ ಗಿರಿಜಾಗೆ ಕಾಯಿಲೆ ಹೆಚ್ಚಾಗಿದೆ. ಲಚ್ಚಿಗೆ ಸಂಗಮ್ ಹೆಸರು ಕೇಳಿದರೆ ಸಾಕು, ಎಲ್ಲವನ್ನು ಮರೆತು ಹೊರಟೆ ಬಿಡುತ್ತಾಳೆ. ಈಗ ಸಂಗಮ್ ಬರ್ತಾ ಇದ್ದಾರೆ ಎಂದು ಅನೌನ್ಸ್ಮೆಂಟ್ ಮಾಡಿದ್ದೆ ತಡ, ಅವ್ವನ ಕೆಮ್ಮನ್ನು ಲೆಕ್ಕಿಸದೆ ಹೊರಟೆ ಬಿಟ್ಟಳು. ಲಚ್ಚಿಯನ್ನು ಹಿಡಿಯಲು ಆಗದೆ, ಸಂಗಮ್ ಊರಿಗೆ ಬರುತ್ತಿದ್ದಾನೆ ಎಂಬ ಟೆನ್ಶನ್ ತೆಗೆದುಕೊಂಡ ಗಿರಿಜಾಗೆ, ಪ್ರಜ್ಞೆಯೇ ಹೋಗಿದೆ. ನಿಂತಲ್ಲಿಯೇ ನಡು ರಸ್ತೆಯಲ್ಲಿಯೇ ಬಿದ್ದು ಬಿಟ್ಟಿದ್ದಾಳೆ. ಆದ್ರೆ ಇದು ಲಚ್ಚಿಗೆ ಕಾಣಿಸಲೇ ಇಲ್ಲ.

More from Filmibeat

English summary
Star suvarna serial Namma Lacchi Written Update on February 22nd episode. Here is the details about Sangam and Girija danger zone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X