Namma Lacchi:ಮೇಲುಕೋಟೆಗೆ ಬಂದ ಲಚ್ಚಿ ಅಪ್ಪ..ಗಿರಿಜಾಳನ್ನು ಕಾಣದೆ ಹೋಗುತ್ತಾನಾ ?

By ಎಸ್ ಸುಮಂತ್

ಮನುಷ್ಯನಿಗೆ ಸಕ್ಸಸ್ ಸಿಕ್ಕ ಮೇಲೆ, ದೊಡ್ಡ ಹೆಸರು ಬಂದ ಮೇಲೆ ಹಳೆಯ ದಿನಗಳಿಗೆ ಮರಳುವುದು ಬಹಳ ಕಷ್ಟ. ಹಳೆಯ ಸಂಬಂಧಗಳನ್ನು ಮೆಲುಕು ಹಾಕುವುದು ಕೂಡ ಸಿಕ್ಕಾಪಟ್ಟೆ ಕಷ್ಟವಾಗುತ್ತದೆ. ಸಂಗಮ್ ಕೂಡ ಈಗ ಅದೇ ಹಾದಿಯಲ್ಲಿಯೆ ಇದ್ದಾರೆ. ಸದ್ಯಕ್ಕೆ ದೊಡ್ಡ ಸಿಂಗರ್, ಫೇಮಸ್ ಸಿಂಗರ್. ಆದರೆ, ಸಂಗಮ್‌ನನ್ನು ನಂಬಿದ ಪ್ರೀತಿಯನ್ನೇ ಉಳಿಸಿಕೊಳ್ಳುವುದಕ್ಕೆ ಆಗದಷ್ಟು ಆ ಖ್ಯಾತಿ ತಂದಿದೊಡ್ಡಿದೆ.

ಸಂಗಮ್‌ ಮೋಸ ಮಾಡಿದ್ದಾನೆಂದು ತಿಳಿದ ಗಿರಿಜಾ ಅವನನ್ನು ಇನ್ನಿಲ್ಲದಂತೆ ದ್ವೇಷ ಮಾಡುತ್ತಿದ್ದಾಳೆ. ಆದ್ರೆ ಸಂಗಮ್ ಇನ್ನು ಅದೇ ನೆನಪಲ್ಲಿಯೇ ಇದ್ದಾನೆ. ಗಿರಿಜಾಳನ್ನು ಯಾವಾಗ ನೋಡ್ತೀನೋ ಎಂಬ ಆಸೆ ಅವನಲ್ಲಿಯೂ ಇದೆ. ಆದರೆ ಪರಿಸ್ಥಿತಿಗೆ ಸಿಲುಕಿ ಒದ್ದಾಡುತ್ತಿದ್ದಾನೆ.

ಹಳೆಯ ನೆನಪುಗಳಲ್ಲಿ ಸಂಗಮ್

ಹಳೆಯ ನೆನಪುಗಳಲ್ಲಿ ಸಂಗಮ್

ಗಿರಿಜಾ ಮತ್ತು ಸಂಗಮ್ ಲವ್ ಸ್ಟೋರಿ ಮುಗಿದ ಮೇಲೆ, ಹಲವು ವರ್ಷಗಳಾದ ಬಳಿಕ ಸಂಗಮ್ ಸಾತನೂರ್ ಈಗ ಮೇಲುಕೋಟೆಗೆ ಬಂದಿದ್ದಾನೆ. ಆದ್ರೆ ಬರುವ ದಾರಿಯುದ್ಧಕ್ಕೂ ಅವನಿಗೆ ಹಳೆಯ ನೆನಪುಗಳೇ ಕಂಡಿವೆ. ಗಿರಿಜಾಳ ಜೊತೆಗೆ ಓಡಾಡಿದ್ದು, ಗಿರಿಜಾಳನ್ನು ಪ್ರೀತಿ ಮಾಡಿದ್ದು, ಗಿರಿಜಾಳನ್ನು ಮದುವೆಯಾಗಿದ್ದು ಹೀಗೆ ಗಿರಿಜಾಳ ಎಲ್ಲಾ ನೆನಪುಗಳು ಒಕ್ಕರಿಸಿ ಬರುತ್ತಿವೆ. ಸಂಗಮ್‌ಗೆ ಇದು ಸಿಹಿಯ ನೆನಪಾದರೂ ಪಶ್ಚಾತ್ತಾಪ ಕೂಡ ಆಗಿದೆ. "ಯಾರಿಗೂ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲಿಲ್ಲ. ಈ ಖ್ಯಾತಿ ಅನ್ನೋದು ಇನ್ನು ಎಲ್ಲಿಯ ತನಕ ತೆಗೆದುಕೊಂಡು ಹೋಗಿ ನಿಲ್ಲುಸುತ್ತೋ" ಎಂದು ತನ್ನ ಖ್ಯಾತಿಯನ್ನೇ ಶಪಿಸುತ್ತಿದ್ದಾನೆ.

ಪ್ರಜ್ಞೆ ತಪ್ಪಿ ಬಿದ್ದಿರುವ ಗಿರಿಜಾ..!

ಪ್ರಜ್ಞೆ ತಪ್ಪಿ ಬಿದ್ದಿರುವ ಗಿರಿಜಾ..!

ಗಿರಿಜಾಗೆ ಬ್ಲೆಡ್ ಕ್ಯಾನ್ಸರ್ ಇರುವುದು ಆಕೆಗೇನೆ ಗೊತ್ತಿಲ್ಲ. ಈಗ ಲಚ್ಚಿ, ಸಂಗಮಪ್ಪನನ್ನು ಹುಡುಕುತ್ತಾ ಓಡಿದಾಗ ಗಿರಿಜಾಳ ಕಾಯಿಲೆ ಹೆಚ್ಚಾಗಿದೆ. ಕೆಮ್ಮುವ ಮೂಲಕ ರಕ್ತದ ವಾಂತಿ ಮಾಡಿಕೊಂಡು, ಪ್ರಜ್ಞೆ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದಾಳೆ. ಊರಿನವರೆಲ್ಲಾ ಸೇರಿ, ಆಕೆಯ ಸುತ್ತುವರೆದಿದ್ದಾರೆ. ಸಂಗಮ್ ಕೂಡ ಅದೇ ಹಾದಿಯಲ್ಲಿ ಬರುತ್ತಿದ್ದಾನೆ. ಹಳೆಯ ನೆನಪುಗಳಲ್ಲಿ ತೇಲಿ ಹೋದವನಿಗೆ, ಗಿರಿಜಾ ಕಾಣುವುದು ಸುಲಭವ ಗೊತ್ತಿಲ್ಲ.

ರಿಯಾಳಿಗೆ ಅಪ್ಪನೆಂದರೆ ಅಷ್ಟಕಷ್ಟೆ

ರಿಯಾಳಿಗೆ ಅಪ್ಪನೆಂದರೆ ಅಷ್ಟಕಷ್ಟೆ

ಸಂಗೀತ ಅನ್ನೋದು ಸುಲಭವಲ್ಲ. ಎಲ್ಲರಿಗೂ ಒಲಿಯುವುದು ಇಲ್ಲ. ಸಂಗಮ್ ಹೆಸರು ತಂದು ಕೊಡುವುದು ಲಚ್ಚಿ ಮಾತ್ರ. ದೀಪಿಕಾ ಮತ್ತು ಮಗಳು ರಿಯಾ ಬಳಿ ಸಿಲುಕಿ ಸಂಗಮ್ ಸಂಕಟ ಪಡುತ್ತಿದ್ದಾನೆ. ಈಗ ಸಂಗೀತ ಕಲಿಸಿಕೊಡಲ್ಲ, ನನಗೆ ಸಂಗೀತವೇ ಬರಲ್ಲ ಅಂತಾರೆ ಅಂತ ರಿಯಾ ತಂದೆಯನ್ನೇ ದೂರುತ್ತಿದ್ದಾಳೆ. ತಂದೆಯ ಫೋಟೋ ಮುಂದೆ ಅಳಲು ತೋಡಿಕೊಂಡು ತಿರಸ್ಕರಿಸಿದ್ದಾಳೆ.

ಲಚ್ಚಿಗೆ ಸಂಗಮಪ್ಪನೇ ಅಪ್ಪ ಎಂದು ಗೊತ್ತಾದರೆ..?

ಲಚ್ಚಿಗೆ ಸಂಗಮಪ್ಪನೇ ಅಪ್ಪ ಎಂದು ಗೊತ್ತಾದರೆ..?

ಇತ್ತ ಸಂಗಮ್ ಮೇಲುಕೋಟೆಗೆ ಬಂದಿದ್ದಾನೆ. ಸಂಗಮ್ ಅಪ್ಪ ಅಂತಾನೆ ಬಾಯಿ ತುಂಬಾ ಕರೆಯುವ ಲಚ್ಚಿಗೆ ಇವರೇ ನಮ್ಮ ಅಪ್ಪ ಎಂಬುದು ಗೊತ್ತಿಲ್ಲ. ಆದ್ರೆ ಸಂಗಮ್ ಅವರ ಫೋಟೋಗಾಗಿ ಲಚ್ಚಿ ಕಷ್ಟಪಡುತ್ತಿದ್ದಾಳೆ. ಹಾಡು ಹೇಳಿದರೆ ಸಿಗುತ್ತೆ ಎಂದು ಗೊತ್ತಾದಾಗ ಹಾಡು ಹೇಳಲು ಪ್ರಯತ್ನಿಸಿದ್ದಾಳೆ. ಸಾಲುಗಳು ಬಾರದೆ ಇದ್ದಿದ್ದಕ್ಕೆ ಜನ ನಿಂದಿಸಿದ್ದಾರೆ. ಆದರೂ ಛಲ ಬಿಡದ ಲಚ್ಚಿ ಹಾಡು ಹೇಳಿ ಕಡೆಗೂ ಸಂಗಮ್, ಕಟೌಟ್ ಅನ್ನು ತನ್ನದಾಗಿಸಿಕೊಂಡಿದ್ದಾಳೆ. ಅಪ್ಪನನ್ನು ಗುರುವೆಂದುಕೊಂಡು, ಆ ಗುರುವನ್ನು ದೇವರಿಗೆ ಹೋಲಿಸಿದ್ದಾಳೆ. ದೇವರಂತೆಯೇ ಕಾಣುತ್ತಿದ್ದಾಳೆ.

More from Filmibeat

English summary
Star Suvarna serial Namma Lacchi Written Update on February 23rd episode. Here is the details about Sangam's old memories.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X