Namma Lacchi: ಗಿರಿಜಾಳ ಹೆಸರು ಕನವರಿಸುವ ಸಂಗಮ್ ಅದೇ ಆಸ್ಪತ್ರೆಗೆ ಸೇರುತ್ತಾನಾ..?

By ಎಸ್ ಸುಮಂತ್

ಗಿರಿಜಾಳನ್ನು ಪ್ರೀತಿ ಮಾಡಿ ಸಂಗಮ್ ದೂರ ಹೋಗಿದ್ದ. ಆ ಪ್ರೀತಿಗೆ ಅಂತ ಬಂಗಾರದ ಲಚ್ಚಿ ಜನ್ಮ ತಾಳಿದ್ದಾಳೆ. ಆದ್ರೆ ಆ ಕೂಸನ್ನು ನೋಡಿಕೊಳ್ಳುವಷ್ಟು ಶಕ್ತಿ ಗಿರಿಜಾಳಿಗೆ ಇಲ್ಲದಂತಾಗಿದೆ. ಈಗ ತನ್ನ ಪ್ರೀತಿಯ ಕೂಸು ಏನು ಮಾಡ್ತಿದೆ ಅಂತಾನು ನೋಡದೆ ಪ್ರಜ್ಞೆ ಕಳೆದುಕೊಂಡು ಹಾಸಿಗೆ ಮೇಲೆ ಮಲಗಿದ್ದಾಳೆ. ಕ್ಯಾನ್ಸರ್ ರೋಗ ಗಿರಿಜಾಳ ಮೈಯ್ಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಈಗ ಸಾವು ಬದುಕಿನ ಜೊತೆಗೆ ಹೋರಾಟ ನಡೆಸುತ್ತಿದ್ದಾಳೆ.

ಗಿರಿಜಾಳಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗಿದ್ದೆ ಲಚ್ಚಿಗೆ ಈಗ. ಆದರೆ ಅಂತದ್ದೊಂದು ರೋಗ ಎಂಬುದೇ ಲಚ್ಚಿಗೆ ಗೊತ್ತಿಲ್ಲ. ಅವ್ವನನ್ನು ಉಳಿಸಿಕೊಳ್ಳಬೇಕು ಅಂದ್ರೆ ಜಾಸ್ತಿ ಹಣ ಬೇಕು ಎಂಬುದನ್ನಷ್ಟೇ ತಿಳಿದುಕೊಂಡು ಹೊರಟಿದ್ದಾಳೆ. ಈಗ ಹಣ ಸಂಪಾದಿಸುವುದೊಂದೆ ಲಚ್ಚಿಯ ಮುಂದಿನ ಗುರಿಯಾಗಿದೆ.

ಶಾಂತ ತನ್ನ ಬುದ್ದಿ ತೋರಿಸಿಯೇ ಬಿಟ್ಟಳು

ಶಾಂತ ತನ್ನ ಬುದ್ದಿ ತೋರಿಸಿಯೇ ಬಿಟ್ಟಳು

ಗಿರಿಜಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ‌. ಆದ್ರೆ ಶಾಂತ ಎಷ್ಟು ಸ್ವಾರ್ಥ ಎಂಬುದನ್ನು ಈಗಲೂ ತೋರಿಸಿಕೊಡುತ್ತಿದ್ದಾಳೆ‌. ಅವ್ವನನ್ನು ಉಳಿಸಿಕೊಳ್ಳಬೇಕು ಅಂತ ಲಚ್ಚಿ ಓಡೋಡಿ ಬಂದು ಅತ್ತೆಯನ್ನು ಕೇಳಿದರೆ ನೀನು ಹಣ ಬೇಕು ಹಾಡಬೇಕು ಅಂತ ಹೇಳ್ತಾ ಇದ್ದಾಳೆ. ಆ ಹಣಕ್ಕಾಗಿ ನೀನು ಹಾಡಬೇಕು ಅಂತ ಬಲವಂತವಾಗಿ ಕಳುಹಿಸಿದ್ದಾಳೆ‌. ಅವ್ವನ ಸ್ಥಿತಿ ಕಂಡು ನನ್ನ ಗಂಟಲಲ್ಲಿ ಪದ ಬರ್ತಿಲ್ಲ ಅಂದ್ರು ಕೇಳ್ತಿಲ್ಲ ಅಂದಾಗಲೂ ಶಾಂತ ಕೇಳದೆ ಆ ಮಗುವನ್ನು ಕಳುಹಿಸಿದ್ದಾಳೆ‌. ಆ ಹಣವನ್ನಾದರೂ ಗಿರಿಜಾಳ ಚಿಕಿತ್ಸೆಗೆ ಕೊಡುತ್ತಾಳಾ ಅದು ಇಲ್ಲ.

ಅಣ್ಣನಿಂದ ಏನು ಆಗುತ್ತಿಲ್ಲ..!

ಅಣ್ಣನಿಂದ ಏನು ಆಗುತ್ತಿಲ್ಲ..!

ಇನ್ನು ಗಿರಿಜಾಳನ್ನು ತನ್ನ ಮನೆಯಲ್ಲಿಟ್ಟುಕೊಂಡು ಕಷ್ಟವೋ ಸುಖವೋ ಅವರ ಅಣ್ಣ ನೋಡಿಕೊಳ್ಳುತ್ತಿದ್ದಾನೆ. ಆದ್ರೆ ಈಗ ಚಿಕಿತ್ಸೆಗೆ ಅಷ್ಟು ದೊಡ್ಡ ಮಟ್ಟದ ಹಣವನ್ನು ಒದಗಿಸುವ ಶಕ್ತಿ ಅವನಲ್ಲೂ ಇಲ್ಲ. ಡಾಕ್ಟರ್ಸ್ ಬೇರೆ, ಬೇಗ ಟ್ರೀಟ್ಮೆಂಟ್ ಕೊಡಿಸದೆ ಹೋದರೆ ಗಿರಿಜಾ ಬದುಕುವುದು ಕಷ್ಟ ಎಂದಿದ್ದಾರೆ. ಹೀಗಿರುವಾಗ ಗಿರಿಜಾಳ ಅಣ್ಣ ತಲೆ ಮೇಲೆ ಕೈಹೊತ್ತು ಕೂತಿದ್ದಾನೆ‌. ಚಿಕಿತ್ಸೆಗೆ ಹಣ ಒದಗಿಸುವುದಕ್ಕೆ ಏನು ಮಾಡಬೇಕು ಎಂದು ತೋಚದೆ ಸುಮ್ಮನೆ ಕೂತಿದ್ದಾನೆ.

ಗಿರಿಜಾಳ ನೆನಪಲ್ಲಿ ಸಂಗಮ್

ಗಿರಿಜಾಳ ನೆನಪಲ್ಲಿ ಸಂಗಮ್

ಸಂಗಮ್ ಈಗ ದೊಡ್ಡ ಸಿಂಗರ್. ಫೇಮಸ್ ಸಿಂಗರ್. ಸಿಟಿಯಲ್ಲಿ ಬೆಳೆಸಿದ ಗುರುಗಳ ಮಗಳನ್ನೇ ಮದುವೆಯಾಗಿದ್ದಾನೆ. ಹೀಗಾಗಿ ಅವಳಿಂದ ನೆಮ್ಮದಿಯಿಲ್ಲದ ಜೀವನ ಸಾಗಿಸುತ್ತಿರುವ ಸಂಗಮ್ ಗೆ ಗಿರಿಜಾಳನ್ನು ಹುಡುಕಿಕೊಂಡು ಬರಲು ಸಾಧ್ಯವೇ ಆಗಲಿಲ್ಲ. ಆದರೆ ಈಗ ಮೇಲುಕೋಟೆಗೆ ಬಂದಿರುವ ಸಂಗಮ್ ಗೆ ಪ್ರತಿ ಹಾದಿಯಲ್ಲೂ ಗಿರಿಜಾಳ ಪ್ರೀತಿ ನೆನಪಾಗುತ್ತಿದೆ. ಪ್ರತಿ ಸ್ಥಳದಲ್ಲೂ ಗಿರಿಜಾಳ ಪ್ರೀತಿ ಕಾಣಿಸುತ್ತಿದೆ. ಗಿರಿಜಾಳ ನೆನಪಿನಿಂದ ಗಿರಿಜಾಳನ್ನು ಹುಡುಕಿ ಹೊರಟಿದ್ದಾನೆ.

ಸಂಗಮ್‌ಗೆ ಅಪಘಾತ

ಸಂಗಮ್‌ಗೆ ಅಪಘಾತ

ಸಂಗಮ್‌ಗೆ ಮೇಲುಕೋಟೆಯಲ್ಲಿ ಸಾವಿರ ಸಾವಿರ ನೆನಪುಗಳಿದೆ. ಆ ಪ್ರೀತಿಗಾಗಿ ಈಗಲೂ ಮನಸ್ಸು ಹಂಬಲಿಸುತ್ತಿದೆ. ಅದೇ ನೆನಪಿನಲ್ಲಿ ಹೋಗುತ್ತಿದ್ದವನಿಗೆ ಅಪಘಾತವಾಗಿದೆ. ಪ್ರಜ್ಞೆ ಕಳೆದುಕೊಂಡಿಲ್ಲದೆ ಇದ್ದರು ಹಣೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಸುರಿಯುತ್ತಿದೆ. ಊರವರೆಲ್ಲಾ ಸೇರಿಕೊಂಡು ಸಂಗಮ್ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದಿದೆ. ಊರಲ್ಲಿ ಇರುವುದು ಒಂದೇ ಆಸ್ಪತ್ರೆಯಾಗಿರುವ ಕಾರಣ ಸಂಗಮ್ ಕೂಡ ಗಿರಿಜಾ ಇರುವ ಆಸ್ಪತ್ರೆಗೆ ಸೇರಿದ್ದಾರೆ. ಈಗ ಗಿರಿಜಾಳನ್ನು ಸಂಗಮ್ ಕಾಣುವುದೆ ಮುಖ್ಯವಾದ ಘಟ್ಟ. ಆಕೆಯನ್ನು ಸಂಗಮ್ ಮಾತ್ರ ಗುಣಪಡಿಸಲು ಸಾಧ್ಯ.

More from Filmibeat

English summary
Namma Lacchi Serial Written Update on February 27th Episode. Here is the details about Girija and Sangam admitted same hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X