Namma Lacchi: ಪ್ರೇಯಸಿಯನ್ನು ನೋಡಲು ಬಂದವನಿಗೆ ಪ್ರೇಯಸಿಯ ವೇದನೆಯೇ ಕಾಣಲಿಲ್ಲ..!

By ಎಸ್ ಸುಮಂತ್

ಸಂಗಮ್ ಸದ್ಯ ಹಳೆಯ ನೆನಪುಗಳನ್ನು ಅರಸಿ ಬಂದಿದ್ದಾನೆ. ಗಿರಿಜಾಳ ಪ್ರೇಮ ನೆನಪಾಗಿ ಮೇಲುಕೋಟೆಗೆ ಬಂದಿದ್ದಾನೆ. ಬರುವ ಹಾದಿಯುದ್ಧಕ್ಕೂ ಮೇಲುಕೋಟೆ ಸೌಂದರ್ಯದ ಜೊತೆ ಜೊತೆಗೆ ಗಿರಿಜಾ ಹಾಗೂ ತಾನೂ ಓಡಾಡಿದ ಜಾಗವನ್ನೇ ನೆನಪು ಮಾಡಿಕೊಂಡು ಬಂದಿದ್ದಾನೆ. ಪ್ರೀತಿಯಲ್ಲಿ ಬಿದ್ದಿದ್ದಾಗ ಜೀವನ ಹೇಗಿತ್ತು ಎಂಬುದನ್ನು ನೆನೆದು ಭಾವುಕನಾಗಿದ್ದಾನೆ.

ಆದ್ರೆ ಸಂಗಮ್‌ಗೆ ಇನ್ನು ಗೊತ್ತಿಲ್ಲ. ಆ ಪ್ರೀತಿಗೆ ಲಚ್ಚಿ ಎಂಬ ಸಂಗೀತ ಕಲಿತ ದೇವತೆ ಮಗಳಾಗಿ ಹುಟ್ಟಿದ್ದಾಳೆ ಅಂತ. ಗಿರಿಜಾಳನ್ನು ನೋಡಬೇಕೆಂಬ ಬರದಲ್ಲಿ ಸರಿಯಿಲ್ಲದ ಕಾರನ್ನು ತೆಗೆದುಕೊಂಡು ಬಂದಿದ್ದಾನೆ. ಇದರಿಂದ ಆತನ ಪ್ರಾಣಕ್ಕೂ ಅಪಾಯವಾಗುತ್ತೆ ಎಂದು ಹೆತ್ತ ಕರುಳು ಕೊರಗುತ್ತಿದ್ದರೆ, ಇತ್ತ ನೆನಪುಗಳಲ್ಲಿ ಹೋದವನಿಗೆ ಆಕ್ಸಿಡೆಂಟ್ ಆಗಿದೆ.

ಗಿರಿಜಾಳಿದ್ದ ಬೆಡ್ ಪಕ್ಕಕ್ಕೆ ಬಂದ ಸಂಗಮ್

ಗಿರಿಜಾಳಿದ್ದ ಬೆಡ್ ಪಕ್ಕಕ್ಕೆ ಬಂದ ಸಂಗಮ್

ಸಂಗಮ್ ಗಿರಿಜಾಳ ಯೋಚನೆಯಲ್ಲಿಯೇ ದಾರಿ ಯುದ್ಧಕ್ಕೂ ಕುಡಿಯುತ್ತಾ ಬಂದಿದ್ದಾನೆ. ಬಳಿಕ ಕಣ್ಣೆಲ್ಲಾ ಮಂಜು ಆಗುವ ಲೆವೆಲ್‌ಗೆ ಕುಡಿದಿದ್ದಾನೆ. ಅದೇ ಸಮಯಕ್ಕೆ ಜೀಪಿಗೆ ಅಡ್ಡವಾಗಿ ಇನ್ನೊಬ್ಬ ವ್ಯಕ್ತಿ ಕೂಡ ಕುಡಿದು ಬಂದಿದ್ದಾನೆ. ಇದು ಸಂಗಮ್‌ಗೆ ಏನು ಮಾಡಬೇಕು ಎಂದು ತೋಚದಾಗಿತ್ತು. ಆ ವ್ಯಕ್ತಿಯನ್ನು ಆ ಕಡೆ ಹೋಗು ಹೋಗು ಎಂದರೂ ಕೇಳಿಸುತ್ತಿಲ್ಲ. ಬಳಿಕ ಕಾರನ್ನು ಮರಕ್ಕೆ ಗುದ್ದಿದ್ದಾನೆ. ಸಂಗಮ್ ಹಣೆಗೆ ಜೋರು ಪೆಟ್ಟಾಗಿದೆ. ಇದನ್ನು ಕಂಡ ಅಕ್ಕ ಪಕ್ಕದವರು ಓಡಿ ಬಂದು, ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅದು ಗಿರಿಜಾ ಇದ್ದ ಆಸ್ಪತ್ರೆಗೇನೆ.

ಸಂಗಮ್‌ಗೆ ಕೂಗಿದರೂ ಕೇಳುತ್ತಿಲ್ಲ

ಸಂಗಮ್‌ಗೆ ಕೂಗಿದರೂ ಕೇಳುತ್ತಿಲ್ಲ

ಗಿರಿಜಾಳನ್ನು ಸಂಗಮ್ ಮನಸಾರೆ ಪ್ರೀತಿ ಮಾಡಿದ್ದ. ಆದ್ರೆ ಅನಿವಾರ್ಯವೋ ಏನೋ ಅವಳಿಂದ ದೂರವಾಗಿದ್ದ. ಆದ್ರೆ ಈಗ ಅವಳನ್ನೆ ಅರಸಿ ಬಂದಿದ್ದಾನೆ. ಅವಳಿಗಾಗಿ ಸಂಗಮ್ ಮನ ಹಂಬಲಿಸುತ್ತಿದೆ. ಅವಳು ಇರುವ ಆಸ್ಪತ್ರೆಗೆ ಬಂದಿದ್ದಾನೆ. ಆದರೂ ಅವನ ಮನಸ್ಸಿಗೆ ಏನು ನಾಟುತ್ತಿಲ್ಲ. ಪಕ್ಕದ ಬೆಡ್‌ನಲ್ಲಿಯೇ ಇರುವ ಗಿರಿಜಾಳನ್ನು ಕಾಣದೆ, ಸುಮ್ಮನೆ ಮಲಗುತ್ತಿದ್ದಾನೆ. ಆದರೆ, ಮನಸ್ಸಿನ ತುಂಬಾ ಗಿರಿಜಾಳನ್ನೇ ತುಂಬಿಕೊಂಡಿದ್ದಾನೆ. ಅವಳನ್ನು ಹುಡುಕುವುದಾದರೂ ಹೇಗೆ ಎಂದು ತಡಕಾಡುತ್ತಿದ್ದಾನೆ.

ಸಂಗಮ್ ನನ್ನು ಕಂಡ ಗಿರಿಜಾ

ಸಂಗಮ್ ನನ್ನು ಕಂಡ ಗಿರಿಜಾ

ನಿಜವಾದ ಪ್ರೀತಿ ಮಾಡಿದವರಿಗೆ ತಾವೂ ಪ್ರೀತಿಸಿದವರು ಹತ್ತಿರವಾದ ಕೂಡಲೇ ಮನಸ್ಸಿಗೆ ಏನೋ ಒಂದು ರೀತಿಯ ಸಂತೋಷ, ಯಾರೋ ನಮ್ಮ ಬಳಿ ಬಂದ ಫೀಲ್ ಬರುತ್ತೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಗಿರಿಜಾಗೂ ಆಗಿದ್ದು ಅದೇ. ಸಂಗಮ್ ತನಗೆ ಹತ್ತಿರ ಬರುತ್ತಿದ್ದಂತೆ ಅವಳ ಮನಸ್ಸು ತಡವರಿಸಿದ್ದೇ ಎಚ್ಚರವಾಗಿದ್ದಾಳೆ. ತಕ್ಷಣ ತನ್ನ ಪಕ್ಕದಲ್ಲಿ ತಿರುಗಿ ನೋಡಿದರೆ ಅವನೇ ಕಂಡಿದ್ದಾನೆ. ಅವನನ್ನು ಮಾತನಾಡಿಸಲು ನೋಡಿದರೂ ಸಂಗಮ್ ತಿರುಗಲಿಲ್ಲ.

ಗಿರಿಜಾಳನ್ನು ಉಳಿಸುತ್ತಾನಾ..?

ಗಿರಿಜಾಳನ್ನು ಉಳಿಸುತ್ತಾನಾ..?

ಸಂಗಮ್ ಆಸ್ಪತ್ರೆಗೆ ಅಡ್ಮಿಟ್ ಆದ ಕೂಡಲೇ ವೈದ್ಯರು ಕೂಡ ಅವರ ಬಳಿ ಸೆಲ್ಫೀ ತೆಗೆದುಕೊಳ್ಳುವುದಕ್ಕೆ ಮುಂದಾದರೂ. ಆಗ ದಾರಿ ತಪ್ಪಿ ಬಂದ್ರಾ ಎಂದು ಕೇಳಿದಾಗ ಇಲ್ಲ, ಮುಖ್ಯವಾದವರನ್ನು ಹುಡುಕಿಕೊಂಡು ಬಂದೇ ಎಂದಿದ್ದಾನೆ. ಗಿರಿಜಾಳಿಗೆ ಪ್ರಜ್ಞೆ ಬಂದಿರುವುದು ವೈದ್ಯರಿಗೂ ತಿಳಿದರೆ, ಸಂಗಮ್ ನೋಡಲು ಬಂದರೆ ಇಬ್ಬರ ಭೇಟಿಯಾಗುತ್ತೆ. ಸದ್ಯಕ್ಕಂತು ಇಬ್ಬರ ಭೇಟಿಯಾಗಲೇಬೇಕು. ಇಲ್ಲವಾದಲ್ಲಿ ಗಿರಿಜಾ ಉಳಿಯುವುದು ಬಹಳ ಕಷ್ಟ. ಅವಳ ಚಿಕಿತ್ಸೆಗೆ ಹಣ ಕಡಿಮೆ ಏನು ಸಾಲಲ್ಲ. ಹೀಗಾಗಿ ತಾನು ಪ್ರೀತಿಸಿದ ಗಿರಿಜಾಳನ್ನು ಉಳಿಸಿಕೊಳ್ಳಲು ಸಂಗಮ್ ನಿಂದ ಮಾತ್ರ ಸಾಧ್ಯವಾಗಿದೆ.

More from Filmibeat

English summary
Namma Lacchi Serial Written Update on February 28th Episode. Here is the details about Girija and Sangam admitted same hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X