Namma Lacchi: 'ನಮ್ಮ ಲಚ್ಚಿಗೆ' ಎಲ್ಲಾ ಫ್ಯಾನ್ಸ್ ಆಗೋದ್ರು .. ಕಿರುತೆರೆಯಲ್ಲಿ ಪುಟಾಣಿ ಪವರ್

By ಎಸ್ ಸುಮಂತ್

ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ʻನಮ್ಮ ಲಚ್ಚಿʼ ಧಾರಾವಾಹಿ ಬರುತ್ತಾ ಇದೆ. ತಂದೆಯ ಹೆಸರು ಗೊತ್ತಿಲ್ಲದ ಮಗಳು ತಂದೆಯಂತೆಯೇ ಬೆಳೆಯುತ್ತಿದ್ದಾಳೆ. ಅಪ್ಪಟ ಹಳ್ಳಿ ಕಥೆ. ಹಾಡುಗಾರನ ಮಗಳ ಕಥೆ. ಇದರಲ್ಲಿ ಲಚ್ಚಿ ಎಲ್ಲರ ಅಚ್ಚುಮೆಚ್ಚಾಗಿದ್ದಾಳೆ. ಇನ್ನು ಮೂರೇ ದಿನಕ್ಕೆ ಧಾರಾವಾಹಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ವಿಜಯ್ ಸೂರ್ಯ ಮತ್ತು ನೇಹಾ ಗೌಡ ನಮ್ಮ ಲಚ್ಚಿ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ನೇಹಾ ಗೌಡ, ಹಳ್ಳಿಯಲ್ಲಿ ಇರುವ ಮಹಿಳೆ. ಮಗಳಿಗಾಗಿ ಏನೇ ಕಷ್ಟ ಬಂದರೂ ಸಹಿಸಿಕೊಳ್ಳುತ್ತಿದ್ದಾಳೆ. ಹಾಗೇ ವಿಜಯ್ ಸೂರ್ಯ ಫೇಮಸ್ ಸಿಂಗರ್. ಯಾವುದೋ ಅನಿವಾರ್ಯ ಕಾರಣಕ್ಕೆ ಸಿಲುಕಿ ನಲುಗುತ್ತಿದ್ದಾನೆ.

ಯಾವಾಗಲೂ ನಿಂದಿಸುವ ಊರಿನ ದೊಡ್ಡ ಮನುಷ್ಯ..!

ಯಾವಾಗಲೂ ನಿಂದಿಸುವ ಊರಿನ ದೊಡ್ಡ ಮನುಷ್ಯ..!

ಗಿರಿಜಾ ಪ್ರೀತಿಸಿಯೇ ಮದುವೆಯಾಗಿದ್ದಾಳೆ. ಸಂಗಮ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದಾನೆ. ಅಷ್ಟೇ ಹೆಚ್ಚು ಸಂಗೀತವನ್ನು ಆರಾಧಿಸಿ, ಪ್ರೀತಿಸಿ, ಏನಾದರೂ ಸಾಧಿಸಿ, ಮತ್ತೆ ವಾಪಾಸ್ಸು ಬಂದು ಕರೆದುಕೊಂಡು ಹೋಗುತ್ತೀನಿ ಎಂದು ಹೋದ ಸಂಗಮ್ ವಾಪಸ್ಸು ಬರಲೇ ಇಲ್ಲ. ಸಿಟಿಯಲ್ಲಿ ದೊಡ್ಡ ಸಿಂಗರ್ ಎಂದು ಗೊತ್ತಾದ ಮೇಲೆ ಗಿರಿಜಾ ಕೂಡ ಯಾರ ಬಳಿಯೂ ಇದನ್ನು ಹೇಳಿಕೊಳ್ಳಲಿಲ್ಲ. ಹೀಗಾಗಿ 'ನಮ್ಮ ಲಚ್ಚಿ'ಗೆ ಇನ್ನಿಲ್ಲದ ಸಂಕಷ್ಟ. ಊರಿನ ದೊಡ್ಡ ಯಜಮಾನ ಎನಿಸಿಕೊಂಡವ ಯಾವಾಗಲೂ ಲಚ್ಚಿಯನ್ನು ನಿಂದಿಸುತ್ತಾ ಇರುತ್ತಾನೆ. ಅಪ್ಪ ಗೊತ್ತಿಲ್ಲದವಳು ಎನ್ನುತ್ತಿರುತ್ತಾನೆ.

ಲಚ್ಚಿಗೆ ಬೇಸರವೇ ಆಗಲ್ವಾ..?

ಲಚ್ಚಿಗೆ ಬೇಸರವೇ ಆಗಲ್ವಾ..?

ಊರಿನ ದೇವಸ್ಥಾನಕ್ಕೆ ಹೋದರೆ ಊರಿನ ಯಜಮಾನನಿಂದ ಅವಮಾನ. ಮನೆಗೆ ಬಂದರೆ ಅತ್ತೆಯಿಂದ ಅವಮಾನ. ಆದರೆ ಲಚ್ಚಿಗೆ ಇದ್ಯಾವುದು ಮ್ಯಾಟ್ರೇ ಅಲ್ಲ ಒಂದು ಕ್ಷಣ ನೋವಾದರೂ, ಬೇಸರವಾದರೂ ಅದನ್ನು ಯಾರಿಗೂ ತೋರಿಸಿಕೊಳ್ಳುವುದಿಲ್ಲ. ಹಾಗೇ ಹಾಡಿನ ಮೂಲಕ ಎಲ್ಲರನ್ನು ನಗಿಸುವುದಕ್ಕೆ ಶುರು ಮಾಡಿಬಿಡುತ್ತಾಳೆ. ನಿನ್ನೆ ಕೂಡ ಚಾಮುಂಡಿ ಅವ್ವನಿಗೆ ಹಾಲು ತೆಗೆದುಕೊಂಡು ಬೆಟ್ಟದ ತುದಿಗೆ ಹತ್ತಿದ್ದಳು. ಆಗ ಊರಿನ ಯಜಮಾನ ನಿಂದಿಸಿದ, ಹೊರ ಹಾಕಿದ. ಆಗಲು ಲಚ್ಚಿ, ತಾಯಿಗಾಗಿ ಹಾಡು ಹಾಡಿ, ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಳು. ಅತ್ತೆ ಕೂಡ ಯಾವಾಗಲೂ ಹಂಗೆ ಆಡಿದ್ರು ಅದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಮಕ್ಕಳಿಗೆ ಪಾಠ ಮಾಡಿದ ಪುಟಾಣಿ..!

ಮಕ್ಕಳಿಗೆ ಪಾಠ ಮಾಡಿದ ಪುಟಾಣಿ..!

ಗಿರಿಜಾಗೆ ಲಚ್ಚಿ ಹಾಡು ಹಾಡುವುದು ಇಷ್ಟವಿಲ್ಲ. ಏನೇ ಮಾಡಿದರೂ ತಂದೆಯ ಚಾಳಿ ಲಚ್ಚಿಗೂ ತಿರುಗಿದೆ. ಹೀಗಾಗಿ ಅಮ್ಮನ ಮುಂದೆ ಹಾಡು ಹಾಡಿದರೆ ನೋವಾಗುತ್ತೆ ಎಂದು ಗೊತ್ತಿರುವ ಲಚ್ಚಿಗೆ, ಅವಳಿಗೂ ನೋವು ಕೊಡದೆ, ಇನ್ನೆಲ್ಲೋ ದೂರಕ್ಕೆ ಹೋಗಿ ಹಾಡು ಹಾಡುತ್ತಾಳೆ. ಇವತ್ತು ಅತ್ತೆ ಬೈದಿದ್ದಾಳೆ. ಮಕ್ಕಳನ್ನು ಸ್ನಾನಕ್ಕೆ ಕರೆದುಕೊಂಡು ಹೋಗುವಾಗ, ಅತ್ತೆಯ ಮಕ್ಕಳಿಗೆ ಅರ್ಥವಾಗದ ಪಾಠವನ್ನು ಲಚ್ಚಿಯೇ ಹೇಳಿಕೊಟ್ಟಿದ್ದಾಳೆ. ಹಾಡಿನ ಮೂಲಕ ಅರ್ಥವಾಗುವಂತೆ ಹೇಳಿದ್ದಾಳೆ.

'ನಮ್ಮ ಲಚ್ಚಿ'ಗೆ ಫಿದಾ ಆದ ಮಂದಿ

'ನಮ್ಮ ಲಚ್ಚಿ'ಗೆ ಫಿದಾ ಆದ ಮಂದಿ

ʻನಮ್ಮ ಲಚ್ಚಿʼ ಕೆಲವೊಂದು ವಿಚಾರಗಳಲ್ಲಿ ಸ್ಪೂರ್ತಿ ನೀಡುತ್ತಾಳೆ. ಪುಟಾಣಿ ಬಾಯಲ್ಲೂ ಇಂತದ್ದೊಂದು ಮಾತು ಎಂಬ ಆಶ್ಚರ್ಯವೂ ಆಗುತ್ತೆ. ಜೊತೆಗೆ ಪುಟಾಣಿ ಹೀಗೆಲ್ಲಾ ಮಾಡಿದಳಾ ಎಂಬ ಶಾಕ್ ಕೂಡ ಆಗುತ್ತೆ. ಇದರ ನಡುವೆ ಶುರುವಾದ ಕೆಲವೇ ದಿನಗಳಲ್ಲಿ ನಮ್ಮ ಲಚ್ಚಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲಚ್ಚಿ ಅಲಿಯಾಸ್ ಸಾಂಗವಿಕಳನ್ನು ಟ್ಯಾಗ್ ಮಾಡಿ, ಕಮೆಂಟ್ ಹಾಕುತ್ತಿದ್ದಾರೆ. ನಾನು ನಿಮ್ಮ ಬಿಗ್ ಫ್ಯಾನ್ ಎಂದು ಶುಭಕೋರುತ್ತಿದ್ದಾರೆ.

More from Filmibeat

English summary
Namma Lacchi Serial Written Update on February 8th Episode. Here is the details about Lacchi teaching method.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X