Namma Lacchi: ಸಂಗಮ್-ಗಿರಿಜಾ ಪ್ರೀತಿಗೆ ಕೊಳ್ಳಿ ಇಟ್ಟಿದ್ದೇ ದೇವರು.. ಲಚ್ಚಿಗೆ ಸತ್ಯ ತಿಳಿದರೆ?

By ಎಸ್ ಸುಮಂತ್

ಗಿರಿಜಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಾ ಇದ್ದ ಸಂಗಮ್. ಗಿರಿಜಾ ಕೂಡ ಅದೆಷ್ಟು ಪ್ರೀತಿ ಮಾಡ್ತಾ ಇದ್ಲು ಅನ್ನೋದು ಎಲ್ಲರಿಗೂ ಗೊತ್ತಿದೆ. ಸಂಗಮ್ ಮದುವೆಯಾಗಿ ಆರಾಮಾವಾಗಿ ಜೀವನ ಕಳೆದರು, ಗಿರಿಜಾ ಮಾತ್ರ ಅವನ ನೆನಪಲ್ಲಿಯೇ ಜೀವನ ಪೂರ್ತಿ ಕಾಲ ಕಳೆದು, ನರಳಿ ನರಳಿ ಸತ್ತಳು. ಇದಕ್ಕೆಲ್ಲಾ ಕಾರಣ ಯಾರೆಂದು ಇಲ್ಲಿಯ ತನಕ ಯಾರಿಗೂ ಗೊತ್ತಿಲ್ಲ.

ಲಚ್ಚಿಯನ್ನು ಮನೆಯವರೆಲ್ಲಾ ತುಂಬಾ ಪ್ರೀತಿಸುತ್ತಾರೆ. ಅದರಲ್ಲೂ ಸಾಗರ್‌ಗೆ ತುಂಬಾ ಪ್ರಾಣ. ಮಕ್ಕಳಿಲ್ಲದ ಸಾಗರ್ ಮತ್ತು ಮಾನಸ ಲಚ್ಚಿಯನ್ನು ದತ್ತು ಪಡೆದುಕೊಳ್ಳಬೇಕು ಎಂದುಕೊಂಡಿದ್ದರು. ಬಾಯಿ ತುಂಬಾ ದೊಡ್ಡಪ್ಪ ಎಂದು ಕರೆಯುವ ಸಾಗರ್‌ನಿಂದಾನೇ ತಾನೂ ಅನಾಥಳಾಗಿದ್ದು ಎಂದು ಗೊತ್ತಾದಾಗ ಲಚ್ಚಿಯ ರಿಯಾಕ್ಷನ್ ಹೇಗಿರಬೇಕು..?.

Namma Lacchi serial Written Update on July 10th episode

ಗಿಲ್ಟ್‌ನಲ್ಲೇ ಬದುಕುತ್ತಿರುವ ಸಾಗರ್

ಸಾಗರ್‌ಗೆ ಗಿರಿಜಾಳ ನೆನಪು ಆಗಾಗ ಕಾಡುತ್ತಲೇ ಇರುತ್ತದೆ. ಅದೇ ಕಾರಣಕ್ಕೆ ಶಾಂತಾ ಹೇಳಿರುವ ಮಾತನ್ನೇ ನಂಬಿಕೊಂಡು, ಸುಗ್ಗಿಯೇ ತಮ್ಮ ಸಂಗಮ್ ಮಗಳು ಎಂದು ಭಾವಿಸಿ, ಅವಳನ್ನು ದತ್ತು ಪಡೆದು ಸಾಕಬೇಕು ಎಂದುಕೊಳ್ಳುತ್ತಿದ್ದಾನೆ. ಸಂಗಮ್‌ನಿಂದ ಕೂಡ ಎಲ್ಲಾ ವಿಚಾರವನ್ನು ಮುಚ್ಚಿಟ್ಟಿದ್ದಾನೆ. ಕದ್ದು ಮುಚ್ಚಿ ಶಾಂತಾಳಿಗೆ ಸಹಾಯ ಮಾಡುತ್ತಿದ್ದಾನೆ.

ಗಿರಿಜಾಳನ್ನು ದೂರ ಮಾಡಿದ್ದೆ ಸಾಗರ್

ಗಿರಿಜಾ ಮತ್ತು ಸಂಗಮ್ ಎಷ್ಟು ಪ್ರೀತಿ ಮಾಡ್ತಾ ಇದ್ರು ಅನ್ನೋದು ಸಾಗರ್‌ಗೂ ಗೊತ್ತು. ಯಾಕಂದ್ರೆ ಸಾಗರ್‌ನನ್ನು ದೇವರ ಸ್ಥಾನದಲ್ಲಿಯೇ ಸಂಗಮ್ ನೋಡ್ತಾ ಇದ್ದ. ಹೀಗಾಗಿ ಎಲ್ಲಾ ವಿಚಾರವನ್ನು ಹೇಳುತ್ತಿದ್ದ. ಈ ಕಡೆ ದೀಪಿಕಾಳ ಅಪ್ಪ ಅವಕಾಶ ಕೊಡಬೇಕು ಅಂದ್ರೆ ಒಂದು ಕಂಡೀಷನ್ ಹಾಕಿದ್ದರು. ಮಗಳನ್ನು ಮದುವೆಯಾಗಲೇ ಬೇಕು ಎಂದು. ಇದನ್ನು ಹೇಳಿದರೇ ಸಂಗಮ್ ಒಪ್ಪುತ್ತಿರಲಿಲ್ಲ. ಆದ್ರೆ ಸಾಗರ್‌ಗೆ ಈ ಅವಕಾಶವನ್ನು ಬಿಡುವ ಮನಸ್ಸಿರಲಿಲ್ಲ. ಹೀಗಾಗಿಯೇ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದ.

ಹೆಂಡತಿ ಬಳಿ ಸತ್ಯ ಹೇಳಿದ ಸಾಗರ್

ಇಷ್ಟು ವರ್ಷ ಈ ಗಿಲ್ಟ್‌ನಲ್ಲಿಯೇ ಬದುಕುತ್ತಿದ್ದ ಸಾಗರ್‌ಗೆ ಈಗ ಒಂದು ಅವಕಾಶ ಸಿಕ್ಕಿದೆ. ಅದುವೇ ಮಗುವನ್ನು ದತ್ತು ಪಡೆಯಬೇಕು ಎಂಬ ವಿಚಾರ. ಮಾನಸಾಗೆ ಲಚ್ಚಿಯನ್ನು ಪಡೆಯಬೇಕು. ಆದ್ರೆ ಸಾಗರ್‌ಗೆ ಮನೆಯಿಂದ ಹೊರಗಿರುವ ಸಂಗಮ್ ಮಗಳನ್ನು ಪಡೆಯಬೇಕು ಎಂಬುದು. ಹೀಗಾಗಿ ವಾದದ ನಡುವೆ ಸತ್ಯ ಹೊರಗೆ ಬಂದಿದೆ. ಇವತ್ತು ಮಾನಸ ಬಳಿ ಎಲ್ಲಾ ಸತ್ಯವನ್ನು ಹೇಳಿದ್ದಾನೆ. ಇಬ್ಬರನ್ನು ದೂರ ಮಾಡೋದಕ್ಕೆ ಮೂರನೇಯ ವ್ಯಕ್ತಿ ಬಂದಿದ್ದಾನೆ. ಆ ವ್ಯಕ್ತಿಯಿಂದಾನೇ ಸಂಗಮ್ ದೂರ ಆಗಿದ್ದಾನೆ. ಆ ವ್ಯಕ್ತಿ ಬೇರೆ ಯಾರು ಅಲ್ಲ ಸಾಗರ್ ಅನ್ನೋದನ್ನು ಕೇಳಿ ಮಾನಸ ಶಾಕ್ ಆಗಿ ನಿಂತಿದ್ದಾಳೆ.

Namma Lacchi serial Written Update on July 10th episode

ಅಣ್ಣನ ರಿಯಲ್ ಮುಖವಾಡ ಹೊರ ಬಂದರೆ?

ಸಾಗರ್‌ಗೆ ಸಂಗೀತದ ಮೇಲೆ ಸಿಕ್ಕಾಪಟ್ಟೆ ವ್ಯಾಮೋಹ. ಸಂಗಮ್‌ಗೂ ಸಂಗೀತ ಒಲಿದಿದೆ. ಈಗ ಶ್ರೀಮಂತಿಕೆ ಇದೆ. ಆಗ ತೀರಾ ಬಡತನದಿಂದ ಬೆಳೆದವರು. ಶ್ರೀಮಂತನಾಗುವ ಅವಕಾಶ ಹುಡುಕಿಕೊಂಡು ಬಂದಾಗ, ಸಾಗರ್ ಸಾಕಷ್ಟು ಯೋಚನೆ ಮಾಡಿದ್ದಾನೆ. ಆ ಒಂದು ಅವಕಾಶದ ಮುಂದೆ ಪ್ರೀತಿ ಅನ್ನೋದು ಶೂನ್ಯವಾಗಿ ಬಿಟ್ಟಿದೆ. ಹೀಗಾಗಿಯೇ ಸಂಗಮ್‌ನಿಂದ ಗಿರಿಜಾಳನ್ನು ದೂರ ಮಾಡಿದ್ದಾನೆ. ಈ ಕಡೆ ಸಂಗಮ್ ಗಿರಿಜಾಳದ್ದೇ ತಪ್ಪು ಎಂದುಕೊಂಡು ಮದುವೆಯೂ ಆದ, ಸಂಸಾರವೂ ಚೆನ್ನಾಗಿತ್ತು. ಈಗ ಸತ್ಯ ಗೊತ್ತಾಗುವ ಸಮಯ ಹತ್ತಿರವಾಗಬೇಕಿದೆ.

More from Filmibeat

English summary
Star Suvarna serial Namma Lacchi Written Update on July 10th episode. Here is the details about Sagar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X